ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೇಮಿಗಳು ನಿಯಂತ್ರಣಗಳನ್ನ ಮೀರಿದರು..

raja m b

ಎಂ ಬಿ ರಾಜ 

1
ಆಕೆಗೆ ಹೇಳಲಾಗದ ಭಾವನೆಗಳನ್ನ
ಕಾಗದದ ದೋಣಿಯೊಂದರಲ್ಲಿ ಗೀಚಿ
ಮಳೆನೀರಲ್ಲಿ ತೇಲಿಬಿಟ್ಟೆ.
ಅದು ಮುಳುಗುತ್ತಿತ್ತು, ನಾನು ಕಣ್ಣೀರಾಗುತ್ತಿದ್ದೆ.

2
she2ಬಟಾಬಯಲಲ್ಲಿ ಪ್ರಣಯಕ್ಕಿಳಿದಿದ್ದ
ಪ್ರೇಮಿಗಳು ನಿಯಂತ್ರಣಗಳನ್ನ
ಮೀರಿದರು,
ಹೊಸದೊಂದು ‘ನಕ್ಷತ್ರ’ ಹುಟ್ಟೇ ತೀರುವುದೀಗ
ಎಂದು ಚಪ್ಪಾಳೆ ತಟ್ಟಿ
ಚಂದಿರ ನಗತೊಡಗಿದ.!!

3
ಆಕೆಯ ಹೊಕ್ಕುಳಿನತ್ತ ಅನಾಯಾಸ ಚಲಿಸಿದ್ದ ಕೈಗೆ
ಮುಳುಗದೇ ಅಲ್ಲೇ ಗಿರಕಿ ಹೊಡೆಯುತ್ತಿದ್ದ
ಸೂರ್ಯನ ತಂಪಾದ ಹಣೆ ತಾಗಿತು.

4
ಪ್ರೇಮದ ಪಾಠಗಳು ಕಷ್ಟ
ಎಂದೆನಿಸಲು ಆರಂಭಿಸಿದಾಗ
ತುಟಿಗಳನ್ನ
ಬೆಸೆದುಕೊಂಡುಬಿಡುತ್ತೇವೆ.
ತೆರೆದುಕೊಂಡಷ್ಟೂ ಪ್ರೀತಿ ತೊರೆಯಾಗಬಲ್ಲುದು.
ತಡೆದುಕೊಂಡಷ್ಟೂ ಪ್ರೀತಿ ಹೊರೆಯಾಗಬಲ್ಲುದು.

5
ಭರ್ತಿ ಆಲಂಗಿಸಿಕೊಂಡು
ಉಸಿರಾಟಗಳಿಗೆ ಧಾಟಿ ಹೇಳಿಕೊಟ್ಟೆವು.
ಲೋಕದ ಸಂಗೀತ ಪಾದ ನೆಕ್ಕುತ್ತಿತ್ತು.

6
ಪ್ರೇಮಿಗಳು ರಾತ್ರಿ ಪೂರಾ
ಅನವರತ ಸಂಭ್ರಮಿಸಿದ ಪರಿಗೆ
ಮುಂಜಾವಿನ ಸೂರ್ಯ ಸಪ್ಪಗಾಗಿದ್ದ,
ತನ್ನ ಒಂಟಿತನಕ್ಕೆ ವ್ಯಥಿತನಾಗಿದ್ದ

7
ಆಕೆಯ ನಗುವನ್ನ ಕವಿತೆಯಾಗಿಸುವಲ್ಲಿ
ಸೋತ ಆತ ಖಿನ್ನನಾಗಿಬಿಟ್ಟ,
ಹುಡುಗಿಯರ ನಗು ಅಷ್ಟು
ಸಲೀಸಾಗಿ
ಕಾವ್ಯಕ್ಕೆ ದಕ್ಕುವಂತಿದ್ದಿದ್ದರೆ
ರಸ್ತೆಯ ಪ್ರತಿ ತಿರುವುಗಳೆಲ್ಲೆಲ್ಲ
ಕವಿಗಳ ಮೂರ್ತಿಗಳು
ವಿಜೃಂಭಿಸುತ್ತಿದ್ದವು.

8
ಪಕ್ಕದ ರಾಜ್ಯದ ಸುಂದರ ರಾಣಿಯನ್ನ
ಸೆಳೆಯಬೇಕೆಂದರೆ ರಾಜನು ತನ್ನ
ಮೀಸೆಯನ್ನಷ್ಟೇಯಲ್ಲ ಶಸ್ತ್ರಾಸ್ತ್ರಗಳನ್ನೂ
ಸಹ ಹುರಿಗೊಳಿಸಿಕೊಂಡಿರಬೇಕು.

‍ಲೇಖಕರು Admin

13 June, 2016

1 Comment

  1. Anantha Ramesh

    ಕವಿ ಪ್ರೇಮಿಗಳ ರಾಜ್ಯ ಹೊಕ್ಕರೆ ಅವನ ಲೇಖನಿ ಎಲ್ಲ ಓರೆಗಳಲ್ಲು ಒಮ್ಮೆ ಝಳಪಿಸಿ ರೋಮಾಂಚನಗೊಳಿಸುತ್ತದೆ. ತುಂಬಾ ಇಷ್ಟವಾಗುವ ಕವಿತೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading