ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಡಕಲು ಗುಬ್ಬಿಯ ಕುರಿತು..

ಶಿವಯೋಗಿ ಕಳ್ಳಿಮಠ

ಬಂದೂಕಿನ‌ ಎದುರು
ಬರಿಗೈಲಿ ನಿಂತದ್ದನಲ್ಲಾ
ಎದೆ ತೆರೆದು.

ಸುಳ್ಳಿನ ಬಟ್ಟೆ ಅಂಗಡಿ
ಎದಿರು ಸತ್ಯ ನೇಯುತ್ತಿದ್ದನಲ್ಲ.
ಹೊರಗೆ
ಹೇಗೋ ಹಾಗೆ
ಒಳಗೆ ಚರಕ ತಿರುಗುತ್ತಿತ್ತಲ್ಲಾ..

ತಾನೇ ಪಶು
ತನ್ನ ಜೀವನವೇ ಕಮ್ಮಟ.
ಕುಲುಮೆಯಲ್ಲಿ ಕಾದು
ದಪ‌ ದಪ ಬಡಿಸಿಕೊಂಡು
ಮತ್ತಷ್ಟು ..
ದಿನ ದಿನ ಮನುಷ್ಯನಾಗುತ್ತಿದ್ದನಲ್ಲ

ಹಂಗಿನ ಅನ್ನದ ಮುಂದೆ
ಹಸಿದು ಸುಮ್ಮನೆ
ಕೂತಿದ್ದ ನೋಡು.

ಖುದ್ದು ಬಟ್ಟೆ ನೂತು
ಅರಬೆತ್ತಲೆ ತಿರುಗಿ.
ಚಪ್ಪಲಿ ಹೊಲಿದು
ಬರಿಗಾಲಲ್ಲಿ ನಡೆದು
ವಾದ ಕಲಿತು
ಮೌನ ಆಚರಿಸಿದನಲ್ಲ.

ರಾಮನ ಭಜಿಸಿ
ಕ್ರಿಸ್ತನ ಅಪ್ಪಿ
ತಾನೆ ಮುದಾಮ್
ದಿನ ದಿನ ಸಿಲುಬೆಗೇರಿದ
ಬಡಕಲು ಗುಬ್ಬಿ.

ಹೃದಯ, ರಕ್ತದ ಚಲನೆ
ಇದ್ದೂ
ಮಾನವನಾಗಿದ್ದವನ
ಕೂಗಿ
ಕರೆಯುವುದರೊಳಗೆ
ನೆಡೆದ ಹೋದ ನೋಡಿ
ಕಣ್ಮುಂದಿನ ವಿಸ್ಮಯದಂತೆ.

‍ಲೇಖಕರು Admin

26 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading