ಬಸವರಾಜ ಕೋಡಗುಂಟಿ ಅಂಕಣ – ಚಿತ್ರದುರ‍್ಗ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಚಿತ್ರದುರ‍್ಗಜಿಲ್ಲೆಯ ಬಗ್ಗೆ ಬೆಳಕು

ಚೆಲ್ಲಲಾಗಿದೆ.

12

 ಚಿತ್ರದುರ‍್ಗ

ಚಿತ್ರದುರ‍್ಗ ಜಿಲ್ಲೆಯಲ್ಲಿ ಸುಮಾರು 83% ಕನ್ನಡ ಬಾಶೆ ಬಳಕೆಯಲ್ಲಿದೆ. ಉರ‍್ದು ಮತ್ತು ತೆಲುಗು ಇಲ್ಲಿಯ ದೊಡ್ಡ ಬಾಶೆಗಳಾಗಿವೆ. ಲಂಬಾಣಿ ದೊಡ್ಡ ಸಂಕೆಯಲ್ಲಿ ಇಲ್ಲಿ ದಾಕಲಾಗಿರುವುದನ್ನು ಕಾಣಬಹುದು. ಆನಂತರ ತಮಿಳು ಪರಿಗಣಿಸುವಶ್ಟು ಮಂದಿಯನ್ನು ಹೊಂದಿದೆ. ಜಿಲ್ಲೆಯಲ್ಲಿ ಕನಿಶ್ಟ ಇಪ್ಪತ್ತಯ್ದು ಬಾಶೆಗಳು ಮತ್ತು ಕನಿಶ್ಟ ನಲ್ವತ್ತೊಂದು ತಾಯ್ಮಾತುಗಳು ಬಳಕೆಯಲ್ಲಿವೆ.

ಜನಗಣತಿಯು ಒದಗಿಸಿರುವ ಚಿತ್ರದುರ‍್ಗ ಜಿಲ್ಲೆಯ ಬಾಶಿಕ ಮಾಹಿತಿಯನ್ನು ಕೆಳಗೆ ಪಟ್ಟಿ ಮಾಡಿ ಕೊಟ್ಟಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ880
ಆಸ್ಸಾಮಿ880
ಬೆಂಗಾಲಿ846123
ಬೆಂಗಾಲಿ846123
ಗುಜರಾತಿ370163207
ಗುಜರಾತಿ344149195
ಸವರಾಶ್ಟ್ರ/ಸವರಾಶ್ಟ್ರಿ541
ಇತರ211011
ಹಿಂದಿ441332238221751
ಬಂಜಾರಿ532924
ಬೋಜ್ಪುರಿ330
ಹಿಂದಿ498526982287
ಲಮಾಣಿ/ಲಂಬಾಡಿ379631904818915
ಮಾರ‍್ವಾರಿ887470417
ರಾಜಸ್ತಾನಿ18410381
ಇತರ583127
ಕನ್ನಡ1382860701454681406
ಕನ್ನಡ1382085701074681011
ಕುರುಬ/ಕುರುಂಬ17107
ಇತರ758370388
ಕಾಶ್ಮೀರಿ936
ಕಾಶ್ಮೀರಿ936
ಕೊಂಕಣಿ353172181
ಕೊಂಕಣಿ345166179
ಕುಡುಬಿ/ಕುಡುಂಬಿ862
ಮಲಯಾಳಂ791363428
ಮಲಯಾಳಂ788362426
ಯರವ312
ಮಣಿಪುರಿ321
ಮಣಿಪುರಿ321
ಮರಾಟಿ621231603052
ಮರಾಟಿ621231603052
ನೇಪಾಲಿ311417
ನೇಪಾಲಿ311417
ಓಡಿಯಾ392217
ಓಡಿಯಾ241212
ಇತರ15105
ಪಂಜಾಬಿ492920
ಪಂಜಾಬಿ492920
ಸಂಸ್ಕ್ರುತ110
ಸಂಸ್ಕ್ರುತ110
ತಮಿಳು1310565586547
ತಮಿಳು1310565586547
ತೆಲುಗು893824479844584
ತೆಲುಗು893744479344581
ಇತರ853
ಉರ‍್ದು1216516144960202
ಉರ‍್ದು1216456144660199
ಇತರ633
ಅರಾಬಿಕ್/ಅರ‍್ಬಿ1688
ಅರಾಬಿಕ್/ಅರ‍್ಬಿ1688
ಬಿಲಿ/ಬಿಲೊಡಿ553025
ಇತರ553025
ಬೊಟಿಯ231310
ಇತರ231310
ಕೂರ‍್ಗಿ/ಕೊಡಗು382216
ಕೂರ‍್ಗಿ/ಕೊಡಗು422
ಕೊಡವ342014
ಇಂಗ್ಲೀಶು552926
ಇಂಗ್ಲೀಶು552926
ಟಿಬೆಟನ್110
ಟಿಬೆಟನ್110
ತುಳು1567977
ತುಳು1567977
ಇತರ31229

ಚಿತ್ರದುರ‍್ಗ ಜಿಲ್ಲೆಯಲ್ಲಿ ದಾಕಲಾಗಿರುವ ಒಟ್ಟು ಬಾಶೆಗಳ ಸಂಕೆ ಇಪ್ಪತ್ನಾಲ್ಕು. ಇತರ ಎಂಬ ಒಂದು ಗುಂಪನ್ನು ಒಂದು ಬಾಶೆ ಎಂದು ಪರಿಗಣಿಸಿ ಚಿತ್ರದುರ‍್ಗ ಜಿಲ್ಲೆಯಲ್ಲಿ ದಾಕಲಾದ ಬಾಶೆಗಳ ಸಂಕೆ ಇಪ್ಪತ್ತಯ್ದು ಎಂದೆನ್ನಬಹುದು. ಚಿತ್ರದುರ‍್ಗದಲ್ಲಿ ಒಟ್ಟು ನಲವತ್ತು ತಾಯ್ಮಾತುಗಳು ದಾಕಲಾಗಿವೆ. ಇತರ ಎಂಬ ಗುಂಪಿನಲ್ಲಿ ಒಂದು ತಾಯ್ಮಾತು ಎಂದು ಎಣಿಸಿ ಒಟ್ಟು ನಲ್ವತ್ತೊಂದು ತಾಯ್ಮಾತುಗಳು ಎಂದೆನ್ನಬಹುದು. ಇವುಗಳಲ್ಲಿ ಎಂಟು ಬಾಶೆಗಳ ಒಳಗೆ ಇತರ ಎಂಬ ಗುಂಪು ಇದೆ. ಅಂದರೆ ಒಟ್ಟು ಮೂವತ್ತೆರಡು ತಾಯ್ಮಾತುಗಳನ್ನು ಹೆಸರಿಸಿದೆ.

ಚಿತ್ರದುರ‍್ಗ ಜಿಲ್ಲೆಯಲ್ಲಿನ ಒಟ್ಟು ಜನಸಂಕೆ 16,59,456. ಜಿಲ್ಲೆಯಲ್ಲಿ ಹೆಚ್ಚಿನ ಮಂದಿ ಮಾತಾಡುವ ಬಾಶೆ ಕನ್ನಡವಾಗಿದ್ದು ಹತ್ತು ಲಕ್ಶಕ್ಕೂ ಹೆಚ್ಚು ಮಂದಿ ಮಾತುಗರು ಇದ್ದಾರೆ. 13,82,860 ಮಂದಿ ಕನ್ನಡ ಮಾತಾಡುತ್ತಾರೆ. ಇದು ಜಿಲ್ಲೆಯ ಒಟ್ಟು ಜನಸಂಕೆಯ 83.332% ಆಗುತ್ತದೆ. ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆ ಉರ‍್ದು ಆಗಿದ್ದು 1,21,651 (7.330%) ಮಾತುಗರನ್ನು ಹೊಂದಿದೆ. ಆನಂತರ ಒಂದು ಲಕ್ಶಕ್ಕಿಂತ ಕಮ್ಮಿ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರನ್ನು ಹೊಂದಿರುವ ಮೂರು ಬಾಶೆಗಳು ಇವೆ. ತೆಲುಗು – 89,382 (5.386%), ಹಿಂದಿ – 44,133 (2.659%) ಮತ್ತು ತಮಿಳು – 13,105 (0.789%) ಈ ಮೂರು ಬಾಶೆಗಳಾಗಿವೆ.

ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆ ಮರಾಟಿ ಮಾತ್ರ ಇದೆ. ಮರಾಟಿಗೆ 6,212 (0.374%) ಮಂದಿ ಮಾತುಗರು ಇದ್ದಾರೆ. ಸಾವಿರಕ್ಕಿಂತ ಕಡಿಮೆ ಮಂದಿ ಮಾತಾಡುವ ನಾಲ್ಕು ಬಾಶೆಗಳು ಇವೆ. ಅವು, ಮಲಯಾಳಂ, ಗುಜರಾತಿ, ಕೊಂಕಣಿ ಮತ್ತು ತುಳು. ಇನ್ನು ನೂರಕ್ಕಿಂತ ಕಡಿಮೆ ಮಂದಿ ಮಾತಾಡುವ ಇಪ್ಪತ್ತೆರಡು ಬಾಶೆಗಳು ದಾಕಲಾಗಿವೆ. ಈಗ ಚಿತ್ರದುರ‍್ಗ ಜಿಲ್ಲೆಯ ಬಾಶೆಗಳನ್ನು ಕೆಳಗಿನಂತೆ ಪಟ್ಟಿಸಿ ತೋರಿಸಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚಕನ್ನಡ13,82,860 83.332%
’’ಉರ‍್ದು1,21,651 7.330%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತೆಲುಗು89,382 5.386%
’’ಹಿಂದಿ44,133 2.659%
’’ತಮಿಳು13,105 0.789%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮರಾಟಿ6,212 0.374%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚುಮಲಯಾಳಂ, ಗುಜರಾತಿ, ಕೊಂಕಣಿ, ತುಳು1,6700.100%
ನೂರಕ್ಕಿಂತ ಕಡಿಮೆಇಪ್ಪತ್ತೆರಡು ಬಾಶೆಗಳು4430.026%
ಒಟ್ಟು ಮಾತುಗರು16,59,456100%

ಇನ್ನು ಚಿತ್ರದುರ‍್ಗ ಜಿಲ್ಲೆಯಲ್ಲಿ ದಾಕಲಾಗಿರುವ ತಾಯ್ಮಾತುಗಳನ್ನು ಗಮನಿಸಿ ಅಂಕಿಸಂಕೆಗಳನ್ನು ವಿಶ್ಲೇಶಿಸಬಹುದು. 

ಹಿಂದಿ 44,133

ಬಂಜಾರಿ 53

ಬೋಜ್ಪುರಿ 3

ಹಿಂದಿ 4,985

ಲಮಾಣಿ/ಲಂಬಾಡಿ 37,963

ಮಾರ‍್ವಾರಿ 887

ರಾಜಸ್ತಾನಿ 184

ಹಿಂದಿಯಲ್ಲಿ ಒಟ್ಟು 44,133 ಮಂದಿ ಮಾತುಗರು ದಾಕಲಾಗಿದ್ದಾರೆ. ಇದರಲ್ಲಿ ಹಿಂದಿ ಮಾತಾಡುವವರು 4,985 ಇದ್ದಾರೆ. ಇದು ಚಿತ್ರದುರ‍್ಗ ಜಿಲ್ಲೆಯ ಹಿಂದಿಯ 11.295% ಮತ್ತು ಜಿಲ್ಲೆಯ 0.300% ಆಗುತ್ತದೆ. ಲಮಾಣಿ ಹೆಸರಿನಲ್ಲಿ 37,963 ಮಂದಿ ಇದ್ದಾರೆ, ಹಾಗೆಯೆ ಬಂಜಾರಿ ಹೆಸರಲ್ಲಿ 53 ಮಂದಿ ಇದ್ದು, ಅವೆರಡನ್ನು ಸೇರಿಸಿ ಲಂಬಾಣಿ ಮಾತುಗರ ಸಂಕೆಯು 38,016 ಆಗುತ್ತದೆ. ಇದು ಹಿಂದಿಯ 86.139% ಆಗುತ್ತದೆ ಮತ್ತು ಜಿಲ್ಲೆಯ 2.290% ಆಗುತ್ತದೆ. ಉಳಿದಂತೆ ಜಿಲ್ಲೆಯಲ್ಲಿ ಬೇರೆ ತಾಯ್ಮಾತುಗಳಲ್ಲಿ ಹೆಚ್ಚಿನ ಬದಲಾವಣೆ ಕಾಣಿಸುವುದಿಲ್ಲ. ಈಗ ಲಂಬಾಣಿಯು ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರು ಇರುವ ಬಾಶೆಗಳ ಪಟ್ಟಿಗೆ ಬರುತ್ತದೆ ಮತ್ತು ಹಿಂದಿಯು ಅದರಿಂದ ಕೆಳಗಿಳಿದು ಹತ್ತು ಸಾವಿರಕ್ಕಿಂತ ಕಡಿಮೆ ಮಾತುಗರಿರುವ ಬಾಶೆಗಳ ಪಟ್ಟಿಗೆ ಬರುತ್ತದೆ. ಈ ಚರ್ಚೆಯನ್ನು ಗಮನಿಸಿ ಚಿತ್ರದುರ‍್ಗ ಜಿಲ್ಲೆಯ ಬಾಶೆಗಳನ್ನು ಇನ್ನೊಮ್ಮೆ ಇಲ್ಲಿ ವಿವರಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚಕನ್ನಡ13,82,08583.285%
’’ಉರ‍್ದು1,21,6457.330%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತೆಲುಗು89,3745.385%
’’ಲಂಬಾಣಿ38,0162.290%
’’ತಮಿಳು13,1050.789%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮರಾಟಿ6,2120.374%
’’ಹಿಂದಿ4,9850.300%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಚಿತ್ರದುರ‍್ಗ16,59,456ಕನ್ನಡ13,82,08583.285%1
ಉರ‍್ದು1,21,6457.330%2
ತೆಲುಗು89,3745.385%3
ಲಂಬಾಣಿ38,0162.290%4
ತಮಿಳು13,1050.789%5
ಮರಾಟಿ 6,2120.374%6
ಹಿಂದಿ4,9850.300%7
ಮಾರ‍್ವಾರಿ8870.053%8
ಮಲಯಾಳಂ7880.047%9
ಕನ್ನಡ-ಇತರ7580.045%10

‍ಲೇಖಕರು Admin

May 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: