ಪ್ರತಿಭಾ ಮತ್ತು ಆ ಕವನ

 ನಳಿನ ಡಿ 

ಎಡಬಿಡದೆ ಕವಿಗಳ ಕರೆಸಿ,
ಕಿವಿ ಗಡಚಿಕ್ಕುವಂತೆ ಕರತಾಡನ ಮಾಡದೆ,
ಒಂದಷ್ಟು ಸಮಯ ಸಾಗುವ ರೀತಿಗೆ,
ನಾನೂ ಸೇರಿ ಗೋಷ್ಠಿಯೆಡೆಯಲ್ಲಿ,

ಎಲ್ಲರೂ ತಂತಮ್ಮ ಶಕ್ತಿ ಪ್ರಕಾರ ಓದಿದ್ದು ಮುಗಿದು,
ಆ ಯಮ್ಮಾ,
ಅದೇ ಅಗಲ ಮೊಗದ,
ಕಾಸಿನಗಲ ಕುಂಕುಮದ,
ಗುಂಡಗೆ ಸೀರೆಯುಟ್ಟ,
ಅರೆಬಿಳಿತಲೆಯ, ಉದ್ದ ಜಡೆಯ,
‘ನಾ ಹೆಂಗಸಲ್ಲ ಗಂಡಸೆನ್ನುವಾ’
ಅದೇ ಆಕೆ ಕೊನೆಯಲ್ಲಿ ಎದ್ದು ನಿಂತಾಗ,
ಗುಂಡಿಗೆಗಳು ನಿತ್ತವು.

ಆಸ್ಟ್ರೇಲಿಯಾದ ಡರೊತಿ ಪೊರ್ಟರ್, ಗೆಳತಿಯದಂತೆಂದು,
ಅನುವಾದ
ಶುರುವಿಟ್ಟಾಗ
ಕೆಲವರು ಸೀರೆ ಸರಿಪಡಿಸಲು,
ಇನ್ನು ಹಲವರು ಸೆರಗು ಮುಚ್ಚಿ,
ತಲೆ ಬಗ್ಗಿಸಿ,
ಮೇಲೆತ್ತಲೇ ಇಲ್ಲ.. ‌ಶಿರವಾ,
ಕಿವಿ ಮುಚ್ಚಿ ಅಂದರು ಶಿವಾ ಶಿವಾ..

ಗಂಡಸರೋ,
ಅಲ್ಲೇ ನೋಟ ನೆಟ್ಟು,
ಆಕೆಯ ಭಾವ, ಭಂಗಿ,
ಪದ್ಯದ ಲಯ,
ಭಾವಪ್ರಾಪ್ತಿಯಾಗದಿದಕೆ,
ರೋಸಿ,
ಇನ್ನೂ ಓದುತಿರೆ.. ಲಲನೆಯರು ನಾಚಿ ನೀರಾಗಿ, ಕೆಲವರು ಅಲ್ಲಿಂದ ಕಾಲ್ಕಿತ್ತು,
ಕಕ್ಕಾಬಿಕ್ಕಿಯಾದ ಉಳಿದವರು ಅಲ್ಲೇ ಉಳಿದರು,
ಕಳೆದೇ ಹೋಯಿತು ಕಾಲ,
ಸುಮಾರು ಐದಾರು ವರುಷಗಳು ಮೀರಿದ ಕತೆಯ
ಕವಿತೆಗೆ..
ಭಾರತೀಯ ಸಂಸ್ಕೃತಿಯೇ ಮೈವೆತ್ತಂತಿರುವ ಆಕೆಯ ಪದ್ಯದ ಓಘ, ವಿಷಯ, ವ್ಯಾಪ್ತಿಯೆಡೆಗೆ
ಸಂಸ್ಕೃತಿ ಚಿಂತಕರು ಕುದ್ದು ಎದ್ದರು…

ಕರತಾಡನ ಮುಗಿದ ಮೇಲೆ,
ಸೀಟು ಕಿತ್ತು ನೆಗೆದ ನಾನೆಂದೆ,
‘ಮೇಡಂ ನಮ್ಮ ಮುಂದೆ ಪದ್ಯವೇ ಎದ್ದು ಬಂದಂತೆ ಓದಿದಿರಿ’
ನಕ್ಕಳಾ ರಾಜಕುಮಾರಿ ಕೈ ಕುಲುಕಿ..

ಒಕ್ಕಣೆಯ ನೆನಪು ಏನಿತ್ತೆಂದರೆ..
‘ಕೆಂಪು ಕೊಕ್ಕಿನಂತೆ
ಎದ್ದು, ನಾಗರ ಹಾವಿನಂತೆ ಹೆಡೆಯಾಡುತ್ತಾ
ತೂಗಿತು, ಅವಳ ಕಡೆಗೆ,’

‘ಆದರೆ ಓರಿಸಿಸ್ ಸತ್ತಿದ್ದ,’

‘ಪುರುಷತ್ವ ಮಾತ್ರ ಪುಂಗಿನಾದಕ್ಕೆ ಒಲಿದ
ನಾಗದಂತೆ ಆಡಿತು’

ಎಷ್ಟು ಕೈತೊಳೆದರೂ ಜೈಸಿ
ಬರೋ ಕರೋನ ತರನೇ, ಹಳೆ ನೆಪುಗಳು ರೂಮಿಯ ಎದೆಯಿಂದ ಚಿಮ್ಮುವ ಪ್ರೇಮದಲ್ಲಿ
ಮಿಂದು ನಾನೂ ಆ ತಾಯೂ…
ಬೆತ್ತಲಾದರೂ ಮುಚ್ಚಿಕೊಳುವ
ಡೋಂಗಿಗಳೆದುರು,
ಬೆತ್ತಲು ಬೆಳಕಾಗದೇನು?

ಕಾಲ, ಭಾಷೆ, ದೇಶ ಮೀರುವ ಕವಿತೆಗಳಿಗೆ ಶರಣು

‍ಲೇಖಕರು nalike

May 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: