ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಮೋದ ಜೊಶಿ ಹೊಸ ಕವಿತೆ- ಮಾತು ಕಲಿಯೆ ಪಾತರಗಿತ್ತಿ…

ಪ್ರಮೋದ ಜೊಶಿ

ಬಣ್ಣಬಣ್ಣದ ನವಿರು ರೆಕ್ಕೆಯ
ಪುಟ್ಟ ಪಾತರಗಿತ್ತಿ
ಹಾರಿ ಹಾರಿ ಸುಸ್ತಾಯಿತೇನೊ
ದೊರೆಯದೆ ಸುಮಗಳಿಂದ ಬುತ್ತಿ

ಅರಳಿ ನಿಂತ ಸುಮಗಳೊಳಗೆ
ನೀನೊಂದು ಸುಮವ ಆರಿಸಿ
ಆನಂದದಿ ಮಧು ಹೀರುವ ಕಾಲ
ಹೋಗಿದೆ ಗೆಳೆಯಾ

ಹುಡುಕಿದರೂ ದೊರಕದ ದಿನಕೆ
ಮೌನಕೆ ಉತ್ತರ ದೊರಕೀತೆ
ಬದಲಾಗಿದೆ ಕಾಲ ಸ್ವಾರ್ಥತನದಿ
ವೈಜ್ಞಾನಿಕ ತತ್ವದ ಮಹತ್ವ ಮರೆತು

ಇಂಚಿಂಚು ಜಾಗವೂ ಸಿಮೆಂಟಿನ ಪದರು
ದೊರಕುವದೆಲ್ಲಿ ಹಸಿರಿನ ಹೊದರು
ಎಲ್ಲೋ ಒಂದು ಅರಳಿದ ಸುಮಕೂ
ನೂರೆಂಟು ಚಿಟ್ಟೆಯ ಕೊಸರು

ಮೌನದಿ ನೀ ಇದ್ದರೆ ಹೆಗೆ
ಮಾತು ಕಲಿಯೆ ಪಾತರಗಿತ್ತಿ
ಅಂತರಾಳ ನೋವನ್ನು ಬಿಚ್ಚಿ ಹೆಲು
ಅರುತಾರು ಕೊನೆಗೆ ಹತ್ತಾರು

ಬದುಕಿಗೆ ಬೆಕು ಹೋರಾಟದ ಕಿಚ್ಚು
ಕಿಂಚಿತ್ತಾದರು ಬದುಕಲು
ಸ್ವಾರ್ಥದೊಳು ಸ್ವಾರ್ಥಿಯಾಗಿ ಮೆಟ್ಟಿನಿಂತು
ಗಳಿಸಿಕೊ ನಿನ್ನ ಸುಖ ಉಳಿಸಿಕೊ ಬದಕು

ಹತ್ತಿದ ಕಿಡಿ ಪ್ರಜ್ವಲಿಸಲಿ ಇನಿತು
ಎಲ್ಲೊ ಬೆಳಸ್ಯಾರು ಹಲವರು
ಹಲವುಗಳಲ್ಲಿ ಸಿಗಬಹುದು ಕೆಲವು
ಇದಲ್ಲವೆ ನಿನ್ನ ಮೊದಲ ಗೆಲವು

ಮೌನದಿ ನೊಂದು ನೀ ಸತ್ತರೇನು ಬಂತು
ಮಾತು ಕಲಿಯೆ ಪಾತರಗಿತ್ತಿ
ನಿನಗೆ ನೀ ಉಳಿಯಲು
ನಮ್ಮ ಮನ ರಂಜಿಸಲು

‍ಲೇಖಕರು Admin

17 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading