ಪನ್ – ಪನ್-ಇದೆಂತ ಮರುಳಯ್ಯಾ; ಸಾಕಿನ್ನು ಮರಳಯ್ಯಾ!

-ಸೂತ್ರಧಾರ ರಾಮಯ್ಯ

ಸಾಮಾನ್ಯ ಜನರನ್ನು, ಅದರಲ್ಲೂ ಮಧ್ಯಮವರ್ಗದ ಮನುಜರನ್ನು ಮರ ಮರಳಿ ಪೀಡಿಸಲು, ಮರಳುತಲೇ ಇರುವ ಮುಷ್ಕರಗಳಲ್ಲಿ ಮರಳು ಲಾರಿಯ ಮುಷ್ಕರವೂ ಒಂದು. ಮನೆ ಕಟ್ಟಿ ನೋಡು.., ಅನ್ನೋ ಎಚ್ಚರಿಕೆಯ ಮಾತನ್ನು ಕಿವಿಗೆ ಹಾಕಿಕೊಳ್ಳದೆ, ಮನೆ ಕಟ್ಟಲು (ಅ)ಪಾಯವನ್ನು ತೋಡಿಕೊಳ್ಳುವ ಜನರು, “ನಾವು ಹೇಳಿದ್ದೆ ‘ಲಾ’ರಿ; ನಾವು ಓಡಿಸಿದ್ದೇ ದಾರಿ” ಅನ್ನುವ ಲಾರಿ ಮಾಲೀಕರ ಮತ್ತು, ನೀ ಕೊಡೆ ನಾ ಬಿಡೆ ಅನ್ನುವ ಸರ್ಕಾರಿ-ಸಾರಿಗೆ ಅಥಾರಿಟಿಗಳ ನಡುವೆ ಸಿಲುಕಿ ‘ಸ್ಯಾಂಡ್’ವಿಚ್ ಆಗುವ ಸನ್ನಿವೇಶ ನಡೆದೇ ಇದೆ. ತಿಂಗಳುಗಟ್ಟಲೆ ಲಾರಿಗಳು ರಸ್ತೆಗೆ ಮರಳದೆ ನಿಂತುಬಿಟ್ತಾಗ, ಉದ್ಯಮವನ್ನು ಅವಲಂಬಿಸಿದ ಕೂಲಿಕಾರ್ಮಿಕರು, ಡ್ರೈವರ್ ಕ್ಲೀನರ್ ಮತ್ತವರ ಕುಟುಂಬಗಳ ಬವಣೆ ಯಾರಿಗೆ ತಾನೇ ಪ್ರಿಯ? ಅಸಲು ಬ್ರೆಡ್ ಕರುಣಿಸುವ ಮನೆಕಟ್ಟುವಾತನೇ ಸ್ಯಾಂಡ್ವಿಚ್ ಆಗಿ,  “ಮಣ್ಣು ತಿನ್ನುವ…,ಕ್ಷಮಿಸಿ, ಕಾಂಕ್ರೀಟ್ ತಿನ್ನುವನ್ತಹಾ( ಕಲ್ಪಿಸಿಕೊಳ್ಳಿ) ಕೆಲಸಮಾಡಿಬಿಟ್ಟೆನಲ್ಲಾ!” ಎಂದು ಮರುಗಿ, ಕೆಲವು ವರ್ಷಗಳು ‘ಮನೆಯನೆಂದೂ ಕಟ್ಟದಿರು’ ಅನ್ನುವಂತಾ ತೀರ್ಮಾನಕ್ಕೆ ‘ಬಂದ್’ ಬಿಟ್ಟರೆ, ಆಶ್ಚರ್ಯ-ವಿಲ್ಲಾ? ಪರಿನಾಮ: ಗಣಿಗಾರಿಕೆ ಸ್ಥಗಿತವಾಗಿ, ನಿರುದ್ಯೋಗದ ಕಾರ್ಮೋಡ ರಾಜ್ಯವನ್ನು ಕಾಡುತ್ತಿರುವಂತೆ ಮರಳ ಲಾರಿಗಳೂ:
ಬೀದಿಯ ಪಾಲಾಗಿ; ಒಡಲೆಲ್ಲ ಬರಿದಾಗಿ
ಹಳ್ಳ ಹಿಡಿದು ಸಾಗುವ ಲಾರಿಯ ಹಾಗೆ,
ಮರಳಲು ಮನೆಯಾ ನಿರ್ಮಾಣದ ಬೇಗೆ!
ಎಂತ ಮರಳಯ್ಯಾ ಇದು ಎಂಥಾ ಮರಳೋ!! ಅಂತಾ ಹಲುಬಬೇಕಾದೀತು.
(ಲೇ ಟೆಸ್ಟ್ ಬಹಿರಂಗ ಸುದ್ದಿ: ಸ್ಟ್ರೈಕ್ ಕಾಲಾಫ್ ಆಗಿದ್ದು , ಸಾರ್ವಜನಿಕರು ಸದ್ಯಕ್ಕೆ ಡೋಂಟ್ -ವರ್ರಿ ಮಾಡ್ಕೊಬೇಕಿಲ್ಲ ಅಂದಿದ್ದಾರಂತೆ-ಅಶೋಕ್)

ಆಗಮಿಕ ಈಗಲೂ ಮಿಕವೇ!

ಲಾಗಾಯ್ತಿಂದಲೂ ಅಷ್ಟೇ: ದೇವಾಲಯಗಳಿಗೆ ಪ್ರೇ ಮಾಡಲು ಬರುವ ಭಕ್ತಾದಿಗಳು, ಬಹು ತೇಕ ಹೊನ್ನೆ ನಿರೀಕ್ಷಿಸುವ ಆಗಮಿಕರ ಎದುರಲ್ಲಿ, ಐ ಮೀನ್ ಪೂಜಾರರ ಎದುರಲ್ಲಿ prey ಗಳೇ, ಅರ್ಥಾತ್ ಮಿಕಗಳೇ. ನಾನೇನ ನೀಡಲಯ್ಯಾ ಬಡವನು! ಅನ್ನುವವರಿಗೆ ಬರಿ ಮಂಗಳಾರತಿಯೇ. ತೀರ್ಥ ಪ್ರಸಾದಗಳೇನಿದ್ದರೂ ಉಳ್ಳವರಿಗೆ. ನಿಜಭಕ್ತರಾದ ಬಡವರು ಸದಾ ಶಿವನಂತೆ ನಂಜು ಉಂಡವರೇ!

ನಾಯ ಕ: ಆದರ್ಶಪ್ರಾಯ ಅಂದರೆ ಯಾರೋ ಮರಿ?
ಬಾಲ ಕ:   ಪ್ರಾಯ ಇದ್ದಾಗ ಆದರ್ಶಗಳನ್ನ  ಪಾಲಿಸುತ್ತ , ಕೆಂದ ಕರು ಹಾಗೆ ಇದ್ದವನು, ಗ್ರಹ ಚಾರವಶಾತ್, ಸಿಕ್ಕಿದ್ದಕ್ಕೆಲ್ಲಾ ಬಾಯಿಹಾಕುವ ಹಂದಿ ಜೊತೆ ಆಡಿಕೊಂಡು ಅದೇನೋ ತಿಂದಂತೆ, Ideal ಆಗಿದ್ದ ಹುಡುಗ, ಮುಂದೆ ಮಾಡಬಾರದ ಅವ್ಯವಹಾರಗಳನ್ನೆಲ್ಲ I deal ಅನ್ನುವ ಉದ್ದಟತನವನ್ನು ಮೈಗೂಡಿಸಿಕೊಂಡವನು.

end ಗುಟುಕು
ಅರ್ಬ ನೈಟ್ಸ್ v/s ರೂರ ಲೈಟ್ಸ್?
ಡಯಟ್ ಮಾಡಿ ತೆಳ್ಳಗಾಗಿದ್ದ ನನ್ನ ಆರೋಗ್ಯದ ಬಗ್ಗೆ ಕಾಮೆಂಟ್ಸ್ ಮಾಡುವ ಪಟ್ಟಣಿಗರು:
” ವಾಟ್ ರಾಮ್ಸ್ ಹೆವಿ ಸ್ಮಾರ್ಟ್ ಆಗಿಬಿಟ್ಟಿದ್ದೀಯಾ” ಅಂದ್ರೆ, ನಮ್ಮೂರ ಹಳ್ಳಿಮಂದಿ “ಯಾಕ್ ರಾಮಣ್ಣಾ ಇಷ್ಟ್ ಕಂಗೆಟ್ಟೋಗಿದ್ದೀಯಾ! ಮೈಲುಸಾರಿಲ್ವಾ..,? ಅನ್ನಬೇಕೆ.

‍ಲೇಖಕರು sreejavn

November 21, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

2 ಪ್ರತಿಕ್ರಿಯೆಗಳು

  1. Basava Raju L

    “ಮನೆ ಕಟ್ಟಲು (ಅ)ಪಾಯವನ್ನು ತೋಡಿಕೊಳ್ಳುವ ಜನರು…” – this was hilarious,
    good one!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: