ಜಂಬೆ ವಾದ್ಯದ ಮಿಷೆಲ್

ನೆಲ ಮೂಲದ ಹಾಡುಗಾರ್ತಿ– ಮಿಷೆಲ್ ಎಲೀಯಾ ಕಮಾಲ್ 

ಕಾತ್ಯಾಯಿನಿ ಶ್ರೀ

“Music can Travel, Music has no Borders ”
ಅನ್ನುವ ಹಾಗೇ ಮಿಷೆಲ್ ( Michal Elia Kamal) ಹುಟ್ಟಿದ್ದು ಜುಲೈ 27, 1987 ರಲ್ಲಿ ಇಸ್ರೇಲ್ ನ ಟೆಲ್- ಅವಿವ್ ದಲ್ಲಿ. ಪರ್ಷಿಯನ್ ಕುಟುಂಬದಲ್ಲಿ ಬೆಳೆದ ಈಕೆ ತಂದೆ – ತಾಯಿ ಹುಟ್ಟಿದ್ದು ಇರಾನ್ ನಲ್ಲಿ , ಇರಾನಿ – ಇಸ್ರೇಲಿಯನ್ ಬಹುಸಂಸ್ಕೃತಿಯ ನೆಲೆ ವಾತವರಣದಿಂದ ಸಂಗೀತದದ ಬಗ್ಗೆ ಒಲವು ಮೂಡಿಸಿಕೊಂಡಳು. ಇಸ್ಲಾಮಿಕ್ ಕುಟುಂಬದಲ್ಲಿ ಹೆಣ್ಣು ಮಕ್ಕಳು ಹಾಡುವುದು, ವೇದಿಕೆ ಹತ್ತುವುದು ನಿಷಿದ್ದ. ಈ ಕಟ್ಟಳೆಗಳನ್ನು ಮೀರಿ ಪ್ರಗತಿಪರ ಇಸ್ಲಾಮಿಕ್ ಮಹಿಳಾಪರಳಾಗಿ ತನ್ನ ಸಂಗೀತ ಮತ್ತು ಹಾಡುಗಳ ರಚನೆಯಲ್ಲಿ ತೊಡಗಿಸಿಕೊಂಡಳು.

ಮೊದಲಿಗೆ 2010 ರಲ್ಲಿ ಲೈಟ್ ಇನ್ ಬ್ಯಾಬಿಲೋನ್ (Light in Babylon) ಬ್ಯಾಂಡ್ ಟ್ರೂಪ್ ಅನ್ನು ಕಟ್ಟುತ್ತಾಳೆ. ಬ್ಯಾಬಿಲೋನ್ ಅಂದರೆ ಒಂದು ವ್ಯವಸ್ಥೆ. ಇದು ನಮ್ಮನ್ನು ಒಂದೇ ದಿಕ್ಕಿನಲ್ಲಿ ನೋಡಲು ಒತ್ತಾಯಿಸುತ್ತದೆ ಇಂತಹ ವ್ಯವಸ್ಥೆಗೆ ಯಾವುದೇ ರೀತಿಯ ಕಲೆಯನ್ನು ಸೇರಿಸಿದರೆ ಒಂದು ಬೆಳಕನ್ನು ಸೃಷ್ಟಿಸಿ, ಜನರು ಕೂಡ ವಿಭಿನ್ನ ಆಯಾಮದಲ್ಲಿ ನೋಡುವಂತೆ ಸಂಗೀತ ಪ್ರೇರೇಪಿಸುತ್ತದೆ ಎಂದು ಹೇಳುವ
ಮಿಷೆಲ್ ಟರ್ಕಿ ದೇಶದ ಇಸ್ತಾನ್‌ಬುಲ್ ನಗರದಲ್ಲಿರುವ ಇಸ್ತಿಕಲಾಲ್ ಸ್ಟ್ರೀಟ್ ನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ.

ಇಸ್ತಾನ್‌ಬುಲ್ ನಗರ ಬಹುಸಂಸ್ಕೃತಿ ಜನರು ಸೇರುವ ಪ್ರದೇಶ ಹಾಗೆಯೇ ಐತಿಹಾಸಿಕ ಕಲೆ ಶ್ರೀಮಂತಿಗೆ ಹೆಸರಾದ ನಗರ. Light in Babylon ತಂಡದಲ್ಲಿ ಮಿಷೆಲ್ (ಇಸ್ರೇಲ್)- ಜಂಬೆ ವಾದ್ಯ ನುಡಿಸುವವಳು, ಮೆಟೆಹೆನ್ (ಟರ್ಕಿ)- ಸಂತೂರ್ ವಾದಕ, ಜೂಲಿನ್ (ಫ್ರಾನ್ಸ್)- ಗಿಟಾರ್ ಪ್ಲೇಯರ್. ಈ ಮೂವರು ಸೇರಿ ಇಸ್ತಿಕಲಾಲ್ ಸ್ಟ್ರೀಟ್‌ ನಲ್ಲಿ ನೆಲಮೂಲದ ಹಾಡುಗಳನ್ನು ಪ್ರದರ್ಶಿಸುತ್ತಾರೆ. ಈ ತಂಡದಲ್ಲಿ ಮೂರು ವಿಭಿನ್ನ ಭಾಷೆ, ಸಂಸ್ಕೃತಿ, ವ್ಯಕ್ತಿತ್ವ ಒಳಗೊಂಡ ತಂಡ ನುಡಿಸುವ ವಾದ್ಯಗಳು Multicultural sound ಸೃಷ್ಟಿಸುವಲ್ಲಿ ಪ್ರಸಿದ್ಧಿ ಪಡೆಯುತ್ತಾರೆ.

ಮಿಷೆಲ್ ಹಿಬ್ರೂ, ಟರ್ಕಿ, ಇರಾನಿ, ಇಸ್ರೇಲಿ ಭಾಷೆಗಳಲ್ಲಿ ಹಾಡಬಲ್ಲಳು. ಇವರ ಬ್ಯಾಂಡ್ ಟ್ರೂಪ್ Creative musical adventure ಮೂಲಕ ಐರೋಪ್ಯ ರಾಷ್ಟ್ರಗಳಲ್ಲಿ ವೇದಿಕೆ ದೊರೆತು World Musical Festival ಅಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ. ಮಿಷೆಲ್ ಗಾಯನದ ಸ್ಪೂರ್ತಿ ಭಾರತದ ಹೆಣ್ಣುಮಕ್ಕಳು ಕೃಷಿ ಸಮಯದಲ್ಲಿ ಹಾಡುವ ಸುಗ್ಗಿ ಹಾಡುಗಳೆನ್ನುವುದು ಬಹುಮುಖ್ಯ.

ಮಿಷೆಲ್ ತನ್ನ 22 ವಯಸ್ಸಿನಲ್ಲಿ ಅಂದರೆ 2009 ರಲ್ಲಿ ಭಾರತ ಪ್ರವಾಸ ಕೈಗೊಂಡಾಗ ಇಲ್ಲಿನ ಭತ್ತದ ಗದ್ದೆಗಳಲ್ಲಿ ಕೆಲಸ ಮಾಡುವ ಹೆಂಗಸರೊಟ್ಟಿಗೆ ಬೆರೆತು ಊಟ ಮಾಡಿ ಅರ್ಥವಾಗದ ಭಾಷೆಯಲ್ಲಿ ವ್ಯವಹರಿಸಿದ್ದನ್ನು ತನ್ನ ಸಂಗೀತ ಹಾಡುಗಾರಿಕೆಯ ಜರ್ನಿ ಭಾರತದಿಂದ ಶುರುವಾಯಿತು ಎಂದು ನೆನಪಿಸಿಕೊಳ್ಳುತ್ತಾಳೆ. ಹಾಗೇಯೆ ಭಾರತದ ಕೃಷಿಕ ಹೆಣ್ಣುಮಕ್ಕಳು ಬಹಳ ಶ್ರಮಜೀವಿಗಳೆನ್ನುತ್ತಾಳೆ.

ನೆಲಮೂಲದ ಹಾಡುಗಾರಿಕೆಯೆಂದರೆ ಹಾಡು ಕಟ್ಟುವುದು. ಅದಕ್ಕೆ ಅದರದ್ದೇ ಆದಂತಹ ಮಣ್ಣಿನ ಹಿನ್ನೆಲೆಯಿರುತ್ತದೆಯಾದ್ದರಿಂದ ಇದಕ್ಕೆ ಯಾವುದೇ ಶಾಸ್ತ್ರೀಯ ಪ್ರಕಾರಗಳ ನಿಬಂಧನೆಗಳಿಲ್ಲ. ಸಂಗೀತವೆಂದರೆ ನೆಲ, ನೆಲವೆಂದರೆ ನಮ್ಮ ಅಸ್ಮಿತೆಯ ಜೊತೆಗೇ ನಮ್ಮ ಸಂಸ್ಕೃತಿಯ ಕುರುಹು.

‍ಲೇಖಕರು avadhi

April 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: