ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೇಶ್ಮಾ ಗುಳೇದಗುಡ್ಡಾಕರ್ ಕವಿತೆ- ಅಪರಾಜಿತೆ

ರೇಶ್ಮಾ ಗುಳೇದಗುಡ್ಡಾಕರ್ 

ಕತ್ತಿಗಿಂತಲು ಹರಿತ
ಮಾತಿನ ಮೊನಚು
ತಿರಸ್ಕರಿಸಿದ ನೋಟ
ಹೃದಯವ ಕೊಚ್ಚಿಹಾಕಲು ಸಮಯವೇ
ಬೇಡ! ಎನ್ನುತ್ತಿದೆ.

ಬಯಲ ದೀಪದಂತಹ
ಬದುಕಿಗೆ ಗಾಳಿಗೆ ತೋರಿ
ಬಂದ ಮಾತುಗಳು
ಎದೆಯಲ್ಲೇ ಮುತ್ತಾಗಿ
ಕನಸುಗಳ ಕಾಲಿಗೆ ಚುಚ್ಚುವವು
ಮುಳ್ಳುಗಳಿಗಿಂತ ಆಳವಾಗಿ…

ಒಡಲ ಬೆಂಕಿ ಹೊತ್ತು
ಕಡಲಿಗೆ ಹೊಕ್ಕರು ಆರದು !
ಬಣ್ಣದ ಬಯಕೆಯ
ಅಲೆಗೆ ಮನದ ಗೋಡೆಯ
ಹೂ ಗಳು ಅರಳಿ ನಗುತಿಹವು…!!!
ಮಮತೆ ಇಲ್ಲದ ಮರಭೋಮಿಯಲ್ಲು
ಕಂಗೂಳಿಸಿತಿಹವು…!!!

ತೆರೆಯಲು ಹವಣಿಸಿದೆ
ಸಂತಸದ ಕದವ ಕಾಲ ಅನುಮತಿಯ
ಬೇಡಿ ಜೀವ.
ನಡೆದ ಹಾದಿಯೇಲ್ಲಾ ಗೋಡೆಗಳು
ಎದ್ದರು ಆಸರೆಯ ಬೆಳಕಿನ ಕಿರಣವ ಕಾಣಲು
ಛಲಬಿದೆ ಕಿಟಕಿ ಮಾಡಿತು ಭಾವ…

ಕಂಕುಳಲ್ಲಿ ಒಂದು, ಕೈಲ್ಲೊಂದು
ಹೀಡಿದು ಗಮ್ಯದ ದತ್ತ ನೋಟ ಹರಿಸುತ್ತಾ
ಸಾಗುವದು ಮನವು ಲೆಕ್ಕವಿಲ್ಲದಷ್ಟು
ಬಿಟ್ಟು ಸಾಗಿದ ಮಧುರ ನೆನಪುಗಳ ನೆರಳಲ್ಲಿ…!!
ಕಳೆದ್ದನ್ನು ಪಡೆಯುವ ಬಯಕೆಯಲಿ…
ಸಾಗುವದು ಮುಗ್ದ ಜೀವಗಳ ಅಪ್ಪಿ ಹೀಡಿದು
ಹಿರಿದ ಸೇರಗ ಹೊದ್ದುಕೊಂಡು…

‍ಲೇಖಕರು Avadhi

17 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading