ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ
ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಈ ವಾರದ ಅಂಕಣದಲ್ಲಿ ಬೆಳಗಾವಿ ಜಿಲ್ಲೆಯ ಬಗ್ಗೆ ಬೆಳಕು
ಚೆಲ್ಲಲಾಗಿದೆ.
21
ಬೆಳಗಾವಿ
ಬೆಳಗಾವಿ ಜಿಲ್ಲೆಯಲ್ಲಿ ದಾಕಲಾದ ಒಟ್ಟು ಬಾಶೆಗಳ ಸಂಕೆ ಅಯ್ವತ್ತೊಂದು. ಹಾಗೆಯೆ ಜಿಲ್ಲೆಯಲ್ಲಿ ಕನಿಶ್ಟ ತೊಂಬತ್ತೇಳು ಆಗುತ್ತವೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಮಾತಾಡುವ ಬಾಶೆ ಕನ್ನಡವಾಗಿದೆ. ಒಟ್ಟು ಕನ್ನಡ ಮಾತುಗರ ಪ್ರತಿಶತತೆ ೬೮% ಇದೆ. ಕನ್ನಡದ ನಂತರ ಅತಿದೊಡ್ಡ ಬಾಶೆ ಮರಾಟಿ ಆಗಿದ್ದು ೧೯% ಇದೆ. ಆನಂತರ ಉರ‍್ದು ಬಾಶೆಗೆ ನಾಲ್ಕು ಲಕ್ಶಕ್ಕೂ ಹೆಚ್ಚು ಮಂದಿ ಇದ್ದು ಅತಿದೊಡ್ಡ ಬಾಶೆಗಳಲ್ಲಿ ಒಂದಾಗಿದೆ. ಇವುಗಳ ಜೊತೆಗೆ ಹಿಂದಿ, ತೆಲುಗು, ಕೊಂಕಣಿ ಮತ್ತು ಲಂಬಾಣಿ ಬಾಶೆಗಳು ಪರಿಗಣಿಸುವಶ್ಟು ಸಂಕೆಯ ಮಾತುಗರನ್ನು ಹೊಂದಿವೆ.
***
ಮೊದಲಿಗೆ ಜನಗಣತಿ ಕೊಟ್ಟಿರುವ ಬೆಳಗಾವಿ ಜಿಲ್ಲೆಯ ಮಾಹಿತಿಯನ್ನು ಅಟ್ಟದಲ್ಲಿ ಕೊಟ್ಟಿದೆ.
| ಬಾಶೆ | ತಾಯ್ಮಾತು | ಒಟ್ಟು ಮಾತುಗರು | ಗಂಡು | ಹೆಣ್ಣು |
| ಆಸ್ಸಾಮಿ | 90 | 79 | 11 | |
| ಆಸ್ಸಾಮಿ | 90 | 79 | 11 | |
| ಬೆಂಗಾಲಿ | 1069 | 719 | 350 | |
| ಬೆಂಗಾಲಿ | 1069 | 719 | 350 | |
| ಡೋಗ್ರಿ | 111 | 91 | 20 | |
| ಡೋಗ್ರಿ | 111 | 91 | 20 | |
| ಗುಜರಾತಿ | 6035 | 3024 | 3011 | |
| ಗುಜರಾತಿ | 5022 | 2525 | 2497 | |
| ಪಟ್ಟಣಿ | 24 | 10 | 14 | |
| ಸವರಾಶ್ಟ್ರ/ಸವರಾಶ್ಟ್ರಿ | 14 | 7 | 7 | |
| ಇತರ | 975 | 482 | 493 | |
| ಹಿಂದಿ | 66498 | 36694 | 29804 | |
| ಅವದಿ | 2 | 2 | 0 | |
| ಬಂಜಾರಿ | 348 | 178 | 170 | |
| ಬದ್ರಾವತಿ | 2 | 2 | 0 | |
| ಬೋಜ್ಪುರಿ | 362 | 243 | 119 | |
| ಬುಂದೇಲಿ/ಬುಂದೇಲ್ ಕಂಡಿ | 9 | 9 | 0 | |
| ಚತ್ತೀಸ್‍ಗರಿ | 9 | 9 | 0 | |
| ದುಂಡಾರಿ | 8 | 3 | 5 | |
| ಗರ‍್ವಾಲಿ | 63 | 54 | 9 | |
| ಗೊಜ್ರಿ/ಗುಜ್ಜಾರಿ/ಗುಜರ್ | 4 | 2 | 2 | |
| ಹರಿಯಾಣ್ವಿ | 28 | 28 | 0 | |
| ಹಿಂದಿ | 39005 | 22220 | 16785 | |
| ಕಾಂಗ್ರಿ | 1 | 1 | 0 | |
| ಕುಮವುನಿ | 61 | 57 | 4 | |
| ಲಮಾಣಿ/ಲಂಬಾಡಿ | 19842 | 10231 | 9611 | |
| ಮಗದಿ/ಮಗಹಿ | 3 | 3 | 0 | |
| ಮಂಡೇಅಲಿ | 2 | 2 | 0 | |
| ಮಾರ‍್ವಾರಿ | 5101 | 2686 | 2415 | |
| ನಾಗ್ಪುರಿಯ | 1 | 1 | 0 | |
| ಪಹರಿ | 28 | 26 | 2 | |
| ರಾಜಸ್ತಾನಿ | 1206 | 690 | 516 | |
| ಸಾದನ್/ಸಾದ್ರಿ | 10 | 4 | 6 | |
| ಇತರ | 403 | 243 | 160 | |
| ಕನ್ನಡ | 3269063 | 1656439 | 1612624 | |
| ಕನ್ನಡ | 3268714 | 1656246 | 1612468 | |
| ಕುರುಬ/ಕುರುಂಬ | 16 | 10 | 6 | |
| ಪ್ರಾಕ್ರುತ/ಪ್ರಾಕ್ರುತ ಬಾಶಾ | 55 | 27 | 28 | |
| ಇತರ | 278 | 156 | 122 | |
| ಕಾಶ್ಮೀರಿ | 25 | 23 | 2 | |
| ಕಾಶ್ಮೀರಿ | 25 | 23 | 2 | |
| ಕೊಂಕಣಿ | 21049 | 10677 | 10372 | |
| ಕೊಂಕಣಿ | 20971 | 10627 | 10344 | |
| ಕುಡುಬಿ/ಕುಡುಂಬಿ | 18 | 13 | 5 | |
| ನವಾಯಿತಿ | 8 | 5 | 3 | |
| ಇತರ | 52 | 32 | 20 | |
| ಮಯ್ತಿಲಿ | 34 | 24 | 10 | |
| ಮಯ್ತಿಲಿ | 34 | 24 | 10 | |
| ಮಲಯಾಳಂ | 1618 | 799 | 819 | |
| ಮಲಯಾಳಂ | 1587 | 782 | 805 | |
| ಯರವ | 24 | 12 | 12 | |
| ಇತರ | 7 | 5 | 2 | |
| ಮಣಿಪುರಿ | 56 | 52 | 4 | |
| ಮಣಿಪುರಿ | 54 | 50 | 4 | |
| ಇತರ | 2 | 2 | 0 | |
| ಮರಾಟಿ | 893910 | 450991 | 442919 | |
| ಮರಾಟಿ | 893878 | 450975 | 442903 | |
| ಆರೆ | 32 | 16 | 16 | |
| ನೇಪಾಲಿ | 559 | 329 | 230 | |
| ನೇಪಾಲಿ | 558 | 328 | 230 | |
| ಓಡಿಯಾ | 1 | 1 | 0 | |
| ಓಡಿಯಾ | 1008 | 626 | 382 | |
| ಓಡಿಯಾ | 995 | 622 | 373 | |
| ಇತರ | 13 | 4 | 9 | |
| ಪಂಜಾಬಿ | 705 | 445 | 260 | |
| ಪಂಜಾಬಿ | 705 | 445 | 260 | |
| ಸಂಸ್ಕ್ರುತ | 35 | 16 | 19 | |
| ಸಂಸ್ಕ್ರುತ | 35 | 16 | 19 | |
| ಸಂತಾಲಿ | 1 | 1 | 0 | |
| ಸಂತಾಲಿ | 1 | 1 | 0 | |
| ಸಿಂದಿ | 1150 | 591 | 559 | |
| ಕಚ್ಚಿ | 87 | 41 | 46 | |
| ಸಿಂದಿ | 1062 | 549 | 513 | |
| ಇತರ | 1 | 1 | 0 | |
| ತಮಿಳು | 5201 | 2695 | 2506 | |
| ಕಯ್ಕಾಡಿ | 46 | 19 | 27 | |
| ಕೊರವ | 1745 | 833 | 912 | |
| ತಮಿಳು | 3410 | 1843 | 1567 | |
| ತೆಲುಗು | 39764 | 20002 | 19762 | |
| ತೆಲುಗು | 38417 | 19328 | 19089 | |
| ವಡರಿ | 174 | 84 | 90 | |
| ಇತರ | 1173 | 590 | 583 | |
| ಉರ‍್ದು | 467816 | 236804 | 231012 | |
| ಉರ‍್ದು | 467743 | 236765 | 230978 | |
| ಇತರ | 73 | 39 | 34 | |
| ಆದಿ | 1 | 1 | 0 | |
| ಆದಿ | 1 | 1 | 0 | |
| ಬಿಲಿ/ಬಿಲೊಡಿ | 83 | 44 | 39 | |
| ಇತರ | 83 | 44 | 39 | |
| ಬೊಟಿಯ | 1 | 1 | 0 | |
| ಬೊಟಿಯ | 1 | 1 | 0 | |
| ಕೂರ‍್ಗಿ/ಕೊಡಗು | 79 | 37 | 42 | |
| ಕೂರ‍್ಗಿ/ಕೊಡಗು | 4 | 3 | 1 | |
| ಕೊಡವ | 75 | 34 | 41 | |
| ದೇವೋರಿ | 15 | 7 | 8 | |
| ದೇವೋರಿ | 15 | 7 | 8 | |
| ಇಂಗ್ಲೀಶು | 1057 | 480 | 577 | |
| ಇಂಗ್ಲೀಶು | 1057 | 480 | 577 | |
| ಗಾರೊ | 1 | 1 | 0 | |
| ಗಾರೊ | 1 | 1 | 0 | |
| ಹಲಂ | 1 | 1 | 0 | |
| ಇತರ | 1 | 1 | 0 | |
| ಕಾಸಿ | 1 | 1 | 0 | |
| ಕಾಸಿ | 1 | 1 | 0 | |
| ಕಿನ್ನವುರಿ | 2 | 2 | 0 | |
| ಕಿನ್ನವುರಿ | 2 | 2 | 0 | |
| ಕೊಮ್ | 2 | 1 | 1 | |
| ಕೊಮ್ | 2 | 1 | 1 | |
| ಕೊರ‍್ವ | 7 | 3 | 4 | |
| ಇತರ | 7 | 3 | 4 | |
| ಕೊಯ | 28 | 12 | 16 | |
| ಕೊಯ | 28 | 12 | 16 | |
| ಕುಕಿ | 7 | 3 | 4 | |
| ಕುಕಿ | 7 | 3 | 4 | |
| ಕುರುಕ್/ಓರಆನ್ | 4 | 4 | 0 | |
| ಕುರುಕ್/ಓರಆನ್ | 4 | 4 | 0 | |
| ಲಡಾಕಿ | 5 | 5 | 0 | |
| ಲಡಾಕಿ | 5 | 5 | 0 | |
| ಲಹಂದ | 66 | 30 | 36 | |
| ಇತರ | 66 | 30 | 36 | |
| ಲಕೇರ್ | 11 | 6 | 5 | |
| ಮರ | 11 | 6 | 5 | |
| ಲೊಹ್ತಾ | 2 | 2 | 0 | |
| ಲೊಹ್ತಾ | 2 | 2 | 0 | |
| ಲುಶಾಯಿ/ಮಿಜೊ | 6 | 3 | 3 | |
| ಲುಶಾಯಿ/ಮಿಜೊ | 6 | 3 | 3 | |
| ಮಾವೊ | 1 | 1 | 0 | |
| ಮಾವೊ | 1 | 1 | 0 | |
| ಮೊಗ್ | 1 | 1 | 0 | |
| ಮೊಗ್ | 1 | 1 | 0 | |
| ಪಯ್ತೆ | 4 | 2 | 2 | |
| ಪಯ್ತೆ | 4 | 2 | 2 | |
| ತಾಡೊ | 2 | 0 | 2 | |
| ತಾಡೊ | 2 | 0 | 2 | |
| ಟಿಬೆಟನ್ | 11 | 3 | 8 | |
| ಟಿಬೆಟನ್ | 10 | 2 | 8 | |
| ಇತರ | 1 | 1 | 0 | |
| ತುಳು | 2234 | 1162 | 1072 | |
| ತುಳು | 2222 | 1154 | 1068 | |
| ಇತರ | 12 | 8 | 4 | |
| ವಯ್ಪೆ | 1 | 1 | 0 | |
| ವಯ್ಪೆ | 1 | 1 | 0 | |
| ಜೆಮಿ | 1 | 1 | 0 | |
| ಜೆಮಿ | 1 | 1 | 0 | |
| ಜೊವು | 1 | 1 | 0 | |
| ಜೊವು | 1 | 1 | 0 | |
| ಇತರ | 229 | 126 | 103 |
ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಬಾಶಿಕ ಬಹುತ್ವ ಕಾಣಿಸುತ್ತದೆ. ಈ ಮೇಲಿನ ಅಟ್ಟವು ಒದಗಿಸುವ ಮಾಹಿತಿ ಪ್ರಕಾರ ಬೆಳಗಾವಿಯಲ್ಲಿ ಒಟ್ಟು ಅಯ್ವತ್ತು ಬಾಶೆಗಳು ದಾಕಲಾಗಿದ್ದು ಇತರ ಎಂಬ ಗುಂಪಿನಲ್ಲಿ ಕಡಿಮೆ ಮಾತುಗರು ಇರುವುದರಿಂದ ಅದನ್ನು ಒಂದು ಬಾಶೆ ಎಂದು ಲೆಕ್ಕಿಸಿದರೆ ಒಟ್ಟು ಅಯ್ವತ್ತೊಂದು ಬಾಶೆಗಳ ದಾಕಲೆ ಆದ ಹಾಗಾಯಿತು. ಹಾಗೆಯೆ ಒಟ್ಟು ತೊಂಬತ್ತಾರು ತಾಯ್ಮಾತುಗಳನ್ನು ಇದು ಪಟ್ಟಿಸುತ್ತದೆ. ಇತರ ಎಂಬ ಗುಂಪಿನಲ್ಲಿ ಒಂದು ತಾಯ್ಮಾತು ಎಂದು ಲೆಕ್ಕಿಸಿದರೆ ತಾಯ್ಮಾತುಗಳ ಸಂಕೆ ತೊಂಬತ್ತೇಳು ಆಗುತ್ತದೆ. ಇವುಗಳಲ್ಲಿ ಒಟ್ಟು ಹದಿನಾರು ಬಾಶೆಗಳಲ್ಲಿ ಇತರ ಎಂಬ ಗುಂಪು ಕಾಣಿಸುತ್ತದೆ. ಅವುಗಳೆಂದರೆ, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮಲಯಾಳಂ, ಮಣಿಪುರಿ, ಓಡಿಯಾ, ಸಿಂದಿ, ತೆಲುಗು, ಉರ‍್ದು, ಬಿಲಿ/ಬಿಲೊಡಿ, ಹಲಂ, ಕೊರ‍್ವ, ಲಹಂದ, ಟಿಬೆಟನ್ ಮತ್ತು ತುಳು. ಹಾಗಾದರೆ ಒಟ್ಟು ಹೆಸರಿಸಿದ ತಾಯ್ಮಾತುಗಳ ಸಂಕೆ ತೊಂಬತ್ತು ಆಗುತ್ತದೆ.
ಬೆಳಗಾವಿಯಲ್ಲಿ ಕನ್ನಡ ಹೆಚ್ಚು ಮಂದಿ ಮಾತಾಡುವ ಬಾಶೆಯಾಗಿದೆ. ಬೆಳಗಾವಿಯ ಒಟ್ಟು ಜನಸಂಕೆ 47,79,661 ಆಗಿದ್ದು ಇದರಲ್ಲಿ 32,69,063 (68.395%) ಮಂದಿ ಕನ್ನಡ ಮಾತಾಡುವವರು ಆಗಿದ್ದಾರೆ. ಕನ್ನಡವು ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರನ್ನು ಹೊಂದಿದ ಬಾಶೆಯಾಗಿದೆ. ಆನಂತರ ಮರಾಟಿ 8,93,910 (18.702%) ಮಂದಿ ಮಾತುಗರನ್ನು ಮತ್ತು ಉರ‍್ದು 4,67,816 (9.787%) ಮಂದಿ ಮಾತುಗರನ್ನು ಹೊಂದಿದ್ದು ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರಿರುವ ಬಾಶೆಗಳಾಗಿವೆ. ಮೂರು ಬಾಶೆಗಳಿಗೆ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ದಾಕಲಾಗಿದ್ದಾರೆ. ಅವು, ಹಿಂದಿ – 66,498 (1.391%), ತೆಲುಗು – 39,764 (1.663%) ಮತ್ತು ಕೊಂಕಣಿ – 20,971 (0.438%). ಆನಂತರ ಒಟ್ಟು ಎಂಟು ಬಾಶೆಗಳಿಗೆ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇದ್ದಾರೆ. ಅವುಗಳೆಂದರೆ, ಗುಜರಾತಿ – 6,035 (0.126%), ತಮಿಳು – 3,410 (0.108%), ತುಳು – 2,234 (0.046%), ಮಲಯಾಳಂ – 1,618 (0.033%), ಸಿಂದಿ – 1,150 (0.024%), ಬೆಂಗಾಲಿ – 1,069 (0.022%), ಇಂಗ್ಲೀಶು – 1,057 (0.022%) ಮತ್ತು ಓಡಿಯಾ – 1,008 (0.021%). ಸಾವಿರಕ್ಕಿಂತ ಕಡಿಮೆ ಮತ್ತು ಒಂದು ನೂರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಒಟ್ಟು ಮೂರು ಬಾಶೆಗಳು (ಪಂಜಾಬಿ, ನೇಪಾಲಿ ಮತ್ತು ಡೋಗ್ರಿ) ಇವೆ. ಹಾಗೆ ಇತರ ಎಂಬ ಗುಂಪಿನಲ್ಲಿಯೂ ನೂರಕ್ಕೂ ಹೆಚ್ಚು ಮಂದಿ (229) ಇದ್ದಾರೆ. ಆನಂತರ ನೂರಕ್ಕೂ ಕಡಿಮೆ ಮಾತುಗರು ಇರುವ ಒಟ್ಟು ಮೂವತ್ಮೂರು ಬಾಶೆಗಳು ಇವೆ. ಈ ಬಾಶೆಗಳನ್ನು ಕೆಳಗಿನಂತೆ ಚಿತ್ರಿಸಿ ತೋರಿಸಬಹುದು.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಹತ್ತು ಲಕ್ಶಕ್ಕಿಂತ ಹೆಚ್ಚು | ಕನ್ನಡ | 32,69,063 | 68.395% |
| ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು | ಮರಾಟಿ | 8,93,910 | 18.702% |
| ’’ | ಉರ‍್ದು | 4,67,816 | 9.787% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ಹಿಂದಿ | 66,498 | 1.391% |
| ’’ | ತೆಲುಗು | 39,764 | 0.831% |
| ’’ | ಕೊಂಕಣಿ | 21,049 | 0.440% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ಗುಜರಾತಿ | 6,035 | 0.126% |
| ’’ | ತಮಿಳು | 5,201 | 0.108% |
| ’’ | ತುಳು | 2,234 | 0.046% |
| ’’ | ಮಲಯಾಳಂ | 1,618 | 0.033% |
| ’’ | ಸಿಂದಿ | 1,150 | 0.024% |
| ’’ | ಬೆಂಗಾಲಿ | 1,069 | 0.022% |
| ’’ | ಇಂಗ್ಲೀಶು | 1,057 | 0.022% |
| ’’ | ಓಡಿಯಾ | 1,008 | 0.021% |
| ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳು | ಪಂಜಾಬಿ, ನೇಪಾಲಿ, ಇತರ, ಡೋಗ್ರಿ | 1,604 | 0.033% |
| ನೂರಕ್ಕಿಂತ ಕಡಿಮೆ | ಮೂವತ್ಮೂರು ಬಾಶೆಗಳು | 585 | 0.012% |
| ಒಟ್ಟು ಮಾತುಗರು | 47,79,661 | 100% |
ಬೆಳಗಾವಿ ಜಿಲ್ಲೆಯ ಜನಗಣತಿ ಒದಗಿಸಿರುವ ಈ ಮಾಹಿತಿಯಲ್ಲಿ ಇರುವ ತಾಯ್ಮಾತುಗಳನ್ನು ತುಸು ಗಮನಿಸಬಹುದು. ಇದರಿಂದ ಬೆಳಗಾವಿ ಜಿಲ್ಲೆಯ ಬಾಶೆಗಳ ಪಟ್ಟಿ ತುಸು ಬದಲಾಗುತ್ತದೆ. ಕರ್ನಾಟಕದ ಸಂದರ್ಬದಲ್ಲಿ ಪ್ರಮುಕವೆನಿಸುವ ಹಿಂದಿಯೊಳಗಿನ ತಾಯ್ಮಾತುಗಳನ್ನು ಕೆಳಗೆ ಪಟ್ಟಿಸಿದೆ.
ಹಿಂದಿ 66,498
ಬಂಜಾರಿ 348
ಹಿಂದಿ 39,005
ಲಮಾಣಿ/ಲಂಬಾಡಿ 19,842
ಮಾರ‍್ವಾರಿ 5,101
ರಾಜಸ್ತಾನಿ 1,206
ಹಿಂದಿಗೆ ಜಿಲ್ಲೆಯಲ್ಲಿ ದಾಕಲಾದ ಒಟ್ಟು ಮಾತುಗರ ಸಂಕೆ 66,498. ಇದರಲ್ಲಿ ಹಿಂದಿ ಮಾತಾಡುವ 39,005 ಮಂದಿ ಇದ್ದಾರೆ. ಇದು ಜಿಲ್ಲೆಯ ಒಟ್ಟು ಹಿಂದಿಯ 58.655% ಮತ್ತು ಜಿಲ್ಲೆಯ 0.816% ಆಗುತ್ತದೆ. ಲಮಾಣಿ ಹೆಸರಿನಲ್ಲಿ 19,842 ಮತ್ತು ಬಂಜಾರಿ ಹೆಸರಿನಲ್ಲಿ 348 ಮಂದಿ ಇದ್ದು ಇವೆರಡು ಸೇರಿದರೆ ಲಂಬಾಣಿ ಬಾಶೆಯ ಮಾತುಗರು 20,190 ಆಗುತ್ತದೆ. ಇದು ಜಿಲ್ಲೆಯ ಹಿಂದಿಯ 30.361% ಮತ್ತು ಜಿಲ್ಲೆಯ 0.422% ಆಗುತ್ತದೆ. ಇದರೊಟ್ಟಿಗೆ ಮಾರ‍್ವಾರಿ ಬಾಶೆಗೆ 5,101 (0.106%) ಮತ್ತು ರಾಜಸ್ತಾನಿಗೆ 1,206 (0.025%) ಮಂದಿ ಮಾತುಗರು ದಾಕಲಾಗಿದ್ದಾರೆ. ಈಗ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರು ಇರುವ ಬಾಶೆಗಳ ಪಟ್ಟಿಗೆ ಹಿಂದಿಯ ಜೊತೆ ಲಂಬಾಣಿ ಸೇರಿಕೊಳ್ಳುತ್ತದೆ ಮತ್ತು ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳ ಪಟ್ಟಿಗೆ ಮಾರ‍್ವಾರಿ ಮತ್ತು ರಾಜಸ್ತಾನಿಗಳು ಬರುತ್ತವೆ.
ಇದರೊಟ್ಟಿಗೆ ತಮಿಳಿನ ಒಳಗೆ ದಾಕಲಾದ ಕೊರವಕ್ಕೆ 1,745 ಮಂದಿ ಮತ್ತು ಕಯ್ಕಾಡಿಗೆ 46 ಮಂದಿ ದಾಕಲಾಗಿದ್ದಾರೆ. ಇವೆರಡನ್ನು ಸೇರಿಸಿದರೆ ಕೊರವ ಸಂಕೆ 1,801 ಆಗುತ್ತದೆ. ಇದು ಜಿಲ್ಲೆಯ ತಮಿಳಿನ 34.627% ಮತ್ತು ಜಿಲ್ಲೆಯ 0.037% ಆಗುತ್ತದೆ. ತಮಿಳು ಮಾತಾಡುವ 3,410 ಮಂದಿ ಇದ್ದಾರೆ. ಇದು ತಮಿಳಿನ 65.564% ಮತ್ತು ಜಿಲ್ಲೆಯ 0.071% ಆಗುತ್ತದೆ. ತಮಿಳಿನ ಜೊತೆಗೆ ಕೊರವ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳ ಪಟ್ಟಿಗೆ ಸೇರುತ್ತದೆ.
ಆನಂತರ ಓಡಿಯಾಕ್ಕೆ 1008 ಮಂದಿ ಮಾತುಗರು ದಾಕಲಾಗಿದ್ದು ಸಾವಿರಕ್ಕೂ ಹೆಚ್ಚು ಮಂದಿ ಇರುವ ಬಾಶೆಗಳ ಪಟ್ಟಿಯಲ್ಲಿ ಅದು ಸೇರಿಕೊಂಡಿದೆ. ಆದರೆ, ಇದರಲ್ಲಿ ಇತರ ಗುಂಪಿನಲ್ಲಿ 13 ಮಂದಿ ಇದ್ದಾರೆ. ಓಡಿಯಾ ತಾಯ್ಮಾತಿನ ಲೆಕ್ಕ ಹಾಕಿದಾಗ ಅದು 995 ಆಗುತ್ತದೆ. ಹೀಗಾಗಿ ಓಡಿಯಾ ಸಾವಿರಕ್ಕೂ ಹೆಚ್ಚು ಮಂದಿ ಇರುವ ಬಾಶೆಗಳ ಪಟ್ಟಿಯಿಂದ ಕೆಳಗಿಳಿಯುತ್ತದೆ. ತೆಲುಗು ಬಾಶೆಯಲ್ಲಿ ದಾಕಲಾಗಿರುವ ಇತರ ಗುಂಪಿನಲ್ಲಿ 1,173 (0.024%) ಮಂದಿ ದಾಕಲಾಗಿದ್ದಾರೆ.
ಈ ಎಲ್ಲ ಚರ‍್ಚೆಯನ್ನು ಮತ್ತು ಬೆಳಗಾವಿ ಜಿಲ್ಲೆಯ ತಾಯ್ಮಾತುಗಳನ್ನು ಗಮನದಲ್ಲಿ ಇಟ್ಟುಕೊಂಡು ಜಿಲ್ಲೆಯ ಬಾಶೆಗಳ ಪಟ್ಟಿಯನ್ನು ಮರುವಿನ್ಯಾಸಗೊಳಿಸಿ ಕೆಳಗೆ ಕೊಟ್ಟಿದೆ.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಹತ್ತು ಲಕ್ಶಕ್ಕಿಂತ ಹೆಚ್ಚು | ಕನ್ನಡ | 32,68,714 | 68.387% |
| ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು | ಮರಾಟಿ | 8,93,878 | 18.701% |
| ’’ | ಉರ‍್ದು | 4,67,743 | 9.786% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ಹಿಂದಿ | 39,005 | 0.816% |
| ’’ | ತೆಲುಗು | 38,417 | 0.803% |
| ’’ | ಕೊಂಕಣಿ | 20,971 | 0.438% |
| ’’ | ಲಂಬಾಣಿ | 19,842 | 0.415% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ಗುಜರಾತಿ | 6,035 | 0.126% |
| ’’ | ಮಾರ‍್ವಾರಿ | 5,101 | 0.106% |
| ’’ | ತಮಿಳು | 3,410 | 0.071% |
| ’’ | ತುಳು | 2,222 | 0.046% |
| ’’ | ಕೊರವ | 1,801 | 0.037% |
| ’’ | ಮಲಯಾಳಂ | 1,587 | 0.033% |
| ’’ | ರಾಜಸ್ತಾನಿ | 1,206 | 0.025% |
| ’’ | ತೆಲುಗು-ಇತರ | 1,173 | 0.024% |
| ’’ | ಬೆಂಗಾಲಿ | 1,069 | 0.022% |
| ’’ | ಸಿಂದಿ | 1,062 | 0.022% |
| ’’ | ಇಂಗ್ಲೀಶು | 1,057 | 0.022% |
ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.
| ಪ್ರದೇಶ | ಜಿಲ್ಲೆಯ ಜನಸಂಕೆ | ಬಾಶೆ | ಮಾತುಗರು | ಜಿಲ್ಲೆಯ % | ಜಿಲ್ಲೆಯಲ್ಲಿ ಸ್ತಾನ |
| ಬೆಳಗಾವಿ | 47,79,661 | ಕನ್ನಡ | 32,68,714 | 68.387% | 1 |
| ಮರಾಟಿ | 8,93,878 | 18.701% | 2 | ||
| ಉರ‍್ದು | 4,67,743 | 9.786% | 3 | ||
| ಹಿಂದಿ | 39,005 | 0.816% | 4 | ||
| ತೆಲುಗು | 38,417 | 0.803% | 5 | ||
| ಕೊಂಕಣಿ | 20,971 | 0.438% | 6 | ||
| ಲಂಬಾಣಿ | 20,196 | 0.422% | 7 | ||
| ಗುಜರಾತಿ | 6,035 | 0.126% | 8 | ||
| ಮಾರ‍್ವಾರಿ | 5,101 | 0.106% | 9 | ||
| ತಮಿಳು | 3,410 | 0.071% | 10 |






0 Comments