ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂಡಾರ ಪ್ರಕಾಶನದ ಜೊತೆ ‘ಫಟಾ ಫಟ್’


ರಾಯಚೂರಿನ ಮಸ್ಕಿ ಮೂಲದ ಬಂಡಾರ ಪ್ರಕಾಶನ ಪುಸ್ತಕ ಮಳಿಗೆಗಳ ಪೈಕಿ ತನ್ನದೇ ಗುರುತು ಮೂಡಿಸಿದೆ.

ತನ್ನ ವಿಶಿಷ್ಟ ಪುಸ್ತಕ ಸಂಗ್ರಹದಿಂದಾಗಿಯೇ ಬಂಡಾರ ನಾಡಿನ ಎಲ್ಲೆಡೆ ಪರಿಚಯವಾಗಿದೆ. ಇನ್ನೊಂದು ಮಳಿಗೆಯಲ್ಲಿ ಈ ಕೃತಿ ಸಿಗುವುದಿಲ್ಲ ಎನ್ನುವಂತಹ, ಸಂಶೋಧಕರಿಗೆ ರಸದೂಟವೆನಿಸುವ ಪುಸ್ತಕಗಳು ಬಂಡಾರದ ಯಶಸ್ಸಿನ ಗುಟ್ಟು.

ಪರಶುರಾಮ ಕೋಡಗಂಟಿ ಅವರ ಕಣ್ಗಾವಲಿನ ಬಂಡಾರ ಪ್ರಕಾಶನದ ಜೊತೆ ‘ಅವಧಿ’ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ.


ಪುಸ್ತಕ ಮಾರಾಟ ಯಾಕೆ ಪ್ರಿಯ ?

 ಒಳ್ಳೆ ವಿಷಯಗಳನ್ನ ಸರಳವಾಗಿ ಜನಗಳಿಗೆ ಮುಟ್ಟಿಸೋದು ಪುಸ್ತಕ. ಯಾವುದೋ ಒಂದು ಘಟನೆಯನ್ನ ಮಾತಿನಲ್ಲಿ ಬದಲಾಯಿಸಿ ಹೇಳಬಹುದು ಆದರೆ ಪುಸ್ತಕ ಇದ್ದದ್ದನ್ನ ಇದ್ದಹಾಗೆ ಹೇಳುತ್ತೆ.

‘ಬಂಡಾರ’ ಅನ್ನೋ ಹೆಸರು ಯಾಕೆ ?

 ನಾವು ಎಲ್ಲಮ್ಮನ ಭಕ್ತರು ಹೀಗಾಗಿ ಬಂಡಾರ ಅನ್ನೋ ಹೆಸರನ್ನ ಇಟ್ಟಿದ್ದು.

ನಿಮ್ಮದು ಕಂಪ್ಲೀಟ್ ಡಿಫ್ರೆಂಟ್ ಕಲೆಕ್ಷನ್ ಏನಿದರ ಗುಟ್ಟು ?

 ಓದುಗರಿಗೆ ಓದಲೇ ಬೇಕಾದ ಪುಸ್ತಕಗಳನ್ನು ಮುಟ್ಟಿಸಬೇಕು ಅಂತ.

ನಿಮ್ಮ ಪ್ರಕಾಶನದ್ದು ಹೊಸ ಸ್ಟೈಲ್ ಏನದು ?

 ಎಲ್ಲ ಪ್ರಕಾಶಕರು ಅಥವಾ ಪುಸ್ತಕ ಮಾರಾಟಗಾರರು ಮೊದಲು ದುಡ್ಡು ಪಡೆದು ಪುಸ್ತಕ ನೀಡುತ್ತಾರೆ. ಆದರೆ ನಾವು ಮೊದಲು ಪುಸ್ತಕ ಅಂಚೆ ಮೂಲಕ ನೀಡಿ ನಂತರ ದುಡ್ಡು ಪಡೆಯುತ್ತೇವೆ.

ಪ್ರಕಾಶನ ಪುಸ್ತಕ ಮಳಿಗೆ ಮುಂದೆ ಏನ್ ಮಾಡುತ್ತೆ ?

 ಏನು ಇಲ್ಲ. ಇದೇ ರೀತಿ ಪುಸ್ತಕ ಮಾರಾಟವನ್ನು ಮುಂದುವರಿಸುತ್ತೆ.

‍ಲೇಖಕರು Avadhi

2 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading