ಪುಟ್ಟಣ್ಣ ಕಣಗಾಲ್ ಸಿನೆಮಾಗೆ ಹಾಡು ಬರೆದಾಗ….

ಎನ್ ಎಸ್ ಶ್ರೀಧರ ಮೂರ್ತಿ

ನಾನು ನಿನ್ನೆ ನಮ್ಮನ್ನು ಅಗಲಿದ ಕವಿ ಸಿದ್ದಲಿಂಗಯ್ಯ ಅವರನ್ನು ಕೊನೆ ಸಲ ಭೇಟಿ ಮಾಡಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೀಟಿಂಗ್ ನಲ್ಲಿ.. ಆಗ ಅವರು ನನ್ನ ಕವಿ ಗೀತ ಸಂಪುಟದಲ್ಲಿ ನನ್ನ ಕುರಿತು ಇಲ್ಲ ಎಂಬ ಪ್ರಶ್ನೆ ಕೇಳಿದ್ದರು.. ಅದು ಕನ್ನಡ ಚಿತ್ರರಂಗದಲ್ಲಿ ಕವಿಗಳು ಬರೆದ ಅಳವಡಿಸಿದ ಚಿತ್ರಗೀತೆಗಳ ಸಂಕಲನ ಒಂದು ಹಂತಕ್ಕೆ ಅದು ನಿಂತು ಹೋಗಿದೆ.. ಎರಡನೇ ಸಂಪುಟ ತರುವ ಒತ್ತಡ ಇದ್ದರೂ ಅನೇಕ ಕಾರಣದಿಂದ ಅದು ಆಗಿರಲಿಲ್ಲ..

ಅಂದು ಸಿದ್ದಲಿಂಗಯ್ಯ ತಾವು ಚಿತ್ರಗೀತೆ ಬರೆದ ಸನ್ನಿವೇಶ ವಿವರಿಸಿದರು.. ಆಗ ಪುಟ್ಟಣ್ಣ ಕಣಗಾಲ್ ಅವರು ಸಮಾಜವಾದಿ ಹಿನ್ನೆಲೆ ಇಟ್ಟುಕೊಂಡು ‘ಧರಣಿ ಮಂಡಲ ಮಧ್ಯದೊಳಗೆ’ ಎಂಬ ಸಿನಿಮಾ ತೆಗೆಯುತ್ತಿದ್ದರು. ಅದಕ್ಕೆ ಸಿದ್ದಲಿಂಗಯ್ಯ ಅವರಿಂದ ಹಾಡು ಬರೆಸಿದರೆ ಚೆನ್ನಾಗಿ ಇರುತ್ತೆ ಎಂಬ ಐಡಿಯಾ ಕೊಟ್ಟವರು ಚಿತ್ರಕ್ಕೆ ಸಂಭಾಷಣೆ ಬರೆಯುತ್ತಾ ಇದ್ದ ಟಿ.ಎನ್.ಸೀತಾರಾಂ.. ಸಿದ್ದಲಿಂಗಯ್ಯ ಅವರನ್ನು ಒಪ್ಪಿಸಿದ್ದು ಕೊಡ ಅವರೇ.. ಆಗ ಪುಟ್ಟಣ್ಣ ಜಯನಗರದಲ್ಲಿ ಹೆಡ್ಡನ ಹಟ್ಟಿ ಎಂಬ ಆಫೀಸ್ ಮಾಡಿಕೊಂಡಿದ್ದರು..

ಅಲ್ಲಿ ಬೆಳಗಿನ ಎಂಟು ಗಂಟೆಗೆ ಹಾಡು ಬರೆಯುವುದು ಎಂದು ನಿರ್ಧಾರ ಆಯಿತು.. ಆಗ ಸಿದ್ದಲಿಂಗಯ್ಯ ಕೆಂಗೇರಿ ಅಲ್ಲಿ ಇದ್ದರು.. ಅಲ್ಲಿಂದ ಜಯನಗರಕ್ಕೆ ನೇರ ಬಸ್ ಇರಲಿಲ್ಲ. ಹೀಗಾಗಿ ರಾತ್ರಿ ತಮ್ಮ ಗೆಳೆಯ ಸಿ.ಜಿ.ಕೆ ಅವರ ರಾಜಾಜಿನಗರದ ಮನೆಯಲ್ಲಿ ಉಳಿದು ಕೊಂಡರು.. ಅಲ್ಲಿ ಚಿತ್ರಗೀತೆ ಬೆರೆಯುವ ಕುರಿತು ಗಂಭೀರ ಚರ್ಚೆಗಳು ನಡೆದವು. ಕೊನೆಗೆ ಸಿ.ಜಿ.ಕೆ .ಪುಟ್ಟಣ್ಣ ಅಂಥವರ ಚಿತ್ರಕ್ಕೆ ಬರೆಯುವುದು ಒಳ್ಳೆಯದು ಎಂದು ಹೇಳಿ.. ಪ್ಯಾಡ್ ಮತ್ತು ಪೆನ್ ನೀಡಿ ಇದರಲ್ಲಿ ಬರಿ ಎಂದರು.. ಸರಿ ಅಲ್ಲಿಂದ ಪುಟ್ಟಣ್ಣ ಅವರ ಆಫೀಸ್ ಗೆ ಪಯಣ.. ಅಲ್ಲಿ ಆಗ ತಾನೇ ಪೂಜೆ ಮುಗಿಸಿ ಭರ್ಜರಿ ಕುಂಕುಮಧಾರಿಗಳಾಗಿದ್ದ ಪುಟ್ಟಣ್ಣ ಕಾಯುತ್ತ ಇದ್ದರು.. ವಿಜಯ ಭಾಸ್ಕರ್ ಇದ್ದರು.. ಟ್ಯೂನ್ ಕೊಟ್ಟರು..

ಬಹು ಬೇಗ ‘ಗೆಳತಿ ಓ ಗೆಳತಿ’ ಹಾಡು ಸಿದ್ದ ಆಯಿತು.. ಪುಟ್ಟಣ್ಣ ಅವರಿಗೆ ಬಹಳ ಮೆಚ್ಚುಗೆ ಆಗಿ ಉಳಿದ ಎರಡು ಹಾಡನ್ನು ನೀವೇ ಬರೆಯಿರಿ ಎಂದರು.. ಸಿದ್ದಲಿಂಗಯ್ಯ ಆರಂಭದಲ್ಲಿ ಹಿಂಜರಿದರೂ ಕೂಡ ನಂತರ ಒಪ್ಪಿದ್ದರು.. ‘ಕಾಸನು ಬೀಸಿ’ ಸಿದ್ದ ಆಯಿತು… ಮೂರನೇ ಹಾಡು ಏನು ಮಾಡಿದರೂ ಹುಟ್ಟಲಿಲ್ಲ..ಕೊನೆಗೆ ಲಂಚ್ ಬ್ರೇಕ್ ಎಂದರು.. ಆಗ ಸಮಾಜವಾದ ಆಗಿನ ಸೋವಿಯತ್ ಯೂನಿಯನ್ ಸಾಗುತ್ತಾ ಇದ್ದ ರೀತಿ ಎಲ್ಲವೂ ಚರ್ಚೆಗೆ ಬಂತು… ಕೊನೆಗೆ ಪುಟ್ಟಣ್ಣ ಎಲ್ಲ ಕಲಿಗಾಲ ಎಂದರು. ಆಗಲೇ ಕವಿಗಳಿಗೆ ಹಾಡು ಹೊಳೆಯಿತು.. ಆದರೆ ಅದು ಪೂರ್ತಿ ಆಗಲು ಸಂಜೆ ಬೇಕಾಯಿತು.. ಹೀಗೆ ಬಂದಿದ್ದು ‘ಕಲಿಗಾಲವಯ್ಯಾ’ ಹಾಡು…ಮುಂದೆ.. ಪತ್ರಿಕೆಗಳಲ್ಲಿ ಸಿದ್ದಲಿಂಗಯ್ಯ ಚಿತ್ರಗೀತೆ ಬರೆದ ಕುರಿತು ತುರುಸಿನ ಚರ್ಚೆ ನಡೆದು ವಿವಾದ ಆಯಿತು..

ಸಿದ್ದಲಿಂಗಯ್ಯ ಇದರ ತಂಟೆ ಬೇಡ ಎಂದು ಆದಿತ್ಯ ಎಂಬ ಹೆಸರಿನಲ್ಲಿ ಹಾಡುಗಳು ಇರಲಿ ಎಂದು ಪುಟ್ಟಣ್ಣ ಅವರಿಗೆ ಹೇಳಿದರು ಹಾಗೆ ಆಯಿತು..ಗೆಳತಿ ಜನಪ್ರಿಯ ಆಯಿತು.. ಕಾಸ ನು ಬೀಸಿ ಹಾಡಿಗೆ ರಾಜ್ಯ ಪ್ರಶಸ್ತಿ ಬಂತು..ಆದರೆ ಅವರಿಗೆ ಪ್ರಿಯವಾದ ಕಲಿಗಾಲವಯ್ಯಾ ಗೀತೆ ಮರೆಯಲ್ಲಿ ಉಳಿಯಿತು..ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಗೀತೆ ಮತ್ತು ಸನ್ನಿವೇಶ ಕಳುಹಿಸುತ್ತಾ ಇರುವೆ.. ಈ ಫೋಟೋ ನನಗೆ ನೀಡಿದವರು ಚಿತ್ರದ ಛಾಯಾ ಗ್ರಾಹಕ ಬಸವರಾಜ್..ಇದರ ವಿಶೇಷತೆ ಏನು ಎಂದರೆ..ಇದರಲ್ಲಿ ಶ್ರೀನಿವಾಸ ಮೂರ್ತಿ ಅವರ ಜೊತೆಗೆ ಇರುವವರು ಪುಟ್ಟಣ್ಣ ಅವರ ಮಕ್ಕಳಾದ ತ್ರಿವೇಣಿ ಮತ್ತು ರಾಮು ಕಣಗಾಲ್..ರಾಮು ಕೊಡ ಇತ್ತೀಚೆಗೆ ಕರೊನದಿಂದ ನಮ್ಮನ್ನು ಅಗಲಿದರು.

‍ಲೇಖಕರು Avadhi

June 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: