ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಎಮ್ಮಿಯವರ ಕವಿತೆ – ಕನ್ನಡದ ಬೆಳಕಲ್ಲಿ ಬದುಕು ನೀ ಕಂದಾ…

ಬಸವರಾಜ ಎಮ್ಮಿಯವರ

ಅಮ್ಮ ಹೇಳಿದ್ದಳು
ಕನ್ನಡದ ಬೆಳಕಲ್ಲಿ ಬದುಕು ನೀ ಕಂದಾ

ಅವಳು ನನಗೆ
ಕೈ ತುತ್ತು ಇಟ್ಟಿದ್ದು
ಕನ್ನಡದಲ್ಲಿಯೆ
ಹಣೆಗೆ ಮುತ್ತಿಟ್ಟಿದ್ದು
ಕನ್ನಡದಲ್ಲಿಯೆ
ಜೋಗುಳ ಹಾಡಿದ್ದು
ಕನ್ನಡದಲ್ಲಿಯೆ

ಅವಳು ತನ್ನ
ಆಸೆ, ನಿರಾಸೆ,
ಬಯಕೆ, ಬೇಡಿಕೆ, ಭೀತಿ ಇತ್ಯಾಧಿ ಇತ್ಯಾಧಿಗಳನ್ನೆಲ್ಲ
ತನ್ನ ಒಡಲೊಳು ಹತ್ತಿಕ್ಕಿ
ನಕ್ಕಿದ್ದು ಮಾತ್ರ
ಕನ್ನಡದಲ್ಲಿಯೆ
ಮತ್ತೊಮ್ಮೆ ಹೇಳಿದಳು
ಕನ್ನಡದ ಬೆಳಕಲ್ಲಿ ಬದುಕು ನೀ ಕಂದಾ

ಇತ್ತೀಚೆಗೆ ಅವಳು
ನನ್ನದೊಂದು ಪ್ರಶ್ನೆಗೆ?
ಮಾತು ಬಾರದೇ
ನಗದೆ ನಿಂತಿದ್ದಾಳೆ!
ನಾನವಳಿಗೆ ಕೇಳಿಯೇ ಬಿಟ್ಟೆ
ಬರೀ ನಕ್ಕರೆ ನಡೆದೀತೇನ-ಅಮ್ಮ ಕನ್ನಡದಲ್ಲಿ
ಬದುಕಬೇಕಲ್ಲವೆ? ಯಾರ ಹಂಗೂ ಇಲ್ಲದೆ?
ನಮ್ಮವರ ಜೊತೆಯಲ್ಲಿ – ನಮ್ಮದೆ ನಾಡಿನಲ್ಲಿ

‘ಕನ್ನಡದ ಬೆಳಕಲ್ಲಿ ಬದುಕು ನೀ ಕಂದಾ’ ಅಂದರೆ ಸಾಕೇ?

‍ಲೇಖಕರು Admin

15 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading