ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಕಾಗಿದ್ದು ಇಬ್ಬರಿಗೂ ಇದೇ..

ಮಾಲಾ ಮ ಅಕ್ಕಿಶೆಟ್ಟಿ 

ನಾನು ಮುಂದೆ
ಅವ ಹಿಂದೆ
ಸರಿಯಲ್ಲ ಇದೆಲ್ಲ ಅಂದೆ
ತಪ್ಪಿಲ್ಲ ಎಂಬ ಕನವರಿಕೆಯಲ್ಲಿ ಅವನು

ಮಗ್ನಳಾಗಿದ್ದೆ ತಿಳಿಹೇಳಲು
ಅರ್ಥವಾದರೂ, ತಿಳಿಯದ ಹಾಗೆ ಅವನು
ನೆಲ ಕಚ್ಚಿದವು ಸರ್ವ ಪ್ರಯತ್ನಗಳು,
ಸೋಲು ಕಂಡಿತು ತಿಳುವಳಿಕೆ

ಅರ್ಥವಾಗಿದೆ ಎಂಬ ಭ್ರಮೆಯಲ್ಲಿ
ದೂರ ಹೋದ ಅಂದುಕೊಂಡೆ
ತಿಳಿಸುವಿಕೆಯಲ್ಲಿ ತಲ್ಲೀನಳಾದ
ನಾನೇ, ಬಿದ್ದಿದ್ದೆ ಅವನ ಹಿಂದೆ

ನಾನು ಸೋತೆ, ಅವ ಗೆದ್ದ
ಬೇಕಾಗಿದ್ದು ಇಬ್ಬರಿಗೂ ಇದೇ
ಮನಸ್ಸಿಲ್ಲದೇ ಗೆಲ್ಲುವ ಹುನ್ನಾರ
ಆದರೂ, ಸೋತೂ ನಾ ಗೆದ್ದೆ..

‍ಲೇಖಕರು Avadhi GK

23 February, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading