‘ಚಿತ್ರಭೂಮಿ’ಯಲ್ಲಿ 4 ಮಂತ್ಸ್ , 3 ವೀಕ್ಸ್ ಆಂಡ್ 2 ಡೇಸ್

Name of the Film 4 months, 3 Weeks and 2 Days
Writer-Director: Cristian Mungiu
Country : Romania
Language:Romanian
Runtime:113mns

ಒಟೀಲಿಯಾ ಮತ್ತು ಗೆಬಿತಾ ಇಬ್ಬರೂ ವಿಶ್ವವಿದ್ಯಾಲಯ ಒಂದರ ಸಹಪಾಠಿಗಳು, ಒಂದೇ ಕೋಣೆಯಲ್ಲಿ ವಾಸಮಾಡುತ್ತಿರುವವರು. ಗೆಬಿತಾ ತನ್ನ ಗೆಳೆಯನೊಂದಿಗೆ ಸಲುಗೆಯಿಂದ ಇದ್ದುದರ ಕಾರಣ ಗರ್ಭಧರಿಸುತ್ತಾಳೆ. ಅದರಿಂದ ಮುಕ್ತವಾಗಲು ಬಯಸಿದ್ದಾಳೆ. ಒಟೀಲಿಯಾಳ ಸಹಾಯವನ್ನು ಬಯಸುತ್ತಾಳೆ. ಒಟೀಲಿಯಾ ತನ್ನ ಗೆಳತಿ ಗೆಬಿತಾಳ ಆತಂಕವನ್ನು ದೂರಮಾಡಲು ಮಿ.ಬೆಬೆಯನ್ನು ಸಂಪರ್ಕಿಸುತ್ತಾಳೆ. ಈ ಅನೈತಿಕ ಗರ್ಭಪಾತವನ್ನು ನಡೆಸಲು ಮಿ.ಬೆಬೆಯನ್ನು ಕೇಳಿಕೊಳ್ಳುತ್ತಾಳೆ.

ಈ ವಿಷಯವು ಅತಿ ಗೌಪ್ಯವಾಗಿರಬೇಕಾದ ಕಾರಣವನ್ನು ಅರಿತ ಮಿ.ಬೆಬೆಯು ದುರುಪಯೋಗ ಪಡಿಸಿಕೊಳ್ಳಲು ಬಯಸಿ ಆ ಇಬ್ಬರು ಹುಡುಗಿಯರನ್ನು ತನ್ನೊಡನೆ ಲೈಂಗಿಕ ಸಂಗಕ್ಕೆ ಒತ್ತಾಯಿಸುತ್ತಾನೆ. ಅನಿವಾರ್ಯವಾಗಿ ಒಟೀಲಿಯಾ ಅವನ ಸಂಗ ಮಾಡುತ್ತಾಳೆ. ಇದರಿಂದಾಗಿ ತೊಂದರೆಗೆ ಸಿಕ್ಕಿಕೊಳ್ಳುವ ಮತ್ತು ಅತಿ ಒತ್ತಡದ ಸಂದರ್ಭಗಳನ್ನು ಎದುರಿಸುತ್ತಾ ಒಟೀಲಿಯಾ ತನ್ನ ಗೆಳತಿಯ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತಾಳೆ. ಗೆಬಿತಾ ಅಪಾಯದಿಂದ ದೂರವಾದಮೇಲೆ ಇಬ್ಬರೂ ಗೆಳತಿಯರು ಈ ಸಂಗತಿಯನ್ನು ಅತಿ ಗೌಪ್ಯವಾಗಿರಿಸಬೇಕೆಂದು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾರೆ.(ಸಂಗ್ರಹ)

’ಸ್ನೇಹಕ್ಕಾಗಿ ಎಷ್ಟು ದೂರ ಕ್ರಮಿಸಬಲ್ಲೆ’ ಎಂಬ ಪ್ರಶ್ನೆಯನ್ನು ಉತ್ತರಿಸುವ ಧೃಢತೆಯ ಮಾಪನವನ್ನು ಈ ಚಿತ್ರ ಅನಾವರಣಗೊಳಿಸುತ್ತದೆ. ಸಹಾನುಭೂತಿ ತೋರಿಸಲು ಸಂಬಂಧದ ಎಲ್ಲೆಗಳಿರುವುದಿಲ್ಲ, ಎದುರಿಸಬೇಕಾದ ತೊಂದರೆಗಳ ಪರಿವೆ ಇರುವುದಿಲ್ಲ ಎಂದು ತೋರಿಸಹೊರಟಿದೆ ಈ ಚಿತ್ರ. ಅನೈತಿಕತೆಯ ಪ್ರಶ್ನೆಯನ್ನು ಎದುರಿಸುವ ನವ ಜನಾಂಗದ ಹೆಣ್ಣುಮಕ್ಕಳಲ್ಲಿನ ಅಸಹಾಯಕತೆಯನ್ನು ಆರ್ದ್ರವಾಗಿ ಚಿತ್ರಿಸುತ್ತದೆ. ೧೯೮೯ ರ ರೊಮೇನಿಯಾದಲ್ಲಿನ ಗರ್ಭಪಾತವನ್ನು ತಡೆಹಿಡಿಯಲು ಮಾಡಿದ ಕಾನೂನಿನ ಪ್ರಶ್ನೆಯನ್ನು ಈ ಚಿತ್ರ ಗಂಭೀರವಾಗಿ ತೆರೆದಿಡುತ್ತದೆ. ಈ ಚಿತ್ರ 2007ರ ಕ್ಯಾನೆ ಚಿತ್ರೋತ್ಸವದಲ್ಲಿ Palme d’Or ಪ್ರಶಸ್ತಿಯನ್ನು ಗಳಿಸಿಕೊಂಡಿದೆ.

ಲೇಖಕ ಹಾಗು ನಿರ್ದೇಶಕ :ಕ್ರಿಸ್ಟಿಯನ್ ಮುಂಗ್ಯು: ಇಂಗ್ಲಿಷ್ ಭಾಷೆಯ ಪದವಿಯನ್ನು ಪಡೆದು ಕೆಲಕಾಲ ಅಧ್ಯಾಪಕನಾಗಿದ್ದು, ಮತ್ತೆ ಪತ್ರಕರ್ತನಾಗಿ ಕೆಲಸವನ್ನು ಮಾಡಿದ ಮುಂಗ್ಯು ಅನಂತರ ೧೯೯೮ ರಲ್ಲಿ ಬುಖಾರೆಸ್ಟ್ ನ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಸಿನೆಮಾ ನಿರ್ದೇಶನ ವಿಭಾಗದಲ್ಲಿ ಕಲಿತು ಅನೇಕ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ೨೦೦೨ ರಲ್ಲಿ Occident, ಎಂಬ ಚಿತ್ರವನ್ನು ನಿರ್ದೇಶಿಸಿ ೨೦೦೭ ರಲ್ಲಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ವಿಶ್ವಾದ್ಯಂತ ವಿವಿಧ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿ ಒಟ್ಟು ೮ ಉನ್ನತ ಪ್ರಶಸ್ತಿಯನ್ನು ಬಾಚಿಕೊಂಡಿದೆ. (ಸಂಗ್ರಹ)

‍ಲೇಖಕರು Admin

May 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: