ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿಯ ಚೆ..

ಚೆ ಗೆವಾರ

-ಡಾ ನಾರಾಯಣ್ ಕ್ಯಾಸಂಬಳ್ಳಿ

ಪ್ರೀತಿಯ ಚೆ…
ನೀನು ತೀರಿಕೊಂಡ ದಿನ ಅಲ್ಲಾ.. ನಿನ್ನ ಗುಂಡಿಟ್ಟು ಕೊಂದ ದಿನ !

ಹೌದು ಚೆ
ನನ್ನ ಸಾವಿನ ಕುರಿತು
ಚಿಂತಿಸುವಾಗಲೆಲ್ಲ ನಿನ್ನ ನೆನಪಾಗುತ್ತದೆ ಸಾವಿಗೂ ಒಂದು ಅರ್ಥವಿರಬೇಕಲ್ಲ ಎಂದು.

ನೀನು ಹುಟ್ಟಿದ್ದು ಬದುಕಿದ್ದು ಮಿಡಿದದ್ದು ನೊಂದ ಜನರಿಗಾಗಿ
ಅದಕ್ಕೆ ನೀನು ನಿಜವಾದ ಜನರ ಸಂಗಾತಿ
ಸಮತೆಗಾಗಿ ಹಂಬಲಿಸಿದ ನಿನ್ನನ್ನು ಯಾವ ಅಧಿಕಾರದಿಂದಲೂ ತಡೆದು ನಿಲ್ಲಿಸಲಾಗಲಿಲ್ಲ
ನಿನ್ನ ಕೊಂದದ್ದೇ ದೊಡ್ಡ ಸಾಧನೆ ಎಂದು ಕೊಂಡವರಿಗೆ ತಿಳಿಯದು
ಜನರ ಹೃದಯದ ಮೇಲಿರುವ ನಿನ್ನ ಗುರುತು ಮುಗಿಲೆತ್ತರಂದು
ನೀನು ಕಬ್ಬಿನ ಗದ್ದೆಗಳಲ್ಲಿ ದುಡಿಯುವಾಗ ಸರ್ಕಾರವು ಜನರ ನಡುವೆ ನರ್ತಿಸಿತು
ಜನರೊಂದಿಗೆ ನೀನು ನಡೆಸಿದ ಪಯಣ ಎಂದಿಗೂ ಜಗಕೆ ಮಾದರಿಯಾಗಿದೆ
ಪ್ರೀತಿಯ ಚೆ..
ನಿನಗೆ ನೀನೇ ಸಾಟಿ
ನೀನು ಬತ್ತಲಾರದ ನದಿ
ಯಾರು ಏರಲಾರದ ಶಿಖರ
….

‍ಲೇಖಕರು Admin

10 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading