ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೊಗಸೆಗೆ ಸಿಗದ ಮಳೆಯಂತೆ…

ಅಶ್ಫಾಕ್ ಪೀರಜಾದೆ

ತುಳಿದಿದ್ದು ಸಾಕಷ್ಟು ದಾರಿ
ಕ್ರಮಿಸಿದ್ದು ಸಾವಿರಾರು ಮೈಲಿ
ಹಿಂದಿರುಗಿ ನೋಡಿದರೆ ಅನಾಥ
ಮಕ್ಕಳಂತೆ ಮರಳಿನ ಮೇಲೆ
ಮಲಗಿದ ಅನಾಮಿಕ ಹೆಜ್ಜೆಗಳು

ಕಲ್ಲು ಮುಳ್ಳು ಧೂಳು ದೂರ
ದಾರಿ ಕಲ್ಲಿಗೆ ಎಡವಿದೆಷ್ಟೋ
ಪಾದಗಳಲಿ ಮುರಿದಿದೆಷ್ಟೋ
ಸೂರ್ಯ ರಶ್ಮಿ ಬರ್ಚಿಯಾಗಿ
ಎದೆಗೆ ಚುಚ್ಚಿ ಲೆಕ್ಕಕ್ಕೆ ಸಿಗದ
ಅಗೋಚರ ಗಾಯಗಳ ಚಿಲ್ಲರೆ
ನಾಣ್ಯಗಳ ಜತೆಗೆ ಒಂದಿಷ್ಟು
ತಿಜೋರಿಯಲಿ ಬಂಧಿಯಾಗಿ
ನರಳುವ ಹರಿದ ನೋಟುಗಳು

ಕಣ್ಣಿಗ ಬಿದ್ದ ಮಣ್ಣೆಷ್ಟೋ
ಕಂಡೂ ಕಾಣದ ಬಣ್ಣವೆಷ್ಟೋ
ರೂಪ ಬದಲಿಸಿದರೂ ಗುಣ
ಬದಲಿಸದ ಬದುಕಿನ ಪಯಣಕೆ
ಅರ್ಥ ಅದೇನೋ !

ಕಾಮನ ಬಿಲ್ಲಿಗೆ ಸೋತ
ಕಣ್ಣುಗಳಲೀಗ ಮಂಜುಗಡ್ಡೆ
ದೂರದ ಬೆಟ್ಟಗಳಲ್ಲಿ ದಟ್ಟ ಹೊಗೆ
ಹಿಮ ಕರಗುವುದು, ನದಿ ಹರಿಯುವುದು
ಬಿಸಿಲು ಹಸಿಯಾಗುವುದು, ನೆರಳು ನರಳುವುದು
ನೋವ ನಸು ನಾಚುವುದು,
ಶಬ್ಧ ನಿಶಬ್ಧವಾಗುವುದು
ಎಲೆ ಉದುರುವುದು, ಹೂ ಬಾಡುವುದು
ಮನ ಮಿಡಿಯುವುದು, ಹೃದಯ ತುಡಿಯುವುದು
ಮನಸು ಮಾಗುವುದು, ಬೆನ್ನು –
ಬಾಗುವುದೆಲ್ಲ ಶೂನ್ಯ ಜೀವನದ
ಸಂಕೇತಗಳು ಸಕ್ಷಾತ್ಕಾರಿಸುವ ಸರ್ಕಸ್ ದಲಿ
ಸಮಯ ಜಾರಿ ಹೋಗುವುದು ಸಣ್ಣಗೆ
ನಡಗುವ ಬೊಗಸೆಗೆ ಸಿಗದ ಮಳೆಯಂತೆ…

‍ಲೇಖಕರು Avadhi

27 February, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading