
ಉಮಾಸಿರಿ ಅನ್ನುವ ಹೆಸರಿನಲ್ಲಿ ಬರೆಯೋಕೆ ಶುರು ಮಾಡಿದ್ದು, ತುಸು ವಾಲುತ್ತಾ ನನ್ನ ಮತ್ತು ನನ್ನ ತಂಗಿಯ ಮದುವೆಯ ಪ್ರಸ್ತಾಪಗಳು ಬಂದಿದ್ದು, ಇದೇನಪ್ಪಾ ವಿಷಯಾಂತರ ಆಗುತ್ತಿದೆ ಅನ್ನುವ ಭಾವ ಓದುಗರಲ್ಲಿ ಮೂಡುವುದು ಸಹಜವೇ. ಆದರೆ ಈ ಪ್ರಸ್ತಾಪಗಳು ಇಲ್ಲವಾದರೇ ಬಹುಷಃ ನಾನು ಉಮಾಶ್ರೀ ಅವರವನ್ನು ಕುರಿತು ಬರೆಯುವ ಈ ಬರಹವೇ ಅಪೂರ್ಣ ಆಗಿಬಿಡುತ್ತದೆ ಅನ್ನುವ ಸ್ಪಷ್ಟ ಭಾವ ನನ್ನದು. ಸ್ನೇಹಿತರೇ ಹತ್ತನೇ ಅಂಕಣದಿಂದ ಉಮಾಸಿರಿ ಮತ್ತೆ ಬೇರೆ ಬೇರೆ ಬಗೆಗಳಲ್ಲಿ ಹರಡಿಕೊಳ್ಳುತ್ತದೆ. ಎಂದಿನಂತೆ ನಿಮ್ಮ ಓದಿನ ಪ್ರೀತಿಯನ್ನು ನೆನೆದು, ಅಂದ ಹಾಗೆ ಈ ಹಿಂದಿನ ಬರಹಗಳಲ್ಲಿ ನನ್ನ ತಂಗಿಯ ಮದುವೆಯನ್ನು ಕುರಿತು ಹಾಗೂ ನನ್ನ ಮತ್ತು ಉಮಾಶ್ರೀ ಅವರ ನಡುವೆ ನಡೆದ ಸಂಭಾಷಣೆಗಳನ್ನು ಕುರಿತು ನಿಮ್ಮ ಮುಂದೆ ಪ್ರಸ್ತಾಪಿಸಿದ್ದೆ. ಅದು ನಿಶ್ಚಿತಾರ್ಥದ ತನಕ ಬಂದಿತ್ತು. ನಿಶ್ಚಿತಾರ್ಥವೂ ಆಯಿತು. ನನ್ನ ತಂಗಿಯ ಮತ್ತು ಉಮಾಶ್ರೀ ಅವರ ಮಗನ ಮದುವೆ ದಿನಾಂಕ ಗೊತ್ತಾಯಿತು.
ಐದುನೂರು ರೂಗಳು ಮಾತ್ರ ಶುರುವಾತಿಗೆ ಇದ್ದ ಹಣದ ಜೊತೆ ನನ್ನ ಬೆಂಗಳೂರಿನ ಅಜ್ಜಿ ಮನೆಯವರ, ನನ್ನ ಅತ್ತೆಯ ಸಹಕಾರ ಮತ್ತು ತಮ್ಮ ಕೂಡಿಸಿಟ್ಟಿದ್ದ ಪುಡಿಗಾಸು ಸೇರಿಸಿ ತುಂಬಾ ಸರಳವಾಗಿ ನಿಶಿತಾರ್ಥ ಮುಗಿಸಿದೆ. ಗಂಡು ಬಂದು ಕೂತ ಮೇಲೆ ಓಡಿ ಹೋಗಿ ಉಂಗುರ ತಂದ ದಿನವನ್ನು ಮರೆತರೆ ನನ್ನ ಇಂದಿನ ಬದುಕು ಮತ್ತು ಏನೂ ಕೇಳದ ಉಮಾಶ್ರಿ ಅವರ ಬದುಕಿನ ಅನುಭವ ಎಲ್ಲವೂ ಸೋರಿ ಹೋಗಿ ಎಲ್ಲಾ ಬರಿದಾಗಿಬಿಡುತ್ತವೆ ಏನಂತೀರಿ. ಅದಕ್ಕಾಗಿಯೇ ತೀರಾ ವಯಕ್ತಿಕ ಅನ್ನಿಸುವ ಈ ವಿವರಗಳು ಉಮಾಶ್ರೀ ಅವರಂತಹ ವ್ಯಕ್ತಿತ್ವವನ್ನು ಅನಾವರಣ ಮಾಡುತ್ತಲೇ ನಮ್ಮ ತನಗಳನ್ನು ನಮಗೆ ತಿಳಿಸಿ ಕೊಡುತ್ತವೆ ಅಲ್ವಾ ? ನೆನಪಿಸಿಕೊಳ್ಳುವುದರಲ್ಲಿ, ನೆನಸಿಕೊಂಡಿದ್ದನ್ನು ಬರೆಯುವುದರಲ್ಲಿ ಅದೇನು ಸುಖವಿದೆ, ತಿಳಿವಿದೆ, ಅದೆಷ್ಟೋ ಬದುಕಿನ ಪಾಠಗಳಿವೆ. ಕಲಿಯಲು ಏನೆಲ್ಲಾ ದಾರಿಗಳಿವೆ ನೋಡಿ ಸ್ನೇಹಿತರೇ.
ನಾನೇ ಮದುವೆ ಮಾಡಿಕೊಡಬೇಕು ಅಂತ ತೀರ್ಮಾನ ಆಯಿತು. ಮದುವೆ ದಿನಾಂಕವೂ ಗೊತ್ತಾಯಿತು. ಅದೂ ಬೆಂಗಳೂರಿನಲ್ಲಿ ಮದುವೆ. ಛತ್ರ, ಊಟ, ಬಟ್ಟೆ ಬರೆ, ದುಡ್ಡು ಕಾಸು ಹೀಗೇ ಎಷ್ಟೆಲ್ಲಾ ಸುತ್ತ ಬಂದುಬಿಡ್ತು. ಹೆಣ್ಣು ಮಕ್ಕಳ ಮದುವೆ ಮಾಡುವ ತಂದೆ ತಾಯಂದಿರು ಎಷ್ಟೆಲ್ಲಾ ತಮ್ಮ ಬದುಕಿನ ಸುಖಗಳನ್ನು ತ್ಯಜಿಸಿ ಮಗಳ ಮದುವೆಗೆಂದೇ ಎಲ್ಲವನ್ನೂ ತೆಗೆದಿಡುತ್ತಿರುತ್ತಾರೆ. ಒಟ್ಟು ಈ ಮದುವೆ ಅನ್ನುವ ದುಬಾರಿ ಆಟಕ್ಕೆ ಅದೆಷ್ಟೋ ಮಧ್ಯಮವರ್ಗದ ಕುಟುಂಬಗಳು ನಿಭಾಯಿಸಲು ಆಗದೇ ತತ್ತರಿಸಿಹೋಗಿ ಬಿಡುತ್ತವೆ ಅಲ್ವಾ ಅಂತ ಈಗ ಅನ್ನಿಸುತ್ತೆ ನನಗೆ. ಆದ್ರೆ ನನ್ನ ಕಥೇನೇ ಬೇರೆ. ಆಗ ಇವೆಲ್ಲಾ ಏನೂ ಅನ್ನಿಸಿರಲಿಲ್ಲ ತಂಗಿ ಮದುವೆಯನ್ನು ಎಲ್ಲರಂತೆ ಚೆನ್ನಾಗಿ ಮಾಡಬೇಕು. ಎಷ್ಟೇ ಕಷ್ಟ ಆದ್ರೂ ಸರಿಯೇ ಹುಟ್ಟುವ ಕನಸುಗಳನ್ನು ಕೊಲ್ಲಬಾರದು ಅಂತ ಮದುವೆ ಗೊತ್ತಾದ ದಿನದಿಂದ ಕ್ಷಣ ಕ್ಷಣವೂ ಕಾಸು ಕಾಸು ಸೇರಿಸೋದು ಹೇಗೆ ? ಯಾರು ಯಾರನ್ನು ಹಣ ಕೇಳಬೇಕು ಅನ್ನುವ ತಪಸ್ಸಿನಲ್ಲೇ ಕಳೆದು ಬಿಟ್ಟೆ. ಕೆಲಸ ಬಗಸ ಇಲ್ಲ ಲಕ್ಷ ಲಕ್ಷ ದುಡ್ಡು ಯಾರು ಕೊಡ್ತಾರೆ ಅನ್ನುವ ಭಯ ಮಾತ್ರ ನನ್ನನ್ನು ಬಿಡಲೇ ಇಲ್ಲ.

ನಿಜ ಹೇಳಬೇಕು ಅಂದ್ರೆ ನಿಶ್ಚಿತಾರ್ಥ ಆದ ದಿನದಿಂದ ಎರಡು ತಿಂಗಳಿಗೆ ಮದುವೆ. ಆ ಎರಡೂ ತಿಂಗಳೂ ನಾ ನಿದ್ದೇ ಅನ್ನೋದನ್ನೇ ಮಾಡಿಲ್ಲ. ಮಾಡಿದ್ರೂ ಕನಸಲ್ಲೆಲ್ಲಾ ಪೂರ್ತಿ ದುಡ್ಡು , ಆಗಬೇಕಾದ ಕೆಲಸ, ತಯಾರಿ ಇವುಗಳಲ್ಲೇ ಕಾಲ ಕಳೆದು ಹೋಯಿತು. ಎರಡು ತಿಂಗಳು ಹಿಂಗೆ ಬಂದು ಹಂಗೆ ಹೋಗ್ಬಿಡ್ತು. ಇದರ ಜೊತೆಗೆ ತಂಗಿ ಬೇರೆಯವರ ಮನೆಗೆ ಹೋಗಿಬಿಡುತ್ತಾಳೆ ಅನ್ನುವ ಭಾವನಾತ್ಮಕ ಸಂಕಷ್ಟಗಳು ಬೇರೆ. ಒಟ್ಟು ಮದುವೆಗೆ ಖಾರದಪುಡಿ ಮಾಡಿಸಿ, ಉಪ್ಪಿನಕಾಯಿ ಹಾಕೋದ್ರಿಂದ ಹಿಡಿದು ಛತ್ರಕ್ಕೆ ಬೆಂಗಳೂರಿನ ಸಿಟಿ ಮಾರುಕಟ್ಟೆಗೆ ಹೋಗಿ ನಾನು ನನ್ನ ತಮ್ಮ ಇಬ್ಬರೇ ಮೂಟೆ ಮೂಟೆ ತರಕಾರಿ ದಿನಸಿ ಸಾಗಿಸಿವ ತನಕದ ಕೆಲಸಗಳು, ಬಂದವರನ್ನು ಹೋದವರನ್ನು ಮಾತಾಡಿಸೋದು, ನಮ್ಮ ಒಟ್ಟು ಬದುಕಿನ ಸಾಧನೆಗಳನ್ನು ಕಂಡು ಇವರು ನಿರ್ನಾಮ ಆಗಿಬಿಡಲಿ ಅನ್ನುವವರನ್ನು ಕರೆದು ಪ್ರೀತಿಯಿಂದ ಮಾತಾಡಿಸೋದು ಯಾಕಂದ್ರೆ ನಮ್ಮಜ್ಜಿ ಯಾವಾಗಲೂ ಆಗದವರಿಗೆ ಹಾಲು ಅನ್ನ ಇಕ್ಕಬೇಕು ಅಂತ ಹೇಳುತ್ತಿತು ಅದಕ್ಕಾಗಿ, ಇದರ ಜೊತೆಗೆ ತಂಗಿ ಮದುವೆಯಲ್ಲಿ ರಾಣಿಯ ತರ ಕಾಣಿಸಬೇಕು ಅನ್ನುವ ಮಹದಾಸೆಯಿಂದ ಗಾಂಧೀ ಬಜಾರಿನ ಎಲ್ಲಾ ಬಳೆ ಅಂಗಡಿಗಳಲ್ಲಿ ಸುತ್ತಿ ವಡವೆ ಅಲಂಕಾರಿಕ ಸಾಮಗ್ರಿಗಳನ್ನು ಹೊಂದಿಸೋದು, ಅಡುಗೆ ಭಟ್ಟ, ಬಳೆ ತೊಡಿಸೋಳು, ವಾಲಗ, ವೀಡಿಯೋ ಫೋಟೋ, ಪುರೋಯ್ತ, ಹಾಲು, ನೀರು, ಮದುವೆಯ ಕೆಲಸವನ್ನೇ ಉದ್ಯೋಗ ಮಾಡಿಕೊಂಡ ಅದೆಷ್ಟೋ ಬೆವರಿನ ಮಕ್ಕಳೊಂದಿಗೆ ಒಡನಾಟ, ಸುತ್ತಾಟ, ಉದ್ವೇಗ, ಆಸೆ, ಕನಸು, ಅಬ್ಬಾ ಒಂದಾ ಎರಡಾ ಇದೆಲ್ಲಾ ನಿಭಾಯಿಸಿದ್ದನ್ನು ನೆನಪಿಸಿಕೊಂಡರೆ ಈಗಲೂ ಮೈ ಮೆದುಳು ಜುಮ್ ಅನ್ನುತ್ತೆ. ಇದನ್ನೆಲ್ಲಾ ಉಮಾಶ್ರೀ ಅವರ ಹತ್ತಿರ ಹೇಗೆ ಹೇಳಲಿ, ಹೇಳಿ ನನ್ನ ಕೈಲಿ ಕಷ್ಟ ಆಗುತ್ತಿದೆ ಅಂತ ಹೇಗೆ ಫಲಾಯನ ಮಾಡಲಿ. ಸುತರಾಂ ನನ್ನ ಮನಸು ಒಪ್ಪಲೇ ಇಲ್ಲಾ.
ಬೆಂಗಳೂರಿನಲ್ಲಿ ಮದುವೆ ಮಾಡೋದೇ ಬಲು ಕಷ್ಟ ಆಗಿತ್ತು. ಅಂತದ್ದರಲ್ಲಿ ಊರು ಮನೆ ಗೊತಿಲ್ಲದ ಜಾಗ. ಅಂಗಡಿ ಪಂಗಡಿ ಗೊತ್ತಿಲ್ಲ. ಕೇಳಿದಷ್ಟು ದುಡ್ಡು ಕೊಡಬೇಕು. ತನ್ನ ಬೆಲೆಗಿಂತ ಹೆಚ್ಚು ಹಣ ತೆಗೆದುಕೊಳ್ಳುತ್ತಿದ್ದ ಸರಕನ್ನು ಕಂಡು, ನಮ್ಮೂರಿಗೆ ಬಂದ್ರೆ ಇದನ್ನೆಲ್ಲಾ ಪುಕ್ಸಟ್ಟೆ ಕೊಡುತ್ತಿದ್ದೆ ಅಂತಾ ದಭಾಯಿಸಿದ್ರೂ ಎಲ್ಲೂ ಯಾವ ಪ್ರಯೋಜನ ಆಗುತ್ತಿರಲಿಲ್ಲ. ಗ್ರಾಹಕ ಬೆಂಗಳೂರಿಗೆ ನನ್ನ ಸ್ಥಿತಿ ಮತ್ತು ಪೀಕಲಾಟಗಾಳು ತಿಳಿಯುವುದಾರೂ ಹೇಗೆ. ಜೊತೆಗೆ ಉಮಾಶ್ರೀ ಅವರ ಮನೆ ಮದುವೆ ಅಂತ ಅನೇಕರು ಕಡಿಮೆ ದುಡ್ಡಿನ ಚೌಕಾಸಿ ಕೆಲ್ಸಕ್ಕೆ ಹರ ಅನ್ನುತ್ತಿರಲಿಲ್ಲ. ಶಿವ ಅನ್ನುತ್ತಿರಲಿಲ್ಲ. ಎಲ್ಲರೂ ಮದುವೆ ಕೆಲಸಕ್ಕೆ ಹೆಚ್ಚು ಹಣವನ್ನೇ ಬಯಸುತ್ತಿದ್ದರು. ಕೊನೆ ಕೊನೆಗೆ ಮದುವೆ ಆಗುವ ತನಕ ಉಮಾಶ್ರೀ ಅವರ ಹೆಸರೇ ಎತ್ತೋದು ಬೇಡ ಅಂದುಕೊಂಡೆ. ಒಟ್ಟಾರೆ ಈ ಎರಡು ತಿಂಗಳ ಯಾನ ಬಹು ದೊಡ್ಡದು ನನ್ನ ಬದುಕಿನಲ್ಲಿ.
ಮದುವೆಗೆ ಮುಂಚೆ ವರನೇ ಸ್ವತಃ ಛತ್ರ ಹುಡುಕೋದ್ರಲ್ಲಿ ಬಂದು ಜೊತೆಯಾಗಿದ್ದು, ನನ್ನ ಅನುಕೂಲ ಮತ್ತು ಅವರ ಅಮ್ಮನ ಘನತೆ ಎರಡಕ್ಕೂ ಒಂಚೂರು ತೊಂದರೆ ಆಗದ ಹಾಗೆ ನಿಗಾ ವಹಿಸಿದ್ದು ಕಂಡು ಹೆಮ್ಮೆ ಪಟ್ಟೆ. ಕಷ್ಟ ಮತ್ತು ಶ್ರಮದ ಬೆಲೆಗೊತ್ತಿರುವ ಭಾವ ಅಂತ ಮನದಲ್ಲಿ ಹಿಗ್ಗಿ, ಅವರಲ್ಲಿ ಉಮಾಶ್ರೀ ಅವರನ್ನು ಕಂಡೆ. ನಾ ಕಷ್ಟ ಪಟ್ಟು ಮಾಡುತ್ತಿರುವ ಈ ಮದುವೆ ನಿಜಕ್ಕೂ ಅರ್ಥಪಡೆದುಕೊಳ್ಳುತ್ತಿದೆ ಅಂತ ತುಂಬಾ ಸರಳ ವ್ಯಕ್ತಿತ್ವದ ಭಾವನವರನ್ನು ಕಂಡು ಅದೆಷ್ಟೋ ಸಲ ಅನ್ನಿಸಿ ನಿರಾಳ ಆಗುತ್ತಿದೆ . ಜೊತೆಗೆ ನನ್ನ ಹೆಂಡತಿ ಲಕ್ಷ್ಮಿ ತಂದೆ ತಾಯಿ (ಅಕ್ಕ ಭಾವ) ಮತ್ತು ನನ್ನ ಅಜ್ಜಿ ಮನೆಯ ಮಾವಂದಿರು ಮತ್ತು ಬೇಲೂರಿನ ಸ್ವರ್ಣಕ್ಕ ನೀಡಿದ ಒಂದಿಷ್ಟು ಆರ್ಥಿಕ ಸಹಕಾರ ಗರಿಕೆಯಾದರು ಬಹು ದೊಡ್ಡದು ನನಗೆ. ಇನ್ನೂ ಮದುವೆಯ ಕೆಲಸ ಕಾರ್ಯಗಳಲ್ಲಿ ಸದಾ ಜೊತೆಯಿರುತ್ತಿದ್ದ ಅನಿ ಅಮ್ಮ, ಗಾಯಮ್ಮ ಕಾಟನ್ ಪೇಟೆಯ ಪಾಪಕ್ಕ ಭಾವ, ಸುನಂದತ್ತಿಗೆ, ಚೂಡತ್ತಿಗೆ, ಉಮಾ ಅತ್ತೆ ಇವರುಗಳ ತಾಯ್ತನದ ಪ್ರೀತಿಯನ್ನು ಮರೆಯುವುದಾದರೂ ಹೇಗೆ.
ಇಷೆಲ್ಲಾ ಭಾವನಾತ್ಮಕತೆ ಇರುವ ಮತ್ತು ಕಷ್ಟ ಪಟ್ಟು ಮಾಡಿದ ಮದುವೆ ದಿನ ಗಂಡು ದಿಬ್ಬಣ ಬಂದಾಗ ನನ್ನ ತಂದೆ ಕುಡಿದು ಚಪ್ಪರದಲ್ಲಿ ಬಿದ್ದು ಮಾಡಿದ ಅವಾಂತರ ಇಡೀ ನನ್ನನ್ನು ಮತ್ತು ವಧುವಾಗಿ ಕೂತಿದ್ದ ಮುದ್ದು ತಂಗಿ, ಎಳೇ ಹುಡುಗ ನನ್ನ ತಮ್ಮ ಮೂರು ಜನರ ಎದೆಗೆ ನೂರು ಬಂಡೆಗಳು ಬಿದ್ದಂತಾದವು. ಇದನ್ನು ನೋಡಿದ ಉಮಾಶ್ರೀ ಅವರು ನನ್ನ ಪಕ್ಕಕ್ಕೆ ಕರೆದರು. ನನಗೆ ಏನಂತಾರೋ ಏನೋ, ಮದುವೆ ಬೇಡವೆಂದು ಬಿಟ್ಟರೆ ಅನ್ನುವ ಆತಂಕಕ್ಕೆ ಮೈ ಕೈ ಬೆವೆತು ಸುಮ್ಮನೇ ಕಣ್ಣೀರು ಹರಿಯೋಕೆ ಶುರು ಆಗಿಬಿಟ್ಟಿತು. ಚಿಕ್ಕ ವಯಸ್ಸು ಇದನ್ನೆಲ್ಲಾ ಹೇಗೆ ನಿಭಾಯಿಸಬೇಕು ಅಂತ ಯಾವುದೂ ಗೊತ್ತಿಲ್ಲ. ಆದ್ರೂ ಅವರು ಕರೆದ ತಕ್ಷಣ ಹೋದೆ ಅವರೂ ಅಲ್ಲಿ ಏನೂ ಮಾತಾಡಲಿಲ್ಲ ತಲೆ ಕೆಡಿಸಿ ಕೊಳ್ಳಬೇಡ ಬೆಳಿಗ್ಗೆ ಧಾರೆ ಎರೆಯುವ ತನಕ ಹೇಗೋ ನಿಭಾಯಿಸಪ್ಪ ಅಂತ ಪ್ರೀತಿಯಿಂದ ಹೇಳಿ ಒಳ ಹೋದರು. ಈ ಸಂದರ್ಭದಲ್ಲಿ ಅಂದು ಎಂ.ಎಲ್.ಸಿ ಆಗಿದ್ದ ಅವರು ಹತ್ತಿರ ಹತ್ತಿರ ಎರಡು ಸಾವಿರ ಜನರ ನಡುವೆ ಅವರ ಕಣ್ಣಲ್ಲಿ ನನಗೆ ತೋರಿದ ಪ್ರೀತಿಯನ್ನು, ನೀಡಿದ ಧೈರ್ಯವನ್ನು ಈ ಉಸಿರು ಇರೋ ತನಕ ಮರೆಯಲಾರೆ.
ಇದೆಲ್ಲಾ ಆದ ಮೇಲೆ ನಾನೂ ನನ್ನ ತಂಗಿ, ನನ್ನ ತಮ್ಮ ಸಂತು ಮೂರು ಜನ ಸೇರಿ ಒಂದು ರೂಮಿನಲ್ಲಿ ಸಾಕಾಗುವಷ್ಟು ಅತ್ತುಬಿಟ್ಟೆವು. ಇಲ್ಲ ಅಂದಿದ್ರೆ ನಾವು ಮತ್ತೆ ಮುಂದಿನ ಕೆಲಸ ಮಾಡಲು ಸಾಧ್ಯ ಆಗ್ತಾನೇ ಇರಲಿಲ್ಲ. ಯಾಕಂದ್ರೆ ಆ ಅಳು ಕೊಟ್ಟ ಧೈರ್ಯ, ಆತ್ಮವಿಶ್ವಾಸ ಬಹು ದೊಡ್ಡದು ಅಂದಿಗೆ. ಶಾಸ್ತ್ರ ಸಂಬಂಧಗಳೆಲ್ಲಾ ಸುಸೂತ್ರವಾಗಿ ಮುಗಿದವು. ರಾತ್ರಿ ಅರಿಶಿನ ಚಪ್ಪರದ ಕಾರ್ಯಗಳೆಲ್ಲಾ ಅಚ್ಚುಕಟ್ಟಾಗಿ ಆಯಿತು. ಉಮಾಶ್ರೀ ಅವರು ಗಂಡಿನ ತಾಯಿ ಅಂತಲೋ, ಅಥ್ವಾ ಸೆಲೆಬ್ರಿಟಿ ಅಂತಲೋ ಯಾವ ಬಿಗುಮಾನವನ್ನು ಎಲ್ಲೂ ತೋರಲೇ ಇಲ್ಲ. ಅವರು ಎಲ್ಲರ ಜೊತೆ ಪ್ರೀತಿ ಮತ್ತು ವಿಶ್ವಾಸದಿಂದ ಇದ್ದರು. ಬೆಳಗು ಹರಿಯಿತು ತಾಳಿ ಕಟ್ಟುವ ಶುಭವೇಳೆ ಬಂದೂ ಆಯಿತು. ಕುಡಿದು ವಾಲಾಡುತ್ತಿದ್ದ ನಮ್ಮಪ್ಪ ಕೈ ಹಿಡಿದು ಮತ್ತು ತನ್ನ ಕೈಯಿಂದ ಏನೂ ಆಗುತ್ತಿಲ್ಲವಲ್ಲ ಅನ್ನುವ ನನ್ನ ಮುಗ್ಧ ತಾಯಿಯ ಕೈ ಹಿಡಿದು ಧಾರೆ ಎರೆದೆ. ಬಹುಶಃ ನನ್ನ ಗಂಟಲು ಅಂದು ಗದ್ಗದಿತ ಆದಂತೆ ಇನ್ನೆಂದೂ ಆಗಿಲ್ಲ ಬಿಡಿ. ಅದನ್ನೆಲ್ಲಾ ವಿವರಿಸಲು ಸಾಧ್ಯ ಆಗದೇ ಇರುವ ಭಾವಗಳು. ಅನುಭವಗಳು ಅಷ್ಟೇ, ಸುಮ್ಮನೇ ನೆನಪಿಸಿಕೊಂಡು ಪ್ರೀತಿ ಮತ್ತು ವಾತ್ಸಲ್ಯಕ್ಕೆ ಇರುವ ಶಕ್ತಿಯನ್ನು ಅರಿಯಬೇಕು.
ಮದುವೆಯೆಲ್ಲಾ ಮುಗಿಯಿತು ಉಮಾಶ್ರೀ ಅವರು ಶೇತಮ್ಮನನ್ನು ಕಳಿಸಿಕೊಡಪ್ಪ ಅಂದ್ರು. ಒಂದು ಸಲ ನನ್ನ ಭೂಮಿ ಉಲ್ಟಾ ತಿರುಗಿದಂತಾಯಿತು. ಹೇಗಪ್ಪಾ ಅವಳ ಜೊತೆಯಿಲ್ಲದ ಬದುಕನ್ನು ಕಳೆಯೋದು. ಏನೂ ಉತ್ತರಿಸಲಾಗದೆ ಚೆನ್ನಾಗಿ ನೋಡಿಕೊಳ್ಳಿ ಅಂತ ಹೇಳುವ ಭಾವದಲ್ಲಿ ಧೀನ ನೋಟ ನೋಡಿದೆ. ನನ್ನ ಕಣ್ಣು ಮತ್ತು ಮನಸನ್ನು ನೋಡಿದ ಅವರು ನನ್ನ ಕೈ ಹಿಡಿದು ಒಂದು ರೂಮಿಗೆ ಕರ್ಕೊಂಡು ಹೋಗಿ ಬಾಗಿಲು ಹಾಕಿ ನನ್ನ ಗಟ್ಟಿಯಾಗಿ ಅಪ್ಪಿಕೊಂಡು ಸುಮಾರು ಹದಿನೈದು ನಿಮಿಷ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತುಬಿಟ್ಟರು. ಕೊನೆಗೆ, ಮುತ್ತಿಟ್ಟು ಮುದ್ದಾಡಿ ನೀನು ಗೆದ್ದು ಬಿಟ್ಟೆ ಕಂದಾ. ನೀನು ಮಾಡಿಕೊಟ್ಟ ಮದುವೆ ನಿಜಕ್ಕೂ ನನಗೆ ತುಂಬಾ ತೃಪ್ತಿ ಮತ್ತು ಸಂತೋಷಗಳನ್ನು ನೀಡಿದೆ. ನಾನು ನನ್ನ ಮಗ ಇದನ್ನು ಮರೆಯಲ್ಲಪ್ಪ ಅಂದ್ರು. ನಿಜವಾಗಲೂ ಸಾಧಕ ನೀನು. ಸೋದರ ಪ್ರೀತಿಯ ಅರ್ಥಗಳನ್ನು ನಿನ್ನಿಂದ ಕಲಿಯಬೇಕು ಅಂದು, ಯೋಚಿಸಬೇಡ ಶೇತಮ್ಮಾ ಚೆನ್ನಾಗಿರುತ್ತಾಳೆ ಅಂದ ಕೂಡಲೇ ನಾನೇನೂ ಮಾತಾಡಲಿಲ್ಲ ನನ್ನರಿವಿಗೆ ಬಾರದಂತೆ ನನ್ನ ತಲೆ ಅವರ ಪಾದದ ಮೇಲಿತ್ತು. ನನ್ನ ಕಣ್ಣ ನೀರು ಆ ಕಲಾಸಿರಿಯ ಪಾದ ಸ್ಪರ್ಶಿಸಿತು.
ಬೇಲೂರು ರಘುನಂದನ್ ಕಾಲಂ : ಗಟ್ಟಿಯಾಗಿ ಅಪ್ಪಿಕೊಂಡು ಉಮಾಶ್ರೀ ಮಗುವಿನಂತೆ ಅತ್ತುಬಿಟ್ಟರು

ಭಾವನಾತ್ಮಕ ಲೇಖನ… ಅಣ್ಣ-ತಂಗಿಯ ಪ್ರೀತಿ ಸದಾ ಹೀಗೇ ಇರಲಿ
ರಘು, ಎಷ್ಟೊಂದು ಯಥಾವತ್ ಚಿತ್ರಣ ಬರೆದಿದ್ದೀಯಾ, ಬಹಳ ದಿನಗಳ ಮೇಲೆ ಕಣ್ಣೀರು ಹರಿದದ್ದು ಗೊತ್ತಾಗಲೇ ಇಲ್ಲ, ಅದು ಆ ಕೊನೇ ಎರಡು ಲೈನ್ ನನಗೆ ತುಂಬ ಮಂಜಾಗಿ ಕಂಡರೂ, ಸೀದಾ ಎದೆಗೆ ಹೊಕ್ಕಿತು
ನೀವು ಮತ್ತ ಆ ತಾಯಿ ನೂರ್ಕಾಲ ತಣ್ಣಗಿರ್ರಪ್ಪ . ಕಣ್ಣು ಒದ್ದೆಯಾಯ್ತು. ಹೆಣ್ಣುಮಕ್ಕಳ ನಡುವೆ ಹುಟ್ಟಿ ಬೆಳೆದೋಳು ನನಗೆ ಈ ಕಷ್ಟ ಚೆನ್ನಾಗೆ ಗೊತ್ತು.
ಶಬ್ದಗಳು ಕೇವಲ.. ಅಕ್ಷರಗಲಾಗುತ್ತವೆ .. ವಿವರಣೆಗೆ.. ಭಾವನೆ ಮಾತ್ರ ಗ್ರಹಿಸಬಲ್ಲದು ಮನಸ್ಸು.. ಮನಸೋಮ್ಮೆ ಒದ್ದೆ ಒದ್ದೆ 🙂
ಮದುವೆಯೆಲ್ಲಾ ಮುಗಿಯಿತು ಉಮಾಶ್ರೀ ಅವರು ಶೇತಮ್ಮನನ್ನು ಕಳಿಸಿಕೊಡಪ್ಪ ಅಂದ್ರು. ಒಂದು ಸಲ ನನ್ನ ಭೂಮಿ ಉಲ್ಟಾ ತಿರುಗಿದಂತಾಯಿತು. ಹೇಗಪ್ಪಾ ಅವಳ ಜೊತೆಯಿಲ್ಲದ ಬದುಕನ್ನು ಕಳೆಯೋದು. ಏನೂ ಉತ್ತರಿಸಲಾಗದೆ ಚೆನ್ನಾಗಿ ನೋಡಿಕೊಳ್ಳಿ ಅಂತ ಹೇಳುವ ಭಾವದಲ್ಲಿ ಧೀನ ನೋಟ ನೋಡಿದೆ. ನನ್ನ ಕಣ್ಣು ಮತ್ತು ಮನಸನ್ನು ನೋಡಿದ ಅವರು ನನ್ನ ಕೈ ಹಿಡಿದು ಒಂದು ರೂಮಿಗೆ ಕರ್ಕೊಂಡು ಹೋಗಿ ಬಾಗಿಲು ಹಾಕಿ ನನ್ನ ಗಟ್ಟಿಯಾಗಿ ಅಪ್ಪಿಕೊಂಡು ಸುಮಾರು ಹದಿನೈದು ನಿಮಿಷ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತುಬಿಟ್ಟರು. ಕೊನೆಗೆ, ಮುತ್ತಿಟ್ಟು ಮುದ್ದಾಡಿ ನೀನು ಗೆದ್ದು ಬಿಟ್ಟೆ ಕಂದಾ. ನೀನು ಮಾಡಿಕೊಟ್ಟ ಮದುವೆ ನಿಜಕ್ಕೂ ನನಗೆ ತುಂಬಾ ತೃಪ್ತಿ ಮತ್ತು ಸಂತೋಷಗಳನ್ನು ನೀಡಿದೆ. ನಾನು ನನ್ನ ಮಗ ಇದನ್ನು ಮರೆಯಲ್ಲಪ್ಪ ಅಂದ್ರು. ನಿಜವಾಗಲೂ ಸಾಧಕ ನೀನು. ಸೋದರ ಪ್ರೀತಿಯ ಅರ್ಥಗಳನ್ನು ನಿನ್ನಿಂದ ಕಲಿಯಬೇಕು ಅಂದು, ಯೋಚಿಸಬೇಡ ಶೇತಮ್ಮಾ ಚೆನ್ನಾಗಿರುತ್ತಾಳೆ ಅಂದ ಕೂಡಲೇ ನಾನೇನೂ ಮಾತಾಡಲಿಲ್ಲ ನನ್ನರಿವಿಗೆ ಬಾರದಂತೆ ನನ್ನ ತಲೆ ಅವರ ಪಾದದ ಮೇಲಿತ್ತು. ನನ್ನ ಕಣ್ಣ ನೀರು ಆ ಕಲಾಸಿರಿಯ ಪಾದ ಸ್ಪರ್ಶಿಸಿತು.
sir nimma baraha odi ghala ghalane attubiite.. nimma baraha alla hrudaya nivedane nanna manasannu khshanakaala kalakibittitu..heart touching…
ಅಬ್ಬಾ… !! ಮೈ ನವಿರೇಳುವಂತಿದೆ ಸರ್ ನಿಮ್ಮ ವರ್ಣನೆ…. ನಿಜವಾಗಿಯೂ ನನ್ನ ಕಣ್ಣಚಲ್ಲಿ ನೀರುರುತ್ತಿದೆ. ಮನಕಲಕುವಂಥಹ ಸನ್ನಿವೇಶದ ವರ್ಣನೆ ಅಪರೂಪದ್ದು ಸರ್. ನಿಮಗೂ…. ಶ್ವತಕ್ಕನಿಗೂ…. ಉಮಾಶ್ರೀಯವರಿಗೂ ಒಳ್ಳೆಯದಾಗಲಿ 🙂
ಅಣ್ಣ-ತಂಗಿಯ ನಡುವಿನ ಆಳವಾದ ಪ್ರೀತಿಯ ಸಂಬಂಧಗಳು, ಉಮಾಶ್ರೀಯವರ ಮಾತೃಹೃದಯ, ನಿಮ್ಮ ಕರ್ತವ್ಯಪರತೆ ಎಲ್ಲವೂ ಕಣ್ಣನ್ನು ಮಂಜಾಗಿಸಿದವು. ನಮ್ಮ ಸಮುದಾಯದ ಕುಟುಂಬಗಳಲ್ಲಿ ಇಂತಹ ಅಪ್ಪಂದಿರು ಸರ್ವೇಸಾಮಾನ್ಯ. ಅತೀ ದುಖವನ್ನು ಅತ್ತು ಹಗುರಾಗುವುದು ಬದುಕಿಗೆ ಬಲು ದೊಡ್ಡ ಓಷಧ…
great going series, mundina avatarnikege kaayuttirittene
rgds
Very touching. Relationships and sentiments in this article reminded me ‘The mills on the floss’ novel by George Eliot…
I literaly cried sir..really umasri amma is great and you are really a great human..i am touched with this edition..may god bless you both………………..i am speechless………