ಮೇರಿ ಫ್ರೈ
ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ
ಪ್ರಕಟವಾಗದ ಕವಿತೆಯೊಂದು ಪ್ರಸಿದ್ಧಿಗೊಂಡಿದ್ದು ಗೊತ್ತಿದೆಯಾ ?
ಈ ಕೆಳಗೆ ಅನುವಾದಿಸಿರುವ ಕವಿತೆಯನ್ನು ಕವಿಯತ್ರಿ ಪ್ರಕಟಿಸಲೇ ಇಲ್ಲ.
ಆದರೂ ಈ ಕವಿತೆ ಎಲ್ಲೆಡೆ ಜನಪ್ರಿಯವಾಗಿದೆ. ಅದಕ್ಕೇನು ಕಾರಣ ಎಂಬುದನ್ನು ಮುಂದೆ ಓದಿ.
ಈ ಕವಿತೆಯಿಂದ ಪ್ರಸಿದ್ಧವಾದವರು ಮೇರಿ ಎಲಿಜಬೆತ್ ಫ್ರೈ (1905-2004) ಅಮೆರಿಕಾದ ಕವಿಯತ್ರಿ ಹಾಗೂ ಹೂಗಳ ಮಾರಾಟ ಮಾಡುವವರು. ಈ ಕವಿತೆಯಿಂದ ಪ್ರಸಿದ್ಧವಾದವರು. 1932ರಲ್ಲಿ
ಇವರು ಓಹಿಯೋದ ಡೇಟನ್ ನಲ್ಲಿ ಜನಿಸಿದರು. ಇವರು ತಮ್ಮ ಮೂರನೇ ವರ್ಷದಲ್ಲಿ ಅನಾಥರಾದರು. ಮುಂದೆ ಇವರು ಬಟ್ಟೆ ವ್ಯಾಪಾರಿಗಳಾಗಿದ್ದ ಕ್ಲಾಡ್ ಫ್ರೈ ಎಂಬುವವರು ವಿವಾಹವಾದರು. ಪತಿಯೊಂದಿಗೆ ಮೇರಿ ಸಹ ಹೂಗಳನ್ನು ಬೆಳೆಯುವ ಮಾರಾಟ ಮಾಡುವ ಕಾರ್ಯವನ್ನು ಕೈಗೊಂಡರು.
ಪ್ರಸಿದ್ಧವಾದ ಈ ಕವಿತೆಯ ಹಿಂದೊಂದು ವಿಶೇಷವಾದ ಸಂಗತಿಯಿದೆ. ಈ ಕವಿತೆಯನ್ನು ಮೇರಿಯವರು ಕಂದುಬಣ್ಣದ ಖರೀದಿ ಚೀಲದ ಮೇಲೆ ತಮಗೆ ತೋಚಿದ್ದನ್ನು ಬರೆದಿದ್ದರು.
ಈ ಕವಿತೆಯ ಹುಟ್ಟಿನ ಹಿಂದೆಯೂ ಒಂದು ಸಂಗತಿಯಿದೆ. ಮೇರಿಯವರ ಮನೆಯಲ್ಲಿದ್ದ ಜ್ಯೂವಿಶ್ ಬಾಲಕಿ ಮಾರ್ಗರೆಟ್ ಶ್ವಾರ್ಜ಼್ ಕೋಫ್ ಅವರ ತಾಯಿ ಜರ್ಮನಿಯಲ್ಲಿ ತೀರಿಹೋದರು. ಆಗ ಅಲ್ಲಿದ್ದ ಅಶಾಂತ ವಾತಾವರಣದ ಕಾರಣದಿಂದ ಮಾರ್ಗರೇಟ್ ಗೆ ಜರ್ಮನಿಗೆ ಹೋಗಲಾಗಲಿಲ್ಲ. ಈ ಸಂದರ್ಭದಲ್ಲಿಯೇ ಈ ಸ್ಥಿತಿಯನ್ನು ಗಮನಿಸಿ ಮೇರಿ 12 ಸಾಲುಗಳ ಕವಿತೆಯನ್ನು ರಚಿಸಿದರು. ಇದನ್ನೇ ಮೇರಿ ಹಲವಾರು ಕಾಪಿಗಳನ್ನು ತಯಾರಿಸಿ ಖಾಸಗಿಯಾಗಿ ಹಂಚಿದರು. ಅವರೆಂದೂ ಈ ಕವಿತೆಯನ್ನು ಪ್ರಕಟಿಸಲಿಲ್ಲ.
ಶ್ವಾರ್ಜ್ ಕೋಫ್ ಕುಟುಂಬವೂ ಸಹ ಈ ಕವಿತೆಯನ್ನು ಪೊಸ್ಟ್ ಕಾರ್ಡ್ ಗಳಲ್ಲಿ ಬರೆದೂ ಹಂಚಿದರು. ಫ್ರೈ ಇದನ್ನು ತಾನೇ ರಚಿಸಿದ್ದೆಂದು ಹೇಳುವವರೆಗೂ 1990ರವರೆಗೂ ಈ ಕವಿತೆ ಯಾರದೆಂದು ಯಾರಿಗೂ ಗೊತ್ತಾಗಲಿಲ್ಲ. 1998ರಲ್ಲಿ ಅಬಿಗೇಲ್ ವಾನ್ ಬುರೆನ್ ಎಂಬುವವರು ಸಂಶೋಧನೆ ಮಾಡಿ ಹೇಳಿದ ನಂತರವೇ ಇದು ಫ್ರೈ ಅವರೇ ರಚಿಸಿದ್ದೆಂದು ಅಂತಿಮವಾಗಿ ನಿರ್ಧರಿತವಾಯಿತು.
ನನ್ನ ಸಮಾಧಿಯ ಬಳಿ ನಿಲ್ಲದಿರು ಮತ್ತು ರೋದಿಸದಿರು
ನನ್ನ ಸಮಾಧಿಯ ಬಳಿ ನಿಲ್ಲದಿರು ಮತ್ತು ರೋದಿಸದಿರು
ನಾನಲ್ಲಿಲ್ಲ ನಾನು ಮಲಗಿಲ್ಲ
ನಾನು ಬೀಸುವ ಸಾವಿರ ಗಾಳಿಯಾಗಿದ್ದೇನೆ
ನಾನು ವಜ್ರದಂತೆ ಹೊಳೆವ ಹಿಮದ ಮಣಿಗಳಾಗಿದ್ದೇನೆ
ನಾನು ಮಾಗಿದ ಬೆಳೆಯ ಮೇಲಿನ ಸೂರ್ಯನ ಹೊಂಬೆಳಕಾಗಿದ್ದೇನೆ
ನಾನು ಶಾಂತ ಶರತ್ಕಾಲದಿ ಸುರಿವ ಮಳೆಯಾಗಿದ್ದೇನೆ
ಯಾವಾಗ ನೀನು ಪ್ರಶಾಂತವಾದ ಬೆಳಗಿನಲ್ಲಿ ಏಳುವೆಯೋ
ಆಗ ನಾನು ಸುತ್ತ ತಿರುಗುವ ಪಕ್ಷಿಗಳ ಹಾರುವಿಕೆಯ
ಮೇಲೆತ್ತುವ ಚುರುಕುತನವಾಗಿದ್ದೇನೆ
ನಾನು ಇರುಳಿನಲಿ ಮೃದುವಾಗಿ ಹೊಳೆಯುವ ನಕ್ಷತ್ರಗಳಾಗಿದ್ದೇನೆ
ನನ್ನ ಸಮಾಧಿಯ ಬಳಿ ನಿಲ್ಲದಿರು ಮತ್ತು ಅಳದಿರು
ನಾನಲ್ಲಿಲ್ಲ ನಾನು ಸಾವಿಗೀಡಾಗಿಲ್ಲ






sir check dates. Mary wrote the poem in 1932.
ಈ ಕವಿತೆಯಿಂದ ಪ್ರಸಿದ್ಧವಾದವರು ಮೇರಿ ಎಲಿಜಬೆತ್ ಫ್ರೈ (1905-2004) ಅಮೆರಿಕಾದ ಕವಿಯತ್ರಿ ಹಾಗೂ ಹೂಗಳ ಮಾರಾಟ ಮಾಡುವವರು. ಈ ಕವಿತೆಯಿಂದ ಪ್ರಸಿದ್ಧವಾದವರು. 1932ರಲ್ಲಿ
ಇವರು ಓಹಿಯೋದ ಡೇಟನ್ ನಲ್ಲಿ ಜನಿಸಿದರು.