ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಮೋದ ಜೋಶಿ ಕವಿತೆ- ಹೇಳು ನೀ ಪಾಠ…

ಪ್ರಮೋದ ಜೋಶಿ

ಸಾಲು ಮರಗಳ ಹೆಣಗಳ ಸಾಲು
ರೆಸ್ತೆಯ ಆಚೆ ಇಚೆಗೆ
ನೋಟಾವರ್ತಿಯಲ್ಲಾ ಬಯಲೇ ಬಯಲು
ಕಣ್ಣಿಗೆ ಕಾಣದು ಹಸಿರು

ಹಸಿರಿದ್ದರೆ ನಮಗೆ ಉಸಿರು
ತತ್ವದ ಮರೆತರೆ ಹೇಗೆ?
ಉಸಿರು ನೀಡುವ ಬಸಿರನು ಕಡಿದರೆ
ಬದುಕಿಲ್ಲಾ ನಮಗೆ ಅವನಿಯೊಳಗೆ

ಸತ್ತ ಮರಗಳ ಅಂಗ ಕೀಳುತಿವೆ
ಹಾರದ ಹದ್ದುಗಳ ದಂಡು
ಕಂಡೂ ಕಂಡೂ ಸುಮ್ಮನೆ ಕುಳಿತಿಹೆವು
ಮರಗಳ ಕಡಿಯುವದ ಕಂಡು

ಅಧುನೀಕರಣದ ಯಜ್ಞಕುಂಡಕೆ
ಮೂಕ ಮರಗಳ ಆಹುತಿ
ದುರಾಸೆಯಲಿ ಪ್ರಕೃತಿ ಮರತರೆ
ವಿನಾಶವೇ ನಮ್ಮ ಮುಂದಿನ ಸ್ಥಿತಿ

ನೆರಳು ನೀಡಿ ಬಾನಾಡಿ ಸಲುಹಿ
ವರುಷಗಳಿಂದಾ ಬಾಳಿದಾ ಮರ
ಕ್ಷಣದೊಳಗಾಯಿತು ಧರಾಶಾಯಿ
ವಿರೋಧಿಸಲೂ ಬಾರದ ಬಡಪಾಯಿ

ಅರೆ ಕಡೆದ ರೆಂಬೆ ಕೊಂಬೆಗಳಲ್ಲಿ
ಮತ್ತೆ ಚಿಗುರುವ ಹುನ್ನಾರು
ನೀ ಕಡಿದರೆ ನಾ ಚಿಗುರುವೆ
ಎಂದು ನೀಡುತಿದೆ ಮರು ಉತ್ತರ

ಅರಿಯುವನೇ ನಿನ್ನ ಉತ್ತರ
ತನ್ನ ಕುಲವನ್ನೇ ಮರೆತಿರಲು
ನಿನ್ನ ತನುವ ಅಳಿಸಿ ತಾನು
ಮೆರೆವ ಜಗದಿ ತನಗೇ ತಾನು

ತೋರು ನೀ ಪ್ರತಾಪ
ನೀಡು ನೀ ದಿಟ್ಟುತ್ತರ
ನೀನನಗಿದ್ದರೆ ನಾ ನಿನಗೆ ಎಂದು
ಹೇಳು ಉಕ್ತಿ ಹೇಳುವ ಪಾಠ

‍ಲೇಖಕರು Admin

7 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading