ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿ ಪುಸ್ತಕದಲ್ಲೂ ವಸುಧೇಂದ್ರರ ಆಪ್ತತೆ..

 

 

 

 

 

 

 

ಸಂಯುಕ್ತ ಪುಲಿಗಲ್

 

ಎಷ್ಟು ಭಿನ್ನ ಮಾಡಿದರೂ ಕೊನೆಗೂ ಉಳಿದುಬಿಡುವ ಶೇಷ ಇದೆಯಲ್ಲಾ….. ಈ concept ನನಗೆ ತುಂಬಾ ಇಷ್ಟವಾಯಿತು. ಎಲ್ಲರ ಬದುಕಿನಲ್ಲೂ ಉಳಿದುಕೊಳ್ಳುವ ಈ ಶೇಷ(ಗಳು) ಮೌನರಾಗವಾಗಿ ಒಳಗೊಳಗೇ ಮಿಡಿಯುತ್ತಿರುತ್ತವೆ. ಈ ರಾಗಗಳನ್ನು ಒಂದು ತಾನವಾಗಿಸಿ, ಪುಸ್ತಕವಾಗಿಸಿದ ವಸುಧೇಂದ್ರರಿಗೆ ಅಭಿನಂದನೆ.

ಪುಸ್ತಕದ ಎರಡು ಭಾಗಗಳಾದ ’ಅಂಶ’ ಮತ್ತು ’ಛೇದ’ ನಮ್ಮ ವಿಶೇಷ ಗಮನಸೆಳೆಯುತ್ತದೆ. ’ಅಂಶ’ದ ಭಾಗದ ಕಥೆಗಳು ಹೊಸ ರೀತಿಯ ಕಥಾ ಹೆಣಿಕೆಯನ್ನು ಕಟ್ಟಿಕೊಡುತ್ತದೆ. ’ಅಮೃತಸೊಪ್ಪು’ ಮತ್ತು ’ಡೆವಿಲ್ ಡಾಗ್’ ನ ಕಥಾಹಂದರ ಮತ್ತು ನಿರೂಪಣಾ ನಾವೀನ್ಯತೆ ಬಹಳ ಮೆಚ್ಚುಗೆಯಾಯಿತು.

ವಸುಧೇಂದ್ರರ ಗಟ್ಟಿ ಭಾಷೆ ಮತ್ತು ಸರಳ ನಿರೂಪಣೆ ಅವರ ಪ್ರತಿ ಪುಸ್ತಕದಲ್ಲೂ ಎದ್ದು ಕಾಣುವ ಆಪ್ತತೆ.

ಇನ್ನು ಬಹಳವಾಗಿ ಕಾಡಿದ್ದು ’ಛೇದ’ ಭಾಗದ ಕಥೆಗಳು. ಸಲಿಂಗಿಗಳ ಒಳತೋಟಿಯ ವಿವಿಧ ರೂಪುಗಳಾದ ಈ ಕಥೆಗಳ ರಚನೆ, ಉದ್ದೇಶ ಎಲ್ಲವೂ ಓದಿಯೇ ತಿಳಿಯಬೇಕಾದದ್ದು. Casual ಆಗಿ ಓದಿಸುವ ಒಂದು ಚಿಕ್ಕ ಕಥೆಯೂ ಸಹ ನಮ್ಮ ಬದುಕಿನ ಎಷ್ಟೆಲ್ಲಾ ಕತ್ತಲಕೋಣೆಗಳಿಗೆ ಬೆಳಕುಚೆಲ್ಲುತ್ತದೆ ಎಂಬುದಕ್ಕೆ ಈ ಕಥೆಗಳು ಸಾಕ್ಷಿ.

ಕೆಲವೊಮ್ಮೆ, ಏಕತಾನತೆಯು ಈ ಕಥೆಗಳಲ್ಲಿ ಮೂಡುತ್ತಿದೆಯೇ ಎನಿಸಿದಾಕ್ಷಣ “ಗಂಡು-ಹೆಣ್ಣಿನ ಸಂಬಂಧದ ಕುರಿತಾದ ಸಾವಿರಾರು ಕಥೆಗಳಲ್ಲಿ ಕಾಣದ ಏಕತಾನತೆ ಈ ಕಥೆಗಳಲ್ಲಿ ನನಗೇಕೆ ಕಾಣುತ್ತಿದೆ?” ಎಂದು ಪ್ರಶ್ನೆ ಹಾಕಿಕೊಂಡಾಗ ನನ್ನ ಮಿತಿಯೇ ನನಗೆ ಅರಿವಾಗಿತ್ತು.

ಎಲ್ಲರೂ ಓದಲೇಬೇಕಾದ ಉತ್ತಮ ಪುಸ್ತಕವನ್ನು ಬರೆದ ವಸುಧೇಂದ್ರರಿಗೆ ಧನ್ಯವಾದಗಳು.

‍ಲೇಖಕರು avadhi

28 November, 2017

1 Comment

  1. ಸಂಯುಕ್ತ

    ಧನ್ಯವಾದಗಳು ಅವಧಿಗೆ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading