ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಬಿಕ್ಕುವ ನಿಟ್ಟುಸಿರು, ನಗುವ ಕಲಾಕೃತಿ’ – ರೂಪಾ ಹಾಸನ್ ಕವಿತೆ

ಕಲಾಕೃತಿ

ರೂಪ ಹಾಸನ

 
ಮುಚ್ಚಿಡುವುದಾಗದಿದ್ದಾಗ
ಬಿಕರಿಗಿಡಬಹುದಷ್ಟೆ ಬೀದಿಯಲ್ಲಿ
ಅಳೆದು ತೂಗಿ ಏರಿಳಿಯುವ ತಕ್ಕಡಿ
ಬೆಲೆಕಟ್ಟುತ್ತಾರೆ ಯಾರೋ
ಕೂಗುತ್ತಾರೆ ಹರಾಜು ಮತ್ತಿನ್ಯಾರೋ
ಪ್ರದರ್ಶನಕ್ಕಿಡುತ್ತಾರೆ
ಕಟ್ಟು ಹಾಕಿಸಿ ಮಗದೊಬ್ಬರು

ಕೈಯಿಂದ ಕೈಗಳ ದಾಟಿ
ಇದುವರೆಗೆ ಮುಚ್ಚಿಟ್ಟ
ದುಬಾರಿ ನಿಟ್ಟುಸಿರುಗಳು
ನೇತುಬಿದ್ದಿವೆಯೀಗ ಕಲಾಕೃತಿಗಳಾಗಿ!
 
ಬೆನ್ನಿಗೆ ತಾಗಿದ ಗೋಡೆಗೆ
ಆತುಕೊಂಡ ನಿಟ್ಟುಸಿರು
ಭಾರವಾಗುತ್ತದೆ ಮತ್ತಷ್ಟು
ಉಮ್ಮಳಿಸಿ ಅಳುತ್ತದೆ ಗೋಡೆ
ಬಿಕ್ಕುವ ನಿಟ್ಟುಸಿರು
ನಗುವ ಕಲಾಕೃತಿ!
 
 

‍ಲೇಖಕರು G

18 July, 2014

4 Comments

  1. Anonymous

    Novu tumbi, ukki, suridaaga huttida kaviteyaa idu madam? manavannu tattitu.

  2. smitha Amrithraj

    thattithu..roopa madam.

  3. Anonymous

    kalaakrutiya nittusiru godegallade mattarige arthavaaditu? tannage olagiliyuva kavite. thanq…
    anu

  4. mmshaik

    uttama kavite..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading