ಪಿ ಮಹಮದ್ ಅವರ ವ್ಯಂಗ್ಯಚಿತ್ರ
ಕವಿತೆಯಾಗಿದ್ದು ಹೀಗೆ..
ಯಮುನಾ ಗಾಂವ್ಕರ್
ಕಾಡುತ್ತಿವೆ ಭೂತಗಳು
ಮಸ್ತಕದ ತುಂಬೆಲ್ಲಾ!
ಗೂಳಿಡುತ್ತಿವೆ ಜೀವಂತ ಶವಗಳು
ಮಸಣದ ಒಳಗೆಲ್ಲಾ!!!
ಕಣ್ಬಿಡದೇ ಸೋತು
ಜೋತು ಮಲಗಿವೆ ಬಾವಲಿಗಳು
ತಮ್ಮದೇ ರೆಕ್ಕೆಗಳ ಹೊದ್ದು
ರೆಂಬೆಗಳಿನಿತೂ ಬಿಡದೇ ಬಿಗಿದುಕೊಂಡು!!!
ಎಡಕ್ಕೂ ಅಲ್ಲ ಬಲಕ್ಕೂ ಇಲ್ಲ
ನೇರವೂ ಅಲ್ಲ ಅಡ್ಡವೂ ಇಲ್ಲ
ಮುಂದೂ ಅಲ್ಲ ಹಿಂದೂ ಇಲ್ಲ
ಆದರೂ ಕಾಡುತ್ತಿವೆ ಭೂತಗಳು
ಕೇಕರಿಸುತ್ತಲೇ
ಕಾಲೆಳೆಯುತ್ತಿವೆ ಕಡೆತನಕ…

ಇದೋ ನೋಡಿ,
ಬಾವಲಿಗಳ ಹಿಕ್ಕೆಯನೆಲ್ಲ –
ಪಕ್ಕಕ್ಕೆ ಸರಿಸಿ
ಸುಡುಗಾಡ ಕಟ್ಟೆಯ-
ಇಟ್ಟಿಗೆಯ ಕೆಳಗೆ
ಎಷ್ಟು ಅಗೆದರೂ ಆಳ
ಸಿಗದಷ್ಟು ಅವಶೇಷ
ದೊರೆಗೆ ಸಿಕ್ಕಿದೆ ಇಲ್ಲಿ
ಆಶ್ಚರ್ಯವೇನಿಲ್ಲ ಈ ರುದ್ರಭೂಮಿಯಲಿ
ಹರಿಶ್ಚಂದ್ರರೇನೂ ತಡೆದಿಲ್ಲ ಇವರ!!!
ದಾರಿ ಬಿಡಿ,
ಮಣ್ಣಲ್ಲೆ ಮಣ್ಣಾದವರ
ಹುಡಿ ಬೂದಿಯನೆಲ್ಲ ಚೆಲ್ಲಿ
ಪ್ರೋಕ್ಷಣೆಯ ಮಾಡುತ್ತ
ಮಸಣಗೀತೆಯ ಹಾಡುತ್ತ ಬರುತ್ತಿದ್ದಾನೆ …
ಹೋಗಲಿ ಬಿಡಿ
ದಾವಾಗ್ನಿಯ ಮೇಲೊಂದಿಷ್ಟು
ಮಳೆಗರೆದುಬಿಡಿ…
ಬೆನ್ನಟ್ಟದೇ ಬೀಳ್ಕೊಡಿ
ದೇಶಾಂತರಕೋ ಹಿಮಾಲಯಕೋ






ha ha …bahal chennaagide madam
ಪ್ರಸ್ತುತ ರಾಜಕೀಯ ದೃಶ್ಯ ಕಾವ್ಯ.