ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ಲಾಸ್ಟಿಕ್ ಗ್ಲಾಸ್…

ಅಂಜಲಿ ಬೆಳಗಲ್

ಅಯ್ಯೋ ಅಮ್ಮಾ
ನಾನು ಎಲ್ಲಿ ಬಂದು ಬಿದ್ದಿದ್ದೇನೆ,
ಜೋರಾದ ಗಾಳಿ ಚರಂಡಿ
ನನ್ನ ತಲೆಯನ್ನು ತುಳಿದುಕೊಂಡು ಹೊಗುತ್ತಿರುವ ಚಪ್ಪಲಿಗಳು
ಮೈಯನ್ನೆಲ್ಲಾ ಪರಚಿದ ಕಲ್ಲುಮುಳ್ಳುಗಳು,
ಅಯ್ಯೊ ಅಮ್ಮಾ ನಾನು ಎಲ್ಲಿ ಬಿದ್ದಿದ್ದೇನೆ,

ನಾನು ಮೊದಮೊದಲು ಸಂತೆಗೆ ಬಂದಾಗ
ವೆಂಕಟರಮಣನ ಪೂಜೆಗು ಬೇಕಾದವಳು,
ನನ್ನ ತಲೆ ಸವರಿ ಕೈ ತೋರಿ ಕೊಂಡುಕೊಂಡ ಅದೆಷ್ಟೋ ಕೈಗಳು,
ಆಹಾ ನನ್ನ ತುಟಿಗೆ ಅದೆಂಥ ಥಂಡ ಥಂಡಾ ಕೂಲ್ ನೀರು ಚುಂಬಿಸುತ್ತಿತ್ತೊ ಗೊತ್ತಿಲ್ಲ
ಮೀನು ಹಿಡಿಯುವವನ ಕೈಯಲ್ಲಿ ಬಾರು ಹೊಟೇಲ್ಗಳ ಮಳಿಗೆಯಲ್ಲಿ ನಾನು ಕೊಳಕಾಗಿ ಬಿದ್ದಿದ್ದೆನೆ,
ಅಯ್ಯೊ ಅಮ್ಮಾ ನಾನೆಲ್ಲಿ ಬಿದ್ದಿದ್ದೆನೆ

ಒಮ್ಮೊಮ್ಮೆ ನನ್ನನ್ನು ತಬ್ಬಿಕೊಂಡು
ತುಂಬಿಕೊಂಡ ಫಿಲ್ಟರ್ ನೀರು
ಹಲವಾರು ಜನಗಳ ಬಾಯಲ್ಲಿ ಬೀರು
ಕಣ್ಣಲ್ಲಿ ನೀರು,
ನನಗೆ ತುಟಿ ಹಚ್ಚಿಕೊಂಡು ಕುಡಿದವರು
ನನ್ನಲ್ಲೇ ತುಟ್ಟಿ ಬಿಚ್ಚಿಕೊಂಡು
ಕಕ್ಕಿದವರು ನನ್ನ
ಮಡಚಿ ಕಚ್ಚಿ ತೊಟ್ಟಿಗೆ ಬಿಸಾಕಿದರು
ಅಯ್ಯೊ ಅಮ್ಮಾ ನಾನೆಲ್ಲಿ ಬಂದು ಬಿದ್ದಿದ್ದೆನೆ,,

ಹಳ್ಳಿ ಗಲ್ಲಿಯಲ್ಲಿ ನನ್ನ ಮುದ್ದು ಜನಗಳು
ನನ್ನನ್ನು ಬಳಸಿಕೊಂಡು
ಮತ್ತೆ ನನ್ನ ತೊಳೆದು ತೊಳೆದು ಮನೆಯಲ್ಲಿಟ್ಟವರು,
ಕೆಲವರು ಪಾರ್ಟಿ ಬಾರುಗಳಲ್ಲಿ
ಕಾಲು ಚಪ್ಪಲಿಯಲ್ಲಿ ನನ್ನನ್ನು ತುಳಿದು ತುಳಿದು ಹೊದ್ದವರು,
ಬೇಕೆಂದಾಗ ನನ್ನ ಬಳಸಿಕೊಂಡವರು
ಈಗ ಪ್ಲಾಸ್ಟಿಕ್ ರದ್ದು ಮಾಡಿದವರು
ಅಯ್ಯೊ ಅಮ್ಮಾ ನಾನೆಲ್ಲಿ ಬಂದು ಬಿದ್ದಿದ್ದೆನೆ,

ಆಹಾ ನನಗೀಗ ತಿಳಿಯಿತು
ನಾನಿಲ್ಲಿ ಪ್ಲಾಸ್ಟಿಕ್ ಗ್ಲಾಸ್
ನನ್ನನ್ನು ಕೊಂಡು ಕೊಂಡು ಕುಡಿಯುವವರೆಲ್ಲಾ
ಹೈ ಕ್ಲಾಸು ಲೋ ಕ್ಲಾಸ್,
ಕೆಲವರಿಗೆ ನಾನು ಟೀ ಗ್ಲಾಸ್
ಇನ್ನೂ ಕೆಲವರಿಗೆ ಜ್ಯೂಸ್ ಗ್ಲಾಸ್
ಮತ್ತೆ ಹಲವರಿಗೆ ಬೀರು ಬ್ರಾಂದಿಗೆ ಕೂಲಿಂಗ್ ಗ್ಲಾಸ್
ಆದರೆ ನಾನಿಲ್ಲಿ ಬೀದಿಗೆ ಬಿದ್ದಿದ್ದೆನೆ ಯ್ಯೂಸ್ ಅಂಡ್ ಥ್ರೋ ಪ್ಲಾಸ್ಟಿಕ್ ಗ್ಲಾಸ್,
ಅಯ್ಯೊ ಅಮ್ಮಾ ನಾನೆಲ್ಲಿ ಬಂದು ಬಿದ್ದಿದ್ದೇನೆ,

‍ಲೇಖಕರು Admin

2 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading