ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮಿಬ್ಬರ ಮುಖವಾಡಗಳು

-ಬಸವಣ್ಣೆಪ್ಪ ಕಂಬಾರ

ಮುಖವಾಡಗಳು

ಕಣ್ಣಾಗ ಕಣ್ಣಿಟ್ಟು ದಿಟ್ಟಿಸಿ
ನೋಡುತ್ತಿರುವಾಗ ಎಕದಮ್ಕಿಲೇ
ನಮ್ಮಿಬ್ಬರ ಮುಖವಾಡಗಳು
ಫಕ್ಕನೆ ಕಳಚಿ ಬೀಳಬೇಕೆ..?
ಬಿದ್ದು,
ಅದಲು ಬದಲಾಗಿ
ಗದ್ದಕ್ಕೆ ಕೈ ಹಚ್ಚಿ, ಕಣ್ಣ ಕಿಸಿದು ನೊಡುತ ಕುಳಿತೇವು
ನಾನು ನಿನ್ನ ನೋಡುತ್ತಿದ್ದರೆ
ನಿನ್ನ ಮುಖವಾಡ ನನ್ನೆ ಗುರ್ರಾಯಿಸುತಿತ್ತು
ಹಸಿದ ಹದ್ದೊಂದು ಕಣ್ಣು ಗುಡ್ಡೆ ಕಿತ್ತು ತಿನ್ನುವಂತೆ
ರೆಪ್ಪೆ ಕೂದಲು ಎಣಿಸುವ ಧೀಮಂತೆ
ನಾ ಕಣ್ಣು ಮಿಟಿಕಿಸಿದರೆ, ಆಕಳಿಸಿದರೆ
ನಿನ್ನದು ಭರಪೂರ ನಿದ್ದೆ, ಗೊರಕೆಯ ತಾರಕ
ನಿದ್ದೆಗಣ್ಣಲ್ಲಿ ಎಂದೊ ತಿಂದದ್ದು ಇಂದು ಚಪ್ಪರಿಸುತ್ತ
ಹೊಲಸು ಗಾಳಿ ಹೊರಹಾಕಿ ಗೊಳ್ಳೆಂದು ನಕ್ಕೇವು
ಯಾರಾದರು ಬಂದು ನೋಡುವ ಮುನ್ನ
ಮುಖವ ಸೇರಿರಿ
ಇದು ಪಾರ್ಕು ಗೂರ್ಖಾನ ಕಣ್ಣು ನಮ್ಮ ಮೇಲಿದೆ
ಬನ್ನಿ ಇನ್ನು ಯಾಕೆ ಬಿದ್ದಿರಿ ನೆಲದ ಮೇಲೆ..?
ಬೇಸತ್ತು
ನನ್ನ ಮುಖವಾಡ ಅವಳು
ಅವಳದು ನಾ ತೊಟ್ಟು
ಮುಖಾಮುಖಿಯಾದೆವು
ಅರೇ ಇವಳು ಅವಳಲ್ಲ…
ನಾನು ಅವನಲ್ಲ..
ಮುಖದ ತುಂಬ ದಿಗಿಲು
ಇಬ್ಬರು ಎಷ್ಟು ಅಪರಿಚಿತರೆಂದರೆ..
ಇಷ್ಟು ದಿನ ಕಂಡ ಖರೋಖರ ಒಂದು ಅಲ್ಲ
ದುಷ್ಟತೆಯನ್ನು ದಪ್ಪ ಚರ್ಮವಾಗಿರಿಸಿಕೊಂಡಿರುವ
ನಮ್ಮ ಮುಖವಾಡಗಳು
ನಮಗೇಕೆ ಮೋಸಮಾಡಿದವು..?
ಇನ್ನು ಯಾವ ಕನ್ನಡಿ ನೋಡಿ
ನಾವು ಖರೋಖರ ತಿಳಿಯಬೇಕೋ…..?

‍ಲೇಖಕರು Admin

27 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading