
ಮೊನ್ನೆ ಮೊನ್ನೆ ವಿವಿಧ ಪ್ರಶಸ್ತಿಗಳನ್ನು ಸಂಸ ಬಯಲು ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೊಟ್ಟರು. ಅದರಲ್ಲಿ ಬಸವ ಪುರಸ್ಕಾರವನ್ನು ಒಳಗೊಂಡಂತೆ ಇನ್ನಿತರ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಕೊಡಮಾಡುವ ಕಾರ್ಯಕ್ರಮ ಅದಾಗಿತ್ತು. ಇದೇ ಕಾರ್ಯಕ್ರಮ ಕಳೆದ ವರ್ಷ ರವೀಂದ್ರ ಕಲಾಕ್ಷೇತ್ರದಲ್ಲಿ ಅನಂತಮೂರ್ತಿ ಸರ್ ಗೆ ಬಸವ ಪುರಸ್ಕಾರ ಕೊಟ್ಟಾಗಲೂ ನಾ ಕಾರ್ಯಕ್ರಮಕ್ಕೆ ಹೋಗಿದ್ದೆ. ಈ ಸಲದ ಬಸವ ಪುರಸ್ಕಾರ ಎಂ.ಎಂ. ಕಲ್ಬುರ್ಗಿಯವರಿಗೆ ಸಂದಿತ್ತು.
ಈ ಎರಡೂ ಸಂದರ್ಭಗಳಲ್ಲೂ ಕಲಾಕ್ಷೇತ್ರದ ಆವರಣ ನವ ವಧುವಿನಂತೆ ಸಿಂಗಾರಗೊಂಡು ನಿಂತಿತ್ತು. ತಳಿರು ತೋರಣ, ಹೂವಿನ ಅಲಂಕಾರ, ಹೂವಿನ ರಂಗೋಲೆ, ಬಾಳೇ ಬಾಗಿಲು, ತೋಮಾಲೆಗಳು, ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳ ಮತ್ತು ಅವರ ಸಾಧನೆಗಳ ಆಕರ್ಷಿತ ಬ್ಯಾನರ್ಗಳು, ತುಂಬಾ ಸುಂದರವಾದ ವೇದಿಕೆ, ಹೀಗೆ ಎಲ್ಲೆಲ್ಲೂ ಕನ್ನಡ ನಾಡು ನುಡಿಯ ಬಗೆಗೆ ಪ್ರೇಮ ಮತ್ತು ನಮ್ಮ ಮಣ್ಣಿನ ಘಮಲನ್ನು ಹರಿಸುವ ತೆರದಲ್ಲಿ ಶೃಂಗಾರಗೊಂಡು ನಿಂತಿತ್ತು ಕಲಾಕ್ಷೇತ್ರ. ಇಷ್ಟೇ ಅಲ್ಲ ಅತಿಥಿಗಳನ್ನು ಸ್ವಾಗತಿಸಲು ಡೊಳ್ಳು, ಪೂಜಾ ಕುಣಿತ, ಮಂಗಳವಾಧ್ಯ, ಬ್ಯಾಂಡ್ ಸೆಟ್ ಎಲ್ಲವೂ ಸಿದ್ಧಗೊಂಡಿತ್ತು. ಎಲ್ಲೆಲ್ಲೂ ಕನ್ನಡ ಗೀತೆಗಳು ಕೇಳಿಬರುತ್ತಿತ್ತು. ಇದೇ ತರದ ತಯಾರಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕೊಡಮಾಡುವ ಸಂದರ್ಭದಲ್ಲೂ ನಾನು ಕಂಡಿದ್ದೇನೆ.
ಇಷ್ಟೆಲ್ಲಾ ಸಿದ್ಧಗೊಂಡ ಎಲ್ಲಾ ಕಾರ್ಯಕ್ರಮಗಳಿಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಬಂದಿದ್ದರು ಮತ್ತು ಪ್ರಶಸ್ತಿಗಳನ್ನು ಕೂಡಾ ಅವರೇ ಪುರಸ್ಕೃತರಿಗೆ ಕೊಡಮಾಡಿದರು. ಕಳೆದ ವರ್ಷ ಮುಖ್ಯ ಮಂತ್ರಿಗಳು ಬರುವ ಮೊದಲು ಕಲಾಕ್ಷೇತ್ರದಲ್ಲಿ ಅಮ್ಮ ಬಂದಿದ್ದರು. ಅಮ್ಮ ಬರುವಾಗ ಇಡೀ ಸಭಾಂಗಣ ಎದ್ದು ನಿಂತು ಗೌರವ ಸಲ್ಲಿಸಿತು. ಅವರನ್ನು ‘ಸಾರೆ ಜಹಾಂಸೇ ಅಚ್ಛಾ’ ಗೀತೆಯನ್ನು ನುಡಿಸುತ್ತಾ ಬ್ಯಾಂಡ್ ನುಡಿಸುವಾಗ ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ನಿರ್ದೇಶಕರು ಹೂವಿನ ಬೊಕೆ ಕೊಟ್ಟು ಕರೆತಂದರು. ಹೀಗೆ ಅಮ್ಮ ಬರುವಾಗ ಇಡೀ ಅವರ ಬದುಕೇ ಅವರ ಹಿಂದೆ ನಡೆದುಕೊಂಡು ಬರುತ್ತಿದೆಯೇನೋ ಅನ್ನಿಸುತಿತ್ತು. ನನಗಂತೂ ಆಕೆ ದೊಡ್ಡ ಬೆಟ್ಟವನ್ನು ನಿಧಾನಕ್ಕೆ ಹತ್ತಿಕೊಂಡು ಹೋಗಿ ಬೆಟ್ಟದ ತುದಿಯಲ್ಲಿ ಕೂತ ಕಾಠಿಣ್ಯನುಂಗಿದ ಗಟ್ಟಿ ದಳದ ಪುಟ್ಟ ಹೂವಿನಂತೆ ಕಾಣುತ್ತಿದ್ದರು. ಅವರು ನಾನು ಮೇಲೆ ಹೇಳಿದ ಕಾರ್ಯಕ್ರಮಗಳಲ್ಲಿ ಸಮಾರಂಭದ ಯಶಸ್ಸಿಗಾಗಿ ಅಮ್ಮ ತೋರುತ್ತಿದ್ದ ಕಾಳಜಿ ಇವೆಲ್ಲವನ್ನೂ ಗಮನಿಸಿ ನನಗೆ ಒಬ್ಬ ನೊಂದ ಹೆಣ್ಣು ಅಧಿಕಾರ ಪಡೆದುಕೊಂಡರೆ ತನ್ನ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾಳೆ ಅನ್ನಿಸ್ತು.
ಅವಕಾಶಗಳಿಗಾಗಿ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಕೂರುತ್ತಿದ್ದ ಅಮ್ಮ ಇಂದು ಅದೇ ಕಲಾಕ್ಷೇತ್ರವನ್ನು ನೋಡಿಕೊಳ್ಳುವ ಇಲಾಖೆ ಮಂತ್ರಿ ಆಗ್ತಾರೆ ಅನ್ನೋದನ್ನು ನೆನ್ಕೊಂಡು ಅಮ್ಮನಿಗೆ ಅವತ್ತು ಕಾರ್ಯಕ್ರಮದ ದಿನ ಸಿಕ್ಕುತ್ತಿದ್ದ ಗೌರವವನ್ನು ನೋಡಿ ನನ್ನ ಕಣ್ಣು ತೇವ ಆಗೋಗಿತ್ತು. ಅವತ್ತು ಅಮ್ಮ ಕಲಾಕ್ಷೇತ್ರದಲ್ಲಿ ಒಂದು ಬನ್ನೋ, ಟೀನೋ ಅಥವಾ ತನ್ನ ಮಕ್ಕಳನು ಕಾಪಾಡಲು ಬೇಕಾದ ದುಡಿಮೆಗಾಗಿಯೋ ಅಧಾರ ಆಗಲಿ ಎಂದು ಆ ಕಲಾಕ್ಷೇತ್ರವನ್ನು ಆಧರಿಸಿದ್ರು. ಇವತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾರೆ ಅಂದ್ರೆ ಅದರ ಹಿಂದಣ ಶಕ್ತಿ ,ಶ್ರಮ ಮತ್ತು ಅವರು ನಡೆದು ಬಂದ ದಾರಿ ಮತ್ತೆ ಮತ್ತೆ ಕಣ್ಣ ಮುಂದೆ ಬರುತ್ತೆ.
ರಾಜ್ಯೋತ್ಸವ ಪ್ರಶಸ್ತಿಗಳ ಆಯ್ಕೆ ಸಂದರ್ಭದಲ್ಲಿ ಹಿಂದಿನ ವರ್ಷ ಅನತಮೂರ್ತಿ ಸರ್ ಸಮಿತಿಯಲ್ಲಿದ್ದರು ಅನ್ನಿಸುತ್ತೆ. ಆಗ ಅಮ್ಮ ಸುಮಾರು ಮೂರ್ನಾಲ್ಕು ದಿನ ಕೂತು ಅಳೆದು ತೂಗಿ ನಿಜ್ಜಕ್ಕೂ ಅರ್ಹರಾದವರಿಗೆ ಪುರಸ್ಕಾರ ಸಿಕ್ಕುವಂತೆ ಮಾಡಿದ್ದರು. ಇದನ್ನು ಉಲ್ಲೇಖಿಸುತ್ತಾ ಮೇಷ್ಟ್ರು ‘ಉಮಾಶ್ರೀ ಅವರ ಬದ್ಧತೆಯನ್ನು ಮೆಚ್ಚಬೇಕು. ಆ ಇಲಾಖೆಗೆ ಸಮರ್ಥವಾದ ಸಚಿವೆ ಆಕೆ’ ಅಂದಿದ್ರು. ಮೇಷ್ಟ್ರು ನಮ್ಮನು ಅಗಲಿದಾಗ ಅಮ್ಮ ಜವಾಬ್ದಾರಿ ತಗೊಂಡು ಎಲ್ಲ ಕಾರ್ಯಗಳ ಉಸ್ತುವಾರಿಯನ್ನು ಮಾಡುತ್ತಿದ್ದಾಗ ಮತ್ತು ಆ ಬಗೆಗೆ ಅಚ್ಚುಕಟ್ಟಾಗಿ ಎಲ್ಲವನ್ನು ನಿಭಾಯಿಸಿದಾಗ ನಂಗೆ ನಿಜಕ್ಕೂ ತುಂಬಾ ಹೆಮ್ಮೆ ಅನ್ನಿಸ್ತು. ಗಾನ ಶಾರದೆ ಎಸ್.ಜಾನಕಿಯನ್ನು ಕರ್ನಾಟಕ ಸರ್ಕಾರ ಗುರುತಿಸಲು, ಆರ್. ಟಿ. ರಮಾ ಅಂತ ಕಲಾವಿದೆಯನ್ನು ಗಮನಿಸಲು ಮತ್ತು ಬಹಳ ಸುಂದರವಾಗಿ ಹಸೆ ಹಚ್ಚುವ ಕಲಾವಿದೆಯನ್ನು ಗುರುತಿಸಿ ಗೌರವಿಸಲು ಉಮಾಶ್ರೀನೇ ಬರಬೇಕಾಯಿತು ನೋಡಿ. ಹೀಗೆ ಇನ್ನೂ ಅನೇಕರು ಅಮ್ಮ ಮತ್ತು ಆಯ್ಕೆ ಸಮಿತಿ ಈ ಎರಡೂ ವರ್ಷ ಆರಿಸಿದ ಪ್ರಶಸ್ತಿಗಳ ಪಟ್ಟಿಯಲ್ಲಿ ನಿಜವಾಗಿಯೂ ಸಮರ್ಥರಿದ್ದಾರೆ. ಅಷ್ಟೇ ಅಲ್ಲ ಇವರಿಗೆಲ್ಲಾ ಪ್ರಶಸ್ತಿ ಕೊಡಬೇಕಾದರೆ ನಾನು ಅಮ್ಮನನ್ನೇ ಗಮನಿಸುತ್ತಿದ್ದೆ ಅವರಲ್ಲಿದ್ದ ಆತ್ಮ ವಿಶ್ವಾಸ ಮತ್ತು ಅರ್ಥಪೂರ್ಣ ಆನಂದದ ಕಾಂತಿ ಅವರ ಕಣ್ಣುಗಳಲ್ಲಿ ಕಾಣುತ್ತಿತ್ತು. ಜಾನಕಿ ಅಮ್ಮ ಕೂಡ ತಮ್ಮ ಮಾತುಗಳಲ್ಲಿ ಉಮಾಶ್ರೀ ಅವರು ಪ್ರೀತಿಯಿಂದ ಕರೆದಿದ್ದಕ್ಕೆ ಬಂದು ಪ್ರಶಸ್ತಿ ಸ್ವೀಕರಿಸಿದೆ ಎಂದು ಹೇಳಿ ಒಮ್ಮೆ ನಿನ್ನನ್ನು ಕಣ್ತುಂಬಾ ಅಂತ ಹಾಡಿದ್ದನ್ನು ಮರೆಯಲಾಗದು.

ಇದೇ ವಿಷಯವನ್ನು ಕುರಿತು ಇನ್ನೊಂದು ವಿಷಯ ನಿಮ್ಮ ಹತ್ರ ಹೇಳಬೇಕು ಅನ್ನಿಸುತ್ತಿದೆ. ಇತ್ತೀಚಿಗೆ ಸಂಸ್ಕೃತಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನನ್ನ ಎಫ್. ಬಿ. ಸ್ನೇಹಿತರಾದ ರಾಧಾಕೃಷ್ಣ ಅವರು ಸಿಕ್ಕಿದ್ರು. ಅವರು ಮಾತಾಡ್ತಾ ಮಾತಾಡ್ತಾ ಉಮಾಶ್ರೀ ಅವರು ಪ್ರಶಸ್ತಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸಮಿತಿಯನ್ನು ನಡೆಸಿಕೊಳ್ಳುವ ರೀತಿ ನಿಜಕ್ಕೂ ಮೆಚ್ಚುವಂಥದ್ದು ರಘುನಂದನ್. ಸಮಿತಿಯಲ್ಲಿರುವವರಿಗೆ ತಿಂಡಿ, ಕಾಫೀ, ನೀರು ಅಂತೆಲ್ಲಾ ಎಲ್ಲರಿಗೂ ಅವರವರ ಸ್ವತಂತ್ರ ಕೊಟ್ಟು, ಎಲ್ಲರಿಗೂ ಹತ್ತಿರ ಹೋಗಿ ಉಪಚರಿಸುತ್ತಿದ್ದರಂತೆ. ಎಲ್ಲವನ್ನು ಮತ್ತೆ ಮತ್ತೆ ಅನೇಕ ಬಾರಿ ಪರಿಶೀಲಿಸಿ ಪ್ರಶಸ್ತಿಯ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದರಂತೆ. ಎಷ್ಟೋ ಸಮಯ ರಾತ್ರಿ ಆದ್ರೂ ಕೂಡಾ ಸಮಯದ ಪರಿವೆಯೇ ಇರುತ್ತಿರಲಿಲ್ಲ ಅವರಿಗೆ. ಆಮೇಲೆ ಇನ್ನೊಂದು ಸ್ವಾರಸ್ಯಕರವಾದ ಘಟನೆ ನಡೀತು ಈ ಸಲ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯ ಸಮಯದಲ್ಲಿ ಅಂತ ಹೇಳ್ತಾ, ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಇದ್ದವರೊಬ್ಬರು ನನ್ನನು ಸಮಿತಿಯಿಂದ ಬಿಟ್ಟು ಬಿಡಿ ಅಂತ ಅಮ್ಮನ ಹತ್ತಿರ ಕೇಳಿದ್ರಂತೆ. ಅಮ್ಮ ಯಾಕೆ ಅಂದಿದ್ದಕ್ಕೆ ಅವರು ನಾನು ಕೂಡ ರಾಜ್ಯೋತ್ಸವ ಪ್ರಶಸ್ತಿಯ ಆಕಾಂಕ್ಷಿ ಅಂದರಂತೆ. ಅದಕ್ಕೆ ಅಮ್ಮ ಅಯ್ಯೋ ನೀವು ಪ್ರಶಸ್ತಿ ಕೊಡೋ ಜಾಗದಲ್ಲಿದ್ದೀರ. ಅದು ಪ್ರಶಸ್ತಿ ತಗೊಳೋದಕ್ಕಿಂತ ದೊಡ್ಡ ಗೌರವ ಅಂದರಂತೆ. ಕಡೆಗೆ ನಿರ್ದೇಶಕರನ್ನು ಕರೆದು ಈ ಮನವಿಯನ್ನು ಪರಿಗಣಿಸಬೇಡಿ. ಆಮೇಲೆ ಇದೇ ಪದ್ಧತಿ ಮತ್ತೆ ಮತ್ತೆ ಮುಂದುವರೆಯುತ್ತೆ ಎಂದು ಸೂಚನೆ ಕೊಟ್ಟರಂತೆ.. ಏನೇ ಆಗ್ಲಿ ಪ್ರಶಸ್ತಿ ತಗೊಳೋದಕ್ಕಿಂತ ಕೊಡುವ ಆಯ್ಕೆ ಸಮಿತಿಯಲ್ಲಿರುವುದು ಬಹಳ ದೊಡ್ಡ ಗೌರವ ಅಂದ ಅಮ್ಮನ ಮಾತಿನ ಹಿಂದಿರುರ ದೂರ ದೃಷ್ಟಿ ಮತ್ತು ಅನುಭವೀ ಲೋಕ ಮತ್ತೆ ನಂಗೆ ಅವರನ್ನು ಮತ್ತೆ ಅರಿಯಲು ದಾರಿ ಮಾಡಿಕೊಟ್ಟಿತ್ತು.
ಸ್ನೇಹಿತರೇ ಇನ್ನೊಂದು ವಿಷಯ ಹೇಳಿ ಇವತ್ತು ವಿರಮಿಸುತ್ತೇನೆ. ಅಮ್ಮ ಈ ಸಲ ಗೆದ್ದು ಮಂತ್ರಿಗಾದಿಗೆ ಏರಿದ ಮೇಲೆ ದೇವಾಂಗ ನೇಕಾರ ಸಮುದಾಯದವರೆಲ್ಲಾ ಸೇರಿ ಟೌನ್ ಹಾಲ್ ನಲ್ಲಿ ಅವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿದ್ದರು. ಆಗ ಅಮ್ಮ ತನ್ನ ಮಾತುಗಳನ್ನಾಡುವಾಗ ‘ಬಿದಿರು ನಾನಾರಿಗಲ್ಲದವಳು ಹುಟ್ಟುತ್ತಾ ಹುಲ್ಲಾದೆ ಬೆಳೆಯುತ್ತಾ ಮರವಾದೆ’ ಎಂದು ಗದ್ಗದಿತವಾಗಿ ಉಲ್ಲೇಖಿಸುತ್ತಾ ತನ್ನ ಬದುಕನ್ನು ನೆನೆದು ಕಣ್ಣಲ್ಲಿ ನೀರು ತುಂಬಿಕೊಂಡರು. ಅಂದು ಬಿದಿರನ್ನು ಆರೋಪಿಸಿಕೊಂಡು ತನ್ನ ಸಮುದಾಯದವರ ಎದುರು ತನ್ನ ತಾನು ಏನೆಂದು ಒಬ್ಬ ಹೆಣ್ಣು ಸಂಕಷ್ಟಗಳನ್ನೆಲ್ಲಾ ಮೀರಿ ಒಂದು ಎತ್ತರಕ್ಕೆ ಬೆಳೆದು ತೋರುವುದಿದೆಯಲ್ಲಾ ಅದು ಸಾಮಾನ್ಯವಾದುದು ಖಂಡಿತಾ ಅಲ್ಲ. ಇದು ಬಿಟ್ಟರೆ ಅಮ್ಮ ಇತ್ತೀಚಿಗೆ ಟಿ.ವಿ. ನೈನ್ ನಲ್ಲಿ ಮರೆಯಲಾರೆ ಕಾರ್ಯಕ್ರಮದಲ್ಲಿ ಮತ್ತು ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ತನ್ನ ಬದುಕನ್ನು ನೆನೆದು ಉಮ್ಮಳಿಸಿ ಅತ್ತಿದ್ರು. ಅದು ಬಿಟ್ಟರೆ ಅಮ್ಮ ಅಧಿಕಾರಕ್ಕೆ ಬಂದ ಮೇಲೆ ಮತ್ತೆಲ್ಲೂ ತನ್ನ ವೈಯಕ್ತಿಕ ವಿಷಯಕ್ಕೆ ಎಮೋಷನಲ್ ಆಗಿಲ್ಲ. ಅಮ್ಮ ಎಲ್ಲೂ ತನ್ನ ಸಂಕಷ್ಟಗಳನ್ನು ತೋರಿ ಕರುಣೆಯನ್ನು ಬಯಸಿಲ್ಲ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಹರ್ನಿಶಿಯಿಂದ ಬಂದ ’ಬೆಂಕಿ ಬೆಡಗು’ ಪುಸ್ತಕದಿಂದ ಆರಿಸಿದ ಒಂದು ಭಾಗವನ್ನು ಪದವಿ ವಿದ್ಯಾರ್ಥಿಗಳಿಗೆ ಪಾಠವಾಗಿ ಇಟ್ಟಿದ್ದಾರೆ ಅಂತ ನಾನು ಹೇಳಿದಾಗ ಅವರು ‘ ನಾನೇನ್ ಮಹಾ ಕಷ್ಟ ಪಟ್ಟಿಲ್ಲಪ್ಪ ಪಟ್ಟಿದ್ರೂ ಅದನ್ನು ನಾನು ಕಷ್ಟ ಅಂದುಕೊಂಡಿಲ್ಲ. ನನ್ನಂತ ಅನೇಕ ಉಮಾಶ್ರೀಯರು ಇದ್ದಾರೆ ಈ ಮಣ್ಣಿನಲ್ಲಿ. ನಂದು ಅದೃಷ್ಟ ಗಟ್ಟಿಗಿತ್ತು ಮೇಲೆ ಬಂದೆ. ಹೀಗಿರುವಾಗಾ ಇನ್ನೂ ಅದೆಷ್ಟೋ ಅಸಹಾಯಕ ಜೀವಗಳು ನಮ್ಮ ನಡುವೆ ಇದ್ದಾವೆ. ಆದ್ರೆ ಅವರಲ್ಲಿ ಛಲದ ಸಮಸ್ಯೆ ಇದೆ, ಮಾರ್ಗದರ್ಶನ ಕೊರತೆ ಇದೆ ಅಷ್ಟೇ’ ಅಂದ್ರು. ಇದೊಂದು ಮಾತು ಸಾಕಲ್ವ ಉಮಾಶ್ರೀಯನ್ನು ಅರಿಯಲು…



ಬೆಟ್ಟವನ್ನು ನಿಧಾನಕ್ಕೆ ಹತ್ತಿಕೊಂಡು ಹೋಗಿ ಬೆಟ್ಟದ ತುದಿಯಲ್ಲಿ ಕೂತ ಕಾಠಿಣ್ಯ ನುಂಗಿದ ಗಟ್ಟಿ ದಳದ ಪುಟ್ಟ ಹೂವು. ……….
ಆಹಾ ! ಸಾದಕಳ ಬಗ್ಗೆ ಹೇಳಿದ ಎಷ್ಟೊಂದು ಸುಂದರ ಮತ್ತು ಸತ್ಯ ಮಾತುಗಳು !
ನಮಸ್ತೆ ಸರ್, ಅವಧಿಯಲ್ಲಿ ‘ಬೆಂಕಿಯಲ್ಲಿ ಅರಳಿದ ಹೂವು’ ಉಮಾಶ್ರೀ ಅವರ ಕುರಿತು ನೀವು ಬರೆದಿರುವ ಲೇಖನ ಓದಿದೆ… ಮನಸ್ಸಿಗೆ ತುಂಬಾ ಹತ್ತಿರವಾಯಿತು. ಅವರ ಕಾರ್ಯಬದ್ಧತೆಯ ಕೆಲ ತುಣುಕುಗಳು ನಿಮ್ಮ ಲೇಖನದಿಂದ ದಕ್ಕಿದವು. ಉತ್ತಮ ಲೇಖನಕ್ಕೆ ಧನ್ಯವಾದಗಳು.
super,nimma paripakva manasinadyotaka nimma nudigalu,bhavada mareya bhrahma ennuvantive,abhinandanegalu
ಸೂಪರ್ ರಘುನಂದನ್ …ಜೀ
ನಿಜ, ಉಡುಪಿಯ ಯಕ್ಷಗಾನ ಕಲಾರಂಗ ತನ್ನ ನಲ್ವತ್ತನೇ ವಾರ್ಷಿಕೋತ್ಸವವನ್ನು ಈ ಬಾರಿ ಬೆಂಗಳೂರಿನಲ್ಲಿ ನಡೆಸಿದಾಗ ಸಚಿವೆಯಾಗಿ ಬಂದ ಉಮಾಶ್ರೀಯವರ ಮಾತು, ನಡವಳಿಕೆ, ಸಭಾ ಕಾರ್ಯಕ್ರಮವಾದಮೇಲೆ ಪ್ರೇಕ್ಷಾಂಕಣದಲ್ಲಿ ಕುಳಿತು ಪ್ರದರ್ಶನಗಳನ್ನು ಆಸ್ವಾದಿಸಿದ ಪರಿ ಉಮಾಸಿರಿಯನ್ನೇ ಕಾಣಿಸಿತು. ಅವರ ಆಶಯಗಳಿಗೆ ಸಮರ್ಥ ಆಡಳಿತಾತ್ಮಕ ಚೌಕಟ್ಟು ಕೊಡುವ ಶಾಲಿನಿ ರಜನೀಶ್ ಕೂಡಾ ಆ ದಿನ ಪ್ರಶಂಸಾಭಾಗಿಯಾಗಿ ತೋರಿದ್ದನ್ನೂ ಇಲ್ಲಿ ಉಲ್ಲೇಖಿಸುವುದು ತಪ್ಪಾಗಲಾರದು.
Ammana na bari dooradinda nodidvi, adre nimma barahadinda avaru Inu Hathira adru. Great sir.
ಬೆಟ್ಟದ ತುದಿಯಲ್ಲಿ ಅರಳಿದ ಗಟ್ಟಿ ದಳದ ಪುಟ್ಟ ಹೂ. ” ಇದೊಂದು ಹೋಲಿಕೆ ಸಾಕು ವರ್ಣಿಸಲು. ಬಿದಿರಮ್ಮ ಅವಳಾರಿಗಲ್ಲದವಳು.. ಎಲ್ಲವನ್ನೂ ನೀವೇ ಬರೆದಿದ್ದೀರಿ .
.
ಬಿದಿರು ನಾನಾರಿಗಲ್ಲದವಳು ಹುಟ್ಟುತ್ತಾ ಹುಲ್ಲಾದೆ ಬೆಳೆಯುತ್ತಾ ಮರವಾದೆ…
ಹೆಣ್ಣು ಮಕ್ಕಳಿಗೆ ಮಾದರಿ ಅಂದರೆ ತಪ್ಪಗಲಾರದು…
ಉಮಾಶ್ರೀಯವರಿಗೆ ಮತ್ತಷ್ಟು ಯಶಸ್ಸು ಸಿಗಲೆಂದು ಹಾರೈಕೆಗಳು….
ಚೆಂದದ ಬರಹ ರಘುನಂದನ್ ಸರ್…
ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಉಮಾಶ್ರೀ ಯವರನ್ನು ನೋಡಿದಾಗ ಕಣ್ಣಂಚಿನಲ್ಲಿ ನನಗೆ ಅರಿವಿಲ್ಲದೆ ತೇವವಾಗಿತ್ತು……
ತಮಗೆ ಎಷ್ಟೇ ಕಷ್ಟಗಳಿದ್ದರೂ ಮಕ್ಕಳನ್ನು ಒಳ್ಳೆ ಪ್ರಜೆಗಳನ್ನಾಗಿ ಮಾಡಿದ್ದಾರೆ. ಅವರ ಮಗ ಸೊಸೆ ಎಷ್ಟು ಸಿಂಪಲ್, ಅದೇನೂ ವಿನಯ, ಸೌಜನ್ಯ..ಉಮಾಶ್ರೀಯವರ ಸಾಧನೆಗಳಿಗೆ ನಮನಗಳು…
ವಿು Raghunandanji…..nimma biduvina samayadalli ammana jeevanada charitreyannu pustaka roopadalli katti Kodi…..namma sutta iro eshto abaleyarige atmavishwasa moododakke daariyagutte…..
ಎಸ್ ರಘು, ಕೊನೆಯದೊಂದು ವಿನಯದ ಮಾತು ಸಾಕು ಉಮಕ್ಕನು ಹುಲ್ಲಾಗಿ ಹುಟ್ಟಿ ಎಲ್ಲರಿಗು ಆಗುವ ಬಿದಿರಾದ ಕಥೆ ಹೇಳಲು, ಲೇಖನ ಚೆನ್ನಾಗಿದೆ, ಸ್ಫೂರ್ತಿ ತುಂಬುವ ಹಾಗಿದೆ, ನಮ್ಮ ಸೋಮಾರಿತನ ಕೊಡವಿಸುತ್ತೆ.
Dear ಬೇಲೂರು ರಘುನಂದನ್ sir ,
ಸರಳ ಸುಂದರ ಲೇಖನ ಸರ್ . ನಿಮ್ಮ ಬರವಣಿಗೆಯಲ್ಲಿ ಓದುಗರನ್ನು ಸೇಳೆಯುವ ಶಕ್ತಿ ಇದೆ. keep writtings always.super sir, urs article is very interesting and Different.
ಅಯ್ಯೋ ನೀವು ಪ್ರಶಸ್ತಿ ಕೊಡೋ ಜಾಗದಲ್ಲಿದ್ದೀರ. ಅದು ಪ್ರಶಸ್ತಿ ತಗೊಳೋದಕ್ಕಿಂತ ದೊಡ್ಡ ಗೌರವ ಅಂದರಂತೆ. ಕಡೆಗೆ ನಿರ್ದೇಶಕರನ್ನು ಕರೆದು ಈ ಮನವಿಯನ್ನು ಪರಿಗಣಿಸಬೇಡಿ. ಆಮೇಲೆ ಇದೇ ಪದ್ಧತಿ ಮತ್ತೆ ಮತ್ತೆ ಮುಂದುವರೆಯುತ್ತೆ ಎಂದು ಸೂಚನೆ ಕೊಟ್ಟರಂತೆ.. ಏನೇ ಆಗ್ಲಿ ಪ್ರಶಸ್ತಿ ತಗೊಳೋದಕ್ಕಿಂತ ಕೊಡುವ ಆಯ್ಕೆ ಸಮಿತಿಯಲ್ಲಿರುವುದು ಬಹಳ ದೊಡ್ಡ ಗೌರವ ಅಂದ ಅಮ್ಮನ ಮಾತಿನ ಹಿಂದಿರುರ ದೂರ ದೃಷ್ಟಿ ಮತ್ತು ಅನುಭವೀ ಲೋಕ ಮತ್ತೆ ನಂಗೆ ಅವರನ್ನು ಮತ್ತೆ ಅರಿಯಲು ದಾರಿ ಮಾಡಿಕೊಟ್ಟಿತ್ತು. True sir baduku yellavannu kalisutte .. yellavannu kodutte namma namma yogyathe anusaaar
ಗುರುಗಳೆ,
‘ ನಾನೇನ್ ಮಹಾ ಕಷ್ಟ ಪಟ್ಟಿಲ್ಲಪ್ಪ ಪಟ್ಟಿದ್ರೂ ಅದನ್ನು ನಾನು ಕಷ್ಟ ಅಂದುಕೊಂಡಿಲ್ಲ. ನನ್ನಂತ ಅನೇಕ ಉಮಾಶ್ರೀಯರು ಇದ್ದಾರೆ ಈ ಮಣ್ಣಿನಲ್ಲಿ. ನಂದು ಅದೃಷ್ಟ ಗಟ್ಟಿಗಿತ್ತು ಮೇಲೆ ಬಂದೆ. ಹೀಗಿರುವಾಗಾ ಇನ್ನೂ ಅದೆಷ್ಟೋ ಅಸಹಾಯಕ ಜೀವಗಳು ನಮ್ಮ ನಡುವೆ ಇದ್ದಾವೆ. ಆದ್ರೆ ಅವರಲ್ಲಿ ಛಲದ ಸಮಸ್ಯೆ ಇದೆ, ಮಾರ್ಗದರ್ಶನ ಕೊರತೆ ಇದೆ ಅಷ್ಟೇ’ ಈ ವಾಕ್ಯಗಳನ್ನು ಓದುವಾಗಲೂ ನನ್ನ ಹೃದಯ ಕಂಬನಿ ಹರಿಸಿತು. ಅಮ್ಮ ಉಮಾಶ್ರೀಯವರದ್ದು ಗಟ್ಟಿಹೃದಯ.
Tumba chngide sir
Yestadaru puttamali Alva
Vodho kuthuhala sir
kayakave kailasa anno nudimuttu namma uma sri ammanavarige heli madisida hage…..nija avara parisharamada phala evathu avarigy ee sthana hagu jana mannane…dhirye sahase lakshmi….umasri amma navarigy bahala dhairya hagu avragiy ee dhirya bandaddu anubhavagalinda…nija nimma ee lekhanda moolaka ammanavara aneka vaishishtyadinda namge hagu aneka nonda hennu makkalige spoorthi yagalide…thank u raghunandan sir…..
Bettadha thudiyalli kootha Kaarunya nungidha Gatti dhaladha putta hoouvenanthe ”PUTTAMALLI ” andare sookthaveno aanisuthadhe sir e thara bareyalu belur sir ge maathrane sadhya thanks to belur sir
AAdhesto Asahayaka jeevagalu namma naaduve eddare avaralli CHALLADHA & MARGHADHARSHANA DHA Samasye ya koorathe kanditha edhe sir nammanthavarige avaru nejavagalu maadhari sir thank u sir
Hats off to your way of explaining things
You are just extraordinary Sir
Inspiring article ………
ಲೇಖನದಲ್ಲಿ ಶ್ರೀಮತಿ ಉಮಾಶ್ರೀಯವರ ವ್ಯಕ್ತಿತ್ವವನ್ನು ಅದ್ಭುತವಾಗಿ ವಿವರಿಸಿದ್ದೀರಿ, ಧನ್ಯವಾದಗಳು.