ವಿಭಾ ಪುರೋಹಿತ
ಸೂಜಿಗಣ್ಣು ಗಾಜುಗಣ್ಣು
ಚುಚ್ಚಿ ಚುಚ್ಚಿ ಗಾಯವಾಗಿ
ನವಿರುಲಜ್ಜೆ ನೀರಾಗದೇ ಹರಿಯುತಿದೆ
ಬೊಗಸೆಗೈ ಮುಚ್ಚಿಕೊಂಡು
ಅವನ ಮೊಗವ ನೋಡಲಾರೆ
ಬೆರಳಸಂದಿಯಲಿ ತೂರಿಬರುವ
ಕಣ್ಣಕಿರಣ ಕಿರಿಕಿರಿಯಾಗುತಿದೆ
ಇಡೀ ಇರುಳು ಘಾಸಿಮಾಡಿ
ಖಾಸಗಿಯನ್ನೂ…
ಕುಕ್ಕುವ ಬೇನಾಮಿ ಪ್ರಶ್ನೆಗಳು
ರಾತ್ರಿಯೆಲ್ಲ ಮೀಡಿಯಾಗಳ
ಸುದ್ದಿ ವ್ಯಂಜನಗಳು!

ಅಪ್ರಕಟ ದುಗುಡವೊಂದು
ಎಲ್ಲವನ್ನೂ ಅವರಿಸಿತ್ತು
ಕೊರೋನಾ ಆಘಾತಕ್ಕೆ ಬೆದರಿದ ಬದುಕು
ರಾತ್ರಿ ಯುದ್ಧ ಮುಂತಳ್ಳುವಂಥ ಮನಸ್ಥಿತಿ!
ಮತ್ತೆ ಹೊಸ ಬೆಳಗು
ನಸುಕಿನಲಿ ಚಿಲಿಪಿಲಿ
ಹಳೆಯ ಕಳಚಿ ಸಿದ್ಧರಾಗಿ
ಎರಡು ಬಳೆಗಳು ಸಣ್ಣ ಕಾಲ್ಗೆಜ್ಜೆಗಳು
ಡಂಗುರ ಸಾರಿ
ಉಸಿರ ಕಹಳೆಯೂದಿ
ಬದುಕ ಬಯಕೆಯ
ಹೆಚ್ಚಿಟ್ಟ ಸವತೆಗೆ
ಉಪ್ಪಿನ ಹುಡಿಯಾದನವ
ಅಪ್ಪಿ ಅಪ್ಪಿ ತಪ್ಪದಿದ್ದಾಗ
ನೀರೊಡೆದು ಭೋರ್ಗರೆದು
ಹಣ್ಣು ಹಣ್ಣಾಗಿದ್ದು
ಇನ್ನೊಂದು ಸುನಾಮಿ ಹಾದುಬಂದಂತೆ
ತೌಕ್ತೆಯೊಳಗಿಂದ…






0 Comments