ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿಯ ಸರಕು

ಡಾ ನಿರ್ಮಲಾ ಬಟ್ಟಲ

ನೀನು …
ಕಥೆಯಾಗಿಸುವುದಾದರೆ
ನೂರು ನೆನಪುಗಳ
ಮೆಲಕು ಹಾಕುತ್ತೆನೆ…!

ಕಾಲ್ಗೆಜ್ಜೆ, ಕೈಬಳೆ
ಜೋಡಿಜಡೆ
ಜರಿಲಂಗಜಾರುವ
ದಾವಣಿಯದು
ಸರಕು ಸಾಕಷ್ಟಿದೆ
ಲಾವಣಿಯಾದರು ಕಟ್ಟು
ತಾಳ್ಮೆ ಇದ್ದರೆ ಕಾದಂಬರಿಯನ್ನಾದರು
ಬರೆದುಕೊ…

ಹಾಂ…
ಕವನವೊ… ಕವಿತೆಯೊ
ನೀನೆ ಬರೆಯಬೇಕು…
ನಿನ್ನೆದೆಯ ಪ್ರೀತಿ
ಪದಭಂಡಾರ ಬಳಸಿ
ನಾ ಕೊಟ್ಟ
ಬಂಡವಾಳದಲ್ಲಿಯಲ್ಲಾ…!

ಕಣ್ಣು ಮೂಗು ತುಟಿ
ಇವುಗಳ ಹೊಗಳಿಕೆ ಬೇಡ
ವಾಕರಿಕೆ ಬರುತ್ತಿದೆ
ಸುಳ್ಳಿನ ಉಪಮಾನ ಉಪಮೆಗಳಂತು
ಬೇಡವೆ ಬೇಡಾ
ಮನಸು ಮೋಸ ಹೋಗುತ್ತದೆ…!

ಪದೆ ಪದೆ ಕರೆಯ ಬೇಡ
ಅಮವಾಸೆ ಹುಣ್ಣಿಮೆ
ಎಣಿಸುವವಳಲ್ಲ ನಾನು
ಒಮ್ಮೆ ಬಂದರೆ ಮುಗಿಯಿತು
ಜಾಂಡಾ ಊರಿ
ಕುಳಿತುಕೊಳ್ಳುವೆ
ಮರಳಿ ಹೋಗುವಳಲ್ಲ ಮನೆಗೆ…!

ಪದವಾಗಿಸಿ ಬಿಡು
ನನ್ನ
ನಿದ್ದೆಗಣ್ಣಿನಗರತಿಯರ
ಸೋಬಾನೆ ಪದದೊಳಗೆ
ಹೊಸ ರಾಗವಾಗಿ
ಹೊರಹೊಮ್ಮುವೆ…!

ಅಮಾವಾಸ್ಯೆಕತ್ತಲಿನಲ್ಲಿ
ಕಲ್ಲಿನೆದೆಯ ನಡುವೆ
ಸುರಿವ
ಬೆಳದಿಂಗಳಾಗಿ ಬಿಡುವೆ
ನೀ ಕಟ್ಟುವ ಪದ
ಮಾಲೆ
ನಿತ್ಯವೂ ಮಡಿಗೇರಿಸಿಕೊಂಡು
ನಗುವೆ…!

‍ಲೇಖಕರು Avadhi

6 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading