ಕು.ಸ. ಮಧುಸೂದನ
ಕೂಗಿದೆ ಜನಗಳ
ಬೆಂಕಿ ಆರಿಸುವುದಿದೆ ಬನ್ನಿ
ನರಪಿಳ್ಳೆ ಹಣಕಲಿಲ್ಲ
ಕರೆದೆ ಜನಗಳ
ಬೆಂಕಿ ಹಾಕುವುದಿದೆ ಬನ್ನಿ
ಜನಸಾಗರವೇ ಸೇರಿತು!
ಕೂಗಿದೆ ಜನಗಳ
ಕುಸಿಯುತಿದೆ ಮನೆ ದುರಸ್ತಿ ಮಾಡೋಣ, ಬನ್ನಿ
ಒಂದು ನೊಣವೂ ಸುಳಿಯಲಿಲ್ಲ

ಕರೆದೆ ಜನಗಳ
ಕೆಡವುವ ಕೆಲಸವುಂಟು ಮನೆಗಳ,ಬನ್ನಿ
ಜನಜಾತ್ರೆಯೇ ನೆರೆದಿತು!
ಕೂಗಿದೆ ಜನಗಳ
ಸೋರುತಿಹುದು ಛಾವಣಿ ಹೆಂಚು ಹೊದಿಸೋಣ,ಬನ್ನಿ
ಒಬ್ಬನೂ ತಲೆ ಹಾಕಲಿಲ್ಲ
ಕರೆದೆ ಜನಗಳ
ಉರಿಯುತಿದೆ ಮನೆಗಳ ಗಳಇರಿಯೋಣ,ಬನ್ನಿ
ಜನಸಾಗರ ಮುಗಿಬಿದ್ದಿತು!






ಸತ್ಯ ಸರ್… ಇದು ವಾಸ್ತವ!
katu vasthava sir