ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ರಘುನಂದನ್ ಕಾಲಂ : ಕನಸುಗಳ ಕಟ್ಟಿ ನನಸು ಮಾಡುವ ಗಟ್ಟಿಗಿತ್ತಿ ಉಮಾಶ್ರೀ


ಕಟ್ಟುವುದು ಎಂದರೆ ಸುಲಭದ ಮಾತಲ್ಲ. ರಸ ಫಲವಾಗಲು ತೆನೆ ಕಟ್ಟಬೇಕು. ಪ್ರಕೃತಿಗೆ ಕಟ್ಟುವ ಮತ್ತು ಕೈ ಹಿಡಿದು ನಡೆಸುವ ಶಕ್ತಿ ಯಾವ ಕಾಲಕ್ಕೂ ಇದ್ದೇ ಇರುತ್ತದೆ, ಈ ಭೂಮಿಗೆ ಇರುವುದು ಬಹಳದೊಡ್ಡ ಧಾರಣ ಶಕ್ತಿ. ಪ್ರಕೃತಿಯ ಭಾಗವೇ ಆದ ಜೀವ ರಾಶಿಗಳಿಗೂ ಕಟ್ಟುವ ಅಥವಾ ಕಟ್ಟಿದ್ದರಲ್ಲಿ ಇರಬಲ್ಲ ಸಾಧ್ಯತೆಗಳು ಇದ್ದೇ ಇರುತ್ತದೆ. ಹೇಗೆಂದರೆ ಅವಲಂಬನೆ ಪರಾವಲಂಬನೆಗಳು ಅನ್ನೋದು ಒಳ ಸೆಳೆದುಕೊಂಡು ಮತ್ತೆ ಆಶ್ರಯಕೊಡಬಲ್ಲ ಒಂದು ಶಕ್ತಿಯಾಗಿ. ಇದನ್ನೇ ಭೂಮಿ ತತ್ವ ಅನ್ನಬಹುದು ಅಂತ ಕರೆದಿರುವುದು. ಪ್ರಕೃತಿಯ ಭಾಗವಾದ ಮನುಷ್ಯ ಮತ್ತೆ ಪ್ರಕೃತಿಯೇ ಆಗಬೇಕು. ಹೀಗಿದ್ದಾಗ ಮಹತ್ವಾಕಾಂಕ್ಷೆಗಳು ಕೈ ಹಿಡಿದು ಪೊರೆಯುವ ಗುಣ ತಂತಾನೇ ಬಂದುಬಿಡುತ್ತದೆ. ಅಥವಾ ಮುಂದೆ ನಿಂತು ತನ್ನಿಂದ ಆಗಬಹುದಾದ ಕೆಲಸಗಳನ್ನು ಸಮಷ್ಠಿಯಾ ನೆಲೆಯಲ್ಲಿ ಮಾಡುತ್ತಾ ಹೋಗಬಹುದು. ಈ ನಿಟ್ಟಿನಲ್ಲಿ ಉಮಾಶ್ರೀ ಅನ್ನುವ ಜೀವ ನಡೆದು ಬಂದ ದಾರಿ ಮತ್ತು ಕಟ್ಟಿದ ಸಂಘಟನೆ ಮತ್ತು ಆ ಮೂಲಕ ತನ್ನವರನ್ನು ಹಾಗೂ ತನ್ನನ್ನು ನಂಬಿದರನ್ನು ಜೊತೆಯಾಗುವುದು ಕಟ್ಟುವ ಕ್ರಿಯೆಯ ಭಾಗವಾಗಿಬಿಡುತ್ತಾರೆ. ಹನಿಯನ್ನು ಕೂಡಿಸಿ ಹಳ್ಳ ಆಗುವ ಹಾಗೆಯೇ ತೆನೆಯನ್ನು ಸೇರಿಸಿ ಬಳ್ಳ ಆಗುವುದಕ್ಕೆ ಬಹಳ ದೊಡ್ಡ ಶಕ್ತಿ ಬೇಕು. ನಿಭಾಯಿಸುವ ದಿಟ್ಟತನವೂ ಬೇಕು.
ಕಾಣದ ಊರಿಗೆ ಹೋಗಿ ಅಲ್ಲಿನ ಪರಿಸರ ವಾತಾವರಣವನ್ನು ಹಾಗೂ ಅಲ್ಲಿನ ಜನರ ಜೀವನವನ್ನು ಮತ್ತು ಸಂಸ್ಕೃತಿಯನ್ನು ಅರಿತುಕೊಂಡು ಅಲ್ಲಿಯವರೇ ಆಗುವುದು ಎಲ್ಲರಿಗೂ ಸಾಧ್ಯ ಆಗುವುದಿಲ್ಲ. ಅದರಲ್ಲೂ ರಾಜಕೀಯ ನಾಯಕತ್ವ ಪಡೆದು ನೇರ ಚುನಾವಣೆಯಲ್ಲಿ ಸ್ಪರ್ಧಿಸಿ ಮಂತ್ರಿ ಆಗುವ ತನಕ ಸಾಗುವ ದಾರಿಯೂ ಸುಲಭದ್ದಲ್ಲ. ಈಗಾಗಲೇ ಸ್ಥಳೀಯ ಮಟ್ಟದಲ್ಲಿ ಬೇರು ಬಿಟ್ಟ ರಾಜಕೀಯ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನೆಲ್ಲಾ ಸಂಭಾಳಿಸಿ ಪಕ್ಷದಜೊತೆ ದುಡಿಯುವಂತೆ ಮಾಡುವುದು ಹಾಗೂ ಎಲ್ಲ ಜಾತಿ ಜನಾಂಗದ ಮುಖ್ಯಸ್ಥರ ಮನಸನ್ನು ಕೂಡಿಸಿ ಒಂದು ಕ್ಷೇತ್ರವನ್ನು ನಿಭಾಯಿಸುವುದೂ ಕೂಡ ಸರಳ ಅಂತ ಹೇಳಲು ಆಗುವುದಿಲ್ಲ. ತನ್ನ ಕ್ಷೇತ್ರದಲ್ಲಿ ತಳ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಾ ಹಿರಿ ಕಿರಿ ಪಕ್ಷದ ಕಾರ್ಯಕ್ರತರನ್ನು ಬೆನ್ನಿಗೆ ಹಾಕಿಕೊಂಡು ರಾಜಕೀಯದ ಬೇರುಗಳನ್ನು ಬೆಂಗಳೂರಿನಿಂದ ಬಾಗಲಕೋಟೆಯ ತೇರದಾಳ ಮತಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಯವಳೇ ಆಗುವುದು ಒಬ್ಬ ಉಮಾಶ್ರೀಯಂಥಹ ಗಟ್ಟಿಗಿತ್ತಿಯರಿಂದ ಮಾತ್ರ ಸಾಧ್ಯ.
ಎಷ್ಟೆಲ್ಲಾ ಅಸಮಾಧಾನದ ಹೊಗೆ, ಪರಕೀಯ ಭಾವನೆ, ಪಟ್ಟಭದ್ರ ಹಿತಾಸಕ್ತಿಗಳ ಹಾವಳಿ, ಹೆಣ್ಣು ಇವಳು ಏನಾದರೂ ಮಾಡಿ ಓಡಿಸಿಬಿಡಬೇಕು ಎಂದು ಪಣತೊಟ್ಟವರ ಕುಯುಕ್ತಿ, ವಿರೋಧ ಪಕ್ಷಗಳ ವಿರೋಧ, ಬೆದರಿಕೆಗಳು, ಆರೋಪಗಳು, ಎಲ್ಲವನ್ನು ನುಂಗಿಕೊಂಡು ಮತ್ತೆ ಅಲ್ಲೇ ಉಳಿದು ಯಾರನ್ನೂ ದ್ವೇಷಿಸದೇ ಮತ್ತೆ ಅವರನ್ನೇ ಗೌರವಿಸಿ ಅವರ ಮಾತಿಗೆ ಪ್ರಾಮುಖ್ಯತೆ ಕೊಟ್ಟು ಅವರವರ ತಪ್ಪುಗಳನ್ನು ಅವರವರಿಗೇ ಅರ್ಥಆಗುವಂತೆ ಮಾಡಿ ಪಕ್ಷಕಟ್ಟುವುದನ್ನು ಕಂಡಾಗ ಉಮಾಶ್ರೀ ಅವರು ಸಾಕಷ್ಟು ಕಡೆ ಸೋತು ಗೆದ್ದವಳು ಅಂತ ಅನ್ನಿಸದೆ ಇರದು. ಸಂಘಟನೆ ಎಂಬುದರ ಅರಿವು ಮಾಡಿಸುತ್ತಲೇ ಸಣ್ಣ ಪುಟ್ಟ ಸಮುದಾಯಗಳಲ್ಲಿ ನಾಯಕರನ್ನು ಹುಡುಕಿ ಅವರ ಕೈಗೆ ಸ್ಥಳೀಯ ಆಡಳಿತ ಕೊಟ್ಟು ಅವರನ್ನು ನಾಯಕರನ್ನಾಗಿ ಬೆಳೆಸುವ ಗುಣ, ನೊಂದವರ ಜೊತೆಯಾಗುವ ಪರಿ ಉಮಾಶ್ರೀ ಅನ್ನುವ ಶಕ್ತಿಯನ್ನು ಇಲ್ಲಿಯ ತನಕ ಕೈ ಹಿಡಿದು ನಡೆಸಿದೆ. ಇದರಾಚೆಗೆ ಇನ್ನೊಂದು ಬಹುಮುಖ್ಯ ಶಕ್ತಿ ಎಂದರೆ ಯಾವುದೇ ಕೆಲಸವನ್ನಾಗಲಿ ಮೇಲು ಕೀಳು ಅನ್ನದೇ ಮಾಡುತ್ತಾ ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಹಣ ತಂದು ಸಾರ್ವಜನಿಕ ಏಳ್ಗೆಯನ್ನು ಮಾಡುವುದು ಕೂಡ ಉಮಾಶ್ರೀ ಅವರ ದೈತ್ಯ ಶಕ್ತಿ. ಚೇರ್ ಹಾಕುವುದರಿಂದ ಹಿಡಿದು ಮಂತ್ರಿಯಾಗಿ ಭಾಷಣ ಮಾಡುವ ತನಕ ಉಮಾಶ್ರೀ ಅವರು ದುಡಿದದ್ದು ಮತ್ತು ದುಡಿಯುತ್ತಿರುವುದು ತೇರದಾಳ ಅನ್ನುವ ಮತಕ್ಷೇತ್ರ ಬೆಳಕು ಕಾಣಲು ದಾರಿಗಳನ್ನು ಮಾಡಿಕೊಟ್ಟಿದೆ. ಇವುಗಳೆಲ್ಲದರ ಒಟ್ಟು ಫಲಿತವೇ ಕೋಟಿ ಕೋಟಿ ಅನುದಾನಗಳು ಕ್ಷೇತ್ರಕ್ಕೆ ಹರಿದು ಬಂದಿದ್ದು. ಅಭಿವೃದ್ದಿಯ ದ್ಯೋತಕವಾಗಿ ರಸ್ತೆಯೇ ಕಾಣದ ದಾರಿಗಳು ಟಾರು ಕಂಡವು. ಕೆರೆಗಳೆಲ್ಲಾ ಶುದ್ಧಗೊಳ್ಳಲು ಶುರುವಾದವು. ಶುದ್ಧ ಕುಡಿಯುವ ನೀರಿನ ಘಟಕಗಳು ಹಲವೆಡೆ ನೀರು ಪೂರೈಸಲು ಶುರು ಮಾಡಿದವು, ಅದೆಷ್ಟೋ ಸಮುದಾಯವಾರು ಸಮುದಾಯಭವನಗಳು, ಅಂಗವಿಕಲರಿಗೆಲ್ಲಾ ಸ್ಕೂಟರ್, ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡುವುದು ಮತ್ತು ಮಹತ್ವದ ನೂರಾ ಎಪ್ಪತ್ತನಾಲ್ಕು ಕೋಟಿ ಮೊತ್ತದ ಕಲಹಳ್ಳಿಯ ಏತ ನೀರವಾರಿ ಯೋಜನೆ ಹಾಗೂ ಗ್ರಾಮಾಭಿವೃದ್ದಿ ಮತ್ತು ಪೂರಕವಾದ ಮೂಲಭೂತವಾದ ಸೌಕರ್ಯಗಳು ಜನರಿಗೆ ದಕ್ಕಿದ್ದು ಉಮಾಶ್ರೀ ಅನ್ನುವ ಸ್ತ್ರೀ ಶಕ್ತಿಯಿಂದ. ಒಬ್ಬ ಉಮಾಶ್ರೀ ಇದುವರೆಗೂ ಬೆಳವಣಿಗೆಯನ್ನೇ ಕಾಣದ ಜಾಗಕ್ಕೆ ಮುಂದು ನಿಂತು ತನ್ನ ಜನತೆಗೆ ದುಡಿದಿರುವು ನಾ ಮೊದಲು ಹೇಳಿದ ಧಾರಣ ಶಕ್ತಿಯಿಂದಲೇ. ಈ ಹೊತ್ತಿನ ತೇರದಾಳ ಮತಕ್ಷೇತ್ರವನ್ನು ನೋಡಿದಾಗ ಅಭಿವೃದ್ಧಿಯ ಪಾರದರ್ಶಕತೆಯನ್ನು ಕಂಡಾಗ ಯಾರಿಗಾದರೂ ಅನ್ನಿಸಿಯೇ ಅನ್ನಿಸುತ್ತದೆ.

ಉಮಾಶ್ರೀ ಅವರ ಬಗ್ಗೆ ನಾ ಇನ್ನೂ ಒಂದು ಸಂಗತಿ ಹೇಳಲೇ ಬೇಕಿದೆ. ಅದು ಅವರ ಸರಳತೆ. ಅವತ್ತು ಅಂದರೆ ಆರೇಳು ವರ್ಷಗಳ ಹಿಂದಿನ ಮಾತು ಮೊದಲ ಬಾರಿಗೆ ಬೆಂಗಳೂರಿನಿಂದ ಬಾಗಲಕೋಟೆಯ ತೇರದಾಳ ಕ್ಷೇತ್ರಕ್ಕೆ ಬಂದಾಗ ಈಕೆ ಯಾವುದೋ ಊರಿಂದ ಬಂದು ನಮ್ಮ ಸಮಸ್ಯೆಗೆ, ನೋವಿಗೆ ಸ್ಪಂದಿಸುತ್ತಾರ? ಎಂಬ ಪ್ರಶ್ನೆ ಎಲ್ಲರ ಮನಸಿನಲ್ಲೂ ಇತ್ತು. ಆದರೂ ಮನಸಿನ ಮೂಲೆಯಲ್ಲಿ ನೊಂದ ಹೆಣ್ಣುಮಗಳು ನೋವಿಗೆ ಸ್ಪಂದಿಸಬಹುದು ಅನ್ನುವ ಒಂದು ಭರವಸೆ ಬೆಳಕು ಕೆಲವರಲ್ಲಿ ಮಾತ್ರ ಗೋಚರಿಸುತ್ತಿತ್ತು. ಚುನಾವಣೆ ಸ್ವಲ್ಪವೇ ದಿನಗಳು ಇರುವ ಸಮಯದಲ್ಲಿ ಪ್ರಯತ್ನ ಮೀರಿ ಉಮಾಶ್ರೀ ಅವರು ದುಡಿದರು ಎಲ್ಲರೊಳಗೊಂದಾಗು ಎಂಬಂತೆ ಎಲ್ಲರ ಒಟ್ಟಿಗೂ ಒಳ್ಳೆ ಬಾಂಧವ್ಯ ಬೆಳೆಸಿದರು. ಮೊದಲ ಚುನಾವಣೆಯಲ್ಲಿ ತುಂಬಾ ಕಡಿಮೆ ಅಂತರದಲ್ಲಿ ಸೋಲುಂಡರು! ಆಗ ಉಮಾಶ್ರೀಯರು ನಿಜಕ್ಕೂ ತಾಳ್ಮೆಗೆಡದೆ, ಸೋತೆನಲ್ಲಾ ನಾನು ಮತ್ತೆ ಬಂದ ಹಾದಿಗೆ ಹಿಂತಿರುಗಬಹುದೆ ಎಂಬ ಆಲೋಚನೆ ಮಾಡದೆ, ಸೋತ ನೆಲದಲ್ಲಿಯೇ ಗೆದ್ದು ತೋರಿಸಿದರು. ಎಲ್ಲೂ ಕೂಡ ಹಿಂಜರಿಯದೇ ಹತಾಶರಾಗದೇ ತಮ್ಮ ಸೇವೆಯನ್ನು ಮಾಡಿದ್ದು ಅಲ್ಲಿನ ಪ್ರತಿಯೊಬ್ಬರ ಬಾಯಲ್ಲೂ ಈಗ ಉಮಾಶ್ರೀ ಅವರ ಜನಾನುರಾಗ ನೆಲೆನಿಂತಿದೆ. ಮೊದಲು ಇದ್ದ ಆ ಸರಳತೆಯೇ ಅವರು ಈಗಲೂ ಇದೆ. ಜನರ ನೋವು ನಲಿವುಗಳಿಗೆ ತುಂಬಾ ಹತ್ತಿರವಾದರು. ಉಮಾಶ್ರೀ ಅವರು ಬರೀ ಸಿನೆಮಾ ತಾರೆ ಆಗದೇ ತೇರದಾಳದ ಜನರ ಮನಸಿನಲ್ಲಿ ಅಮ್ಮನಾಗಿ, ಸಹೋದರಿಯಾಗಿ, ಮನೆ ಮಗಳಾಗಿ ನೆಲೆಯೂರಿ ಪ್ರತಿಯೊಬ್ಬರಲ್ಲೂ ಭಾವನಾತ್ಮಕ ಸಂಬಂಧವನ್ನು ಇಟ್ಟುಕೊಂಡರು. ಜನರ ಪ್ರೀತಿಯನ್ನು ಗಳಿಸುವಲ್ಲಿ ಯಶಸ್ವಿಯಾದರು. ಅದೇ ಮುಂದಿನ ಚುನಾವಣೆಯಲ್ಲಿ ಉಮಾಶ್ರೀಯವರು ಗೆಲುವನ್ನು ಕಂಡು ನಾಡಿನ ಹಾಗೂ ಸರಕಾರದ ಒಂದು ಭಾಗವಾಗಲು ಅನುಕೂಲವಾಯಿತು. ಈಗ ಮಂತ್ರಿಯಾಗಿದ್ದಾರೆ. ಒತ್ತಡದ ಹೆಚ್ಚು ಕಾರ್ಯಭಾರವಿದೆ. ಮೊದಲಿನಂತೆ ನಮ್ಮ ಅಮ್ಮ ಮಾತಾಡಿಸುತ್ತಿಲ್ಲ. ಮಾತಾಡಿಸುವ ಮನಸಿದ್ದರೂ ಸಮಯವಿಲ್ಲ. ಇಷ್ಟರ ನಡುವೆಯೂ ಉಮಾಶ್ರೀ ಅವರು ಭೇಟಿಗೆ ಸಿಗುತ್ತಿಲ್ಲ ಅನ್ನುವ ಕೊರಗು ಕ್ಷೇತ್ರದ ಕಾರ್ಯಕರ್ತರಲ್ಲಿ ಇದೆ. ಆದ್ರೆ ಈಗ ಮಂತ್ರಿಯಾಗಿದ್ದು ಎರಡೆರಡು ಇಲಾಖೆಗಳನ್ನು ನಿಭಾಯಿಸುತ್ತಿರುವುದರಿಂದ ಪ್ರತಿಯೊಬ್ಬರ ಬಳಿಯೂ ವೈಯಕ್ತಿಕ ವಾಗಿ ಮಾತನಾಡಲು ಆಗುತ್ತಿಲ್ಲ ಅನ್ನುವ ಅರಿವು ಕೂಡ ಅಲ್ಲಿನ ಜನರಿಗೆ ಇದೆ. ಉಮಾಶ್ರೀ ಅವರು ಮುಂಚೆಯಿಂದಲೂ ಪ್ರೇಮದಿಂದ ಮಾತಾಡಿಸಿಕೊಂಡು ಬಂದಿದ್ದು ಈಗ ಅದು ಸಾಧ್ಯ ಆಗುತ್ತಿಲ್ಲ ಅನ್ನುವ ಸಾತ್ವಿಕ ಆರೋಪ ಕಾರ್ಯಕರ್ತರದ್ದು ಆಗಿದೆ. ಮಾತಿಗೆ ಸಿಗದಿದ್ದರೂ ಅಭಿವೃದ್ದಿ ಕಾರ್ಯಗಳು ಹತ್ತಾರು ಪಟ್ಟು ಹೆಚ್ಚು ನಡೆದಿರುವುದು ತೇರದಾಳದ ಮಂದಿಗೆ ಹೆಮ್ಮೆ.
ಇಷ್ಟರ ನಡುವೆಯೂ ಬಡವ ಶ್ರೀಮಂತ ಅನ್ನದೇ ಆ ಜಾತಿ ಈ ಜಾತಿ ಅನ್ನದೇ ಸಿಕ್ಕವರ ಮನೆಯಲ್ಲಿ ಇದ್ದಿದ್ದನ್ನು ಕೇಳಿ ಹಾಕಿಸಿಕೊಂಡು ಊಟ ಮಾಡಿ, ಸುತ್ತಾಡಿ ದಣಿವಾದಾಗ ಯಾರದ್ದೋ ಮನೆಯಲ್ಲಿ ಚಾಪೆಯೂ ಇಲ್ಲದಂತೆ ಹಾಗೇ ನೆಲದ ಮೇಲೆ ನಿದ್ದೆ ಮಾಡಿ ಸುಧಾರಿಸಿಕೊಂಡು, ಬೆಂಗಳೂರಿಂದ ಬಂದಾಗ ಎಷ್ಟೋ ಸಲ ಯಾರೋ ಒಬ್ಬರ ಮನೆಯಲ್ಲಿ ಸ್ನಾನ ಮಾಡಿ ನಾಷ್ಟ ಮಾಡಿ, ಸತ್ತವರ ಕೆಟ್ಟವರ ಮನೆಗೆಲ್ಲಾ ಹೋಗಿ ನೋವು ನಲಿವಿಗೆ ಜೊತೆಯಾದ ಉಮಾಶ್ರೀ ಅವರ ಸರಳತೆಯ ಗುಣಗಳನ್ನು ಕ್ಷೇತ್ರದ ಜನ ಮರೆತಿಲ್ಲ. ಅದನ್ನೆಲ್ಲಾ ಮೆಲುಕು ಹಾಕುತ್ತಾ ಅವರಿಂದ ನಾವೂ ಕೂಡ ಸರಳ ಜೀವನದ ದಾರಿಗಳನ್ನು ಹಿಡಿದ್ದಿದ್ದೇವೆ ಎಂದು ಎಷ್ಟೋ ತೇರದಾಳದ ಜನ ಅಭಿಪ್ರಾಯ ಹಂಚಿಕೊಂಡಿದ್ದು ಉಂಟು.

****

ಮೊನ್ನೆ ಮೊನ್ನೆ ನಾನು ನನ್ನ ಗೆಳೆಯ ಹಾಸನದ ಸರ್ಕಾರಿ ಮಹಿಳಾ ಕಾಲೇಜಿನ ಪತ್ರಿಕೋಧ್ಯಮದ ಅಧ್ಯಾಪಕ ರವೀಂದ್ರ ಇಬ್ಬರೂ ನಾಲ್ಕುದಿನ ಕ್ಷೇತ್ರ ಕಾರ್ಯದ ನಿಮಿತ್ತ ನಾಲ್ಕು ದಿನ ತೇರದಾಳವನ್ನು ಸುತ್ತಿದ್ದೆವು. ಅವನು ಕಂಡ ಅನುಭವವನ್ನು ಮತ್ತೆ ನಮ್ಮ ಓಡಾಟದ ಅನನ್ಯತೆಯನ್ನು ಹಾಗೂ ಉಮಾಶ್ರೀ ಅವರನ್ನು ಕುರಿತಂತೆ ಪತ್ರವನ್ನು ಬರೆದಿದ್ದಾನೆ. ಅವನ ಪತ್ರ ಮುಖ್ಯ ಅನ್ನಿಸಿ ನಿಮ್ಮ ಮುಂದಿಡುತ್ತಿದ್ದೇನೆ.
ಪ್ರಿಯ ಗೆಳೆಯ ರಘುನಂದನ,
” ತೇರದಾಳ ಸುತ್ತಾಟದಲ್ಲಿ ನಾನು ಕಂಡ ಚಿಕ್ಕ ಅನುಭವದ ಒಂದು ಮಾತುಗಳನ್ನು ಹೇಳಬೇಕು ಅನ್ನಿಸಿ ಈ ಪತ್ರ ಗೆಳೆಯ. ಉಮಾಶ್ರೀ ಅಂದರೆ ರಂಗಪ್ರಿಯರಿಗೆ ಮತ್ತು ಸಿನೆಮಾದವರಿಗೆ ಮಾತ್ರ ಪರಿಚಯ ಅಂದುಕೊಂಡಿದ್ದೆ. ಆದರೆ ಇವತ್ತು ಸ್ವತಃ ಕಣ್ಣಾರೇ ಕಂಡ ಸಾಕ್ಷ್ಯಭೂತ ಸತ್ಯಗಳು ನಿಜಕ್ಕೂ ನನಗೆ ಅಚ್ಚರಿ ಮೂಡಿಸಿದೆ. ತೇರದಾಳ ಹಾಗೂ ಸುತ್ತಲಿನ ಗ್ರಾಮಗಳಿಗೆ ಸುಮ್ಮನೆ ಭೇಟಿ ಕೊಟ್ಟ ಸಮಯದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕಂಡ ಒಂದು ಸತ್ಯವೆಂದರೆ? ಉಮಾಶ್ರೀರವರ ಭಾವಚಿತ್ರ. ಬರೀ ಭಾವಚಿತ್ರ ನೋಡಿದ್ದರೆ ಅದು ಏನು ಅನಿಸುತ್ತಿರಲಿಲ್ಲ. ಆದರೆ ಅಲ್ಲಿ ಅವರ ಫೋಟೊ ಇದ್ದದ್ದು ದೇವರ ಮನೆಯಲ್ಲಿ ಮತ್ತು ದೇವರ ಫೋಟೊಗಳ ಸಾಲಿನಲ್ಲಿ! ಈ ಸನ್ನಿವೇಶ ನೋಡಿ ತಡೆಯಲಾರದ ಮನಸಿನಿಂದ ಆ ಮನೆಯವರನ್ನ ಕೇಳಿಯೇ ಬಿಟ್ಟೆ. ಆಗ ಸಿಕ್ಕ ಉತ್ತರ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ‘ಉಮಾಶ್ರೀ ಅಮ್ಮ ನಮಗೆ ಸಾಕಷ್ಟು ಕೆಲಸ ತಂದಾರ. ನೀರೇ ಕಾಣದ ಊರಿಗೆ ನೀರು ತಂದಾರ. ನಾವು ಏನು ಎತ್ತ ಎಂದು ನಮಗೇ ಅರ್ಥ ಮಾಡಿಸ್ಯಾರ. ಅದಕ್ಕಾ ಅವರು ನಮಗ ದೇವರಿಗೆ ಸಮ. ನಮಗೆ ನಮ್ಮ ಬದುಕಿಗೆ ದಾರಿ ಮಾಡಿಕೊಟ್ಟವರು ಅವರನ್ನು ದೇವರಿಗೆ ಹೋಲಿಸದೇ ಇನ್ನಾರಿಗೆ ಹೋಲಿಸಬೇಕು ಹೇಳಿ’ ಎಂದು ನನಗೆ ಮರು ಪ್ರಶ್ನೆ ಇಟ್ಟಾಗ ನನ್ನಲ್ಲಿ ಮೌನವೇ ಉತ್ತರವಾಗಿತ್ತು!
ನಿಜ ಒಬ್ಬ ಕಲಾವಿದ ಸಮಾಜವನ್ನು ನೋಡುವುದಕ್ಕೂ ರಾಜಕಾರಣಿ ಸಮಾಜವನ್ನು ನೋಡುವುದಕ್ಕು ತುಂಬಾ ವತ್ಯಾಸವಿದೆ. ಆದರೆ ಅದೇ ಕಲಾವಿದ ರಾಜಕಾರಣಿಯಾಗಿ ನೋಡಿದಾಗ ನಿಜವಾಗಿಯೂ ಅಲ್ಲಿ ಬದುಕನ್ನು ಅರ್ಥಮಾಡಿಕೊಂಡು ನೊಂದವರಿಗೆ ನ್ಯಾಯ, ಹಸಿದವರಿಗೆ ಅನ್ನ ದೊರಕಿಸುವ ಕೆಲಸ ನಡೆಯತ್ತದೆ. ಉಮಾಶ್ರೀಯರೂ ಕೂಡಾ ಮಾಡಿದ್ದು ಅದೇ ಎಂಬುವುದಕ್ಕೆ ಅವರ ಕ್ಷೇತ್ರದ ಜನರನ್ನು ನೋಡಿದರೇ ಉಮಾಶ್ರೀಯವರ ಬಿಂಬ ಅಲ್ಲಿಯ ಜನರ ಕಣ್ಣಲ್ಲಿ ಗೋಚರಿಸುತ್ತದೆ. ಇದೆಲ್ಲಾ ಕಂಡು ಕೇಳಿದ ನನಗೆ ಅದೇನೋ ಗೊತ್ತಿಲ್ಲ ಉಮಾಶ್ರೀಯವರನ್ನು ಹೆಸರಿಟ್ಟು ಕರೆಯೋಕೆ ತುಂಬಾ ನೋವಾಗತ್ತೆ. ಅವರನ್ನು ಬಾಯಿ ತುಂಬಾ ಅಮ್ಮಾ ಅಂತ ಕರೆದರೆ ಸಿಗುವ ಆನಂದ ಅದು ಅನಭಾವಕ್ಕೂ ಮೀರಿದ್ದು! ತೇರದಾಳ, ರಬಕವಿ ಹೀಗೆ ಅನೇಕ ಗ್ರಾಮಗಳಲ್ಲಿ ಎಲ್ಲರಿಗೂ ಅಮ್ಮ ಆಗಿರೋ ಅವರು ಯಾವ ಕಾರ್ಯದಲ್ಲೂ ಸೋತಿಲ್ಲ. ಜನನಾಯಕಿ ಆಗಿ ಈಡೀ ಕ್ಷೇತ್ರದ ಅಭಿವೃದ್ಧಿಯನ್ನೂ ಯಾವ ಅಬ್ಬರವಿಲ್ಲದೆ ಮಾಡುತ್ತಿರುವು ನಮ್ಮ ಕಣ್ಣು ಮುಂದೆಯೇ ಪಾರದರ್ಶಕವಾಗಿ ಕಾಣುತ್ತದೆ. ಯಾವ ಹಳ್ಳಿಗೆ ಹೋಗಿ ಉಮಾಶ್ರೀಯವರ ಬಗ್ಗೆ ಕೇಳಿದರೂ ಅಯ್ಯೋ ಆಕೆ ಬರಿ ಹೆಣ್ಣಲ್ಲ ! ಛಲವಾದಿ! ನಮಗೆ ಕುಡಿಯಲು ನೀರಲ್ಲದಾಗ ನೀರು ತಂದವಳು. ಕಷ್ಟ ಸುಖ ಕೇಳಿದವಳು. ಹೀಗೆ ಸಣ್ಣವರಿಂದ ಹಿಡಿದು ದೊಡ್ಡವರ ಮನಸಿನಲ್ಲಿ ಅಮ್ಮ ಮನೆ ಮಾಡಿ ತುಂಬಾ ಮೆಚ್ಚುಗೆ ಗಳಿಸಿರುವ ದಿಟದ ನಾಯಕಿ ಅಂದರೆ ನಿಜಕ್ಕೂ ತಪ್ಪಾಗಲಾರದು!
ನಾಕು ಗೋಡೆಯ ಒಳಗಿನ ಕಿಟಕಿಯೋಳಗಿಂದ ಪುಟ್ಟ ಜಗತ್ತನ್ನು ನೋಡುತ್ತಿದ್ದ ಹೆಣ್ಣು ಮಕ್ಕಳಿಗೆ ‘ವಿಶಾಲ ಜಗತ್ತು ಇದೆ ಬನ್ನಿ ನಿಮಗೂ ಒಂದು ದೊಡ್ಡ ಬದುಕಿದೆ, ಕನಸಿದೆ’ ಎಂದು ಸ್ವತಂತ್ರದ ಅರ್ಥ ಮಾಡಿಸದವರು ಉಮಾಶ್ರೀ ಎಂದು ತೇರದಾಳದ ಕೆಲ ಹೆಣ್ಣು ಮಕ್ಕಳನ್ನು ಮಾತಾಡಿಸಿದಾಗ ಉಮಾಶ್ರೀ ಅವರ ಶಕ್ತಿಯ ಬಗ್ಗೆ ಮೊದಲಿದ್ದ ಅನುಮಾನಗಳು ಇಲ್ಲವಾದವು. ಅಷ್ಟೇ ಅಲ್ಲ ರಾಜಕೀಯಕ್ಕೆ ಹೆಣ್ಣನ್ನು ಬಿಡದೇ ಇರುವ ಅಲ್ಲಿನ ಜನರಿಗೆ ತಿದ್ದಿ ಬುದ್ಧಿ ಹೇಳಿ ಮಹಿಳಾ ನಾಯಕಿಯರನ್ನು ಹುಟ್ಟು ಹಾಕಿದವರು. ಎಲ್ಲೋ ಹುಟ್ಟಿ ಎಲ್ಲೋ ಬೇಳೆದು ಇನ್ಯಾರದೋ ಪ್ರೀತಿ ಗಳಿಸುವುದೆಂದರೆ ತುಂಬಾ ಕಷ್ಟದ ಕೆಲಸ. ಈ ಜಗತ್ತಲ್ಲಿ ಪ್ರೀತಿ, ವಾತ್ಸಲ್ಯ, ಮಮತೆ,ಕರುಣೆ,ಅನುಕಂಪಕ್ಕೆ ಭೇದವಿಲ್ಲ ಮನಸು ನಿರ್ಮಲವಾದರೆ ನಾವು ಯಾರನ್ನೂ ಬೇಕಾದರೂ ಗೆಲ್ಲಬಹುದು ಎಂಬುದನ್ನು ನಿಜ ಮಾಡಿದ ರಾಜಕಾರಣಿ ಉಮಾಶ್ರೀ ಎಂದು ತೇರದಾಳದಲ್ಲಿ ನಾನು ಕಳೆದ ಮೂರ್ನಾಲ್ಕು ದಿನದಲ್ಲಿ ಅನಿಸಿತು.
ಮತ್ತೊಂದು ವಿಪರ್ಯಾಸ ಎಂದರೆ ನಾನು ಗಮನಿಸಿದ್ದು. ಉಮಾಶ್ರೀರವರೂ ಸದ್ದಿಲದೇ ಜನರ ಪ್ರೀತಿ ಗಳಿಸಿದ ಪ್ರೇಮಮಯಿ. ಅಭಿವೃದ್ಧಿ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿಸಿದ್ದಾರೆ. ಎಲ್ಲೂ ಕೂಡಾ ಸರ್ಕಾರದ ಹಣ ಪೋಲಾಗದಂತೆ ಎಚ್ಚರಿಕೆಯಿಂದ ನೋಡಿಕೊಂಡಿದ್ದಾರೆ. ಅಲ್ಲಿನ ಅಭಿವೃದ್ಧಿಯನ್ನು ಕಂಡಾಗ ಎಲ್ಲೂ ಪ್ರಚಾರವಿರದೇ ಇರುವದು ನಾಡಿನ ಒಂದು ದೊಡ್ಡ ದುರಂತವೇ ಸರಿ ಎನ್ನಬಹುದು. ಇದೇ ಈ ಕೆಲಸ ಬೇರೆ ಯಾರದರೂ ಮಾಡಿದ್ದೇ ಆಗಿದ್ದರೇ ಅಬ್ಬರದ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದರು. ನಿಜ ಉಮಾಶ್ರೀ ರವರು ಪ್ರಚಾರ ಪ್ರಿಯರಲ್ಲ. ಅವರಿಗೆ ಕೆಲಸ ಮುಖ್ಯ! ಜನರ ಬದುಕು ಮುಖ್ಯ ಅನ್ನೋದಕ್ಕೆ ತೇರದಾಳವೇ ಸಾಕ್ಷಿ. ಇವನ್ನೆಲ್ಲಾ ನೋಡಿದ ನನಗೆ ಎಲ್ಲೋ ಒಂದು ಕಡೆ ಮಾಧ್ಯಮಗಳು ಸೋಲುತ್ತಿದೆ ಅನ್ನಿಸಿಬಿಟ್ಟಿತು!
ನಾನೂ ಒಂದಷ್ಟು ಟೀಕಿಸಿ ಬರೆಯಬೇಕು ಅಂತಲೇ, ವಿಮರ್ಶೆಯ ಕುಡುಗೋಲು ಹಿಡಿದು ತೇರದಾಳಕ್ಕೆ ಬಂದೆ. ಅಥವಾ ಒಂದು ಕಲಾತ್ಮಕ ಸ್ಟೋರಿ ಮಾಡಿ ಬರೆಯಬೇಕು ಅಂತ, ಹಾಗೂ ಮುಂದಿನ ನನ್ನ ಸಂಶೋಧನೆಗೆ ಒಂದಷ್ಟು ಪರಿಕರಗಳು ಇಲ್ಲಿ ಸಿಗಬಹುದು ಅನ್ನುವ ಕಾರಣಕ್ಕೆ ತೇರದಾಳದ ಸುತ್ತಾಟ ಹಿತವೆನಿಸುವಷ್ಟು ಬಂದೆ. ಆದ್ರೆ ಬರೆಯುವಾಗ ವಿಶೇಷಣಗಳನ್ನು ಬಿಟ್ಟು ಉಮಾಶ್ರೀ ಅವರು ಮಾಡಿರುವ ಕೆಲಸಗಳನ್ನು ಎಲ್ಲರಂತೆ ಮುಚ್ಚಿಟ್ಟು ಮಾತನಾಡಲು ಆಗದೇ ನನ್ನ ಭಾವನೆಗಳನ್ನು ನಿರುಮ್ಮಳವಾಗಿ ವ್ಯಕ್ತ ಪಡಿಸಿದ್ದೇನೆ. ಇನ್ನು ಮುಂದೆ ನನ್ನ ಸಂಶೋಧನೆಗೆ ಸಿಕ್ಕಿರುವ ಇಲ್ಲಿನ ಪರಿಕರಗಳನ್ನು ಇಟ್ಟುಕೊಂಡು ಮುಂದಣ ಹೆಜ್ಜೆ ಇಡುತ್ತೇನೆ. ಒಟ್ಟು ಉಮಾಶ್ರೀ ಎಂದರೆ ಮೊದಲು ನನ್ನ ಒಳಗಿದ್ದ ಭಾವನೆ ಈಗ ಪೂರ್ತಾ ಬದಲಾಗಿದೆ ಎಂದು ಹೇಳುತ್ತಾ ಈ ಪತ್ರಕ್ಕೆ ವಿರಾಮ ಹೇಳುವೆ. ಮುಂದೆ ಏನಿದ್ದರೂ ಸಂಶೋಧನೆಯ ಟೂಲ್ಸ್ಗಳ ಒಡನಾಟದಲ್ಲಿ. ಉಮಾಶ್ರೀ ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸು. ತೇರದಾಳಕ್ಕೆ ಕರೆದೊಯ್ದ ನಿನಗೂ ಧನ್ಯವಾದಗಳು.
ಇಂತು
ರವೀಂದ್ರ
ದಿನಾಂಕ : 3.7.2015
 

‍ಲೇಖಕರು G

26 July, 2015

ನಿಮಗೆ ಇವೂ ಇಷ್ಟವಾಗಬಹುದು…

12 Comments

  1. Pramod Hadimani

    Nejakku avaru nadeda band hadi mechchu vantaddu mattu avar kelasagalu Karnataka da janatege muttutive e kelasagalu hege munduvareyali Devaru Ammanige innshtu shakti needali.
    monne pablic tv alli namma kushtagi talukina janapad kalavidana kashttavannu public hero dalli prasar madiddaru adkke immediately avaru avarellarigu dorakbekada soulabbyagalannu dorakisikottiddare ..avaralliruva hennu makkalla melina preeti mattu makkala meliru kalaji neejakku mechchuvantaddu..God bless you them.

  2. Anonymous

    Amma u r very great.. !!! Avadhiyalli “UMAA SIRI” kaalam odida koodale nanna manadalli moodiddu… Ammma u r very great…!!! Geleya Raghunandhan sir thanks a lot..

  3. nisha

    ನಾಕು ಗೋಡೆಯ ಮಧ್ಯೆ ಇರುವ ಹೆಣ್ಣು ಮಕ್ಕಳಿಗೆ ವಿಶಾಲ ಜಗತ್ತು ಇದೆ . ನಿಮಗೂ ಒಂದು ದೊಡ್ಡ ಕನಸಿದೆ ಎಂದು ತೋರಿಸಿದ ಉಮಾಶ್ರೀಯವರಿಗೂ ಹಾಗೂ ಅವರ ಬಗ್ಗೆ ಬರೆದು ನಮ್ಮಗೆ ತಲುಪಿಸಿ ನಾವು ಏನಾದರೂ ಸಾಧಿಸಲು ಸಾಧ್ಯ. ಎಂಬ ಮನವರಿಕೆ ಮಾಡಿಕೊಟ್ಟ ಬರವಣಿಗೆ ಇದು ಧನ್ಯವಾದಗಳು ರಘುನಂದನ ಸರ್ ಗೆ ಇದು ಓದಿದ ಮೇಲೆ ಎಲ್ಲವೂ ಸಾಧ್ಯ ಸಾಧ್ಯವೇನೆವಿತ್ತು.

  4. Vj

    ರಘುನಂದನ್ ರವರೆ ಕಾಲಂ : “ಕನಸುಗಳ ಕಟ್ಟಿ ನನಸು ಮಾಡುವ ಗಟ್ಟಿಗಿತ್ತಿ ಉಮಾಶ್ರೀ” ಚನ್ನಾಗಿ ಮೂಡಿಬಂದಿದೆ. ನನಗೆ ತಿಳಿದ ಹಾಗೆ ಉಮಾಶ್ರೀ ಅವರು ಕನಸು ಕಾಣುತ್ತಾರೊ ಇಲ್ಲವೊ ನನಗೆ ಗೊತ್ತಿಲ್ಲ. ಆದರೆ ಜನ ಆಗಲ್ಲ ಬಿಡಿ ಮೆಡಮ್ ಅನ್ನುವುದನ್ನು ಮಾಡಿ ತೊರಿಸುತ್ತಾರೆ ಈ ಉಮಾಶ್ರೀ. She is really great. Hats off to her. ನಿಮ್ಮ ಬರಹ ಈಗೆ ಮುಂದುವರಯಲಿ.

  5. ನಿಮ್ಮ ಅಬ್ಹಿಮಾನಿ

    ಸಾಲು ಸಾಲು ಕಷಗಳನ್ನು ಎದುರಿಸಿ ಸಮಾಜವೇನು ನಿಮ್ಮನು ಬಿಗಿದು ಅಪ್ಪಿ ನಿಮಗೆ ಸ್ತಾನಮಾನ ಕೊಟ್ಟು ಸನ್ಮಾನಿಸಲಿಲ್ಲ, ನಿಮ್ಮ ಹೋರಾಟ ಒಂದೆ ಮುಖದ್ದು ಆಗಿರಲಿಲ್ಲ ಚ್ಹಿತ್ರರಂಗದ್ಲ್ಲಿ ಗಟ್ಟಿಯಾಗಿ ನೆಲ ಊರಲು ನೀವು ಮಾಡಿದ ಹೋರಾಟ ಪ್ರಯತ್ನ ಅಷ್ಟಿಷ್ಟು ಅಲ್ಲ ಜೊತೆಯಲ್ಲ್ಲಿ ಸಮಾಜ ಸೇವೆ ಹಾಗು ನಿಮ್ಮನ್ನು ರಾಜಕಿಯದಲ್ಲಿ ತೊಡಗಿಸಿಕೊಂಡು ಒಳ್ಳೆ ಅಬ್ಹಿವ್ರುದಿಯತ್ತ ಹೆಜ್ಜೆ ಹಾಕುತ್ತಿದ್ದಾರೆ ಹಾಗು ಪ್ರತಿ ಒಬ್ಬ ಮಹಿಳೆಗೆ ಸ್ಪೂರ್ತಿಯಾಗಿ ಅವಳ ಬೆನ್ನ ಹಿಂದೆ ನಿಂತಿರುವುದು ನಮಗೆ ಅಪರ ಹೆಮ್ಮೆ ಇದೆ
    ಅವರಿಗೆ ದೇವಿ ಅನುಗ್ರಹ ಸದಾ ಇರ್ಲಿ ಇನ್ನು ಮುಂದಿನ ದಿನಗಳಲ್ಲಿ ಯಶ್ಶಸ್ಸು ಕಾಣಲಿ

  6. ನಿಮ್ಮ ಅಬ್ಹಿಮಾನಿ

    Amma Nevu great
    Nemmannu hage nemma jeevanavannu yalla maheleyaru teledhu Nevu Hege kastagalannu yadurise sadhaneyatha nadedero ade yallaregu marga darshana

  7. k nirmala Nadhan

    Thumbaaaaaa chennagi moodi bandhidhe nijakku santhasadha vishya.jeevanadha elu beelugalannu kanda jeeva estella nova anubhavi suka niduttide janatege avra ella kanassugalu shuba kaanali nimma ee article thumba chandha idhe nimmantha muddhu thamma niralu innu utthama kelsagala neevu bannisuvudharalli namagu chandha omme anisutthe selute antha avrige. Really super

  8. dinesh maneer

    feeling like visiting that place, a different perspective she is bringing on todays politicians , wish more such politicians ruled this country
    rgds

  9. ರವೀಂದ್ರ ಆರ್

    ಗೆಳೆಯ ರಘುನಂದನ್ ನಿಮಗೆ ಆಭಾರಿಯಗಿದ್ದೇನೆ. ನೀವು ಮಾಡುತ್ತಿರುವ ಈ ಸಾಹಿತ್ಯ ಸೇವೆ ನಿಜಕ್ಕೂ ಶ್ಲಾಘನೀಯ! ನಾಡು ಕಂಡ ಮಹಿಳಾಮಣಿಗಳ ಸಾಲಿನಲ್ಲಿ ಉಮಾಶ್ರೀಯವರನ್ನು ಪರಿಚಯ ಕೆಲಸ ನಿಮ್ಮ ಉಮಾಸಿರಿ ಆನಲೈನ್ ಅಂಕಣ ನಿಮ್ಮ ಸಾಹಿತ್ಯ ಸೇವೆಗೆ ನಿಲುಗನ್ನಡಿಯಾಗಿದೆ.

  10. Naveen Ba

    Umashri avara chala varnisalu kasta,idu yellarigu spurthi yagabeku.

  11. GAYATHRI RAMESH

    Very nicely written raghu. Feeling proud fr being in her family

  12. ಮಮತ

    ನಾನೂ ತೇರದಾಳ ಕಾಣಬೇಕು .. no more comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading