ಪ್ರೊ. ಜಿ. ವೆಂಕಟಸುಬ್ಬಯ್ಯ ನೆನಪಿಸಿಕೊಂಡ ಒಂದು ಅಪೂರ್ವ ಚರಿತ್ರೆ

ಕರ್ನಾಟಕದ ಏಕೀಕರಣ

ಒಂದು ಅಪೂರ್ವ ಚರಿತ್ರೆ

ಭಾರತದ ಯಾವ ಭಾಷಾಪ್ರಾಂತಕ್ಕೂ ಒದಗದಿದ್ದ ದೌಭರ್ಾಗ್ಯ ಕನರ್ಾಟಕಕ್ಕೇ ಒದಗಿಬಂತು ಇದಕ್ಕೆ ಮುಖ್ಯ ಕಾರಣ ನಮ್ಮ ಚರಿತ್ರೆಯಲ್ಲಿ ಕನರ್ಾಟಕದ ಒಂದು ಭಾಗದ ಆಡಳಿತವೇ ಮತ್ತೊಂದು ಆಡಳಿತದ ಮೇಲೆ ಆಕ್ರಮಣ ಮಾಡಿ ಸೋತೋ ಗೆದ್ದೋ ಎರಡು ಕಡೆಗೂ ಹಿಂಸೆ, ಆತಂಕ, ದಾರಿದ್ರ್ಯಗಳನ್ನು ತಂದುಕೊಂಡ ದುರಂತದ ಕಥೆ. ಜೊತೆಗೆ ನಮ್ಮ ದೀರ್ಘಚರಿತ್ರೆಯಲ್ಲಿ ಕನ್ನಡದ ನಾಡೆಂಬುದು ಯಾವಾಗಲೂ ಸಂಪೂರ್ಣವಾಗಿ ಒಂದಾಗಿರಲೇ ಇಲ್ಲ. ಈಗ ಸಿಗುವ ಅಲ್ಪಸ್ವಲ್ಪ ದಾಖಲೆಗಳ ಬಲದ ಮೇಲೆ ಕದಂಬರು ಕನರ್ಾಟಕದ ಉತ್ತರ ಭಾಗದ ಪ್ರದೇಶವನ್ನು ಸುಮಾರು ಎರಡು ಶತಮಾನದವರೆಗೆ ಆಳಿದರೆಂದು ಹೇಳಿರಬಹುದು. ಅದೇ ಕಾಲದಲ್ಲಿ ದಕ್ಷಿಣ ಕನರ್ಾಟಕದಲ್ಲಿ ಗಂಗರು ಆಡಳಿತವನ್ನು ನಡೆಸಿದರು. ಅಂದರೆ ಆ ಕಾಲದಲ್ಲಿಯೇ ಕನರ್ಾಟಕ ಎರಡು ಹೋಳಾಗಿದ್ದದ್ದು ಸ್ಪಷ್ಟ. ಮುಂದೆ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿಯ ಚಾಲುಕ್ಯರು, ಕಲುಚುರ್ಯರು, ಹೊಯ್ಸಳರು ಮುಂತಾಗಿ ರಾಜರು ಅನಿದರ್ಿಷ್ಟವಾದ ಕನ್ನಡ ನಾಡಿನೆಲ್ಲೆಗಳುಳ್ಳ ರಾಜ್ಯವನ್ನು ಆಳಿದರು. ವಿಜಯನಗರದ ಕಾಲದಲ್ಲಿಯೇ ಕನರ್ಾಟಕದ ದೊಡ್ಡ ಭಾಗವು ಒಂದು ರಾಜ ಮನೆತನದ ಆಡಳಿತಕ್ಕೆ ಒಳಗಾದದ್ದು. ಬಳಿಕ ಮೈಸೂರು ಅರಸರು ನೆಲೆ ನಿಂತ ಮೇಲೆ ಬ್ರಿಟಿಷರ ಅಧೀನರಾಗಿ ಮೈಸೂರಿನಂಥ ಒಂದು ಸಂಸ್ಥಾನ ಒಳ್ಳೆಯ ಆಡಳಿತವನ್ನು ಪಡೆಯಿತು. ಆದರೆ ಮಿಕ್ಕ ಉತ್ತರ ಕನ್ನಡ, ದಕ್ಷಿಣ ಕನ್ನಡದ ದೊಡ್ಡ ಭಾಗ ಇತರ ಆಡಳಿತಗಳಿಗೆ ಸಿಕ್ಕಿ ತುಂಬ ಅವಮಾನವನ್ನೂ ಹಿಂಸೆಯನ್ನೂ ಅನುಭವಿಸಬೇಕಾಯಿತು.

ಮೈಸೂರು ಸಂಸ್ಥಾನದಲ್ಲಿ ವಾಸಿಸುತ್ತಿದ್ದ ಸಾಮಾನ್ಯರಿಗೆ ಏಕೀಕರಣದ ಆಲೋಚನೆಯೇ ಇರಲಿಲ್ಲ. ಪ್ರಜಾಸೌಖ್ಯವನ್ನು ಗಮನಿಸುತ್ತಿದ್ದ ರಾಜರು ಚೆನ್ನಾಗಿ ಆಡಳಿತವನ್ನು ನಡೆಸುತ್ತಾ ಇದ್ದುದರಿಂದ ರಾಜಕೀಯವಾಗಿ ಸಾಮಾನ್ಯಾರು ಈ ಆಲೋಚನೆಯನ್ನೇ ಮಾಡಲಿಲ್ಲ. ಆದರೆ ಉತ್ತರ ಕನರ್ಾಟಕದ ಜನತೆಗೆ ಕನ್ನಡದ ವಿದ್ಯಾಭ್ಯಾಸವು ದೊರಕದ ಸ್ಥಿತಿಯಲ್ಲಿ ಮರಾಠಿಯನ್ನು ತಲೆಯ ಮೇಲೆ ಹೇರುವ ಒತ್ತಾಯವೂ ಜೊತೆಗೆ ಅವಮಾನವೂ ಕಾಡುತ್ತಿತ್ತು. ಅಲ್ಲಿಯ ಪ್ರಜ್ಞಾವಂತರ ಕೈಯಲ್ಲಿ ಈ ಸ್ಥಿತಿಯನ್ನು ಬದಲಾಯಿಸಬೇಕೆಂಬ ಅಂತರಂಗದ ಒತ್ತಾಯ ಕೆಲಸ ಮಾಡಿಸಿತು.

ಆ ಭಾಗವನ್ನು ಆಳುತ್ತಿದ್ದ ಬ್ರಿಟಿಷ್ ಅಧಿಕಾರಿಗಳಿಗೂ ಭಾಷಾಪರವಾದ ಪ್ರಾಂತಗಳಾದರೆ ಆಡಳಿತವು ಸುಸೂತ್ರವಾಗುತ್ತದೆ ಎಂಬ ಅಭಿಪ್ರಾಯವಿತ್ತು. ಸು. 1800ರಲ್ಲಿಯೇ ಬಳ್ಳಾರಿ ಜಿಲ್ಲೆಯ ಕಲೆಕ್ಟರ್ ಆಗಿದ್ದ ಸರ್. ಥಾಮಸ್ ಮನ್ರೋ ಎಂಬ ದಕ್ಷ ಅಧಿಕಾರಿಯು ಕನ್ನಡದ ಏಕೀಕರಣದ ಅಭಿಪ್ರಾಯವನ್ನು ಮೇಲಿನ ಅಧಿಕಾರಿಗಳಿಗೆ ತಿಳಿಸಿದ್ದನು. ಮನ್ರೊ ತೆಲುಗು ಪ್ರದೇಶದ ಆಡಳಿನ ನಡೆಸಿ ಮಹಾಜನಪ್ರಿಯ ಅಧಿಕಾರಿಯಾಗಿ ಪ್ರಸಿದ್ಧನಾದನು. ಅವನ ಮಾತನ್ನು ಬ್ರಿಟಿಷ್ ಅಧಿಕಾರಿಗಳು ಕೇಳಿದ್ದರೆ ಕನಾಟಕ ಈ ವೇಳೆಗೆ ಅತ್ಯಂತ ಸಮೃದ್ಧ ಭಾಗವಾಗಿ ಬೆಳಗುತ್ತ ಇತ್ತು. ಆ ಭಾಗ್ಯ ನಮಗೆ ಬರಲಿಲ್ಲ.

ಭಾರತದ ಉತ್ತರದಲ್ಲಿಯೂ ಬಂಗಾಳ ಒರಿಸ್ಸಾ ಪ್ರದೇಶಗಳಲ್ಲಿ ಭಾಷಾವಾರು ಪ್ರಾಂತ್ಯದ ಒತ್ತಾಯಗಳು ಏಳುತ್ತಿದ್ದವು. ಕನ್ನಡ ದೇಶದಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘದ ಸ್ಥಾಪನೆಯಿಂದ ಏಕೀಕರಣದ ಕಾರ್ಯಕ್ಕೆ ದೊಡ್ಡ ಬೆಂಬಲ ದೊರಕಿತು. ರಾ.ಹ. ದೇಶಪಾಂಡೆಯವರ ಪ್ರಯತ್ನದಿಂದ 1890ರಲ್ಲಿ ವಿದ್ಯಾವರ್ಧಕ ಸಂಘವು ಸ್ಥಾಪಿತವಾಯಿತು. ಅಲ್ಲಿಂದ ಮುಂದೆ ಸಾಹಿತಿಗಳ ತಂಡವೇ ಈ ಕಾರ್ಯಕ್ಕೆ ಮುಂದಾಯಿತು. ಕ್ರಮೇಣ ಮೈಸೂರು ಸಂಸ್ಥಾನದ ಪ್ರಮುಖ ಸಾಹಿತಿಗಳಾದ ಬಿ.ಎಂ.ಶ್ರೀ. ಮತ್ತು ಮಾಸ್ತಿ ಮುಂತಾದವರೆಲ್ಲರೂ ಬೆಂಬಲಿಸಿದರು. ಒಂದು ಗ್ರಂಥಕರ್ತರ ಸಮ್ಮೇಳನವು 1907ರಲ್ಲಿ ಧಾರವಾಡದಲ್ಲಿ ನಡೆಯಿತು. 1908ರಲ್ಲಿ ಅಂಥದೇ ಸಮ್ಮೇಳನವು ಅಲ್ಲಿಯೇ ನಡೆದು ಮೈಸೂರು ಸಂಸ್ಥಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು. ಸ್ಥಾಪಿಸುವುದಕ್ಕೆ ಕಾರಣವಾಯಿತು. ಆದರೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿತವಾಗುವುದಕ್ಕೆ ಮತ್ತೆ ಏಳು ವರ್ಷಗಳು ಕಾಯಕಬೇಕಾಯಿತು. ಅಲ್ಲಿಂದ ಮುಂದೆ ಈ ಎರಡು ಸಂಸ್ಥೆಗಳು, ವಿದ್ಯಾವರ್ಧಕ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕನರ್ಾಕದ ಏಕೀಕರಣಕ್ಕೆ ಹೋರಾಟ ಮಾಡಲು ಬಲ ಪಡೆದವು. ಅವುಗಳ ಕಾರ್ಯವೂ ಕೂಡ ಭಾಷಣ, ಲೇಖನ, ಸಮ್ಮೇಳನಗಳ ಮೂಲಕ ಸಾಹಿತ್ಯಾಸಕ್ತರು ಮಾಡುತ್ತಿದ್ದ ಕಾರ್ಯವೇ ಆಗಿತ್ತು. ಇದರಲ್ಲಿ ರಾಜಕೀಯದವರು ಯಾರೂ ಇರಲಿಲ್ಲ.

ಆಲೂರು ವೆಂಕಟರಾಯರು ರಚಿಸಿದ ‘ಕನರ್ಾಟಕ ಗತವೈಭವ’ ಮುಂತಾದ ಗ್ರಂಥಗಳಿಂದ ಕನ್ನಡದ ಜನತೆಯಲ್ಲಿ ತುಂಬಾ ಎಚ್ಚರವುಂಟಾಯಿತು. ಏಕೀಕರಣದ ಕಾರ್ಯದ ಉದ್ದಕ್ಕೂ ಕಾಣುವ ಹೆಸರೆಂದರೆ ಆಲೂರು ವೆಂಕಟರಾಯರ ಹೆಸರು.

ಏಕೀಕರಣದ ಪ್ರಯತ್ನಕ್ಕೆ 1920ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಒಪ್ಪಿಗೆ ದೊರೆಯಿತು. ಅಲ್ಲಿಂದ ಮುಂದೆ ಹೊಸದಾಗಿ ಸ್ಥಾಪಿತವಾದ ಕನರ್ಾಟಕ ಪ್ರಾಂತ್ಯ ಕಾಂಗ್ರೆಸ್ ಸದಸ್ಯರು ಕೂಡ ಸಾಹಿತಿಗಳ ಬೆಂಬಲಕ್ಕೆ ನಿಂತರು.

ಕೆಲವು ಕಾಲ ಮೈಸೂರು ಸಂಸ್ಥಾನವನ್ನು ಕನರ್ಾಟಕದಲ್ಲಿ ಸೇರಿಸಬೇಕೋ ಬೇಡವೋ ಎಂಬ ವಿಷಯ ಓಲಾಟದಲ್ಲಿತ್ತು. ಆದರೆ ಮೈಸೂರು ಸೇರಿಯೇ ಕನರ್ಾಟಕ ಪ್ರಾಂತವಾಗಬೇಕೆಂಬ ಅಭಿಪ್ರಾಯಕ್ಕೆ ಬೆಂಬಲ ಬಂತು. ಹೀಗಾಗಲು ಶ್ರೀರಂಗ, ಕೆ.ಆರ್. ಕಾರಂತ, ಹನುಮಂತಯ್ಯ, ಚಂಗಲರಾಯ ರೆಡ್ಡಿ ಮುಂತಾದವರು ಮುಖ್ಯರಾಗಿ ಕಾರಣರು.

1955ರಲ್ಲಿ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಸಮ್ಮೇಳನದ ಅಧ್ಯಕ್ಷರಾದ ಶ್ರೀರಂಗರು ಅವರ ಭಾಷಣದಲ್ಲಿ ಹೀಗೆ ಹೇಳಿದರು:-

ಕನರ್ಾಟಕ ಒಂದಾಗಬೇಕೆಂದು ಮೊದಲಿನಿಂದಲೂ ಬಯಸಿ ಹಣ್ಣಾಗುತ್ತಲಿದ್ದ ಮತ್ತು ಅದು ಒಂದೇ ಆಗಿದೆ ಎಂದು ಮೊದಲಿನಿಂದಲೂ ತಮ್ಮ ಕೃತಿ ಚಟುವಟಿಕೆಗಳಿಂದ ತೋರಿಸುತ್ತಲಿದ್ದ ಕನ್ನಡ ಸಾಹಿತಿಗಳ ಈ ಸಮ್ಮೇಳನಕ್ಕೆ ಇಂದು ಏಕೀಕೃತ ಕನರ್ಾಟಕದ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷನಾಗುವ ಭಾಗ್ಯ ನನಗೆ ಒದಿಗಿಸಿತು.

ಈ ಸಮ್ಮೇಳನವು ನಡೆದ ಕಾಲದಲ್ಲಿ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದಶರ್ಿಯಾಗಿದ್ದೇನೆಂದು ನನಗೆ ಹೆಮ್ಮೆಯಾಗುತ್ತದೆ.

ಕನರ್ಾಟಕದ ಏಕೀಕರಣದ ಸಾಧ್ಯವಾದುದಕ್ಕೆ ಈಗಿನ ನಾವು ಕೃತಜ್ಞರಾಗಿರ ಬೇಕಾದುದು ಎಷ್ಟು ಜನರಿಗೆ ಎಂದರೆ ಲೆಕ್ಕವೇ ಸಿಕ್ಕುವುದಿಲ್ಲ. ಅದೊಂದು ಜನಾಂಗದ ಹೊಡೆದಾಟದಂತೆ ನೆರವೇರಿತು. 1890ರಲ್ಲಿ ಪ್ರಾರಂಭವಾಗಿ 1956ರಲ್ಲಿ ಸಾಧಿತವಾಯಿತು ಎಂದರೆ ಅದು 70 ವರ್ಷಗಳ ಆಂದೋಲನ.

ಕನರ್ಾಟಕದ ಏಕೀಕರಣಕ್ಕೆ ಎಲ್ಲ ಸಾಹಿತಿಗಳೂ ಆಸಕ್ತರಾಗಿದ್ದರೂ ಈ ಬಗ್ಗೆ ತುಂಬ ಕಾಳಜಿ ವಹಿಸಿ ಮೊದಲಿನಿಂದ ಪ್ರಚಾರದಲ್ಲಿ ಕೊನೆಯತನಕ ಹೋರಾಡಿದವರಲ್ಲಿ ಶ್ರೀರಂಗ, ಅ.ನ.ಕೃ., ಶಿವಮೂತರ್ಿಶಾಸ್ತ್ರಿ ಇವರನ್ನು ವಿಶೇಷವಾಗಿ ಹೆಸರಿಸಬೇಕು. ಇವರಿಗಿಂತ ಹಿರಿಯ ರಾಗಿದ್ದವರು ಪ್ರಾರಂಭಿಸಿದ ಕಾರ್ಯವನ್ನು ಈ ಮೂವರು ತುಂಬ ಪರಿಣಾಮದಾಯಕವಾಗಿ ಬೆಳಸಿದರು. ಇದಕ್ಕಾಗಿಯೇ ಶ್ರೀರಂಗರು ತಮ್ಮ ವೃತ್ತಿಗೆ ರಾಜಿನಾಮೆಯನ್ನು ಕೊಡ ಬೇಕಾಯಿತು.

ಅನೇಕ ಆಯೋಗಗಳು ವರದಿಗಳನ್ನು ಸಲ್ಲಿಸಿದ ಮೇಲೆ ರಾಜ್ಯ ಪುನವರ್ಿಗಡಣಾ ಆಯೋಗವು ನೀಡಿದ ವರದಿಯ ಪ್ರಕಾರ 16.1.1956ರಲ್ಲಿ ಅದರ ಬಗ್ಗೆ ಭಾರತ ಸಕರ್ಾರದ ನಿರ್ಣಯ ಪ್ರಕಟವಾಯಿತು. ಮೈಸೂರು ಎಂಬ ಹೆಸರಿನಲ್ಲಿ ಒಂದು ಎಲ್ಲೆಕಟ್ಟು ನಿರ್ಣಯವಾಯಿತು. ಆದರೆ ಬೀದರ್ ಜಿಲ್ಲೆಯ ಬಸವಕಲ್ಯಾಣವು ಕನರ್ಾಟಕಕ್ಕೆ ಸೇರಿರಲಿಲ್ಲ. ಈ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯನ್ನು ಬೀದರ್ ನಗರದಲ್ಲಿ ಸಭೆ ಸೇರಿಸಿ ಈ ವಿಷಯವನ್ನು ಪರಿಶೀಲಿಸಬೇಕೆಂಬ ನನ್ನ ಮನವಿಯನ್ನು ಅಧಿಕಾರಿಗಳು ಒಪ್ಪಿಕೊಂಡರು.

ಬೀದರ್ ನಗರಕ್ಕೆ ಪರಿಷತ್ತಿನ ಕಾರ್ಯ ಸಮಿತಿಯು ಹೋದಾಗ ನಮಗೆ ಆಶ್ಚರ್ಯವು ಕಾದಿತ್ತು. ಬೀದರ್ ನಗರದಲ್ಲಿ ಅಂಗಡಿ ಬೀದಿಯಲ್ಲಿ ಒಂದು ಕನ್ನಡದ ಬೋಡರ್ು ಇರಲಿಲ್ಲ. ಅಲ್ಲಿ ಕನ್ನಡದ ಶಾಲೆಗಳಿರಲಿಲ್ಲ. ಅಲ್ಲಿಯ ಜನಕ್ಕೆ ಕನ್ನಡಕ್ಕೆ ಒಂದು ವರ್ಣಮಾಲೆ ಇದೆ ಎಂಬುದು ಗೊತ್ತಿರಲಿಲ್ಲ. ಎಲ್ಲ ಮರಾಠೀಮಯ. ಮನೆಯಲ್ಲಿ ಎಲ್ಲರೂ ಕನ್ನಡ ಮಾತನಾಡುತ್ತಿದ್ದರು. ಹೊರಗೆ ಮರಾಠಿ. ಇಷ್ಟೊಂದು ಹಿಂದೆ ಬಿದ್ದಿರುವ ಕನ್ನಡ ಪ್ರದೇಶವನ್ನು ಕನ್ನಡ ಭಾಷೆಯ ಅಕ್ಷರಗಳಿಂದ ಪ್ರಾರಂಭಿಸಿ ಕನ್ನಡಮಯವನ್ನಾಗಿ ಮಾಡಬೇಕಾಗಿತ್ತು. ಆಗ ಸಮಿತಿಯ ಎಲ್ಲ ಸದಸ್ಯರೂ ಅನೇಕ ಕಡೆಗಳಲ್ಲಿ ಪ್ರಯಾಣ ಮಾಡಿ, ಕನ್ನಡದಲ್ಲಿ ಉಪನ್ಯಾಸ ಮಾಡಿ ಜನರ ಮನಸ್ಸಿನಲ್ಲಿ ಕನ್ನಡದ ಹಿರಿಮೆಯನ್ನು ಮೂಡಿಸ ಬೇಕಾಯಿತು. ಅದು ಕರಿಮಣ್ಣಾದ ನೆಲ; ನಡೆಯುವುದು ಸುಲಭವಲ್ಲ. ಹೊಲದಲ್ಲಿ ನಡೆದರೆ ಕಾಲಿಗೆ ದಟ್ಟವಾಗಿ ಮಣ್ಣು ಅಂಟಿಕೊಳ್ಳುತ್ತಿತ್ತು. ಹಾಗಾಗಿ ಸಣ್ಣ ಕುದುರೆಗಳ ಮೇಲೆ ಪ್ರಯಾಣ ಮಾಡಿ ಪ್ರಚಾರ ಮಾಡಬೇಕಾಯಿತು. ನಾನು ಹೀಗೆ ಭಾಲ್ಕಿ ತಾಲ್ಲೂಕಿನಲ್ಲಿ ಪ್ರಯಾಣ ಮಾಡಿ ಭಾಷಣಗಳನ್ನು ಮಾಡಿದ ನೆನಪಿದೆ.

ಹೈದರಾಬಾದು ಸಚಿವ ಮಂಡಲದಲ್ಲಿದ್ದ ಡಾ. ಮೇಲುಕೋಟೆಯವರ ಸಹಾಯವು ನಮಗೆ ದೊರಕಿತು. ಕೆಲವರು ಕನ್ನಡ ಮೂಲದ ಅಧಿಕಾರಿಗಳ ಸಹಾಯವೂ ಸಿಕ್ಕಿತು. ಕ್ರಮೇಣ ಬೀದರಿನ ಆ ವ್ಯಕ್ತಿಗಳಿಗೆ ಕನ್ನಡ ವರ್ಣಮಾಲೆಗಳು, ಭೂಗೋಳದ ಭೂಪಟಗಳು ಪಠ್ಯಪುಸ್ತಕಗಳು, ಪತ್ರಿಕೆಗಳು ಇವುಗಳನ್ನು ಕಳುಹಿಸುತ್ತ ಕನ್ನಡ ಪ್ರಚಾರವನ್ನು ಮಾಡಲಾಯಿತು. ಈ ಸಮಯದಲ್ಲಿ ನನಗೆ ಅನ್ನದಾನಯ್ಯು ಪುರಾಣಿಕರು ನೀಡಿದ ಸಹಾಯವು ನೆನಪಿಗೆ ಬರುತ್ತದೆ.

ಕೊನೆಗೆ 1957-58ರಲ್ಲಿ ಬೀದರ್ ನಗರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿ, ಡಿ. ಎಲ್. ನರಸಿಂಹಚಾರ್ಯರ ಅಧ್ಯಕ್ಷತೆಯಲ್ಲಿ ಕನ್ನಡ ಸಮ್ಮೇಳನವನ್ನು ನೆರವೇರಿಸಲಾಯ್ತು.

ಬಸವಕಲ್ಯಾಣಕ್ಕೆ ಪ್ರಯಾಣ ಬೆಳೆಸಿ ಅಲ್ಲಿಯ ಜನರು ಆ ಊರು ಕನರ್ಾಟಕಕ್ಕೆ ಸೇರಬೇಕೆಂಬ ಆಂದೋಳನ ನಡೆಯುವಂತೆ ಏಪರ್ಾಟು ಮಾಡಲಾಯಿತು.

ಈ ರೀತಿ ಕನ್ನಡ ಏಕೀಕರಣವಾದ ಸಮಯದಲ್ಲಿ ನಾಡಿನಲ್ಲಿ ಸುಳಿದಾಡಿದ ಸಂತೋಷ ಈಗಲೂ ನನ್ನ ನೆನಪಿಗೆ ಬರುತ್ತದೆ.

ಈಗ ಕನ್ನಡ ಏಕೀಕರಣದ ಕಥೆಯು ನಮಗೆ ದೊರಕಿದೆ-ಒಂದು ಗ್ರಂಥದಲ್ಲಿ, ಡಾ. ಎಚ್. ಎಸ್. ಗೋಪಾಲರಾಯರು ರಚಿಸಿದ ಗ್ರಂಥ ‘ಕನರ್ಾಟಕ ಏಕೀಕರಣ ಇತಿಹಾಸ’ ದಲ್ಲಿ. ಹಿಂದೆ ಸಣ್ಣಸಣ್ಣ ಪುಸ್ತಕಗಳು ಕೆಲವು ಇದ್ದರೂ ಇಷ್ಟು ವೈಜ್ಞಾನಿಕವಾಗಿ ಯಾರು ವಿಷಯವನ್ನು ಹೀಗೆ ವಿಶ್ಲೇಷಿಸಿರಲಿಲ್ಲ.

ಈಗ ಐವತ್ತು ವರ್ಷದ ಬಳಿಕ ಸುವರ್ಣ ಕನರ್ಾಟಕದಲ್ಲಿ ಬದುಕಿರುವುದು ನನಗೆ ತುಂಬ ಸಂತಸದ ವಿಷಯ. ನಾನು ಆಶಾವಾದಿ. ಈಗ ಕಾಡುತ್ತಿರುವ ಅನೇಕ ತೊಂದರೆಗಳು ಪರಿಹಾರವಾಗಿ ಮುಂದೆ ಕನ್ನಡದ ನಾಡಿನ ಹಿರಿಮೆ ಶಾಶ್ವತವಾಗಿ ಸ್ಥಾಪಿತವಾಗಿ ಜನ ಸುಖವಾಗಿ ಬಾಳುವ ಕಾಲ ಬರುತ್ತದೆಂದು ದೃಢವಾಗಿ ನಂಬಿದ್ದೇನೆ.

 

‍ಲೇಖಕರು G

March 10, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಚಡ್ಯ ಜಿಲ್ಲೆ

    ಕರ್ನಾಟಕದ ಏಕೀಕರಣಕ್ಕೆ ಐವತ್ತು ವರ್ಷಗಳು. ಕನ್ನಡ ಕನ್ನಡಿಗ ಕರ್ನಾಟಕತ್ವಗಳು ನಮ್ಮ ನಮ್ಮೆಲ್ಲರ ಪಾಲಿಗೆ ಸೌಭಾಗ್ಯ. ಕರ್ನಾಟಕದ ನೆಲ ಜಲ ಭಾಷೆ ಸಾಹಿತ್ಯ ಸಂಸ್ಕೃತಿಗಳ ಉಳಿವಿಗಾಗಿ ಒಮ್ಮತದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಶ್ರೀಸಾಮಾನ್ಯರಿಗೆ ಅನೇಕತೆಯಲ್ಲಿ ಏಕತೆಯ ವಿಭಿನ್ನತೆಯಲ್ಲಿ ಐಕ್ಯತೆಯ ಸುಸ್ಥಿತಿಯಲ್ಲಿ ನಾವು ನಾವೆಲ್ಲರೂ ಇದ್ದು ಚೆನ್ನಾಗಿ ಬಾಳಿ ಬದುಕಲು ಸಾಧ್ಯಸ್ಯ ಸಾಧ್ಯ.

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    [email protected]

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: