ನಿರ್ವಿಕಾರ
– ಸ್ಮಿತಾ ಅಮೃತರಾಜ್
ಇನ್ನು ಹೊಳಪೇರಲಾರೆವೆಂದು
ಮುನಿಸಿಕೊಂಡಂತೆ ಮಾಸಿಕೊಂಡ
ಕೆನ್ನೆಯ ಮಿನುಗು.
ಮರೆಮಾಚಿದಷ್ಟೂ ಅಲ್ಲೊಂದು ಇಲ್ಲೊಂದು
ಇಣುಕಿ ಅಣಕಿಸುವ ನರೆಗೂದಲು
ಮುಗುಳು ನಗುವಿಗೂ ಬರ
ಹಿಡಿದ ಮನಸ್ಸು.
ನಿರೀಕ್ಷೆಯ ಝಲಕಿಲ್ಲದ ಕಣ್ಣುಗಳು
ವೃಥಾ ನೋಟ ಹರಿಸಬಲ್ಲವಷ್ಟೆ.
ನಿಧಾನಕ್ಕೆ ಅಡರುತ್ತಿರುವ ಅಕಾಲಿಕ
ಮುಪ್ಪು ಕಾಣಲಾಗದಿದ್ದರೂ
ಅಲ್ಲಗಳೆಯುವಂತಿಲ್ಲ.

ಮುಪ್ಪು ವೈರಾಗ್ಯ ಹತಾಶೆ
ಎಲ್ಲಾ ಈ ದೇಹವನ್ನ ಹಿಡಿದು
ಅಲ್ಲಾಡಿಸಿಬಿಡುವುದು ದಿಟ ತಾನೇ?
ಈ ರೂಪ ಮೂಲೆಯಲ್ಲಿರಲಿ.
ನಾನು ಮನುಷ್ಯ ವೇಷವ ಕಳಚಿ
ಪದವಾಗಿ ಬಿಡಲೇ ಎಂದು ಯೋಚಿಸುತ್ತಿರುವೆ.
ಪದ ಪದಗಳ ನಡುವೆ
ಪದವಿಟ್ಟ ಗಳಿಗೆ
ತುಂಬಿ ಹರಿದದ್ದು ನವ
ನಾದ ನಡಿಗೆ.
ಈಗ ಕವಿತೆ ಸಾಲಿನ ಮೂಲಕ
ನೀ ನನ್ನ ಕಾಣುವಿಯಾದರೆ
ಸಾವಿಲ್ಲದ ನೋವಿಲ್ಲದ ಜೀವಂತ
ಜಿನುಗುವ ಕವಿತೆಯಾಗ ಬಯಸುವೆ.
ಕೊಟ್ಟಷ್ಟೂ ಪಡೆದುಕೊಳ್ಳುವ ಆಕಾರ
ಕಲ್ಪನೆಯ ಹದಕ್ಕೆ ಬೇಕಾದ ಹಾಗೆ
ಸುರುವಿಕೋ.ಅಡ್ಡಿಯಿಲ್ಲ.
ಕವಿತೆ ನಿರಾಕಾರ; ನಿವರ್ಿಕಾರ.






ಸಾವಿಲ್ಲದ ,ನೋವಿಲ್ಲದ ‘ಕವಿತೆ’ ಗೆ ಮುಪ್ಪಿಲ್ಲ ಅಲ್ಲವೇ?ಅಮರ ವಾದ ಭಾವನೆ ಚಿರ ನೂತನ. ಸ್ಮಿತಾ ಅವರೇ ಕವನ ಚೆನ್ನಾಗಿದೆ.
ಮುಪ್ಪಿಗೆ ಕೂಡ ತನ್ನದೇ ಆದ ಸೌಂದರ್ಯವಿದೆ ಅಲ್ಲವಾ?
Laayka aagitu smithakka
nice madam
ಕವಿಯತ್ರಿಯ ಚಿಂತನೆ ಚನ್ನಾಗಿದೆ ಪ್ರತಿಯೊಬ್ಬರು ಕವತೆಯಾದರೆ ಸಮಸ್ಯೆನೆ ಇರುವುದಿಲ್ಲ
pratime chennaagide..smith
super mam
ಪದ ಪದಗಳ ನಡುವೆ ಪದವಿಟ್ಟ ಗಳಿಗೆ ಅಮೃತ ಗಳಿಗೆ .. ಅಮರ ಅಲ್ಲವೇ ಚಿಂತನೆ ಚೆನ್ನಾಗಿದ
pada matthu mattu sundara aalochanegalu nammannu endiguu muppaagalu biduvudilla…olleya padya odhida anubhava..inashtu dhaynisabahudittu..avakashavittu..