ಬದಲಾಯಿಸುತ್ತೇನೆ ಮುಖವಾಡಗಳನ್ನು ಬಟ್ಟೆಗಳಂತೆ..

ಒಂದಾನೊಂದು ಕಾಲದಲ್ಲಿ…    

Gabriel Okara                

shivakumar mavali

ಕನ್ನಡಕ್ಕೆ : ಶಿವಕುಮಾರ್ ಮಾವಲಿ

ಮಗುವೇ ಕೇಳು, ಒಂದಾನೊಂದು ಕಾಲದಲ್ಲಿ
ಇದೇ ಜನ ತಂತಮ್ಮ ಹೃದಯದಾಳದಿಂದ
ಮತ್ತು ಕಂಗಳಿಂದ ನಗುತ್ತಿದ್ದರು.
ಆದರೀಗ ಈ ಜನ ಕೇವಲ ಹಲ್ಲುಗಳಿಂದ ಮಾತ್ರ ನಗುತ್ತಾರೆ
ಮತ್ತವರ ಮಂಜುಕವಿದ ಕಣ್ಣುಗಳು
ನನ್ನ ನೆರಳಿನ ಹಿಂದೆ ಅದೇನನ್ನೋ ತಡಕಾಡುತ್ತಲೇ ಇರುತ್ತವೆ.

hands in linesಅದೊಂದು ಕಾಲವಿತ್ತು ಮಗನೇ,
ಈ ಜನ ಹಸ್ತಲಾಘವನ್ನೂ
ತಮ್ಮ ಹೃದಯಾಂತರಾಳದಿಂದಲೇ ಮಾಡುತ್ತಿದ್ದರು.
ಆದರೀಗ ಅದೆಲ್ಲ ಮಾಯವಾಗಿ
ಹೃದಯಹೀನರಾಗಿ ಕೈಕುಲುಕುತ್ತಾರೆ ಮತ್ತು
ತಮ್ಮ ಎಡಗೈಯಿಂದ ನನ್ನ ಖಾಲೀ ಕಿಸೆಯನ್ನು ಶೋಧಿಸುತ್ತಾರೆ.

‘ ನಿಮ್ಮ ಮನೆಯೆಂದೇ ಭಾವಿಸಿ’, ‘ ಮತ್ತೊಮ್ಮೆ ಬನ್ನಿ’
ಎಂದವರು ಹೇಳುತ್ತಾರೆ ನಿಜ.
ನಾನು ಮತ್ತೊಮ್ಮೆ ಬಂದು
ನನ್ನ ಮನೆಯಂತೆಯೇ ಭಾವಿಸಿದೆ ಎಂದಿಟ್ಟುಕೋ,
ಮೊದಲ ಸಲ, ಎರಡನೆ ಸಲ  ಸಿಕ್ಕೀತು ಸತ್ಕಾರ.
ಮೂರನೆ ಬಾರಿ ಹೋದಾಗ ಮುಚ್ಚಿದ ಬಾಗಿಲುಗಳೇ ನನಗೆ ಹೇಳುತ್ತವೆ ಧಿಕ್ಕಾರ!

ಹಾಗಾಗಿ, ನಾನೂ ಕೆಲವನ್ನು ಕಲಿತಿದ್ದೇನೆ ಮಗನೇ,
ಬದಲಾಯಿಸುತ್ತೇನೆ ಮುಖವಾಡಗಳನ್ನು ಬಟ್ಟೆಗಳಂತೆ.
‘ಮನೆಯ ಮುಖ’, ‘ ಕಛೇರಿಯ ಮುಖ’ ‘ಬೀದಿಗೊಂದು ಮುಖ’ , ‘ಆತಿಥ್ಯದ ಮುಖ’ ಅಗತ್ಯಬಿದ್ದಾಗ ಎಲ್ಲವುಗಳ ‘ಮಿಶ್ರಣ ಮುಖ’
ಜೊತೆಗೆ ಆಯಾ ಮುಖಗಳಿಗೆ ಸರಿಹೊಂದುವ ನಗುವನ್ನೂ ರೂಢಿಸಿಕೊಂಡಿದ್ದೇನೆ
ಗೋಡೆಯ ಮೇಲಿನ ‘ಸ್ಥಿರ ಚಿತ್ರ’ ದ ನಗುವಿನ ಹಾಗೆ.

ನಾನೂ ಕೇವಲ ಹಲ್ಲುಗಳಿಂದ ನಗುವುದನ್ನು ಕಲಿತಿದ್ದೇನೆ ಮತ್ತು ಹೃದಯದಿಂದಲ್ಲದೆ ಕೇವಲ ಹಸ್ತಲಾಘವ ಮಾಡುತ್ತೇನೆ …
ನಾನೂ ಕಲಿತಿದ್ದೇನೆ – ‘ಮತ್ತೆ ಸಿಗದಿದ್ದರೆ ಸಾಕು ಈ ಮಹರಾಯ’  ಎಂದುಕೊಳ್ಳುತ್ತಲೇ ‘ಗುಡ್ ಬಾಯ್’ ಹೇಳುವುದನ್ನು.
‘ ನಿಮ್ಮನ್ನು ಭೇಟಿಯಾಗಿದ್ದು ಸಂತಸ ತಂದಿತು ‘ ಎಂದು ಸಂಕಟದಿಂದಲೇ  ಹೇಳುವುದನ್ನು.
ನಿಮ್ಮೊಂದಿಗೆ ಮಾತಾಡಿ ‘ಬೋರ್’ ಹೊಡೆದಿದ್ದರೂ,
‘ ನಿಮ್ಮೊಂದಿಗಿನ ಸಂವಾದ ಖುಷಿ ಕೊಟ್ಟಿತು’ ಎನ್ನುವುದನ್ನು.

ಆದರೆ ಕೇಳು ಮಗನೇ,
ಒಂದಾನೊಂದು ಕಾಲದಲ್ಲಿ ನಿನ್ನಂತೆ ನಾನಿದ್ದಾಗ
ನಾನೇನಾಗಿದ್ದೆನೋ ಹಾಗೆಯೇ ನಾನಾಗಬೇಕೆಂಬ ಆಸೆ ನನಗೆ.
ನನ್ನನ್ನು ‘ಮೌನಿ’ ಯಾಗಿಸುವ ಈ ಎಲ್ಲ ಸಂಗತಿಗಳನ್ನು ನಾ ಮರೆಯಬೇಕಿದೆ.
ನಕ್ಕಾಗ ಕನ್ನಡಿಯಲ್ಲಿ ಹಾವಿನ ವಿಷದ ಹಲ್ಲುಗಳಂತೆ ಕಾಣುವ
ಈ ನನ್ನ ಹಲ್ಲುಗಳನ್ನು ಮರೆಮಾಚಿ ನಗುವುದು ಹೇಗೆ
ಎಂಬುದನ್ನು ನಾನು ಪುನಃ ಕಲಿಯಬೇಕು.

ನನಗದನ್ನು ಕಲಿಸಿಕೊಡು ಮಗು,
ನಗುವುದು ಹೇಗೆಂಬುದನು ; ಒಂದಾನೊಂದು ಕಾಲದಲ್ಲಿ ನಾನೂ ನಿನ್ನಂತೆ ಇದ್ದಾಗ
ನಕ್ಕು ಸಂಭ್ರಮಿಸಿದ ಪರಿಯನ್ನು
ನನಗೀಗ ಕಲಿಸಿಕೊಡು ನೀನು…

Once Upon a Time

Once upon a time, son,
they used to laugh with their hearts
and laugh with their eyes:
but now they only laugh with their teeth,
while their ice-block-cold eyes
search behind my shadow.

group line artThere was a time indeed
they used to shake hands with their hearts:
but that’s gone, son.
Now they shake hands without hearts
while their left hands search
my empty pockets.

‘Feel at home!’ ‘Come again’:
they say, and when I come
again and feel
at home, once, twice,
there will be no thrice-
for then I find doors shut on me.

So I have learned many things, son.
I have learned to wear many faces
like dresses – homeface,
officeface, streetface, hostface,
cocktailface, with all their conforming smiles
like a fixed portrait smile.

And I have learned too
to laugh with only my teeth
and shake hands without my heart.
I have also learned to say,’Goodbye’,
when I mean ‘Good-riddance’:
to say ‘Glad to meet you’,
without being glad; and to say ‘It’s been
nice talking to you’, after being bored.

But believe me, son.
I want to be what I used to be
when I was like you. I want
to unlearn all these muting things.
Most of all, I want to relearn
how to laugh, for my laugh in the mirror
shows only my teeth like a snake’s bare fangs!

So show me, son,
how to laugh; show me how
I used to laugh and smile
once upon a time when I was like you.

‍ಲೇಖಕರು Admin

August 15, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: