ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎಂ ಹನೀಫ್ ಅನುವಾದಿತ ಕವಿತೆ- ನನ್ನ ಆತ್ಮದೊಳಗೆ..

ಮೂಲ: ರಾಬಿಯಾ ಅಲ್ ಬಸ್ರಿ

ಕನ್ನಡಕ್ಕೆ: ಬಿ ಎಂ ಹನೀಫ್

ನನ್ನ ಆತ್ಮದೊಳಗೇ
ಒಂದು ದೇಗುಲ, ಗೋಪುರ, ಮಸೀದಿ, ಇಗರ್ಜಿ
ಅಲ್ಲಿ ನಾನು ಮೊಣಕಾಲೂರುತ್ತೇನೆ

ಪ್ರಾರ್ಥನೆಯು ನನ್ನನ್ನು ಮಾರ್ಪಡಿಸಬೇಕು
ಗೋಡೆಗಳೂ, ಹೆಸರುಗಳೂ ಇಲ್ಲದಂತೆ.

ಸಾರ್ವಭೌಮತ್ವವು ಏನನ್ನೂ ಬೆಳಗಿಸದ
ಪ್ರೇಮದ ತಾಣವೊಂದು ಇಲ್ಲವೆ?

ಭಾವೋತ್ಕರ್ಷವು ನಮ್ಮೊಳಗೇ
ಸುರಿಸುರಿದು ಇಲ್ಲವಾಗುವಲ್ಲಿ

ರೆಕ್ಕೆಗಳು ಪೂರ್ಣ ಜೀವಂತ ಆಗಿರುವಲ್ಲಿ
ಆದರೆ
ಮನಸು ಮತ್ತು ದೇಹಗಳೇ ಇಲ್ಲದಿರುವಲ್ಲಿ

ನನ್ನ ಆತ್ಮದೊಳಗೇ
ಒಂದು ದೇಗುಲ, ಸಮಾಧಿ, ಮಸೀದಿ, ಇಗರ್ಜಿ

ಅದು ಕರಗುತ್ತದೆ
ಅದು ಒಳಗೊಳಗೇ ಕರಗುತ್ತದೆ

ದೇವರು!

‍ಲೇಖಕರು avadhi

21 May, 2023

2 Comments

  1. Sumathi

    ಎನ್ನ ಕಾಲೇ ಕಂಭ
    ದೇಹವೇ ದೇಗುಲ
    ಶಿರ ಹೊನ್ನ ಕಳಸವಯ್ಯ

  2. Jayasrinivasa Rao

    Waah … Kannada translation flows so well!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading