ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಣ್ಣಬಣ್ಣದ ನಂಟು!!

-ಪ್ರಕಾಶ್‍ ಕೊಡಗನೂರ್

೧ .ಬಣ್ಣಬಣ್ಣದ ನಂಟು!!

ಜಮೀನ್ದಾರನಿಗೆ
ಕೂಲಿಯಾಳುಗಳು

ಬಂಡವಾಳಶಾಹಿಗೆ
ಕಾರ್ಮಿಕರು

ಅಧಿಕಾರಿಗೆ
ನೌಕರರು

ರಾಜಕಾರಣಿಗೆ
ಮತದಾರರು

ಗುರುವಿಗೆ
ಶಿಷ್ಯರು

ನಾಯಕನಿಗೆ
ಅನುಯಾಯಿಗಳು

ಖ್ಯಾತನಿಗೆ
ಅಭಿಮಾನಿಗಳು

ಕಲಾವಿದನಿಗೆ
ರಸಿಕರು

ದೇವರಿಗೆ
ಭಕ್ತರು

ಜ್ಯೋತಿಷಿಗೆ
ಮೂಢರು

ಬಣ್ಣಬಣ್ಣದ ನಂಟು
ಇಲ್ಲೇನೋ ಉಂಟು

ಇದೇ ಬದುಕೆಂಬ
ಮಾಯೆಯ ಅಂಟು

ಹದವಿರಲು
ಸಮರಸವುಂಟು

ಲಯಗೆಡಲು
ಭವದೊಡಲೇ ಕಗ್ಗಂಟು

೨ .ಸಿಕ್ಕು

ಕಾಡೆಂದರೆ
ಕಾಡೂ ಅಲ್ಲ;
ಊರೆಂದರೆ
ಊರೂ ಅಲ್ಲ!

ನಾಗರಿಕರೆಂದರೆ
ನಾಗರಿಕರೂ ಅಲ್ಲ;
ಅನಾಗರಿಕರೆಂದರೆ
ಅನಾಗರಿಕರೂ ಅಲ್ಲ!

ಮುಗ್ಧರೆಂದರೆ
ಮುಗ್ಧರೂ ಅಲ್ಲ ;
ದುಷ್ಟರೆಂದರೆ
ದುಷ್ಟರೂ ಅಲ್ಲ!

ಲೀಡರುಗಳೋ…
ಸ್ವಹಿತಾಸಕ್ತಿಯ
ಮರಿ ಪುಢಾರಿಗಳು!

ಜೊತೆಗೆ
ತರಹೇವಾರಿ
ಜಾಲತಾಣದ
ಕೊಳಕು
ಕಂಡುಂಡ
ಕಣ್ಮನಗಳಿಗೆ
ಒಳ್ಳೆಯದ್ದೂ
ಕೆಟ್ಟದಾಗೇ
ಕಾಣುವ
ಕಾಮಾಲೆ
ಅಡರಿಕೊಂಡಿದೆ!

ಇಂಥ
ವಿಚಿತ್ರತಾಣದ
ತಾಪತ್ರಯಗಳ ನಡುವೆ
ಸೃಜನಶೀಲತೆ
ಸವಾಲಿನ ಕೆಲಸ!

ನನ್ನದೋ…
ಜೀವನ್ಮರಣದ
ನಡುವಿನ ಒದ್ದಾಟ!!

‍ಲೇಖಕರು Admin

27 July, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading