ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಟ್ಟೆಯೊಳಗಿನ ಬೆಂಕಿ ಸುಡುತ್ತಿದೆ

ಹಸಿವಿನ ದಾಹ

ಸುರೇಶ್ ರಾಜಮಾನೆ


ಕೆಂಡದುಂಡೆಯು ತಟ್ಟೆಯಲಿ
ಊಟ ಬಿಸಿ ಬಿಸಿ
ಕೈ ಹಾಕಿದರೆ ತಿರಸ್ಕರಿಸುವದು ನೋಡಿ
ಹಸಿವಿನ ದಾಹ
 
ಹೊಟ್ಟೆಗೆ ಹೆಚ್ಚಾಗುತಿದೆ
ಉಂಡೆಯ ಮೇಲೆ ಮೋಹ
ಬೆಂಕಿ ಆರಲಿಲ್ಲ
ಹಸಿವು ನೀಗಲಿಲ್ಲ, ಹೊಟ್ಟೆ ತಣ್ಣಗಾಗಲಿಲ್ಲ
 
ಬಟ್ಟೆಯೊಳಗಿನ ಬೆಂಕಿ
ಸುಡುತ್ತಿದೆ
ನಂದಿಸಲು ನೀರಿಲ್ಲ
ಬಂದಿಯಾಗಿದೆ ಬದುಕೆಲ್ಲ
 
ಬಡಿದುಕೊಳ್ಳುತ್ತಿದೆ ಬಾಯಿ ಬಗಳುವಂತೆ
ಎಸೆದ ಕಲ್ಲಿನ ಪ್ರೀತಿಯೊಳಗೆ ಬಿದ್ದ
ನಾಯಿ..
 
ಸಲುಗೆಯಲಿ ಸವರಿಕೊಂಡರೆ ಹೊಟ್ಟೆ
ಸವಾಲಾಗಿ ನಿಂತಿಹದು ಬಟ್ಟೆ
ಬದುಕೊಂದು ಬೆಳಕಾಗುವಷ್ಟರಲ್ಲಿ
ಮೊಳಕಾಲನೂರಿ ಬಿದ್ದಿತು ಬರೆ!!
 

‍ಲೇಖಕರು G

31 August, 2014

5 Comments

  1. ಡಾ.ಶಿವಾನಂದ ಕುಬಸದ

    ಸುಂದರ ಕವಿತೆ, ಚೆನ್ನಾಗಿದೆ.

    • suresh rajamane

      ತುಂಬಾ ಧನ್ಯವಾದಗಳು ಡಾ.ಕುಬಸದ್ ಸರ್.

  2. mmshaik

    nice..

  3. Nagaraj kamble

    Channagide..

  4. mahesh kalal

    thumba chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading