ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಮತ್ತು ಚೂರಿ

ಹಿಂದಿ ಮೂಲ : ನರೇಶ ಜೈನ್

girish-jakapure

ಗಿರೀಶ ಜಕಾಪುರೆ

ಹೇಗೆ ಪುಸ್ತಕವೊಂದು
ಚೂರಿಯಾಗುತ್ತದೆ
ಹಾಗೂ ಇಳಿಯುತ್ತದೆ
ಕರುಳ ಬಳ್ಳಿಯೊಳಗೆ

ಹೇಗೆ ಚೂರಿಯೊಂದುBook_painting
ಪುಸ್ತಕವಾಗುತ್ತದೆ
ಹಾಗೂ ಇಳಿಯುತ್ತದೆ
ಮೆದುಳ ತಳಗಳಲಿ

ಯಾವ ಪುಸ್ತಕ
ಚೂರಿಯ ವಿರುದ್ಧವಾಗಿ
ತನ್ನ ಪುಟಗಳನ್ನು
ಬಡಿದೆಬ್ಬಿಸುತ್ತದೆ

ಯಾವ ಚೂರಿಯು
ಪುಸ್ತಕದ ಪುಟಗಳ
ಕತ್ತರಿಸಲು ಹೊಂಚು
ಹಾಕುತ್ತದೆ

ಯಾರು ಹೇಳಬಲ್ಲರು
ಇದೆಲ್ಲ ನಿನಗೆ
ಯಾರು ಉಳಿಸಬಲ್ಲರು ನಿನ್ನ
ಈ ಪುಸ್ತಕದಿಂದ
ಆ ಚೂರಿಯಿಂದ

ಕೊನೆಗೆ ನೀನು
ಯಾವುದರಿಂದ ಕಲಿಯುವೆ
ಪುಸ್ತಕದಿಂದಲೋ
ಅಥವಾ
ಚೂರಿಯಿಂದಲೋ

‍ಲೇಖಕರು Admin

10 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading