ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿಯ ಮುಲಾಮು

-ನೌಷಾದ್ ಅಲಿ ಎಂ ಎಸ್

ಪ್ರೀತಿಯ ಮುಲಾಮು

ಪ್ರತಿ ಶಬುದಕೂ ಅರ್ಥ ಹೇಳವ
ನಿಘಂಟಿವೆ
ಸಮಾನಾರ್ಥಕ ವಿರುದ್ಧ ಪದಗಳಿಗೂ
ನಿಘಂಟಿವೆ
ಬರಿ ಪ್ರೀತಿಯ ಪದಗಳ ನಿಘಂಟು
ಮಾಡಬೇಕೆಂದಿದ್ದೇನೆ
ಜಗತ್ತಿನಲ್ಲಿರುವ ಪ್ರೀತಿಯ ಪದಗಳನ್ನು ಹೆಕ್ಕಿ ಕೊಡಿ…..
ಇಲ್ಲಿ ದ್ವೇಷಕ್ಕೆ ಅರ್ಥವಿಲ್ಲ ವೆಂದು ಒತ್ತಿ ಹೇಳಬೇಕೆಂದಿದ್ದೇನೆ…..

ರಾಗ ಹೊಮ್ಮಿಸುವ ಜಗದ ಯಾವುದೇ ಸಂಗೀತ ಸಾಧನಗಳನ
ಒಟ್ಟು ಕೊಡಿ
ಅದರಿಂದ ಮೂಡುವ ಸಂಗೀತದಿಂದ
ಇಲ್ಲಿ ದ್ವೇಷರಾಗಕ್ಕೆ ಸ್ಥಳವಿಲ್ಲ ಎಂದು
ಸಾರಬೇಕಿದೆ

ಎಲ್ಲಾ ಮತ ಧರ್ಮಗ್ರಂಥಗಳಿಂದ
ಪ್ರೀತಿಯ ಸಾರವನ್ನು ಸಂಗ್ರಹಿಸಿ ಕೊಡಿ
ನಿತ್ಯ ಐದು ಹೊತ್ತಿನ ನಮಾಝ್ ಗೆ ಕರೆಯುವ
ಅಜಾನ್ ನಂತೆ
ಪಠಿಸುವೆ..
ಬನ್ನಿ ಪ್ರೀತಿಯ ಮಸೀದಿಗೆ ಎಂದು
ಕರೆಯುವೆ

ದೇಹದ ಪ್ರತಿ ನೋವಿಗೂ ಮದ್ದಿದೆ
ದ್ವೇಷದ ನಂಜಿಗೆ ಯಾವ ಮದ್ದೂ
ಜಗದ ಯಾವ ದವಾಖಾನೆಲೂ ಸಿಗದು
ಪ್ರೀತಿಯೇ ಮುಲಾಮು
ಎಂದು ಒತ್ತಿ ಹೇಳಬೇಕಿದೆ

‍ಲೇಖಕರು Admin

7 September, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading