ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಪ್ರತಿ ಕ್ಷಣ ನೀನಿಲ್ಲದೆ ಶಬ್ದಗಳು ಮಾತಾಗವು…’ – ಒಂದು ಗಜ಼ಲ್

ಗಝಲ್

ಎಂ ಎಂ ಶೇಕ್ ಯಾದಗಿರಿ

ಹೊಲಕ್ಕೆ ಬಿದ್ದ ಹನಿಗಳು ತೆನೆ ಕಟ್ಟುತ್ತವೆ ನಿಜ
ಉಡಿಗೆ ಬಿದ್ದ ಮಾತುಗಳು ಕೆನೆ ಕಟ್ಟುತ್ತವೆ ನಿಜ
 
ನೆರಳು ಕಾಣದ ಕ್ಷಣಗಳಿವೆ ದಿನಗಳಲ್ಲಿ
ಆದರೂ ಬದುಕುಗಳು ಗೊನೆ ಕಟ್ಟುತ್ತವೆ ನಿಜ
 
ಯಾರದೋ ಹಾದಿಯಲ್ಲಿ ಕುಳಿತು ಅಳುತ್ತವೆ
ಆರ್ದ್ರ ಸಂಜೆಗಳು ಕೊನೆ ಕಟ್ಟುತ್ತವೆ ನಿಜ .
 
ಕಣ್ಣಿಗೆ ಕಾಣದು ಕಡಲ ನೀರು ಆವಿಯಾಗುವಿಕೆ
ತಂಗಾಳಿಯಲಿ ಮೋಡಗಳು ಹನಿ ಕಟ್ಟುತ್ತವೆ ನಿಜ.
 
ಪ್ರತಿ ಕ್ಷಣ ನೀನಿಲ್ಲದೆ ಶಬ್ದಗಳು ಮಾತಾಗವು
ಆ ನಿಧಿಗಾಗಿ ಜೇನುಗಳು ಮಧು ಕಟ್ಟುತ್ತವೆ ನಿಜ,
 

‍ಲೇಖಕರು avadhi

7 May, 2013

8 Comments

  1. anwar hussain

    Very nice ghazal…I really liked it…
    I read each and every ghazal of yours…
    They are really nice amd wonderful to read….you ahould be qualified for state awards…
    Looking forward for more ghazals from from u..:-)

  2. lakshmikanth itnal

    ಎಂ ಎಂ ಶೇಖ್, ಗಝಲ್ ತುಂಬ ಚನ್ನಾಗಿದೆ, ಶೈಲಿ ಮೆಚ್ಚಿತು……….

  3. Swarna

    ವಾಹ್ ! ಸುಂದರ ಸಾಲುಗಳು

  4. ravi phoenix

    ಚೆನ್ನಾಗಿದೆ….

  5. chalam

    ಅದ್ಬುತವಾದ ಸಾಲುಗಳು..

  6. anu pavanje

    ಅದ್ಬುತ….!!!

  7. mmshaik

    dhannyavaadgaLu..

  8. ಪ್ರಕಾಶ ಬಿ. ಜಾಲಹಳ್ಳಿ

    ನೆರಳು ಕಾಣದ ಕ್ಷಣಗಳಿವೆ ದಿನಗಳಲ್ಲಿ
    ಆದರೂ ಬದುಕುಗಳು ಗೊನೆ ಕಟ್ಟುತ್ತವೆ ನಿಜ. nimma gazal salugalu tumba chennagive. gazal rachnege balsuv hosa pratimeglu vishistavagive nice gazal…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading