ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಳು ಕುಡಿಯೊಡೆದೇ ಬಿಟ್ಟಿದೆ ಆ ಬಾಳೆಗಿಡದಲ್ಲಿ..

ಬಣ್ಣಗಳು

– ಎಸ್ ಪಿ ವಿಜಯಲಕ್ಷ್ಮಿ

1
ಬಾಳೆಗಿಡ ಅಲ್ಲೇ ಇದೆ,
ಅದೆಷ್ಟೋ ಕಾಲದಿಂದ,
ಒಂದು ಸತ್ತರೆ ಇನ್ನೊಂದು ಹುಟ್ಟುತ್ತ ,
ಕಾಯಿ ಕಟ್ಟುತ್ತ ,ತುದಿಯಲ್ಲಷ್ಟು
ಹೂವರಳಿಸುತ್ತ ನಾ ದಿಟ್ಟಿಸಿರಲೇ
ಇಲ್ಲ ಇಷ್ಟುದಿನ,
ನೀ ನನ್ನ ಕಣ್ಣಕೊಳ ದಾಟಿ
ಎದೆಗೂಡಲಿ ಮನೆಯೊಂದ
ಕಟ್ಟುವತನಕ .
ಈಗಲ್ಲಿ ಎಷ್ಟೊಂದು ಅರ್ಥವಿದೆ .
ಬಾವಿಕಟ್ಟೆಗೆ ಒರಗಿ ಅಲ್ಲಿ ದಿಟ್ಟಿ
ನೆಟ್ಟವಳಿಗೆ …..
ಗಾಳಿಗೆ ಅತ್ತಿತ್ತಾಡುವ ಉದ್ದನ್ನ ಎಲೆ
ನಿನ್ನ ಬಲಿಷ್ಟ ಬಾಹುಗಳಾಗಿ,
ಕೆಳಮುಖನಾಗಿ ಗೆಜ್ಜೆಯೊಡೆದು
ಬಾಗಿರುವ ಗೊನೆ
ನಾಚಿ ತಲೆತಗ್ಗಿಸಿದ ನಾನೇ ಆಗಿ,
ಹೌದು ಇನಿಯ ,
ಅದರೊಳಗೇ ನಾನೂ ನೀನೂ ಹೊಕ್ಕಂತೆ ,
ನೀನು ನಕ್ಕಂತೆ ನಾನು ಸೋತಂತೆ…..
ಏನೆಲ್ಲ ಜೋಮುಗಳು,
ಬಾಳು ಕುಡಿಯೊಡೆದೇ ಬಿಟ್ಟಿದೆ
ಆ ಬಾಳೆಗಿಡದಲ್ಲಿ,
ನನ್ನ ಮನದಂಗಳದಲ್ಲಿ ,
ಹಸಿರ ಜೊತೆ ನಕ್ಕ ನೂರು
ಬಣ್ಣಗಳಲ್ಲಿ.

‍ಲೇಖಕರು G

16 August, 2015

4 Comments

  1. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ.

  2. Paramesh

    Kushiyathu nimma kavana odhi…Chennagide…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading