ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸಲಿಂಗಯ್ಯ ಹಿರೇಮಠ ಇನ್ನಿಲ್ಲ…

ಡಿ ಎಸ್ ಚೌಗಲೆ

ಖ್ಯಾತ ಜಾನಪದ ಗಾಯಕ, ಆಪ್ತ ಮಿತ್ರ ಬಸಲಿಂಗಯ್ಯ ಹಿರೇಮಠ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರೆಂಬ ಸುದ್ದಿ ಬರಸಿಡಿಲಂತೆ ಎರಗಿದೆ.

ಶ್ರೀಕೃಷ್ಣ ಪಾರಿಜಾತ, ಸಂಗ್ಯಾ ಬಾಳ್ಯಾ,ರಾಧಾನಾಟ ಸಣ್ಣಾಟಗಳ ಹಾಡುಗಾರಿಕೆ, ಅಭಿನಯ ಮತ್ತು ಸಂಪಾದನೆ ಮಾಡಿದ ಒಬ್ಬ ಶ್ರೇಷ್ಠ ಗಾಯಕ. ಬಸವರಾಜ ಮಲಶೆಟ್ಟಿ ಅವರ ನಂತರ ಕರಾರುವಕ್ಕಾಗಿ ಮಾತಾಡಬಲ್ಲ ತಜ್ಞ.

ನನ್ನ ದಿಶಾಂತರ ಮತ್ತು ವಖಾರಿಧೂಸ ನಾಟಕಗಳಿಗೆ ಸಂಗೀತ ನಿರ್ದೇಶನ ನೀಡಿದ ಗೆಳೆಯನ ಆ ದಿನಗಳ ನೆನಪುಗಳು ದಟ್ಟವಾಗಿ ಒತ್ತೊತ್ತಿ ಬರುತ್ತಿವೆ. ಈಗ ಆತ ನೆನಪು ಮಾತ್ರ ಎಂಬುದು ಸಹಿಸಲಾಗದ ದುಃಖವನ್ನು ನೀಡಿದೆ.

ಇತ್ತೀಚೆಗೆ ವಿಶ್ವೇಶ್ವರಿ ಚುನಾವಣೆ ನಿಂತ ಸಂದರ್ಭದಲ್ಲಿ ಅವರ ಮನೆಗೆ ಹೋದಾಗ ಅನೇಕ ಕನಸುಗಳನ್ನು ಹೇಳಿಕೊಂಡಿದ್ದ ಬಸಣ್ಣ ಈಗ ಅವುಗಳನ್ನು ಅರ್ಧಕ್ಕೆ ನಿಲ್ಲಿಸಿ ಹೋದ.

ಭಾವಪೂರ್ಣ ಶ್ರದ್ಧಾಂಜಲಿ ಬಸಣ್ಣ

‍ಲೇಖಕರು Admin

9 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading