ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ
ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಈ ವಾರದ ಅಂಕಣದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಗ್ಗೆ ಬೆಳಕು
ಚೆಲ್ಲಲಾಗಿದೆ.
11
ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನಿಶ್ಟ ಮೂವತ್ತಯ್ದು ಬಾಶೆಗಳು ದಾಕಲಾಗಿವೆ ಮತ್ತು ಕನಿಶ್ಟು ಅರ‍್ವತ್ತೊಂದು ತಾಯ್ಮಾತುಗಳು ಇವೆ. ಹೆಸರಿಸಿಲ್ಲದ ಬಾಶೆಗಳ ಇತರ ಎಂಬ ಗುಂಪಿನಲ್ಲಿ ದೊಡ್ಡ ಸಂಕೆಯ ಮಾತುಗರು ಇಲ್ಲಿ ದಾಕಲಾಗಿದ್ದಾರೆ. ಜಿಲ್ಲೆಯಲ್ಲಿ ಕನ್ನಡ ಬಾಶೆ ಸುಮಾರು 73%ದಶ್ಟು ಇದೆ. ಇದರ ನಂತರ ಇಲ್ಲಿ ಉರ‍್ದು, ತುಳು ಮತ್ತು ತಮಿಳು ಮಹತ್ವದ ಬಾಶೆಗಳಾಗಿವೆ. ಲಂಬಾಣಿಗೆ ಪರಿಗಣಿಸುವಶ್ಟು ಸಂಕೆಯ ಮಾತುಗರು ಇಲ್ಲಿ ಕಾಣಿಸುತ್ತಾರೆ.
***
ಚಿಕ್ಕಮಗಳೂರು ಜಿಲ್ಲೆಯ ಜನಗಣತಿ ಕೊಡುವ ಮಾಹಿತಿ ಆದರಿಸಿದ ಬಾಶೆಗಳ ಮಾಹಿತಿಯನ್ನು ಕೆಳಗೆ ಪಟ್ಟಿಸಿದೆ.
| ಬಾಶೆ | ತಾಯ್ಮಾತು | ಒಟ್ಟು ಮಾತುಗರು | ಗಂಡು | ಹೆಣ್ಣು |
| ಆಸ್ಸಾಮಿ | 40 | 38 | 2 | |
| ಆಸ್ಸಾಮಿ | 37 | 35 | 2 | |
| ಇತರ | 3 | 3 | 0 | |
| ಬೆಂಗಾಲಿ | 110 | 81 | 29 | |
| ಬೆಂಗಾಲಿ | 110 | 81 | 29 | |
| ಡೋಗ್ರಿ | 3 | 2 | 1 | |
| ಡೋಗ್ರಿ | 3 | 2 | 1 | |
| ಗುಜರಾತಿ | 296 | 157 | 139 | |
| ಗುಜರಾತಿ | 254 | 135 | 119 | |
| ಇತರ | 42 | 22 | 20 | |
| ಹಿಂದಿ | 27330 | 14083 | 13247 | |
| ಬಗೇಲಿ/ಬಗೇಲ್‍ಕಂಡಿ | 1 | 1 | 0 | |
| ಬಂಜಾರಿ | 488 | 210 | 278 | |
| ಬದ್ರಾವತಿ | 5 | 3 | 2 | |
| ಬರ‍್ಮವುರಿ/ಗಡ್ಡಿ | 1 | 1 | 0 | |
| ಬೋಜ್ಪುರಿ | 27 | 27 | 0 | |
| ಬುಂದೇಲಿ/ಬುಂದೇಲ್ ಕಂಡಿ | 1 | 1 | 0 | |
| ಹಿಂದಿ | 3678 | 2090 | 1588 | |
| ಲಮಾಣಿ/ಲಂಬಾಡಿ | 22374 | 11342 | 11032 | |
| ಮಾರ‍್ವಾರಿ | 374 | 198 | 176 | |
| ಪಹರಿ | 1 | 1 | 0 | |
| ರಾಜಸ್ತಾನಿ | 327 | 182 | 145 | |
| ಇತರ | 53 | 27 | 26 | |
| ಕನ್ನಡ | 827796 | 412592 | 415204 | |
| ಬಡಗ | 3 | 1 | 2 | |
| ಕನ್ನಡ | 827693 | 412543 | 415150 | |
| ಕುರುಬ/ಕುರುಂಬ | 9 | 4 | 5 | |
| ಇತರ | 91 | 44 | 47 | |
| ಕಾಶ್ಮೀರಿ | 5 | 4 | 1 | |
| ಕಾಶ್ಮೀರಿ | 5 | 4 | 1 | |
| ಕೊಂಕಣಿ | 14744 | 7385 | 7359 | |
| ಕೊಂಕಣಿ | 14584 | 7308 | 7276 | |
| ಕುಡುಬಿ/ಕುಡುಂಬಿ | 50 | 25 | 25 | |
| ನವಾಯಿತಿ | 59 | 29 | 30 | |
| ಇತರ | 51 | 23 | 28 | |
| ಮಯ್ತಿಲಿ | 1 | 1 | 0 | |
| ಮಯ್ತಿಲಿ | 1 | 1 | 0 | |
| ಮಲಯಾಳಂ | 28170 | 13904 | 14266 | |
| ಮಲಯಾಳಂ | 28161 | 13899 | 14262 | |
| ಯರವ | 9 | 5 | 4 | |
| ಮರಾಟಿ | 9879 | 4947 | 4932 | |
| ಮರಾಟಿ | 9817 | 4920 | 4897 | |
| ಇತರ | 62 | 27 | 35 | |
| ನೇಪಾಲಿ | 120 | 68 | 52 | |
| ನೇಪಾಲಿ | 120 | 68 | 52 | |
| ಓಡಿಯಾ | 208 | 118 | 90 | |
| ಓಡಿಯಾ | 197 | 113 | 84 | |
| ಇತರ | 11 | 5 | 6 | |
| ಪಂಜಾಬಿ | 6 | 5 | 1 | |
| ಪಂಜಾಬಿ | 6 | 5 | 1 | |
| ಸಂಸ್ಕ್ರುತ | 25 | 15 | 10 | |
| ಸಂಸ್ಕ್ರುತ | 25 | 15 | 10 | |
| ಸಂತಾಲಿ | 1 | 1 | 0 | |
| ಸಂತಾಲಿ | 1 | 1 | 0 | |
| ಸಿಂದಿ | 2 | 0 | 2 | |
| ಸಿಂದಿ | 2 | 0 | 2 | |
| ತಮಿಳು | 42634 | 21181 | 21453 | |
| ತಮಿಳು | 42632 | 21179 | 21453 | |
| ಇತರ | 2 | 2 | 0 | |
| ತೆಲುಗು | 31700 | 15785 | 15915 | |
| ತೆಲುಗು | 31698 | 15785 | 15913 | |
| ಇತರ | 2 | 0 | 2 | |
| ಉರ‍್ದು | 84138 | 42205 | 41933 | |
| ಉರ‍್ದು | 84131 | 42201 | 41930 | |
| ಇತರ | 7 | 4 | 3 | |
| ಆದಿ | 5 | 2 | 3 | |
| ತಲ್ಗಾಲೊ | 5 | 2 | 3 | |
| ಅರಾಬಿಕ್/ಅರ‍್ಬಿ | 116 | 53 | 63 | |
| ಅರಾಬಿಕ್/ಅರ‍್ಬಿ | 116 | 53 | 63 | |
| ಬಿಲಿ/ಬಿಲೊಡಿ | 87 | 42 | 45 | |
| ಚೊದಾರಿ | 28 | 14 | 14 | |
| ಇತರ | 59 | 28 | 31 | |
| ಬೊಟಿಯ | 52 | 26 | 26 | |
| ಇತರ | 52 | 26 | 26 | |
| ಕೂರ‍್ಗಿ/ಕೊಡಗು | 557 | 286 | 271 | |
| ಕೂರ‍್ಗಿ/ಕೊಡಗು | 189 | 90 | 99 | |
| ಕೊಡವ | 368 | 196 | 172 | |
| ಇಂಗ್ಲೀಶು | ಇಂಗ್ಲೀಶು | 59 | 36 | 23 |
| 59 | 36 | 23 | ||
| ಕೊಮ್ | ||||
| ಕೊಮ್ | 2 | 1 | 1 | |
| 2 | 1 | 1 | ||
| ಕುರುಕ್/ಓರಆನ್ | 1 | 0 | 1 | |
| ಕುರುಕ್/ಓರಆನ್ | 1 | 0 | 1 | |
| ಮಾವೊ | 1 | 1 | 0 | |
| ಮಾವೊ | 1 | 1 | 0 | |
| ಮುಂಡ | 1 | 1 | 0 | |
| ಮುಂಡ | 1 | 1 | 0 | |
| ಟಿಬೆಟನ್ | 2 | 1 | 1 | |
| ಟಿಬೆಟನ್ | 2 | 1 | 1 | |
| ತುಳು | 62829 | 30078 | 32751 | |
| ತುಳು | 62827 | 30077 | 32750 | |
| ಇತರ | 2 | 1 | 1 | |
| ಇತರ | 7041 | 3523 | 3518 |
ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಗಣತಿಯು ಮೂವತ್ಮೂರು ಬಾಶೆಗಳನ್ನು ಪಟ್ಟಿ ಮಾಡಿದೆ. ಇದರೊಟ್ಟಿಗೆ ಇತರ ಎಂಬ ಪರಿಗಣಿಸುವಶ್ಟು ಸಂಕೆಯ ಅಂದರೆ 7,041 ಮಂದಿ ಮಾತುಗರನ್ನು ಹೊಂದಿರುವ ಗುಂಪು ಇದೆ. ಇದು ತುಸು ದೊಡ್ಡ ಸಂಕೆಯಾಗಿರುವುದರಿಂದ ಇದರಲ್ಲಿ ಕನಿಶ್ಟ 5,000 ಮಂದಿ ಮಾತುಗರು ಒಂದು ಬಾಶೆಗೆ ಇರಬಹುದು ಎಂದು ಅಂದಾಜಿಸಿ ಎರಡು ಬಾಶೆಗಳೆಂದು ಲೆಕ್ಕ ಮಾಡಬಹುದು. ಹಾಗಾದರೆ ಚಿಕ್ಕಮಗಳೂರಲ್ಲಿ ಒಟ್ಟು ಮೂವತ್ತಯ್ದು ಬಾಶೆಗಳು ಎಂದಾಗುತ್ತದೆ. ವಾಸ್ತವದಲ್ಲಿ ಇತರ ಗುಂಪಿನಲ್ಲಿ ಇರುವ ಬಾಶೆಗಳಲ್ಲಿ 5,000 ಮಂದಿ ಇರಲಿಕ್ಕಿಲ್ಲ, ಕಂಡಿತವಾಗಿಯೂ ಇನ್ನೂ ಕಡಿಮೆ ಮಂದಿ ಮಾತುಗರು ದಾಕಲಾಗಿರುತ್ತಾರೆ. ಜಿಲ್ಲೆಯಲ್ಲಿ ಒಟ್ಟು ಅಯ್ವತ್ತೊಂಬತ್ತು ತಾಯ್ಮಾತುಗಳನ್ನು ಜನಗಣತಿ ಪಟ್ಟಿ ಮಾಡಿದೆ. ಇದರಲ್ಲಿ ಇತರ ಎಂಬ ಗುಂಪಿನಲ್ಲಿ ಎರಡು ಬಾಶೆಗಳು ಎಂದು ಮೇಲೆ ಲೆಕ್ಕಿಸಿದಂತೆ ಅದರಲ್ಲಿ ತಾಯ್ಮಾತುಗಳು ಕೂಡ ಎರಡು ಎಂದು ಎಣಿಸಿದರೆ ಜಿಲ್ಲೆಯ ತಾಯ್ಮಾತುಗಳ ಸಂಕೆ ಅರ‍್ವತ್ತೊಂದು ಆಗುತ್ತದೆ. ಜಿಲ್ಲೆಯ ಹದಿಮೂರು ಬಾಶೆಗಳ ಒಳಗೆ ಇತರ ಎಂಬ ಗುಂಪನ್ನು ಕಾಣಬಹುದು. ಈ ಹದಿಮೂರನ್ನು ಕಳೆದರೆ ನಲ್ವತ್ತಾರು ತಾಯ್ಮಾತುಗಳನ್ನು ಹೆಸರಿಸಿದೆ ಎಂದಾಗುತ್ತದೆ.
ಚಿಕ್ಕಮಗಳೂರು ಜಿಲ್ಲೆಯ ಜನಸಂಕೆ 11,37,961. ಇದರಲ್ಲಿ ಕನ್ನಡ ಮಾತಾಡುವರು 8,27,796. ಅಂದರೆ 72.743% ಆಗುತ್ತದೆ. ಜಿಲ್ಲೆಯಲ್ಲಿ ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಒಂದೆ ಬಾಶೆ ಕನ್ನಡ ಆಗಿದೆ. ಆನಂತರ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಏಳು ಬಾಶೆಗಳು ಇವೆ. ಉರ‍್ದು – 84,138 (7.393%), ತುಳು – 62,829 (5.521%), ತಮಿಳು – 42,634 (3.746%), ತೆಲುಗು – 31,700 (2.785%), ಮಲಯಾಳಂ – 28,170 (2.475%), ಹಿಂದಿ – 27,330 (2.401%) ಮತ್ತು ಕೊಂಕಣಿ – 14,744 (1.295%). ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಾತುಗರು ಇರುವ ಒಂದೆ ಬಾಶೆ ಮರಾಟಿ ಇದೆ. ಮರಾಟಿ ಮಾತಾಡುವವರು 9,879 (0.868%) ಇದ್ದಾರೆ. ಆನಂತರ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತಾಡುವ ಆರು ಬಾಶೆಗಳು ಇವೆ. ಅವುಗಳೆಂದರೆ ಕೂರ‍್ಗಿ/ಕೊಡಗು, ಗುಜರಾತಿ, ಓಡಿಯಾ, ನೇಪಾಲಿ, ಅರಾಬಿಕ್/ಅರ‍್ಬಿ ಮತ್ತು ಬೆಂಗಾಲಿ. ಆನಂತರ ನೂರಕ್ಕಿಂತ ಕಡಿಮೆ ಮಾತುಗರನ್ನು ಹೊಂದಿರುವ ಹದಿನೇಳು ಬಾಶೆಗಳು ಪಟ್ಟಿಯಲ್ಲಿ ಇವೆ. ಈಗ ಈ ಬಾಶೆಗಳನ್ನು ಕೆಳಗಿನಂತೆ ಗುಂಪಿಸಿ ತೋರಿಸಬಹುದು.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಒಂದು ಲಕ್ಶಕ್ಕಿಂತ ಹೆಚ್ಚ | ಕನ್ನಡ | 8,27,796 | 72.743% |
| ’’ | ಉರ‍್ದು | 84,138 | 7.393% |
| ’’ | ತುಳು | 62,829 | 5.521% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ತಮಿಳು | 42,634 | 3.746% |
| ’’ | ತೆಲುಗು | 31,700 | 2.785% |
| ’’ | ಮಲಯಾಳಂ | 28,170 | 2.475% |
| ’’ | ಹಿಂದಿ | 27,330 | 2.401% |
| ’’ | ಕೊಂಕಣಿ | 14,744 | 1.295% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ಮರಾಟಿ | 9,879 | 0.868% |
| ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು | ಕೂರ‍್ಗಿ/ಕೊಡಗು, ಗುಜರಾತಿ, ಓಡಿಯಾ, ನೇಪಾಲಿ, ಅರಾಬಿಕ್/ಅರ‍್ಬಿ, ಬೆಂಗಾಲಿ | 1,407 | 0.123% |
| ನೂರಕ್ಕಿಂತ ಕಡಿಮೆ | ಮೂವತ್ಮೂರು ಬಾಶೆಗಳು | 293 | 0.025% |
| ಒಟ್ಟು ಮಾತುಗರು | 11,37,961 | 100% |
ಚಿಕ್ಕಮಗಳೂರು ಜಿಲ್ಲೆಯ ತಾಯ್ಮಾತುಗಳನ್ನು ಗಮನಿಸಿದಾಗ ಜಿಲ್ಲೆಯ ಬಾಶೆಗಳ ಪಟ್ಟಿಯಲ್ಲಿ ತುಸು ಬದಲಾವಣೆ ಆಗುತ್ತದೆ. ಹಿಂದಿಯಲ್ಲಿ ದಾಕಲಾದ ಒಟ್ಟು ಮಾತುಗರು 27,330. ಆದರೆ ಅದರೊಳಗೆ ಹಿಂದಿ ಮಾತಾಡುವ 3,678 ಇದ್ದಾರೆ. ಇದು ಚಿಕ್ಕಮಗಳೂರು ಜಿಲ್ಲೆಯ ಹಿಂದಿಯ 13.457% ಮತ್ತು ಜಿಲ್ಲೆಯ 0.323% ಆಗುತ್ತದೆ. ಲಮಾಣಿ ಹೆಸರಿನಲ್ಲಿ 22,374 ಮಂದಿ ಮತ್ತು ಬಂಜಾರಿ ಹೆಸರಿನಲ್ಲಿ 488 ಮಂದಿ ಇದ್ದು ಇವೆರಡನ್ನು ಸೇರಿಸಿದರೆ ಲಂಬಾಣಿ ಮಾತಾಡುವ 22,862 ಆಗುತ್ತಾರೆ. ಇದು ಜಿಲ್ಲೆಯ ಹಿಂದಿಯ 83.651% ಮತ್ತು ಜಿಲ್ಲೆಯ 2.009% ಆಗುತ್ತದೆ.
ಈ ಬದಲಾವಣೆಯನ್ನು ಮತ್ತು ತಾಯ್ಮಾತುಗಳ ಸಂಕೆಗಳನ್ನು ಗಮನದಲ್ಲಿ ಇಟ್ಟುಕೊಂಡು ಮೇಲೆ ಕೊಟ್ಟಿರುವ ಜಿಲ್ಲೆಯ ಬಾಶೆಗಳ ಪಟ್ಟಿಯನ್ನು ಮರುರೂಪಿಸಬಹುದು.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಒಂದು ಲಕ್ಶಕ್ಕಿಂತ ಹೆಚ್ಚ | ಕನ್ನಡ | 8,27,693 | 72.734% |
| ’’ | ಉರ‍್ದು | 84,131 | 7.393% |
| ’’ | ತುಳು | 62,827 | 5.521% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ತಮಿಳು | 42,632 | 3.746% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ತೆಲುಗು | 31,698 | 2.785% |
| ’’ | ಮಲಯಾಳಂ | 28,161 | 2.474% |
| ’’ | ಲಂಬಾಣಿ | 22,862 | 2.009% |
| ’’ | ಕೊಂಕಣಿ | 14,584 | 1.281% |
| ಮರಾಟಿ | 9,817 | 0.862% | |
| ಇತರ | 7,041 | 0.618% | |
| ಹಿಂದಿ | 3,678 | 0.323% |
ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.
| ಪ್ರದೇಶ | ಜಿಲ್ಲೆಯ ಜನಸಂಕೆ | ಬಾಶೆ | ಮಾತುಗರು | ಜಿಲ್ಲೆಯ % | ಜಿಲ್ಲೆಯಲ್ಲಿ ಸ್ತಾನ |
| ಚಿಕ್ಕಮಗಳೂರು | 11,37,961 | ಕನ್ನಡ | 8,27,693 | 72.734% | 1 |
| ಉರ‍್ದು | 84,131 | 7.393% | 2 | ||
| ತುಳು | 62,827 | 5.521% | 3 | ||
| ತಮಿಳು | 42,632 | 3.746% | 4 | ||
| ತೆಲುಗು | 31,698 | 2.785% | 5 | ||
| ಮಲಯಾಳಂ | 28,161 | 2.474% | 6 | ||
| ಲಂಬಾಣಿ | 22,862 | 2.009% | 7 | ||
| ಕೊಂಕಣಿ | 14,584 | 1.281% | 8 | ||
| ಮರಾಟಿ | 9,817 | 0.862% | 9 | ||
| ಇತರ | 7,041 | 0.618% | 10 |






0 Comments