ಇವತ್ತು ಸಫ್ದರ್ ಹಶ್ಮಿ ಹುತಾತ್ಮರಾದ ದಿನ. ಅವರ ನೆನಪಿನಲ್ಲಿ ಶಂಕರ್ ಎಸ್ ಆರ್ ಅವರ ಅನುವಾದಿತ ಕವಿತೆ ಇಲ್ಲಿದೆ.
ಕನ್ನಡಾನುವಾದ: ಶಶಾಂಕ್ ಎಸ್ ಆರ್
ಪುಸ್ತಕಗಳು
ಪುಸ್ತಕಗಳು
ಮಾತನಾಡುತ್ತವೆ
ಯಾವುದೋ ಜಮಾನದ ಬಗ್ಗೆ
ಜಗತ್ತಿನ ಬಗ್ಗೆ ಜನರ ಬಗ್ಗೆ
ಇಂದಿನ ಬಗ್ಗೆ ನಾಳಿನ ಬಗ್ಗೆ
ಒಬ್ಬೊಬ್ಬ ದೋಸ್ತನ ಬಗ್ಗೆ.
ನೋವು-ನಲಿವಿನ ಬಗ್ಗೆ
ಹೂವು-ಬಾಂಬುಗಳ ಬಗ್ಗೆ
ಸೋಲು-ಗೆಲುವುಗಳ ಬಗ್ಗೆ
ಕರುಣ-ಮರಣಗಳ ಬಗ್ಗೆ –
ಕಿವಿಯಾಗುವುದಿಲ್ಲವೇ ನೀನು
ಈ ಪುಸ್ತಕಗಳ ಮಾತುಗಳಿಗೆ?
ಪುಸ್ತಕಗಳು ಒಂದಷ್ಟು ಮಾತನಾಡಬೇಕೆಂದಿವೆ
ನಿನ್ನ ಬಳಿಯೇ ಇರಬೇಕೆಂದಿವೆ.
ಪುಸ್ತಕಗಳಲಿ
ಗುಬ್ಬಚ್ಚಿಗಳು ಗುನುಗುಟ್ಟುತ್ತಿವೆ
ತೆನೆಗಳು ತೇಲಾಡುತ್ತಿವೆ
ಹರಿವ ತೊರೆ ಬಳುಕ್ತಲಿದೆ
ಜಾನಪದ ಕತೆಗಳ ಹೇಳುತಿವೆ.
ಪುಸ್ತಕಗಳಲಿ
ರಾಕೆಟ್ಟುಗಳ ರಹಸ್ಯ ಅಡಗಿದೆ
ವಿಜ್ಞಾನದ ದನಿಯೂ ಕೇಳಿಬರಲಿದೆ.
ಪುಸ್ತಕಗಳ ಪ್ರಪಂಚವಿದೋ ಬಲು ವಿಸ್ತಾರ
ಪುಸ್ತಕದ ಜ್ಞಾನ ಬಲು ಭಾರ
ಈ ಪ್ರಪಂಚವ ನೀನು
ಒಳಹೊಕ್ಕುವುದಿಲ್ಲವೇ?
ಪುಸ್ತಕಗಳೇನೋ ಮಾತನಾಡಬೇಕೆಂದಿವೆ
ನೀನದಕ್ಕೆ ಕಿವಿಯಾಗುವುದಿಲ್ಲವೇ?






0 Comments