ಪಾದಗಳಿಗೆ ನಾನು ಋಣಿ

ಚಂದ್ರಪ್ರಭಾ

ಈ ಪಾದಗಳನ್ನು ನಾನು ಪ್ರೀತಿಸುತ್ತೇನೆ
ಯಾಕೆಂದರೆ ಅವು ಆಯುಷ್ಯ ಪೂರ್ತಿ
ನನ್ನ ಭಾರ ಹೊತ್ತಿವೆ
ಈ ಪಾದಗಳನ್ನು ನಾನು ಚುಂಬಿಸುತ್ತೇನೆ
ಯಾಕೆಂದರೆ ಅವು ಕಲ್ಲು ಮುಳ್ಳು
ಗಾಜಿನ ದಾರಿಯಲ್ಲಿ ಸಹನೆಯಿಂದ ನಡೆದಿವೆ
ಈ ಪಾದಗಳನ್ನು ನಾನು ಆದರಿಸುತ್ತೇನೆ
ಯಾಕೆಂದರೆ ಕೈಗಳಂತೆ ಎಲ್ಲೆಂದರಲ್ಲಿ ಅಪ್ಪಳಿಸದೇ
ಚಪ್ಪಲಿ ಬೂಟು ಮೆಟ್ಟು ಮತ್ತೊಂದು
ಎಲ್ಲವನ್ನೂ ಘನತೆಯಿಂದ ಸ್ವೀಕರಿಸಿವೆ
ಈ ಪಾದಗಳಿಗೆ ನಾನು ಎಂದೆಂದೂ ಋಣಿಯಾಗಿದ್ದೇನೆ
ಯಾಕೆಂದರೆ ದಿಕ್ಕೆಟ್ಟು ಮನಸ್ಸು
ಬೀದಿ ಬೀದಿ ಅಲೆಯುವಾಗ ನಿಶ್ಯಬ್ದವಾಗಿ
ಅವು ಮನೆಯತ್ತ ಹೆಜ್ಜೆ ಹಾಕಿವೆ
ಈ ಪಾದಗಳನ್ನು ನಾನು ಮಡಿಲಲ್ಲಿಟ್ಟು ತಟ್ಟುತ್ತೇನೆ


ಯಾಕೆಂದರೆ ಋತು ಬದಲಾದರೂ ಬಿಸಿಲು
ಮಳೆ ಗಾಳಿ ಚಳಿ ಬಾಧಿಸಿದರೂ ಗೊಣಗದೇ
ಬೇಸರಿಸದೇ ವಿರಾಮ ಬಯಸದೇ
ತಮ್ಮ ಕಾಯಕದಲ್ಲಿ ಬದ್ಧತೆ ಉಳಿಸಿಕೊಂಡಿವೆ
ನಗರದ ನಟ್ಟ ನಡುವಿನ ಚೌಕದ
ಒಳ ಚರಂಡಿ ಉಸಿರುಗಟ್ಟಿ
ಜನಜಂಗುಳಿ ಮೂಗು ಮುಚ್ಚಿ ಪರದಾಡುವಾಗ
ಇವೇ ಪಾದಗಳು
ಮಲೆತ ನೀರಿನಲ್ಲಿ ತಲೆಗೂದಲು
ತೊಯ್ದು ತಪ್ಪಡಿಸಿದ ದೇಹ ಹೊತ್ತು
ನಿರ್ವಿಕಾರ ಭಾವದಲ್ಲಿ ಹೂಳೆತ್ತಿವೆ

ಈ ಪಾದಗಳನ್ನು ನಾನು
ಉಪ್ಪು ಅರಿಶಿಣ ಬೆರೆಸಿದ ಹದವಾದ
ಬಿಸಿ ನೀರಿನಲ್ಲಿ ನೆನೆಯಲು ಬಿಡುತ್ತೇನೆ
ರಕ್ತ ಒಸರುವ ಪಾದಗಳನ್ನು
ಮೃದುವಾಗಿ ನೇವರಿಸಿ ಮುಲಾಮು ಸವರುತ್ತೇನೆ
ಅವುಗಳ ಬಿರುಕಿನಲ್ಲಿ ಕರಗಿದ ಬೆಚ್ಚನೆ
ಮೇಣ ತುಂಬಿ ಅವುಗಳಿಗೆ
ಉಲನ್ನಿನ ಮೆತ್ತನೆ ಕಾಲ್ಗವಸು ತೊಡಿಸುತ್ತೇನೆ

ಪಾದುಕೆಗಳಿಗೆ ಬದಲಾಗಿ
ಎದೆಯ ಜಗುಲಿಯ ಮೇಲೆ ನಾನು
ಈ ಪಾದಗಳನ್ನು ಪ್ರತಿಷ್ಠಾಪಿಸುತ್ತೇನೆ…

‍ಲೇಖಕರು Avadhi

January 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: