ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಿರ ಕೊಳಲಲಿ ಹರಿದ ನಾದತಂತಿಯ ಮಿಡಿತ…

ಗೋಕುಲದಲ್ಲೊಂದು ಗಜಲ್…..

1

ಎಸ್ ಪಿ ವಿಜಯಲಕ್ಷ್ಮಿ

1
ಕೃಷ್ಣನಾ ಕಣ್ಣೋಟ ಎದೆಯಭಿತ್ತಿಯ ಸೀಳೆ
ಗೋಪಿ ಕುಸಿದಳು ಒಡನೆ ಮದನಲೀಲೆ
ಪ್ರೀತಿಯೋ ಪ್ರೇಮವೋ ಮುಗಿಲಲಾಡಿತು ಮನವು
ನುಡಿಮರೆತ ಮೃದುಜೀವ ಹರಯಲೀಲೆ
ಅಡಿಮುಡಿಯ ಬೆಮರು ಬಿಸಿಯೂಡಿದಾ ಉಸಿರು
ಸ್ಥನಕಂದರದಿ ಇಳಿಯುತಿದೆ ಹನಿಹನಿಯ ಲೀಲೆ
ಒಂದು ಹತ್ತಾಗಿ ಕಟಿಯ ನುಣುಪಲಿ ನಿಂದು
ಅಸಿತನಡು ಕಂಪಿಸಿದೆ ಉನ್ಮಾದಲೀಲೆ
ಬಿರಿದ ಹವಳದ ಅಧರ ಅದುರುತಿರೆ ನೀರೆ
ನಾಚಿ ನಿಂತಳು ನಡುಗಿ ಕುಸುಮಬಾಣದ ಲೀಲೆ
ಮೋಹನಾಂಗನ ಇದಿರು ಸಂಗಕೆಳಸುವ ಕೆಣಕು
ನೆಟ್ಟ ನೋಟದ ತರುಣಿಯಲಿ ಭ್ರಮಿತಲೀಲೆ
ಇಂದಿಲ್ಲಿ ಈ ಬೆಳಗು ಹರ್ಷಚರಿತದ ಪಲುಕು
ಚಣಚಣದ ಕಾತರಕೆ ನೂರು ಬಣ್ಣದ ಲೀಲೆ
ಬಿದಿರ ಕೊಳಲಲಿ ಹರಿದ ನಾದತಂತಿಯ ಮಿಡಿತ
ತನುವೃಕ್ಷದಲಿ ಫಳ್ಳನೆ ಕೋಟಿ ಕುಸುಮದ ಲೀಲೆ
 

‍ಲೇಖಕರು G

11 August, 2015

4 Comments

  1. Kiran

    Very nice and full of delicate feel..

  2. mmshaik

    uttama abhivyakti..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading