ಬಸವರಾಜ ಕೋಡಗುಂಟಿ ಅಂಕಣ – ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಗ್ಗೆ ಬೆಳಕು

ಚೆಲ್ಲಲಾಗಿದೆ.

19

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕನಿಶ್ಟ ಸುಮಾರು ಮೂವತ್ತಾರು ಬಾಶೆಗಳು ಬಳಕೆಯಲ್ಲಿವೆ. ಅದರಂತೆ ಕಡಿಮೆ ಎಂದರೂ ಅರ‍್ವತ್ತಯ್ದು ತಾಯ್ಮಾತುಗಳ ದಾಕಲೆಯಾಗಿದೆ. ಕನ್ನಡ ಬಾಶೆ ಜಿಲ್ಲೆಯ ಅತಿ ದೊಡ್ಡ ಬಾಶೆಯಾಗಿದೆ. ಕನ್ನಡ ಬಳಕೆಯ ಪ್ರತಿಶತತೆ 71% ಇದೆ. ತೆಲುಗು ಎರಡನೆ ದೊಡ್ಡ ಬಾಶೆಯಾಗಿದ್ದು ಲಕ್ಶಕ್ಕೂ ಹೆಚ್ಚು ಮಂದಿಯನ್ನು ಹೊಂದಿರುವ ಬಾಶೆಯಾಗಿದೆ. ಉರ‍್ದುವಿನ ಸಂಕೆಯೂ ಲಕ್ಶದ ಹತ್ತಿರ ಇದೆ. ಆನಂತರ ತಮಿಳು ಇಲ್ಲಿ ದೊಡ್ಡ ಸಂಕೆಯ ಮಾತುಗರನ್ನು ಹೊಂದಿದೆ.

***

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶಿಕ ಮಾಹಿತಿಯನ್ನು ಜನಗಣತಿ ಒದಗಿಸಿರುವಂತೆ ಈ ಕೆಳಗೆ ಕೊಟ್ಟಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ31426351
ಆಸ್ಸಾಮಿ31326251
ಇತರ110
ಬೆಂಗಾಲಿ893681212
ಬೆಂಗಾಲಿ893681212
ಬೊಡೊ18117
ಬೊಡೊ/ಬೊರೊ18117
ಡೋಗ್ರಿ330
ಡೋಗ್ರಿ330
ಗುಜರಾತಿ835420415
ಗುಜರಾತಿ786396390
ಸವರಾಶ್ಟ್ರ/ಸವರಾಶ್ಟ್ರಿ18810
ಇತರ311615
ಹಿಂದಿ1424985825667
ಬಗತಿ/ಬಗತಿ ಪಹರಿ101
ಬಂಜಾರಿ281216
ಬೋಜ್ಪುರಿ14011228
ಚತ್ತೀಸ್‍ಗರಿ1394
ಗರ‍್ವಾಲಿ660
ಹರಿಯಾಣ್ವಿ110
ಹಿಂದಿ954460863458
ಕೊರ‍್ತ/ಕೊತ್ತ880
ಕುಮವುನಿ220
ಲಮಾಣಿ/ಲಂಬಾಡಿ367818781800
ಮಾರ‍್ವಾರಿ 548298250
ರಾಜಸ್ತಾನಿ19811187
ಇತರ825923
ಕನ್ನಡ710227363397346830
ಬಡಗ1385
ಕನ್ನಡ710170363364346806
ಕುರುಬ/ಕುರುಂಬ312
ಇತರ412417
ಕಾಶ್ಮೀರಿ532
ಕಾಶ್ಮೀರಿ211
ದಾರ‍್ದಿ321
ಕೊಂಕಣಿ460241219
ಕೊಂಕಣಿ434222212
ಇತರ26197
ಮಯ್ತಿಲಿ261610
ಮಯ್ತಿಲಿ20128
ತಾತಿ642
ಮಲಯಾಳಂ328814161872
ಮಲಯಾಳಂ328014101870
ಯರವ101
ಇತರ761
ಮಣಿಪುರಿ281810
ಮಣಿಪುರಿ26179
ಇತರ211
ಮರಾಟಿ612131632958
ಮರಾಟಿ611731622955
ಇತರ413
ನೇಪಾಲಿ395241154
ನೇಪಾಲಿ395241154
ಓಡಿಯಾ19361388548
ಓಡಿಯಾ19361388548
ಪಂಜಾಬಿ935736
ಪಂಜಾಬಿ935736
ಸಂಸ್ಕ್ರುತ110
ಸಂಸ್ಕ್ರುತ110
ಸಂತಾಲಿ660
ಸಂತಾಲಿ660
ಸಿಂದಿ422
ಸಿಂದಿ422
ತಮಿಳು325591690015659
ಕೊರವ633
ತಮಿಳು325501689515655
ಇತರ321
ತೆಲುಗು1272436473162512
ತೆಲುಗು1272436473162512
ಉರ‍್ದು913534712744226
ಉರ‍್ದು913434711944224
ಇತರ1082
ಅನಾಲ್202
ಅನಾಲ್202
ಅರಾಬಿಕ್/ಅರ‍್ಬಿ211
ಅರಾಬಿಕ್/ಅರ‍್ಬಿ211
ಬೊಟಿಯ371819
ಇತರ371819
ಕೂರ‍್ಗಿ/ಕೊಡಗು1267056
ಕೂರ‍್ಗಿ/ಕೊಡಗು412417
ಕೊಡವ854639
ಇಂಗ್ಲೀಶು593623
ಇಂಗ್ಲೀಶು593623
ಕೊಮ್211
ಕೊಮ್211
ಕುರುಕ್/ಓರಆನ್615
ಕುರುಕ್/ಓರಆನ್615
ಲಡಾಕಿ110
ಲಡಾಕಿ110
ಮುಂಡ550
ಮುಂಡ550
ಮುಂಡಾರಿ413
ಮುಂಡಾರಿ413
ತಂಗ್‍ಕುಲ್110
ತಂಗ್‍ಕುಲ್110
ಟಿಬೇಟನ್660
ಟಿಬೇಟನ್660
ತುಳು578337241
ತುಳು578337241
ಇತರ372710

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದಾಕಲಾದ ಒಟ್ಟು ಬಾಶೆಗಳು ಮೂವತ್ತಯ್ದು. ಇತರ ಎಂಬ ಒಂದು ಸಣ್ಣ ಗುಂಪನ್ನು ಒಂದು ಬಾಶೆ ಎಂದು ಪರಿಗಣಿಸಿ ಜಿಲ್ಲೆಯ ದಾಕಲಾದ ಬಾಶೆಗಳು ಮೂವತ್ತಾರು ಎಂದೆನ್ನಬಹುದು. ಒಟ್ಟು ಅರ‍್ವತ್ನಾಲ್ಕು ತಾಯ್ಮಾತುಗಳನ್ನು ಜನಗಣತಿ ದಾಕಲಿಸಿದೆ. ಇತರ ಎಂಬ ಗುಂಪಿನಿಂದ ಒಂದು ತಾಯ್ಮಾತು ಎಂದು ಪರಿಗಣಿಸಿದಾಗ ಇವುಗಳ ಸಂಕೆ ಅರ‍್ವತ್ತಯ್ದು ಆಗುತ್ತದೆ. ಇವುಗಳಲ್ಲಿ ಆಸ್ಸಾಮಿ, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಟಿ, ತಮಿಳು, ಉರ‍್ದು ಮತ್ತು ಬೊಟಿಯ ಈ ಹನ್ನೊಂದು ಬಾಶೆಗಳು ಇತರ ಎಂಬ ಒಂದು ಗುಂಪನ್ನು ಹೊಂದಿವೆ. ಇವುಗಳನ್ನು ಕಳೆದು ಹೆಸರಿಸಲಾದ ತಾಯ್ಮಾತುಗಳು ಜಿಲ್ಲೆಯಲ್ಲಿ ಅಯ್ವತ್ಮೂರು ಆಗುತ್ತವೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನಸಂಕೆ 9,90,923. ಇದರಲ್ಲಿ ಕನ್ನಡ ಮಾತಾಡುವವರ ಸಂಕೆ ಹೆಚ್ಚಿದೆ. ಕನ್ನಡ ಮಾತಾಡುವವರು 7,10,227 ಇದ್ದಾರೆ. ಇದು ಜಿಲ್ಲೆಯ 71.673% ಆಗುತ್ತದೆ. ಕನ್ನಡದೊಂದಿಗೆ ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಇನ್ನೊಂದು ಬಾಶೆ 1,27,243 (12.840%) ಮಾತುಗರನ್ನು ಹೊಂದಿರುವ ತೆಲುಗು. ಆನಂತರ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರನ್ನು ಹೊಂದಿರುವ ಮೂರು ಬಾಶೆಗಳು ಇವೆ. ಉರ‍್ದು – 91,353 (9.218%), ತಮಿಳು – 32,559 (3.285%) ಮತ್ತು ಹಿಂದಿ – 14,249 (1.437%) ಈ ಗುಂಪಿನ ಬಾಶೆಗಳಾಗಿವೆ. ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಮೂರು ಬಾಶೆಗಳಿಗೆ ಇದ್ದಾರೆ. ಮರಾಟಿ – 6,121 (0.617%), ಮಲಯಾಳಂ – 3,288 (0.331%) ಮತ್ತು ಓಡಿಯಾ – 1,936 (0.195%) ಈ ಮೂರು ಬಾಶೆಗಳಾಗಿವೆ. ಒಂದು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ನೂರಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆಗಳು ಏಳು ಇವೆ. ಅವುಗಳೆಂದರೆ ಬೆಂಗಾಲಿ, ಗುಜರಾತಿ, ತುಳು, ಕೊಂಕಣಿ, ನೇಪಾಲಿ, ಆಸ್ಸಾಮಿ ಮತ್ತು ಕೂರ‍್ಗಿ/ಕೊಡಗು. ಒಂದು ನೂರಕ್ಕಿಂತ ಕಡಿಮೆ ಮಾತುಗರು ಆಡುವ ಬಾಶೆಗಳು ಒಟ್ಟು ಇಪ್ಪತ್ತೊಂದು ಇವೆ. ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಗಳನ್ನು ಆಡುಗರ ಸಂಕೆಯನ್ನು ಅನುಸರಿಸಿ ಕೆಳಗೆ ಪಟ್ಟಿಸಿ ತೋರಿಸಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚು ಕನ್ನಡ7,10,22771.673% 
’’ತೆಲುಗು1,27,243 12.840%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಉರ‍್ದು91,353 9.218% 
ತಮಿಳು  32,559 3.285%
’’ಹಿಂದಿ 14,249 1.437%  
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮರಾಟಿ 6,121 0.617% 
’’ಮಲಯಾಳಂ3,2880.331% 
’’ಓಡಿಯಾ 1,9360.195%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಬೆಂಗಾಲಿ, ಗುಜರಾತಿ, ತುಳು, ಕೊಂಕಣಿ, ನೇಪಾಲಿ, ಆಸ್ಸಾಮಿ, ಕೂರ‍್ಗಿ/ಕೊಡಗು.3601 0.363%
ನೂರಕ್ಕಿಂತ ಕಡಿಮೆ ಮಾತುಗರಿರುವ ಬಾಶೆಗಳು ಇಪ್ಪತ್ತೊಂದು ಬಾಶೆಗಳು3460.034%
ಒಟ್ಟು ಮಾತುಗರು9,90,923100%

ಜಿಲ್ಲೆಯ ತಾಯ್ಮಾತುಗಳನ್ನು ಈಗ ತುಸು ಗಮನಿಸಬಹುದು. ಹಿಂದಿಯ ಒಳಗೆ ತುಸು ಬದಲಾವಣೆ ಆಗುತ್ತದೆ. ಕರ‍್ನಾಟಕದ ಸಂದರ‍್ಬದಲ್ಲಿ ಮಹತ್ವವೆನಿಸುವ ಹಿಂದಿಯೊಳಗಿನ ಬಾಶೆಗಳನ್ನು ಇಲ್ಲಿ ಕೊಟ್ಟಿದೆ.

ಬಾಶೆ ತಾಯ್ಮಾತು ಒಟ್ಟು ಮಾತುಗರು

ಹಿಂದಿ 14,249

ಬಂಜಾರಿ 28

ಬೋಜ್ಪುರಿ 140

ಹಿಂದಿ 9,544

ಲಮಾಣಿ/ಲಂಬಾಡಿ 3,678

ಮಾರ‍್ವಾರಿ 548

ರಾಜಸ್ತಾನಿ 198

ಹಿಂದಿಯ ದಾಕಲಾದ ಒಟ್ಟು ಮಾತುಗರು 14,249. ಇದರಲ್ಲಿ ಹಿಂದಿ ಮಾತಾಡುವ 9,544 ಮಂದಿ ಇದ್ದಾರೆ. ಇದು ಜಿಲ್ಲೆಯ ಹಿಂದಿಯ 66.980% ಮತ್ತು ಜಿಲ್ಲೆಯ 0.963% ಆಗುತ್ತದೆ. ಲಮಾಣಿ ಹೆಸರಿನಲ್ಲಿನ 3,678 ಮತ್ತು ಬಂಜಾರಿ ಹೆಸರಿನ 28 ಮಂದಿ ಸೇರಿ ಒಟ್ಟು ಲಂಬಾಣಿ ಆಡುವ 3,706 ಮಂದಿ ಆಗುತ್ತಾರೆ. ಇದು ಜಿಲ್ಲೆಯ ಹಿಂದಿಯ 26.008% ಮತ್ತು ಜಿಲ್ಲೆಯ 0.373% ಆಗುತ್ತದೆ. ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳ ಗುಂಪಿನಲ್ಲಿ ಇರುವ ಹಿಂದಿ ಕೆಳಗಿಳಿದು ಹತ್ತು ಸಾವಿರಕ್ಕಿಂತ ಕಮ್ಮಿ ಮಾತಾಡುವ ಬಾಶೆಗಳ ಗುಂಪಿಗೆ ಬರುತ್ತದೆ. ಇದೆ ಗುಂಪಿಗೆ ಲಂಬಾಣಿ ಕೂಡ ಬರುತ್ತದೆ. ಈಗ ತಾಯ್ಮಾತುಗಳನ್ನು ಅನುಲಕ್ಶಿಸಿ ಜಿಲ್ಲೆಯ ಬಾಶೆಗಳನ್ನು ಮತ್ತೊಮ್ಮೆ ಮರುಹೊಂದಿಸಿ ಕೊಡಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚು ಕನ್ನಡ7,10,17071.667%
’’ತೆಲುಗು1,27,24312.840%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಉರ‍್ದು91,3439.217%
ತಮಿಳು32,5503.284%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಹಿಂದಿ9,5440.963%
’’ಮರಾಟಿ6,1170.617%
’’ಲಂಬಾಣಿ3,7060.373%
’’ಮಲಯಾಳಂ3,2800.331%
ಓಡಿಯಾ1,9360.195%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಬೆಂಗಳೂರು ಗ್ರಾಮಾಂತರ9,90,923ಕನ್ನಡ7,10,17071.667%1
ತೆಲುಗು1,27,24312.840%2
ಉರ‍್ದು91,3439.217%3
ತಮಿಳು32,5503.284%4
ಹಿಂದಿ9,5440.963%5
ಮರಾಟಿ6,1170.617%6
ಲಂಬಾಣಿ3,7060.373%7
ಮಲಯಾಳಂ3,2800.331%8
ಓಡಿಯಾ1,9360.195%9
ಬೆಂಗಾಲಿ8930.090%10

‍ಲೇಖಕರು Admin

June 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: