ಬಲೂನು ಮಾರುವ ಕಣ್ಣುಗಳು & ಜಾಗತೀಕರಣ

ಜಿ ಕೆ ನವೀನ್ ಕುಮಾರ್
ಬೆಲೂನಿನ ಒಳಗೆ ಉಸಿರು ತುಂಬಿ
ಪಟಾರನೆ ಕೈಗೆ ಬಡಿಯುತ್ತಾ…
ಮಕ್ಕಳನು ಆಕರ್ಷಿಸುತ್ತಿದ್ದ ಅವನು,
ಇದೀಗ ಉಸಿರಾಡಲು ಹೆಣಗುತ್ತಿದ್ದಾನೆ.
ಎಷ್ಟೋ ಮಕ್ಕಳ ಕೈಗೆ
ತನ್ನ ಉಸಿರನ್ನೇ ದಾರೆ ಎರೆದ ಅವನ
ಗಂಟಲು… ಸ್ತಬ್ಧವಾಗಿದೆ ಸದ್ದಿಲ್ಲದೇ.ಊರು ಊರು ಸುತ್ತುತಾ…
ಎಲ್ಲರೊಳಗೆ ತಾನು ಒಂದಾಗುತ್ತಾ,,,
ಲಂಬಾಣಿಯರಿಗೆ-ಲಂಬಾಣಿ ಭಾಷೆಯಲ್ಲಿ
ಕುಂದಾಪುರದವರಿಗೆ-ಕುಂದಾಪುರ ಭಾಷೆಯಲ್ಲಿ
ಬೀದರ್ ಅವರಿಗೆ ಬೀದರ್ ಭಾಷೆಯಲ್ಲಿ
ಹೋದಲ್ಲೆಲ್ಲ, ತನ್ನೂರು ಎಂದುಕೊಂಡು
ಅವರವರ ಭಾವಕ್ಕೆ ತಕ್ಕಂತೆ ಬದಲಾದವನೀತ.
ಪಟಾರನೆ ಕೈಗೆ ಬಡಿಯುತ್ತಾ…
ಮಕ್ಕಳನು ಆಕರ್ಷಿಸುತ್ತಿದ್ದ ಅವನು,
ಇದೀಗ ಉಸಿರಾಡಲು ಹೆಣಗುತ್ತಿದ್ದಾನೆ.
ಎಷ್ಟೋ ಮಕ್ಕಳ ಕೈಗೆತನ್ನ ಉಸಿರನ್ನೇ ದಾರೆ ಎರೆದ ಅವನ
ಗಂಟಲು… ಸ್ತಬ್ಧವಾಗಿದೆ ಸದ್ದಿಲ್ಲದೇ.ಊರು ಊರು ಸುತ್ತುತಾ…
ಎಲ್ಲರೊಳಗೆ ತಾನು ಒಂದಾಗುತ್ತಾ,,,
ಲಂಬಾಣಿಯರಿಗೆ-ಲಂಬಾಣಿ ಭಾಷೆಯಲ್ಲಿ
ಕುಂದಾಪುರದವರಿಗೆ-ಕುಂದಾಪುರ ಭಾಷೆಯಲ್ಲಿ
ಬೀದರ್ ಅವರಿಗೆ ಬೀದರ್ ಭಾಷೆಯಲ್ಲಿ
ಹೋದಲ್ಲೆಲ್ಲ, ತನ್ನೂರು ಎಂದುಕೊಂಡು
ಅವರವರ ಭಾವಕ್ಕೆ ತಕ್ಕಂತೆ ಬದಲಾದವನೀತ.
ಅದೆಲ್ಲಿಂದಲೋ ಬಂದ ಹೈಡ್ರೋಜನ್ನಿನ ದೊಡ್ಡ ಡಬ್ಬಿ
ಬಲೂನನ್ನು ಆಕಾಶಕ್ಕೆ ಹಾರುವಂತೆ ಮಾಡಿತು
ಆಗಲೇ ಇವನ ಉಸಿರಿಗೆ ಬೆಲೆ ಹೋದದ್ದು.
ಕೈಲಿ ಹಿಡಿದು ಆಗಸಕ್ಕೆ ಹಾರಿಸುವ ಬಲೂನು
ಮಕ್ಕಳಿಗೆ ಇಷ್ಟವಾಯಿತು,
ಆದರೆ……
ಆ ಬಲೂನಿನ ಮೇಲ್ಮೈಯನ್ನು ಸವರಿ,
ಅದರ ಸ್ಪರ್ಶವನ್ನು ಸವಿಯುವ ಗೋಜಿಗೆ ಹೋಗಲಿಲ್ಲ ಮಕ್ಕಳು
ಅದೇ ಅವನ ಊಟಕ್ಕೆ ಕುತ್ತಾಯಿತು.
ಬಲೂನಿನ ವ್ಯವಸ್ಥೆಗೂ
ಜಾಗತೀಕರಣದ ದೃಷ್ಟಿ ತಾಗಿತು,
ಭಾವನಾತ್ಮಕ ಮನದ ಬಲೂನು ಮಾರುವವ
ಕೊಚ್ಚಿ ಹೋದ…
ಇನ್ಯಾವಾಗ ಅವನ ಉಸಿರಿಗೆ ಬೆಲೆ ಬರುವುದೋ?





0 Comments