ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಕೊಡಗು ಜಿಲ್ಲೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ.

5

ಕೊಡಗು

ಕೊಡಗು ಜಿಲ್ಲೆ ಸಣ್ಣದಾದ ಜಿಲ್ಲೆಯಾಗಿದ್ದು ಬಾಶಿಕವಾಗಿ ಬಹು ಶ್ರೀಮಂತವಾಗಿರುವ ಜಿಲ್ಲೆಗಳಲ್ಲಿ ಒಂದು. ಕೊಡಗು ಜಿಲ್ಲೆಯಲ್ಲಿ ಕನ್ನಡ ಬಳಕೆಯ ಪ್ರತಿಶತತೆ ಸುಮಾರು 32% ಇದೆ. ಜಿಲ್ಲೆಯಲ್ಲಿ ಮಲಯಾಳಂ 25%ಕ್ಕೂ ಹೆಚ್ಚು ಮಂದಿ ಇದ್ದಾರೆ. ಈ ಎರಡು ಬಾಶೆಗಳಿಗೆ ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರು ಇದ್ದಾರೆ. ಕೊಡವಕ್ಕೆ 15%ದಶ್ಟು ಮಾತುಗರು ಇದ್ದಾರೆ. ಕೊಡಗು ಜಿಲ್ಲೆಯಲ್ಲಿ ಆರೆ, ಯರವ ಇಂತಾ ಸಣ್ಣ ಬಾಶೆಗಳಿಗೆ ದೊಡ್ಡ ಸಂಕೆಯ ಮಾತುಗರು ಇದ್ದಾರೆ. ಕುರುಬಕ್ಕೂ ಪರಿಗಣಿಸುವಶ್ಟು ಮಂದಿ ಮಾತುಗರು ಕಾಣಿಸುತ್ತಾರೆ.

ಕೊಡಗು ಜಿಲ್ಲೆಯಲ್ಲಿ ಕಡಿಮೆ ಎಂದರೂ ಮೂವತ್ತಾರು ಮತ್ತು ಅರ‍್ವತ್ತಯ್ದು ತಾಯ್ಮಾತುಗಳು ಇವೆ. ಕನ್ನಡ ಮತ್ತು ಮಲಯಾಳಂ ಮತ್ತು ಅವುಗಳೊಂದಿಗೆ ಕೊಡವ ಇವು ಜಿಲ್ಲೆಯ ಮಹತ್ವದ ಬಾಶೆಗಳಾಗಿವೆ. ಸರಕಾರದ ವಿವಿದ ಪಾಲಸಿಗಳಲ್ಲಿ, ಸಾಮಾಜಿಕ ಕೆಲಸಗಳಲ್ಲಿ ಈ ಬಾಶೆಗಳನ್ನು ಸುಲಬವಾಗಿ ಬಳಸಬಹುದು.

***

ಜನಗಣತಿ ಕೊಡುವ ಕೊಡಗು ಜಿಲ್ಲೆಯ ಬಾಶಿಕ ಮಾಹಿತಿಯನ್ನು ಇಲ್ಲಿ ಕೊಟ್ಟಿದೆ. ಕೊಡಗು ಕರ‍್ನಾಟಕದ ಸಂಕೀರ‍್ಣ ಬಾಶಿಕ ಪರಿಸರವನ್ನು ಹೊಂದಿರುವ ಪ್ರದೇಶವಾಗಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ 659364295
 ಆಸ್ಸಾಮಿ659364295
ಬೆಂಗಾಲಿ 941519422
 ಬೆಂಗಾಲಿ941519422
ಬೊಡೊ 19118
 ಬೊಡೊ/ಬೊರೊ19118
ಡೋಗ್ರಿ 110
 ಡೋಗ್ರಿ110
ಗುಜರಾತಿ 653431
 ಗುಜರಾತಿ301515
 ಸವರಾಶ್ಟ್ರ/ಸವರಾಶ್ಟ್ರಿ220
 ಇತರ331716
ಹಿಂದಿ 332720031324
 ಬಂಜಾರಿ19109
 ಬರ‍್ಮವುರಿ/ಗಡ್ಡಿ110
 ¨ಬೋಜ್ಪುರಿ16142
 ದುಂಡಾರಿ402020
 ಹಿಂದಿ23251461864
 ಲಮಾಣಿ/ಲಂಬಾಡಿ564278286
 ಮಾರ‍್ವಾರಿ1589167
 ರಾಜಸ್ತಾನಿ1609565
 ಸಾದನ್/ಸಾದ್ರಿ945
 ಇತರ35296
ಕನ್ನಡ 1810878964591442
 ಬಡಗ110
 ಕನ್ನಡ1714198489186528
 ಕುರುಬ/ಕುರುಂಬ965747494908
 ಇತರ1046
ಕಾಶ್ಮೀರಿ 231310
 ಕಾಶ್ಮೀರಿ231310
ಕೊಂಕಣಿ 641531733242
 ಕೊಂಕಣಿ611430213093
 ನವಾಯಿತಿ280142138
 ಇತರ211011
ಮಲಯಾಳಂ 1417857017871607
 ಮಲಯಾಳಂ1154955731258183
 ಪಣಿಯ235110125
 ಯೆರವ258601266613194
 ಇತರ19590105
ಮಣಿಪುರಿ 642
 ಮಣಿಪುರಿ642
ಮರಾಟಿ 349481734617602
 ಆರೆ322261599016236
 ಮರಾಟಿ271713531364
 ಇತರ532
ನೇಪಾಲಿ 21313875
 ನೇಪಾಲಿ21313875
ಓಡಿಯಾ 1106842
 ಓಡಿಯಾ1056540
 ಇತರ532
ಪಂಜಾಬಿ 342014
 ಪಂಜಾಬಿ342014
ಸಂಸ್ಕ್ರುತ 220
 ಸಂಸ್ಕ್ರುತ220
ಸಂತಾಲಿ 261313
 ಸಂತಾಲಿ261313
ಸಿಂದಿ 1147
 ಸಿಂದಿ1147
ತಮಿಳು 234401180011640
 ಕೊರವ633
 ತಮಿಳು234321179711635
 ಇತರ202
ತೆಲುಗು 859243254267
 ತೆಲುಗು858643224264
 ಇತರ633
ಉರ‍್ದು 1636983518018
 ಉರ‍್ದು1636783498018
 ಇತರ220
ಆದಿ 1239
 ಆದಿ624
 ಇತರ615
ಅರಾಬಿಕ್/ಅರ‍್ಬಿ 422
 ಅರಾಬಿಕ್/ಅರ‍್ಬಿ422
ಬಿಲಿ/ಬಿಲೊಡಿ 1165
ಕೊಕ್ನ/ಕೊಕ್ನಿ/ಕುಕ್ನ1165
ಬುಮಿಜ್211
ಇತರ211
ಕೂರ‍್ಗಿ/ಕೊಡಗು824214056041861
ಕೂರ‍್ಗಿ/ಕೊಡಗು1226458
ಕೊಡವ822994049641803
ಇಂಗ್ಲೀಶು613229
ಇಂಗ್ಲೀಶು613229
ಕೊಂದ್1075255
ಕೊಂದ್1075255
ಕೊಡ/ಕೊರ743
ಕೊಡ/ಕೊರ743
ಕೊಂಡ330
ಕೊಡು330
ಕೊರ‍್ವ101
ಇತರ101
ಕುರುಕ್/ಓರಆನ್1275
ಕುರುಕ್/ಓರಆನ್1275
ಮುಂಡ312
ಮುಂಡ312
ತ್ರಿಪುರಿ321
ತ್ರಿಪುರಿ321
ತುಳು494902377125719
ತುಳು493902372125669
ಇತರ1005050
ಇತರ430921522157

ಕೊಡಗು ಜಿಲ್ಲೆಯಲ್ಲಿ ದಾಕಲಾದ ಬಾಶೆಗಳ ಸಂಕೆ ಮೂವತ್ತಯ್ದು. ಇದರೊಟ್ಟಿಗೆ ಇತರ ಎಂಬ ಗುಂಪು ಇದ್ದು ಅದರಲ್ಲಿ 4,309 ಮಂದಿ ದಾಕಲಾಗಿದ್ದಾರೆ. ಅದನ್ನು ಒಂದು ಬಾಶೆ ಎಂದು ಗಣಿಸಿದರೆ ಕೊಡಗಿನಲ್ಲಿ ದಾಕಲಾದ ಬಾಶೆಗಳು ಮೂವತ್ತಾರು ಆಗುತ್ತದೆ. ಜಿಲ್ಲೆಯಲ್ಲಿ ಅರ‍್ವತ್ನಾಲ್ಕು ತಾಯ್ಮಾತುಗಳು ದಾಕಲಾಗಿವೆ. ಇತರ ಎಂಬ ಗುಂಪಿನಲ್ಲಿ ಒಂದು ತಾಯ್ಮಾತು ಎಂದು ಪರಿಗಣಿಸಿ ತಾಯ್ಮಾತುಗಳು ಅರ‍್ವತ್ತಯ್ದು ಎಂದಾಗುತ್ತದೆ. ಇವುಗಳಲ್ಲಿ ಹದಿನಾಲ್ಕು ಬಾಶೆಗಳ ಒಳಗೆ ಇತರ ಎಂಬ ಗುಂಪು ಇದೆ. ಅವುಗಳು ಹೀಗಿವೆ, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮಲಯಾಳಂ, ಮರಾಟಿ, ಓಡಿಯಾ, ತಮಿಳು, ತೆಲುಗು, ಉರ‍್ದು, ಆದಿ, ಬುಮಿಜ್, ಕೊರ‍್ವ ಮತ್ತು ತುಳು. ಈ ಹದಿನಾಲ್ಕನ್ನು ಹೊರತುಪಡಿಸಿ ಹೆಸರಿಸಲಾದ ತಾಯ್ಮಾತುಗಳು ಅಯ್ವತ್ತು ಆಗುತ್ತವೆ. 

ಕೊಡಗಿನ ಜನಸಂಕೆ 5,54,519. ಕೊಡಗಿನಲ್ಲಿ ಕನ್ನಡ ಜಿಲ್ಲೆಯ ದೊಡ್ಡ ಬಾಶೆ. ಕನ್ನಡ ಮಾತುಗರ ಸಂಕೆ 1,81,087 ಆಗಿದ್ದು ಇದು ಜಿಲ್ಲೆಯ 32.656%ರಶ್ಟು ಆಗುತ್ತದೆ. ಕನ್ನಡದ ನಂತರ ಮಲಯಾಳಂ 1,41,785 ಸಂಕೆಯ ಮಾತುಗರನ್ನು ಹೊಂದಿದ್ದು ಜಿಲ್ಲೆಯ ಎರಡನೆ ದೊಡ್ಡ ಬಾಶೆಯಾಗಿದೆ. ಇದರ ಪ್ರತಿಶತತೆ 25.569% ಆಗಿದೆ. ಇವೆರಡು ಕೊಡಗಿನಲ್ಲಿ ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆಗಳಾಗಿವೆ. ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಅಯ್ದು ಬಾಶೆಗಳು ಇವೆ. ಕೂರ‍್ಗಿ/ಕೊಡಗು – 82,421 (14.863%), ತುಳು – 49,490 (8.924%), ಮರಾಟಿ – 34,948 (6.302%), ತಮಿಳು – 23,440 (4.227%) ಮತ್ತು ಉರ‍್ದು – 16,369 (2.951%) ಇವು ಆ ಬಾಶೆಗಳಾಗಿವೆ. ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರನ್ನು ಹೊಂದಿರುವ ಮೂರು ಬಾಶೆಗಳು ಇವೆ. ಅವುಗಳೆಂದರೆ, ತೆಲುಗು – 8,592 (1.549%), ಕೊಂಕಣಿ – 6,415 (1.156%) ಮತ್ತು ಹಿಂದಿ – 3,327 (0.599%). ಇವುಗಳೊಂದಿಗೆ ಇತರ ಗುಂಪಿನಲ್ಲಿಯೂ 4,309 (0.777%) ಮಂದಿ ದಾಕಲಾಗಿದ್ದಾರೆ. ಆನಂತರ ಸಾವಿರಕ್ಕೂ ಕಡಿಮೆ ಮತ್ತು ನೂರಕ್ಕೂ ಹೆಚ್ಚು ಮಂದಿ ಇರುವ ಬಾಶೆಗಳು ಅಯ್ದು ಇವೆ. ಅವುಗಳೆಂದರೆ ಬೆಂಗಾಲಿ, ಆಸ್ಸಾಮಿ, ನೇಪಾಲಿ, ಓಡಿಯಾ ಮತ್ತು ಕೊಂದ್. ನೂರಕ್ಕೂ ಕಡಿಮೆ ಮಾತುಗರು ಇರುವ ಬಾಶೆಗಳು ಇಪ್ಪತ್ತು. ಈಗ ಈ ಬಾಶೆಗಳನ್ನು ಅವುಗಳ ಮಾತುಗರ ಸಂಕೆಯಾನುಸಾರ ಹೊಂದಿಸಿ ನೋಡಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚುಕನ್ನಡ1,81,087 32.656%
’’ಮಲಯಾಳಂ 1,41,785 25.569%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಕೂರ‍್ಗಿ/ಕೊಡಗು82,421 14.863%
’’ತುಳು 49,4908.924%
’’ಮರಾಟಿ34,9486.302%
’’ತಮಿಳು23,440 4.227%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಉರ‍್ದು16,369 2.951%
’’ತೆಲುಗು 8,592 1.549%
’’ಕೊಂಕಣಿ6,415 1.156%
’’ಇತರ4,3090.777%
’’ಹಿಂದಿ3,327 0.599%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚುಬೆಂಗಾಲಿ, ಆಸ್ಸಾಮಿ, ನೇಪಾಲಿ, ಓಡಿಯಾ, ಕೊಂದ್2,0300.366%
ನೂರಕ್ಕಿಂತ ಕಡಿಮೆಇಪ್ಪತ್ತು ಬಾಶೆಗಳು3060.055%
ಒಟ್ಟು ಮಾತುಗರು5,54,519100%

ಕೊಡಗಿನಲ್ಲಿ ದಾಕಲಾಗಿರುವ ತಾಯ್ಮಾತುಗಳನ್ನು ಈಗ ಗಮನಿಸಬಹುದು. ತಾಯ್ಮಾತುಗಳ ಅಂಕಿಸಂಕೆಗಳು ಜಿಲ್ಲೆಯ ಬಾಶೆಗಳ ಪಟ್ಟಿಯಲ್ಲಿ ಹೆಚ್ಚಿನ ಬದಲಾವಣೆಯನ್ನ ಮಾಡುತ್ತವೆ. ಕನ್ನಡ ಮಾತಾಡುವ 1,81,087 ಮಂದಿ ದಾಕಲಾಗಿದ್ದಾರೆ. ಇದರಲ್ಲಿ ಕನ್ನಡ ಮಾತಾಡುವ 1,71,419 ಮಂದಿ ಇದ್ದಾರೆ. ಇದು ಜಿಲ್ಲೆಯ ಕನ್ನಡದ 94.661% ಮತ್ತು ಜಿಲ್ಲೆಯ 30.913% ಆಗುತ್ತದೆ. ಇದರ ಜೊತೆಗೆ ಕುರುಬ ಮಾತಾಡುವ 9,657 ಮಂದಿ ದಾಕಲಾಗಿದ್ದಾರೆ. ಇದು ಜಿಲ್ಲೆಯ ಕನ್ನಡದ 5.332% ಮತ್ತು ಜಿಲ್ಲೆಯ 1.741% ಆಗುತ್ತದೆ. ಕುರುಬ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರ ಬಾಶೆಗಳ ಪಟ್ಟಿಗೆ ಬರುತ್ತದೆ. ಮಲಯಾಳಂ ಬಾಶೆಯಲ್ಲಿ ಒಟ್ಟು ದಾಕಲಾಗಿರುವ ಮಾತುಗರು 1,41,785. ಇದರಲ್ಲಿ ಮಲಯಾಳಂ ಮಾತಾಡುವವರು 1,15,495. ಇದು ಒಟ್ಟು ಜಿಲ್ಲೆಯ ಮಲಯಾಳಂನ  81.457% ಮತ್ತು ಜಿಲ್ಲೆಯ 20.827% ಆಗುತ್ತದೆ. ಯರವ ಮಾತಾಡುವವರು 25,860 ಮಂದಿ ಇದ್ದು, ಇದು ಜಿಲ್ಲೆಯ ಮಲಯಾಳಂನ 18.238% ಮತ್ತು ಜಿಲ್ಲೆಯ 4.663% ಆಗುತ್ತದೆ. ಯರವ ಒಂದು ಲಕ್ಶಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರು ಇರುವ ಬಾಶೆಗಳ ಪಟ್ಟಿಗೆ ಬರುತ್ತದೆ. ಇನ್ನು ಮರಾಟಿ ಬಾಶೆಯನ್ನು ಗಮನಿಸಿದಾಗ ಮರಾಟಿಯ ದಾಕಲಿತ ಒಟ್ಟು ಮಾತುಗರು 34,948. ಇದರಲ್ಲಿ ಮರಾಟಿ ಬಾಶೆ ಮಾತಾಡುವವರು ಕೇವಲ 2,717 ಆಗಿದ್ದಾರೆ. ಇದು ಒಟ್ಟು ಜಿಲ್ಲೆಯ ಮರಾಟಿಯ 7.774% ಮತ್ತು ಜಿಲ್ಲೆಯ 0.489% ಆಗುತ್ತದೆ. ಮರಾಟಿಯ ಒಳಗೆ ದಾಕಲಾಗಿರು ತಾಯ್ಮಾತು ಆರೆ ಮಾತಾಡುವವರು 32,226 ಮಂದಿ ಇದ್ದಾರೆ. ಇದು ಜಿಲ್ಲೆಯ ಮರಾಟಿಯ 92.211% ಮತ್ತು ಜಿಲ್ಲೆಯ 5.811% ಆಗುತ್ತದೆ. ಈಗ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳ ಪಟ್ಟಿಯಿಂದ ಮರಾಟಿ ಕೆಳಗಿಳಿದು ಹತ್ತು ಸಾವಿರಕ್ಕಿಂತ ಕಡಿಮೆ ಮಾತುಗರ ಬಾಶೆಗಳ ಪಟ್ಟಿಗೆ ಇಳಿಯುತ್ತದೆ ಮತ್ತು ಹತ್ತು ಸಾವಿರಕ್ಕೂ ಹೆಚ್ಚು ಮಾತುಗರಿರುವ ಬಾಶೆಗಳ ಪಟ್ಟಿಗೆ ಆರೆ ಬರುತ್ತದೆ. ಈ ಬದಲಾವಣೆಗಳನ್ನು ಸೇರಿಸಿ, ತಾಯ್ಮಾಗಳನ್ನು ಗಮನಿಸಿ ಕೊಡಗು ಜಿಲ್ಲೆಯ ಬಾಶೆಗಳ ಪಟ್ಟಿಯನ್ನು ಮರುವಿನ್ಯಾಸಗೊಳಿಸಿ ಕೆಳಗೆ ತೋರಿಸಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚುಕನ್ನಡ1,71,41930.913%
’’ಮಲಯಾಳಂ1,15,49520.827%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಕೊಡವ82,421 14.841%
’’ತುಳು49,3908.906%
’’ಆರೆ32,2265.811%
’’ಯರವ25,8604.663%
’’ತಮಿಳು23,4324.225%
’’ಉರ‍್ದು16,3672.951%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಕುರುಬ9,6571.741%
’’ತೆಲುಗು8,5861.548%
’’ಕೊಂಕಣಿ6,1141.102%
’’ಇತರ4,3090.777%
’’ಮರಾಟಿ2,717 0.489%
’’ಹಿಂದಿ2,3250.419%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಕೊಡಗು5,54,519ಕನ್ನಡ1,71,41930.913%1
ಮಲಯಾಳಂ1,15,49520.827%2
ಕೊಡವ82,421 14.841%3
ತುಳು49,3908.906%4
ಆರೆ32,2265.811%5
ಯರವ25,8604.663%6
ತಮಿಳು23,4324.225%7
ಉರ‍್ದು16,3672.951%8
ಕುರುಬ9,6571.741%9
ತೆಲುಗು8,5861.548%10

‍ಲೇಖಕರು Admin

March 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: