ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಡಲಾರೆ ಬೆಂಗಳೂರ

ಉಪಾಧ್ಯಾಯ, ಧಾರೇಶ್ವರ

ಒಪ್ಪಿದೆನು ಇಂದಿನ ಪರಿಸ್ಥಿತಿಯು ಹೀಗೆ
ಸಪ್ಪೆಯಾದ ಬದುಕು ಉಪ್ಪಿಲ್ಲ ಹುಳಿಯಿಲ್ಲ ಈಗ
ಅಪ್ಪಿ ಹಿಡಿದೆತ್ತಿ ಅನ್ನವನು ಕೊಟ್ಟೂರು ಬೆಂಗಳೂರು

ಕಷ್ಟದಲ್ಲಿರುವ ಅಪ್ಪ ಅಮ್ಮಂದಿರಿಗೆ
ಮೃಷ್ಪಾನ್ನವಲ್ಲದಿದ್ದಲೂ ಇಷ್ಟಾನ್ನ ಕೊಟ್ಟ
ಶಿಷ್ಟರ ಚೀಲಕ್ಕೆ ಪುಷ್ಟಿಯನ ನೀಡಿದ

ನನ್ನ ಕನಸಿಗೆ ಬಣ್ಣ ಕೊಟ್ಟಂತ
ನನ್ನವರ ದೃಷ್ಟಿಯಲಿ ಎತ್ತರಕ್ಕೇರಿಸಿದ
ಮನ್ನಣೆಯ ಗಳಿಸಲು ನೆರವಾದ ಊರು

ಹೇಗೆ ಬಿಟ್ಟು ಬರಲಿ ನಿನ್ನ ಈಗ
ಕೆಡುಗಾಲವೇನು ಕಡೆತನಕ ಇರದು
ಉಳಿದರೆ ನಿನ್ನ ಉದರದಲಿ ಪೊರೆದು

ತೊರೆಯಲಾರೆನು ಓ ತಾಯೆ ನಿನ್ನ ಮಡಿಲನ್ನ
ಮರೆಯದೆ ಕಾಪಾಡು ನಿನ್ನ ಮರಿ ಎನ್ನ
ಕರೆಯದೇ ಬಂದು ಊಟಕ್ಕೆ ಕುಳಿತವರು ನಾವು
ಅರಿತೆನೀಗ ಬದುಕೆಂದರೆ ಬೆಲ್ಲ ಬೇವು

 

‍ಲೇಖಕರು avadhi

21 July, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading