ಬಸವರಾಜ ಕೋಡಗುಂಟಿ ಅಂಕಣ – ಚಾಮರಾಜನಗರದ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಚಾಮರಾಜನಗರ ಜಿಲ್ಲೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ.

9

ಚಾಮರಾಜನಗರ

ಚಾಮರಾಜನಗರ ಜಿಲ್ಲೆಯು ತಮಿಳು ಮಾತಾಡುವ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಕನ್ನಡ ಮಾತಾಡುವ ಪ್ರತಿಶತತೆ ಹೆಚ್ಚು ಇದ್ದು ೮೬% ಇದೆ. ಕನ್ನಡದ ನಂತರ ತಮಿಳು, ಉರ‍್ದು ಮತ್ತು ತೆಲುಗು ಬಾಶೆಗಳಿಗೆ ಪರಿಗಣಿಸುವಶ್ಟು ಮಂದಿ ಮಾತುಗರು ಇದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಕನಿಶ್ಟ ಇಪ್ಪತ್ತೊಂದು ಬಾಶೆಗಳು ಮತ್ತು ಕನಿಶ್ಟ ನಲ್ವತ್ತು ತಾಯ್ಮಾತುಗಳು ಬಳಕೆಯಲ್ಲಿವೆ.

ಚಾಮರಾಜನಗರದ ಬಾಶೆಯ ಬಗೆಗಿನ ಮಾಹಿತಿಯನ್ನು ಜನಗಣತಿಯಿಂದ ಸಂಗ್ರಹಿಸಿ ಕೆಳಗೆ ಕೊಟ್ಟಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡು ಹೆಣ್ಣು 
ಬೆಂಗಾಲಿ853
ಬೆಂಗಾಲಿ853
ಗುಜರಾತಿ20128
ಗುಜರಾತಿ17107
ಸವರಾಶ್ಟ್ರ/ಸವರಾಶ್ಟ್ರಿ321
ಹಿಂದಿ962452264398
ಬಂಜಾರಿ257013581212
ಬರ‍್ಮವುರಿ/ಗಡ್ಡಿ472522
ಬೋಜ್ಪುರಿ110
ಹಿಂದಿ1650936714
ಲಮಾಣಿ/ಲಂಬಾಡಿ518928132376
ಮಾರ‍್ವಾರಿ985642
ರಾಜಸ್ತಾನಿ693732
ಕನ್ನಡ879010439748439262
ಬಡಗ16106
ಕನ್ನಡ878958439722439236
ಕುರುಬ/ಕುರುಂಬ220
ಪ್ರಾಕ್ರುತ/ಪ್ರಾಕ್ರುತ ಬಾಶಾ1688
ಇತರ18612
ಕೊಂಕಣಿ23999140
ಕೊಂಕಣಿ23295137
ನವಾಯಿತಿ431
ಇತರ312
ಮಲಯಾಳಂ1141506635
ಮಲಯಾಳಂ1140505635
ಯರವ110
ಮರಾಟಿ1407707700
ಆರೆ945
ಮರಾಟಿ1398703695
ನೇಪಾಲಿ1073
ನೇಪಾಲಿ1073
ಓಡಿಯಾ844
ಓಡಿಯಾ211
ಇತರ633
ಪಂಜಾಬಿ303
ಪಂಜಾಬಿ303
ತಮಿಳು468002410922691
ತಮಿಳು468002410922691
ತೆಲುಗು335521696016592
ತೆಲುಗು335451695516590
ಇತರ752
ಉರ‍್ದು451662290322263
ಉರ‍್ದು451652290322262
ಇತರ101
ಬಿಲಿ/ಬಿಲೊಡಿ18810
ಇತರ18810
ಬೊಟಿಯ321
ಇತರ321
ಕೂರ‍್ಗಿ/ಕೊಡಗು522428
ಕೂರ‍್ಗಿ/ಕೊಡಗು1147
ಕೊಡವ412021
ಇಂಗ್ಲೀಶು281216
ಇಂಗ್ಲೀಶು281216
ಕೊಂದ್422
ಕೊಂದ್422
ಟಿಬೆಟನ್344817691679
ಟಿಬೆಟನ್344817691679
ತುಳು1748985
ತುಳು1748985
ಇತರ763937

ಚಾಮರಾಜನಗರ ಜಿಲ್ಲೆಯಲ್ಲಿ ದಾಕಲಾದ ಬಾಶೆಗಳ ಸಂಕೆ ಇಪ್ಪತ್ತು. ಹದಿಮೂರು ಮಂದಿ ದಾಕಲಾಗಿರುವ ಇತರ ಎಂಬ ಗುಂಪನ್ನು ಪರಿಗಣಿಸಿದಾದ ಇದು ಇಪ್ಪತ್ತೊಂದು ಆಗುತ್ತದೆ. ದಾಕಲಾದ ತಾಯ್ಮಾತುಗಳು ಮೂವತ್ತೊಂಬತ್ತು. ಇತರ ಗುಂಪಿನಲ್ಲಿ ಒಂದು ತಾಯ್ಮಾತು ಎಂದು ತೆಗೆದುಕೊಂಡರೆ ದಾಕಲಾದ ಒಟ್ಟು ತಾಯ್ಮಾತುಗಳು ನಲ್ವತ್ತು. ಇವುಗಳಲ್ಲಿ ಇತರ ಎಂಬ ಗುಂಪನ್ನು ಏಳು ಬಾಶೆಗಳಲ್ಲಿ ಕಾಣಬಹುದು. ಅವುಗಳೆಂದರೆ, ಕನ್ನಡ, ಕೊಂಕಣಿ, ಓಡಿಯಾ, ತೆಲುಗು, ಉರ‍್ದು, ಬಿಲಿ/ಬಿಲೊಡಿ ಮತ್ತು ಬೊಟಿಯ. ಇವುಗಳನ್ನು ಕಳೆದರೆ ಹೆಸರಿಸಲಾದ ತಾಯ್ಮಾತುಗಳು ಮೂವತ್ತೆರಡು ಆಗುತ್ತವೆ.

ಚಾಮರಾಜನಗರ ಜಿಲ್ಲೆಯ ಜನಸಂಕೆ 10,20,791. ಇದರಲ್ಲಿ ಹೆಚ್ಚಿನವರು ಮಾತಾಡುವ ಬಾಶೆ ಕನ್ನಡವಾಗಿದೆ. ಜಿಲ್ಲೆಯಲ್ಲಿ 8,79,010 ಮಂದಿ ಕನ್ನಡ ಮಾತಾಡುವವರು ಇದ್ದಾರೆ. ಇದು ಜಿಲ್ಲೆಯ 86.110% ಆಗುತ್ತದೆ. ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಒಂದೆ ಬಾಶೆ ಕನ್ನಡ ಆಗಿದೆ. ಆನಂತರ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆಗಳು ಮೂರು ಬಾಶೆಗಳು ಇವೆ. ಅವುಗಳೆಂದರೆ, ತಮಿಳು – 46,800 (4.584%), ಉರ‍್ದು – 45,166 (4.424%) ಮತ್ತು ತೆಲುಗು – 33,552 (3.286%) ಆಗಿವೆ. ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆಗಳು ಇವೆ. ಅವುಗಳೆಂದರೆ ಹಿಂದಿ – 9,624 (0.942%), ಟಿಬೆಟನ್ – 3,448 (0.337%), ಮರಾಟಿ – 1,407 (0.137%) ಮತ್ತು ಮಲಯಾಳಂ – 1,141 (0.111%). ಇನ್ನು ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಾತುಗರಿರುವ ಬಾಶೆಗಳು ಕೊಂಕಣಿ ಮತ್ತು ತುಳು ಆಗಿವೆ. ಉಳಿದ ಹನ್ನೊಂದು ಬಾಶೆಗಳಿಗೆ ನೂರಕ್ಕಿಂತ ಕಡಿಮೆ ಮಂದಿ ಮಾತಾಡುವವರು ಇದ್ದಾರೆ. ಈಗ ಚಾಮರಾಜನಗರ ಜಿಲ್ಲೆಯ ಬಾಶೆಗಳನ್ನು ಮಾತುಗರ ಸಂಕೆಯಾದರಿಸಿ ಪಟ್ಟಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚಕನ್ನಡ8,79,010 86.110%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತಮಿಳು46,8004.584%
’’ಉರ‍್ದು45,166 4.424%
’’ತೆಲುಗು33,5523.286%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಹಿಂದಿ9,6240.942%
’’ಟಿಬೇಟನ್3,4480.337%
’’ಮರಾಟಿ1,4070.137%
’’ಮಲಯಾಳಂ1,1410.111%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚುಕೊಂಕಣಿ, ತುಳು4130.040%
ನೂರಕ್ಕಿಂತ ಕಡಿಮೆಹನ್ನೊಂದು ಬಾಶೆಗಳು2300.015%
ಒಟ್ಟು ಮಾತುಗರು10,20,791100%

ಚಾಮರಾಜನಗರ ಜಿಲ್ಲೆಯ ತಾಯ್ಮಾತುಗಳನ್ನು ಗಮನಿಸಿದಾಗ ಜಿಲ್ಲೆಯ ಬಾಶೆಗಳ ಪಟ್ಟಿಯಲ್ಲಿ ತುಸು ಬದಲಾವಣೆ ಆಗುತ್ತದೆ. ಹಿಂದಿ ಬಾಶೆಯ ಒಳಗೆ ದಾಕಲಾಗಿರುವ ಅಂಕಿಸಂಕೆಗಳನ್ನು ಗಮನಿಸಬೇಕು. ಕರ‍್ನಾಟಕದ ಸಂದರ‍್ಬದಲ್ಲಿ ಮಹತ್ವವೆನಿಸುವ ಹಿಂದಿಯೊಳಗಿನ ಬಾಶೆಗಳ ಪಟ್ಟಿಯನ್ನು ಇಲ್ಲಿ ಕೊಟ್ಟಿದೆ.

ಹಿಂದಿ 9,624

ಬಂಜಾರಿ 2,570

ಬೋಜ್ಪುರಿ 1

ಹಿಂದಿ 1,650

ಲಮಾಣಿ/ಲಂಬಾಡಿ 5,189

ಮಾರ‍್ವಾರಿ 98

ರಾಜಸ್ತಾನಿ 69

ಹಿಂದಿಯಲ್ಲಿ ಒಟ್ಟು ದಾಕಲಾದ ಮಾತುಗರ ಸಂಕೆ 9,624. ಇದರಲ್ಲಿ ಹಿಂದಿ ಮಾತಾಡುವ 1,650 (0.161%) ಮತ್ತು ಲಂಬಾಣಿ ಮಾತಾಡುವ 7,759 (0.760%) ಮಂದಿ ಇದ್ದಾರೆ. ಇದರಲ್ಲಿ ಲಮಾಣಿ ಹೆಸರಿನಲ್ಲಿ ಇರುವ 5,189 ಮತ್ತು ಬಂಜಾರಿ ಹೆಸರಿನಲ್ಲಿ ಇರುವ 2,570 ಮಂದಿ ಸೇರಿದ್ದಾರೆ. ಈಗ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳ ಪಟ್ಟಿಯಲ್ಲಿ ಹಿಂದಿಯ ಜೊತೆಗೆ ಲಂಬಾಣಿ ಸೇರುತ್ತದೆ. ಈಗ ತಾಯ್ಮಾತುಗಳ ಚರ‍್ಚೆಯನ್ನು ಗಮನಿಸಿ ಜಿಲ್ಲೆಯ ಬಾಶೆಗಳ ಪಟ್ಟಿಯನ್ನು ಮರುಹೊಂದಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚಕನ್ನಡ8,78,95886.105%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತಮಿಳು46,8004.584%
’’ಉರ‍್ದು45,1654.424%
’’ತೆಲುಗು33,5453.286%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಲಂಬಾಣಿ7,7590.760%
’’ಟಿಬೇಟನ್3,4480.337%
’’ಹಿಂದಿ 1,6500.161%
’’ಮರಾಟಿ1,3980.136%
’’ಮಾರ‍್ವಾರಿ1,1400.111%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಚಾಮರಾಜನಗರ10,20,791ಕನ್ನಡ8,78,95886.105%1
ತಮಿಳು46,8004.584%2
ಉರ‍್ದು45,1654.424%3
ತೆಲುಗು33,5453.286%4
ಲಂಬಾಣಿ7,7590.760%5
ಟಿಬೆಟನ್3,4480.337%6
ಹಿಂದಿ1,6500.161%7
ಮರಾಟಿ1,3980.136%8
ಮಲಯಾಳಂ1,1400.111%9
ಕೊಂಕಣಿ2320.022%10

‍ಲೇಖಕರು Admin

April 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: