ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಡವನ ಬವಣೆ

ಮಹಾದೇವಿ ಪೂಜಾರಿ ಕರಗಾಂವ 

ಕುರಿ ಕಾಯುವ ಕಡು ಬಡವ
ಮಳೆಗಾಲದ ಮಳೆಯಲಿ ಮಿಂದಿರುವ
ನಿನ್ನ ನೋಡಿ ನನಗೆ ನೆನಪಾಯಿತು
ಬಡವ ಬದುಕಲೆ ಬೇಕು ಬೆಂದರು
ನಡುರಾತ್ರಿಯಲ್ಲಿ ನಿಂತಲ್ಲೆ ನಡುಗಿದೆ

ಮುದ್ದಾದ ಮೇಕೆ ಮರಿಯನ್ನು
ಮೈಗೊತ್ತಿಕೊಂಡು ಮುತ್ತೊಂದನ್ನು
ಕೊಟ್ಟು ಕರಿಕಂಬಳಿಯಲ್ಲಿ ಕೂರಿಸಿ
ಮಳೆರಾಯನ ಮುಖ ಮಿಟುಕಿಸಿದನು

ಬೆಳಗಾಗುವ ಬೆಳಕನ್ನು ಬಯಸಿ
ಸಂಸಾರದ ಸಂತೆಯನ್ನು ಸರಿದೂಗಿಸುವ
ಆಲೋಚನೆಯ ಆಕ್ಷೇಪಣೆ ಆಲಿಸಿ
ಹೊಸತನದ ಹೂರುಪನ್ನು ಹಂಬಲಿಸಿದನು

ಕತ್ತಲೆಯ ಕಾಡಲ್ಲಿ ಕೆಟ್ಟು ಕನಸು
ಬಿದ್ದಂತೆ ಭಾಸವಾಯಿತು ಬಾಳಲ್ಲಿ
ಕಣ್ಣಿನ ಕೆರೆಯಲ್ಲಿ ಕಣ್ಣಿರು ಕಾಣಿಸುವ
ಮುದ್ದಾದ ಮುಖದಲ್ಲಿ ಮುನಿಸೊಂದು ಮೂಡಿತ್ತು

‍ಲೇಖಕರು Avadhi

21 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading